ಇದೇ ಕಾರಣಕ್ಕೆ ಮುರಿದು ಬಿತ್ತು ಎಂಗೇಜ್‌ಮೆಂಟ್ : ಡಿವೋರ್ಸ್‌ ಸುದ್ದಿ ಬೆನ್ನೆಲೇ ಮುನ್ನೆಲೆಗೆ ಬಂದ ಅಭಿಷೇಕ್ ಕರೀಷ್ಮಾ ಸಂಬಂಧ

First Published | Dec 11, 2023, 3:15 PM IST

ಅಭಿಷೇಕ್ ಬಚ್ಚನ್ ಐಶ್ವರ್ಯಾ ಅವರ ಮಧ್ಯೆ ವಿಚ್ಛೇದನದ ಸುದಿ ವ್ಯಾಪಕವಾಗಿ ಚರ್ಚೆಯಾಗುತ್ತಿರುವ ಬೆನ್ನೆಲೇ ಕರೀಷ್ಮಾ ಜೊತೆಗಿನ ಅಭಿಷೇಕ್ ಬಚ್ಚನ್ ಸಂಬಂಧದ ವಿಚಾರವೂ ಈಗ ಮುನ್ನೆಲೆಗೆ ಬಂದಿದೆ. 

ಕೆಲ ದಿನಗಳಿಂದ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಪರಸ್ಪರ ದೂರಾಗಿದ್ದಾರೆ. ಇಬ್ಬರು ವಿಚ್ಛೇದನ ಪಡೆದಿದ್ದಾರೆ ಎಂಬ ಸುದ್ದಿಗಳು ಮಾಧ್ಯಮಗಳಲ್ಲಿ ಸಾಕಷ್ಟು ಸಂಚಲನ ಮೂಡಿಸುತ್ತಿವೆ. ಈ ರೂಮರ್ಸ್‌ಗಳ ಮಧ್ಯೆಯೇ ಅಮಿತಾಭ್ ಬಚ್ಚನ್ ತಮ್ಮ ಸೊಸೆಯನ್ನು ಇನ್ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ ಎಂದು ಗುಲ್ಲೆದ್ದು  ಆ ವಿಚಾರವೂ ಕೂಡ ಸಾಕಷ್ಟು ಸಂಚಲನ ಸೃಷ್ಟಿಸಿತ್ತು.

Aishwarya, Abhishek Bachchan, Karisma kapoor

ಬಚ್ಚನ್ ಮನೆತನದ ಕುಡಿ ಅಮಿತಾಬ್ ಮೊಮ್ಮಗ ಆಗಸ್ತ್ಯ ನಂದಾನ ಚೊಚ್ಚಲ ಸಿನಿಮಾ ಆರ್ಕಿಸ್‌ನ ಪ್ರಿಮೀಯರ್ ಶೋದಲ್ಲೂ ಈ ಕುಟುಂಬದ ಫೋಟೋ ಶೂಟ್‌ ವೇಳೆ ಏನೋ ಮಿಸ್ಸಿಂಗ್ ಕಂಡು ಬಂದಿರುವುದನ್ನು ನೆಟ್ಟಿಗರು ಗಮನಿಸಿ ಈ ವಿಚ್ಚೇದನದ ಗಾಸಿಪ್ ಮತ್ತಷ್ಟು ಹೆಚ್ಚಾಯ್ತು

Tap to resize

ಆದರೆ ಅಭಿಷೇಕ್ ಬಚ್ಚನ್ ಅವರು ಐಶ್ವರ್ಯಾ ರೈ ಯವರನ್ನು ವಿವಾಹವಾಗುವ ಮೊದಲು ಕರೀಷ್ಮಾರ ಜೊತೆ ಸಂಬಂಧದಲ್ಲಿದ್ದು ವಿವಾಹ ನಿಶ್ಚಯವೂ ಆಗಿತ್ತು, ಪರಸ್ಪರ ಜೊತೆಯಲ್ಲೇ ಓಡಾಡುತ್ತಿದ್ದ ಅಭಿಷೇಕ್ ಬಚ್ಚನ್‌ ಹಾಗೂ ಕರೀಷ್ಮಾರನ್ನು ಸಮಾರಂಭವೊಂದರಲ್ಲಿ ಸ್ವತಃ ಅಮಿತಾಬ್ ಬಚ್ಚನ್ ಪತ್ನಿ ಜಯಾ ಬಚ್ಚನ್ ತಮ್ಮ ಭಾವಿ ಸೊಸೆ ಎಂದು ಪರಿಚಯಿಸಿದ್ದರು

