ಆ ಯುವಕನ ಜೊತೆ ಕಾಣಿಸಿಕೊಂಡ ಬೆನ್ನಲ್ಲೇ ಮತ್ತೊಂದು ಬಿಗ್​ ಸರ್​ಪ್ರೈಸ್​ ಕೊಟ್ಟ Bigg Boss ಸ್ಪಂದನಾ

Published : Aug 06, 2026, 05:54 PM IST

ಬಿಗ್‌ಬಾಸ್ ಖ್ಯಾತಿಯ ಸ್ಪಂದನಾ ಸೋಮಣ್ಣ, ಪ್ಯಾರಿಸ್‌ನಲ್ಲಿ ಯುವಕನೊಬ್ಬನ ಜೊತೆಗಿನ ಫೋಟೋ ಹಂಚಿಕೊಂಡು ಕುತೂಹಲ ಮೂಡಿಸಿದ್ದಾರೆ. ಇದರ ಬೆನ್ನಲ್ಲೇ, ತಾವು ಮೂರು ವರ್ಷಗಳಿಂದ ಒಂಟಿಯಾಗಿ ಬದುಕುತ್ತಿರುವ ಬಗ್ಗೆ ವಿಡಿಯೋ ಶೇರ್ ಮಾಡಿದ್ದು, ಅವರ ನಿಶ್ಚಿತಾರ್ಥದ ಬಗ್ಗೆ ಚರ್ಚೆಗಳು ಶುರುವಾಗಿವೆ.

PREV
16
ಬಿಗ್​ಬಾಸ್ ಖ್ಯಾತಿಯ ಸ್ಪಂದನಾ

ಬಿಗ್​ಬಾಸ್​ ಮೂಲಕ (Bigg Boss) ಫೇಮಸ್​ ಆಗಿರೋ ನಟಿ ಸ್ಪಂದನಾ ಸೋಮಣ್ಣ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಇದ್ದಾರೆ. ನಿನ್ನೆಯಷ್ಟೇ ತಮ್ಮ ಪ್ಯಾರೀಸ್ ಜರ್ನಿಯ ಹೊಸದೊಂದು ಫೋಟೊ ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು ನಟಿ. ತಮ್ಮ ಜೊತೆ ಯುವಕನೊಬ್ಬನ ಫೋಟೋ ಹಿಂಬದಿಯಿಂದ ಶೇರ್​ ಮಾಡಿದ್ದರು ನಟಿ.

26
ವಿಡಿಯೋ ಶೇರ್​

ಇದರ ಬೆನ್ನಲ್ಲೇ ತಮ್ಮ ಮನೆಯ ವಿಡಿಯೋ ಒಂದನ್ನು ಶೇರ್​ ಮಾಡಿಕೊಂಡಿರೋ ನಟಿ, ಒಂಟಿಯಾಗಿ ಬದುಕುತ್ತಿದ್ದೇನೆ, ಆದ್ರೆ ಒಂಟಿಯಾಗಿ ಅಲ್ಲ ಎನ್ನುತ್ತಲೇ ಮಾಹಿತಿಯೊಂದನ್ನು ಶೇರ್​ ಮಾಡಿದ್ದಾರೆ. ಇತ್ತೀಚೆಗೆ ವಿಡಿಯೋ ಗೀಳು ಹೊಂದಿದ್ದೇನೆ ಎಂದಿದ್ದಾರೆ ನಟಿ. ಇದರಲ್ಲಿ ಅವರು ಹೊಸ ಮನೆಯಲ್ಲಿ ಬೆಳಿಗ್ಗೆ ಬ್ರೇಕ್​ಫಾಸ್ಟ್​ನಿಂದ ಹಿಡಿದು ನೈಟ್​ ಮಲಗುವವರೆಗೆ  ಏನೇನು ಮಾಡಿದೆ ಎನ್ನೋದನ್ನು ಚುಟುಕಾಗಿ ತೋರಿಸಿದ್ದಾರೆ.

