ಎನಿಮಲ್ ನಟ ಕುನಾಲ್‌ ಜೊತೆ ಹಸೆಮಣೆಗೆ ಕಾಲಿಟ್ಟ ನಟಿ ಮುಕ್ತಿ ಮೋಹನ್‌

First Published | Dec 10, 2023, 6:46 PM IST

ಡಾನ್ಸರ್ ಹಾಗೂ ನಟಿ ಮುಕ್ತಿ ಮೋಹನ್ ಎನಿಮಲ್ ಸಿನಿಮಾದ ಪ್ರಮುಖ ಪಾತ್ರಧಾರಿ ಕುನಾಲ್ ಠಾಕೂರ್ ಜೊತೆ ಹಸೆಮಣೆ ಏರಿದ್ದು, ನವದಂಪತಿಗಳ ಫೋಟೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 

ಡಾನ್ಸರ್ ಹಾಗೂ ನಟಿ ಮುಕ್ತಿ ಮೋಹನ್ ಎನಿಮಲ್ ಸಿನಿಮಾದ ಪ್ರಮುಖ ಪಾತ್ರಧಾರಿ ಕುನಾಲ್ ಠಾಕೂರ್ ಜೊತೆ ಹಸೆಮಣೆ ಏರಿದ್ದು, ನವದಂಪತಿಗಳ ಫೋಟೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 

ನಟ ಕುನಾಲ್ ಠಾಕೂರ್ ಹಾಗೂ ನಟಿ ನೃತ್ಯಗಾರ್ತಿ ಮುಕ್ತಿ ಮೋಹನ್‌ ಇಬ್ಬರೂ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಮದುವೆ ಫೋಟೋಗಳನ್ನು ಪೋಸ್ಟ್ ಮಾಡಿದ್ದು, ತಿಳಿ ಗುಲಾಬಿ ಬಣ್ಣದ ಮದುವೆ ಧಿರಿಸಿನಲ್ಲಿ ನವ ಜೋಡಿ ಮಿಂಚುತ್ತಿದ್ದಾರೆ. 

Tap to resize

ಮುಕ್ತಿ ಮೋಹನ್ ತಿಳಿ ಗುಲಾಬಿ ಬಣ್ಣದ ಲೆಹೆಂಗಾ ಧರಿಸಿದ್ದರೆ ಪತಿ ಅದೇ ಬಣ್ಣದ ಶೆರ್ವಾನಿ ಧರಿಸಿದ್ದಾರೆ. ನಿನ್ನೊಳಗೆ ನನ್ನ ದೈವಿಕ ಸಂಪರ್ಕವನ್ನು ಕಂಡೆ, ನಿನ್ನೊಂದಿಗೆ ನನ್ನ ಸಾಂಗತ್ಯ ಉದ್ದೇಶಿತವಾಗಿದೆ.

ದೇವರು, ಕುಟುಂಬ ಹಾಗೂ ಸ್ನೇಹಿತರ ಆಶೀರ್ವಾದಕ್ಕೆ ಋಣಿ. ನಮ್ಮ ಕುಟುಂಬವೂ ಭಾವುಕವಾಗಿದ್ದು, ನಮ್ಮ ಮುಂದಿನ ಜೀವನಕ್ಕೆ ನಿಮ್ಮೆಲ್ಲರ ಆಶೀರ್ವಾದ ಬೇಕು ಎಂದು ಮುಕ್ತಿ ಮೋಹನ್ ಬರೆದುಕೊಂಡಿದ್ದಾರೆ.

ಮುಕ್ತಿ ಮೋಹನ್ ಅವರ ಸಹೋದರಿ ನೀತಿ ಮೋಹನ್ ಗಾಯಕಿಯಾಗಿದ್ದಾರೆ ಇನ್ನೋರ್ವ ತಂಗಿ ಶಕ್ತಿ  ಮುಕ್ತಿಯಂತೆಯೇ ನಟಿ ಹಾಗೂ ನೃತ್ಯಗಾರ್ತಿ, ಇವರಿಬ್ಬರೂ,  ಅಕ್ಕನ ಮದುವೆಯ ಆಲ್ಬಂನಲ್ಲಿ ಮಿಂಚಿರುವುದನ್ನು ಕಾಣಬಹುದು. 

ನಿನ್ನೆಯಷ್ಟೇ ಆಯುಷ್ಮಾನ್ ಖುರಾನ ಅವರ ಪತ್ನಿ ತಾಹಿರ ಕಶ್ಯಪ್ ಅವರು ಮುಕ್ತಿ ಮೋಹನ್ ವಿವಾಹ ಪೂರ್ವ ವಿವಿಧ ಸಂಪ್ರದಾಯಗಳ ವೀಡಿಯೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು.  

ಇದರಲ್ಲಿ ವಧು ಮುಕ್ತಿ  ತನ್ನ ಭಾವಿ ಪತಿ ಕುನಾಲ್ ಠಾಕೂರ್ ಜೊತೆ ಕೇಸರಿಯಾ ತೆರ ಹಾಡಿಗೆ ಹೆಜ್ಜೆ ಹಾಕಿರುವುದು ಸೆರೆ ಆಗಿತ್ತು. 

Mukti Mohan, Kunal Thakur

ಈ ಮದುವೆ ವಿಡಿಯೋ ಶೇರ್ ಮಾಡಿದ ತಾಹಿರಾ ನೀವಿಬ್ಬರೂ ನಿನ್ನೆ ರಾತ್ರಿ ಕನಸಿನಲ್ಲಿದ್ದೀರಿ ಎಂದು ಬರೆದುಕೊಂಡಿದ್ದರು. ಇವರ ಮದುವೆ ಫೋಟೋಗಳು ಈಗ ವೈರಲ್ ಆಗಿವೆ.

ಹಾಗೆಯೇ ಮತ್ತೆ ಕೆಲವು ಫೋಟೋಗಳಲ್ಲಿ ಮುಕ್ತಿ ಹಾಗೂ ಕುನಾಲ್ ಸ್ನೇಹಿತರಾದ ತಾಹಿರಾ ಕಶ್ಯಪ್, ಆಕೃತು ಆಹುಜಾ, ಪ್ರೀತಿ ಆನಂದ್ ಜೊತೆ ಪೋಸ್ ನೀಡುವುದು ಸೆರೆ ಆಗಿತ್ತು.

ಮುಕ್ತಿ ಮೋಹನ್ ಅವರು ಝರಾ ನಾಚ್ಕೆ ದಿಖಾ, ನಾಚ್ ಬಲಿಯೆ, ಫಿಯರ್ ಫ್ಯಾಕ್ಟರ್, ಝಲಕ್ ದಿಖ್ಲಾಜ 6, ಮುಂತಾದ ಹಲವು ಫೇಮಸ್‌ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡು ಪ್ರಸಿದ್ಧಿ ಪಡೆದಿದ್ದಾರೆ. 

ಇದರ ಜೊತೆಗೆ ಕೆಲ ಸಿನಿಮಾಗಳಲ್ಲಿಯೂ ಅವರು ಕೆಲಸ ಮಾಡಿದ್ದು, ಸಹೀಬ್, ಬಿವಿ ಔರ್ ಗ್ಯಾಂಗ್‌ಸ್ಟಾರ್, ದರುವು, ಹೇಟ್ ಸ್ಟೋರಿ, ಮುರಾನ್ & ಕಾಂಚಿ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 

Latest Videos

click me!