ಆದರೆ ಈ ಸಂಬಂಧ ವಿವಾಹದವರೆಗೆ ಮುಂದುವರೆಯಲೇ ಇಲ್ಲ, ಸ್ವತಃ ಅಭಿಷೇಕ್ ಬಚ್ಚನ್ ಜಗದೇಕ ಸುಂದರಿ ಐಶ್ವರ್ಯಾಗೆ ಸೋತು, ಕರೀಶ್ಮಾ ಜೊತೆಗಿನ ಸಂಬಂಧಕ್ಕೆ ಎಳ್ಳುನೀರು ಬಿಟ್ಟು ಐಶ್ವರ್ಯಾರನ್ನು ಮದುವೆಯೂ ಆದರು. ಈಗ ಅವರಿಗೊಬ್ಬ ಮಗಳಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. 

Aishwarya, Abhishek Bachchan, Karisma kapoor

ಆದರೆ ಎಂಗೇಜ್‌ ಮೆಂಟ್ ಆಗಿ ಸಂಬಂಧದಲ್ಲಿದ್ದ ಕರೀಷ್ಮಾರನ್ನು ಬಿಟ್ಟು ತನಗಿಂತ ಹಿರಿಯಳಾದ ಐಶ್ವರ್ಯಾ ಜೊತೆಗೆ ವಿವಾಹಕ್ಕೆ ಮುಂದಾದ ಅಭಿಷೇಕ್ ಅವರು ಇವರಿಬ್ಬರ ಮಧ್ಯೆ ಕಂಡ ವ್ಯತ್ಯಾಸವಾದರೂ ಏನು ಎಂಬುದು ಈಗ  ಬಹಳ ಚರ್ಚೆಯಾಗುತ್ತಿದೆ.

Aishwarya, Abhishek Bachchan, Karisma kapoor

ಕೆಲ ಮೂಲಗಳ ಪ್ರಕಾರ ಐಶ್ವರ್ಯಾ ಅವರ ಸೌಂದರ್ಯಕ್ಕಿಂತ ಅವರು ತಮ್ಮ ಅಪ್ಪ ಅಮ್ಮನನ್ನು ಪ್ರೀತಿಸುತ್ತಿದ್ದ ಕಾಳಜಿ ಮಾಡುತ್ತಿದ್ದ ರೀತಿಯೇ ಅಭಿಷೇಕ್ ಅವರನ್ನು ಬಲವಾಗಿ ಅವರತ್ತ ವಾಲುವಂತೆ ಮಾಡಿತ್ತಂತೆ. ಇದಕ್ಕೆ ವಿರುದ್ಧವೆಂಬಂತೆ ನಟಿ ಕರೀಶ್ಮಾ  ಮದುವೆಯ ನಂತರ ಅಭಿಷೇಕ್ ಪೋಷಕರು ವಾಸ ಮಾಡುವ ಮನೆಯಿಂದ ಪ್ರತ್ಯೇಕವಾಗಿ ವಾಸ ಮಾಡಲು ಬಯಸಿದ್ದರಂತೆ. 