36
3 ವರ್ಷದಿಂದ ದೂರ

ನಾನು ಕೆಲಸಕ್ಕಾಗಿ ಹೊಸ ನಗರಕ್ಕೆ ಸ್ಥಳಾಂತರಗೊಂಡು 3 ವರ್ಷಗಳಾಗಿವೆ. ನನ್ನ ಸ್ವಂತ ಜೀವನವನ್ನು ನಿರ್ಮಿಸಲು ನಾನು ನನ್ನ ಮನೆ, ನನ್ನ ಜನರು ಮತ್ತು ಪರಿಚಿತ ಎಲ್ಲವನ್ನೂ ಬಿಟ್ಟು ಬಂದಿದ್ದೇನೆ. ಇದು ಯಾವಾಗಲೂ ಸುಲಭವಾಗಿರಲಿಲ್ಲ, ಆದರೆ ಇದು ನನ್ನ ಬಗ್ಗೆ, ಸ್ವಾತಂತ್ರ್ಯ, ನನ್ನ ಸ್ವಂತ ಸಹವಾಸದಲ್ಲಿ ಸೌಕರ್ಯ ಮತ್ತು ಸಣ್ಣ ವಿಷಯಗಳಲ್ಲಿ ಸಂತೋಷವನ್ನು ಕಂಡುಕೊಳ್ಳುವ ಬಗ್ಗೆ ನನಗೆ ತುಂಬಾ ಕಲಿಸಿದೆ ಎಂದು ನಟಿ ಶೇರ್​ ಮಾಡಿಕೊಂಡಿದ್ದಾರೆ.

46
ಜೀವನ ಸರಳ

ನನ್ನ ಜೀವನವು ತುಂಬಾ ಸರಳವಾಗಿದೆ - ನಾನು ನನ್ನ ಸ್ವಂತ ವ್ಯವಹಾರವನ್ನು ನೋಡಿಕೊಳ್ಳುತ್ತೇನೆ, ನನ್ನ ದಿನಚರಿಗಳನ್ನು ರೋಮ್ಯಾಂಟಿಕ್ ಮಾಡುತ್ತೇನೆ ಮತ್ತು ನಾನು ನಿರ್ಮಿಸಿರುವ ಈ ಸಣ್ಣ ಜೀವನವನ್ನು ಆನಂದಿಸುತ್ತೇನೆ. ತಮ್ಮ ಕನಸುಗಳನ್ನು ಬೆನ್ನಟ್ಟಲು ಮನೆಯಿಂದ ಹೊರಹೋಗಬೇಕಾದ ಎಲ್ಲರಿಗೂ, ಇದು ನಿಮಗಾಗಿ. ನಿಮಗೆ ತುಂಬಾ ಪ್ರೀತಿಯನ್ನು ಕಳುಹಿಸುತ್ತಿದೆ ಎಂದು ನಟಿ ಬರೆದುಕೊಂಡಿದ್ದಾರೆ.

56
ಯುವಕನ ಜೊತೆ ನಟಿ

ಅಂದಹಾಗೆ ನಟಿ ಸದ್ಯ ಸುದ್ದಿ ಮಾಡ್ತಿರೋದು ಜೊತೆಗಿರುವ ಆ ಯುವಕನಿಂದಾಗಿ. ಇತ್ತೀಚೆಗಷ್ಟೇ ನಟಿ ಸ್ಪಂದನಾ ಸೋಮಣ್ಣ ಯೂರೋಪ್ ಪ್ರವಾಸ ಕೈಗೊಂಡಿದ್ದರು. ಇಟಲಿ, ಫ್ರಾನ್ಸ್ ಬೆಲ್ಜಿಯಂ, ನೆದರ್ಲ್ಯಾಂಡ್ಸ್, ಕ್ರೊಯೇಷಿಯಾದ ಸುಂದರ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಯೂರೋಪ್ ಪ್ರವಾಸ ಮುಗಿಸಿಕೊಂಡು ಬಂದ್ಮೇಲೆ ಸ್ಪಂದನಾ ಸೋಮಣ್ಣ ಒಂದು ಟ್ವಿಸ್ಟ್‌ ಕೊಟ್ಟಿದ್ದಾರೆ.

66
ಎಂಗೇಜ್​ ಆದ್ರಾ ನಟಿ

ಪ್ಯಾರಿಸ್‌ನಲ್ಲಿ ಐಫೆಲ್ ಟವರ್ ಮುಂದೆ ಹುಡುಗನ ಕೈಹಿಡಿದು ತಾವು ಓಡಾಡುತ್ತಿರುವ ಫೋಟೋವನ್ನ ಸ್ಪಂದನಾ ಸೋಮಣ್ಣ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದನ್ನ ಕಂಡು ತಾರೆಯರು ಶುಭಾಶಯಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ. ಹಾಗಾದ್ರೆ, ಸ್ಪಂದನಾ ಸೋಮಣ್ಣ ಎಂಗೇಜ್ ಆಗಿದ್ದಾರಾ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories