ಮುಂಬೈನಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ಈ ಅಪ್ಪ ಮಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ಆಮೀರ್ ಖಾನ್ ಮೊದಲ ಪತ್ನಿ ರೀನಾ ದತ್ತಾ, ಮಗಳು ಇರಾ ಭಾವಿ ಪತಿ ನೂಪುರ್ ಶಿಖರೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಆಮೀರ್ ಖಾನ್‌ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಪ್ರಶಸ್ತಿ ನೀಡಿ ಗೌರವಿಸಿದ್ದು, ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ಕೂಡ ಉಪಸ್ಥಿತರಿದ್ದರು. ಮಗಳು ಇರಾ ಖಾನ್‌ಗೂ ಇನ್ಸಫೈರಿಂಗ್ ಯೂತ್ ಅವಾರ್ಡ್ ದೊರಕಿದ್ದು, ಸಮಾರಂಭದಲ್ಲಿ ಅಮೀರ್ ಖಾನ್, ಮಾಜಿ ಪತ್ನಿ ರೀನಾ ದತ್ತಾ, ಭಾವಿ ಅಳಿಯ ನೂಪುರ್ ಹಾಗೂ ಮಗಳ ಜೊತೆ ಕುಳಿತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಇರಾ ಖಾನ್ ಕಪ್ಪು ಬಣ್ಣದ ಚಿನ್ನದ ಬಣ್ಣದ ಗೆರೆಗಳಿರುವ ಕಪ್ಪು ಬಣ್ಣದ ಸೀರೆ ಧರಿಸಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇರಾ ಖಾನ್ ಆಗಸ್ತು ಫೌಂಡೇಶನ್ ಎಂಬ ಎನ್‌ಜಿಒ ಒಂದನ್ನು ಸ್ಥಾಪಿಸಿದ್ದು, ಜನರ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಈ ಫೌಂಡೇಶನ್ ಮೂಲಕ ಕೆಲಸ ಮಾಡುತ್ತಿದ್ದಾರೆ.
ಇರಾ ಖಾನ್ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ಇರಾ ನೂಪುರ್ ಉದ್ಯಮಿ ಹಾಗೂ ಫಿಟ್‌ನೆಸ್ ತರಬೇತುದಾರ ನೂಪುರ ಶಿಖರೆ ಜೊತೆ ಎಂಗೇಜ್ ಆಗಿದ್ದು, ಮುಂದಿನ ವರ್ಷ ಜನವರಿ 3 ರಂದು ಇಬ್ಬರು ಹಸೆಮಣೆ ಏರಲಿದ್ದಾರೆ.
ಇರಾ ಖಾನ್ ಖಿನ್ನತೆಯಿಂದ ಬಳಲುತ್ತಿದ್ದ ವೇಳೆ ಇರಾಗೆ ಜೊತೆಯಾಗಿದ್ದು ನೂಪುರ್ ಶಿಖರೆ ಇಲ್ಲಿಂದ ಆರಂಭವಾದ ಇವರ ಸ್ನೇಹ ಪ್ರೇಮಕ್ಕೆ ತಿರುಗಿದ್ದು, ಮದುವೆಯವರೆಗೆ ಬಂದು ನಿಂತಿದೆ. ಇರಾ ನೂಪುರ್ ಶಿಖರೆಯನ್ನು ತನ್ನ ಜೀವನ ಸಂಗಾತಿಯಾಗಿ ಆಯ್ಕೆ ಮಾಡಿಕೊಂಡಿರುವುದಕ್ಕೆ ಆಮೀರ್ ಖಾನ್ ಸಂತಸ ವ್ಯಕ್ತಪಡಿಸಿದ್ದರು.