ಅಮಿತಾಬ್ ಬಚ್ಚನ್ ಹಾಗೂ ಜಯಾ ಬಚ್ಚನ್ ಅವರು ವಾಸ ಮಾಡುವ ಮನೆ ಜಲ್ಸಾದಿಂದ ಪ್ರತ್ಯೇಕಗೊಂಡು ಅಭಿಷೇಕ್ ಜೊತೆ ವಾಸ ಮಾಡಲು ಕರೀಷ್ಮ ಬಯಸಿದ್ದರಂತೆ ಇದುವೇ ಕರೀಷ್ಮಾ (Karisma Kapoor) ಜೊತೆ ಮದುವೆ ಮುರಿದುಕೊಳ್ಳಲು ಕಾರಣವಾಗಿತ್ತು ಎಂಬ ವಿಚಾರದ ಬಗ್ಗೆ ಈಗ ಚರ್ಚೆಯಾಗುತ್ತಿದೆ. ಈ ಹಿಂದೆ ಅಭಿಷೇಕ್ ಹಾಗೂ ಐಶ್ವರ್ಯಾ ಅವರು ಜಲ್ಸಾದಿಂದ ಹೊರಬಂದು ಬೇರೆಡೆ ವಾಸ ಮಾಡುತ್ತಿದ್ದಾರೆ ಎಂದು ಗಾಸಿಪ್ ಹಬ್ಬಿತ್ತು.

ಆದರೆ ಐಶ್ವರ್ಯಾ ಅವರು ಎಂದಿಗೂ ಅತ್ತೆ ಮಾವನಿಂದ ದೂರವಾಗಲು ಬಯಸಿರಲಿಲ್ಲ ಎಂಬ ವಿಚಾರ ನಂತರ ಬಹಿರಂಗವಾಗಿತ್ತು.  2002ರಲ್ಲಿ ಅಭಿಷೇಕ್ ಬಚ್ಚನ್ (Abhishek Bachchan) ಜೊತೆ  ಕರೀಷ್ಮಾ ಅವರು ಎಂಗೇಜ್ ಆಗುತ್ತಾರೆ. ಇದಾದ ನಂತರ ಅವರು ಅಭಿಷೇಕ್ ಅವರನ್ನು ತಮ್ಮ ಪೋಷಕರು ವಾಸ ಮಾಡುವ ಮನೆಯಿಂದ ಹೊರಬರುವಂತೆ ಒತ್ತಾಯಿಸಿದ್ದರು. ಆದರೆ ಪೋಷಕರಿಂದ ದೂರಾಗಲು ಬಯಸದ ಅಭಿಷೇಕ್ ಇದೇ ಕಾರಣಕ್ಕೆ ಕರೀಷ್ಮಾ ಜೊತೆ ವಿವಾಹ ಮುರಿದುಕೊಂಡರು. ಅಲ್ಲದೇ ನಂತರ ಕರೀಷ್ಮಾ ಗುಣಕ್ಕೆ ವಿರುದ್ಧ ಎಂಬಂತಿದ್ದ ಐಶ್ವರ್ಯಾರನ್ನು ಮದುವೆಯಾದರು. 

ಇತ್ತ ಕರೀಷ್ಮಾ ನಂತರ ದೆಹಲಿ ಮೂಲದ ಉದ್ಯಮಿಯನ್ನು ಮದುವೆಯಾಗಿದ್ದು, ನಂತರ ಸಾಂಸಾರಿಕ ಕಲಹದ ಹಿನ್ನೆಲೆಯಲ್ಲಿ ಪತಿಯಿಂದ ವಿಚ್ಛೇದನ ಪಡೆದಿದ್ದಾರೆ. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಈಗ ಐಶ್ವರ್ಯಾ (Aishwarya Rai) ಹಾಗೂ ಅಭಿಷೇಕ್ ಮಧ್ಯೆ ಎಲ್ಲವೂ ಸರಿ ಇಲ್ಲ ಎಂಬ ಗಾಳಿಸುದ್ದಿ ಹಬ್ಬಿರುವ ಹಿನ್ನೆಲೆಯಲ್ಲಿ ಅವರ ಹಳೆ ಸಂಬಂಧಗಳು ಈಗ ಮುನ್ನೆಲೆಗೆ ಬಂದು ಇಂಟರ್‌ನೆಟ್‌ನಲ್ಲಿ ಚರ್ಚೆ ಸೃಷ್ಟಿಸಿದೆ. 

Latest Videos

click me!