ಆತ ಆಕೆಯ ಜೊತೆಗೆ ಇದ್ದ ಆಕೆಯ ಜೊತೆ ಭಾವನಾತ್ಮಕವಾಗಿ ನಿಲ್ಲುವ ಹಾಗೂ ಆಕೆಯನ್ನು ಬೆಂಬಲಿಸುವ ವ್ಯಕ್ತಿ ಆತ, ಆತನನ್ನು ಮಗಳು ಜೀವನ ಸಂಗಾತಿಯಾಗಿ ಆಯ್ಕೆ ಮಾಡಿರುವುದಕ್ಕೆ ನನಗೆ ಖುಷಿ ಇದೆ. ಅವರಿಬ್ಬರೂ ಒಬ್ಬರನ್ನೊಬ್ಬರು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ ಎಂದು ಆಮೀರ್ ಖಾನ್ ಹೇಳಿದ್ದಾರೆ.
ಬಹುಶ ಇದು ಸಿನಿಮಾ ಡೈಲಾಗ್‌ನಂತೆ ಕೇಳಬಹುದು. ಆದರೆ ನಾನು ನೂಪುರ್‌ನಲ್ಲಿ ಮಗನನ್ನು ಕಾಣುತ್ತಿದ್ದೇನೆ ನೂಪುರ್ ಓರ್ವ ಅಂತಹ ಒಳ್ಳೆ ಹುಡುಗ, ನೂಪುರ ಹಾಗೂ ಆತನ ಅಮ್ಮ ಪ್ರೀತಮಜಿ ಈಗಾಗಲೇ ನಮ್ಮ ಕುಟುಂಬದ ಭಾಗವಾಗಿದ್ದು, ಅವರೊಂದಿಗಿನ ಬಂಧ ಇನ್ನಷ್ಟು ಬಲಿಷ್ಠವಾಗುತ್ತಿರುವುದಕ್ಕೆ ನನಗೆ ತುಂಬಾ ಖುಷಿ ಇದೆ ಎಂದು ಆಮೀರ್ ಖಾನ್ ಹೇಳಿದ್ದಾರೆ.
ಈ ವೇಳೆ ಇರಾ ಮದುವೆ ವೇಳೆನೀವು ಅಳುವಿರಾ ಭಾವುಕರಾಗುವಿರಾ ಎಂದು ಆಮೀರ್ ಖಾನ್ ಅವರನ್ನು ಕೇಳಿದಾಗ ನಾನು ಬಹಳ ಭಾವುಕ ವ್ಯಕ್ತಿ ಸಹೋದರ, ಆ ದಿನ ನಾನು ತುಂಬಾ ಅಳುವುದಂತೂ ನಿಜ, ಆ ದಿನ ಆಮೀರ್‌ನ್ನು ಸಮಾಧಾನ ಮಾಡೋದ್ಯಾರು ಎಂದು ಈಗಾಗಲೇ ನಮ್ಮ ಕುಟುಂಬದಲ್ಲಿ ಚರ್ಚೆಯಾಗುತ್ತಿದೆ. ನಾನು ನನ್ನ ನಗು ಹಾಗೂ ಅಳು ಎರಡನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಆಮೀರ್ ಖಾನ್ ಹೇಳಿದ್ದಾರೆ.
ಪ್ರಸ್ತುತ ಆಮೀರ್ ಖಾನ್ ಅವರು ಚೆನ್ನೈನಲ್ಲಿ ವಾಸವಿದ್ದಾರೆ. ತಮ್ಮ ವಯಸ್ಸಾದ ತಾಯಿಗೆ ಚೆನ್ನೈನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಆಮೀರ್ ತಾಯಿಯನ್ನು ನೋಡಿಕೊಳ್ಳುವ ಸಲುವಾಗಿ ಚೆನ್ನೈನಲ್ಲಿ ನೆಲೆಸಿದ್ದಾರೆ.
ಇತ್ತೀಚೆಗೆ ಆಮೀರ್‌ಖಾನ್ ಅವರನ್ನು ಚೆನ್ನೈ ಪ್ರವಾಹದ ವೇಳೆ ಬೋಟ್ ಮೂಲಕ ಅವರಿದ್ದ ನಿವಾಸದಿಂದ ರಕ್ಷಣೆ ಮಾಡಿದ ವೀಡಿಯೋ ವೈರಲ್ ಆಗಿತ್ತು.