Chanakya Niti in Kannada: ವಿಧಿ ಬರೆದ ಈ 3 ವಿಷಯ ಯಾರೂ ಬದಲಾಯಿಸಲು ಸಾಧ್ಯವಿಲ್ಲ

Published : Jul 05, 2026, 01:09 PM IST

Chanakya Wisdom Kannada: ಜೀವನದಲ್ಲಿ ಸಂಭವಿಸುವ ಕೆಲವು ಘಟನೆಗಳು ನಮ್ಮ ಕೈಯ್ಯಲ್ಲಿರುವುದಿಲ್ಲ. ಆಚಾರ್ಯ ಚಾಣಕ್ಯರ ನೀತಿಶಾಸ್ತ್ರದ ಪ್ರಕಾರ, ಮನುಷ್ಯನ ಹಣೆಬರಹದಲ್ಲಿ ಕೆಲವು ಪ್ರಮುಖ ವಿಷಯಗಳು ಆತ ಹುಟ್ಟುವ ಮೊದಲೇ ಬರೆಯಲ್ಪಟ್ಟಿರುತ್ತವೆ.

PREV
15
ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕು...

ಆಚಾರ್ಯ ಚಾಣಕ್ಯರ ಬಗ್ಗೆ ಹೆಚ್ಚೇನು ಹೇಳಬೇಕಾದ ಅಗತ್ಯವಿಲ್ಲ. ನಿಮಗೆಲ್ಲರಿಗೂ ಗೊತ್ತಿರುವಂತೆ ಅವರು ಅತ್ಯಂತ ಪ್ರತಿಭಾವಂತ ಮತ್ತು ಶ್ರೇಷ್ಠ ವ್ಯಕ್ತಿ. ತಮ್ಮ ನೀತಿಶಾಸ್ತ್ರದಲ್ಲಿ ಚಾಣಕ್ಯರು ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ತಿಳಿಸಿದ್ದಾರೆ. ಚಾಣಕ್ಯರು ಹೇಳಿರುವ ಈ ಮಾತುಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕು. ಇಂದಿಗೂ ಅವರು ಹೇಳಿದ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಅನೇಕರು ಆಸಕ್ತಿ ಸಹ ತೋರಿಸುತ್ತಾರೆ. ಅಂದಹಾಗೆ ಚಾಣಕ್ಯರ ಪ್ರಕಾರ, ಮನುಷ್ಯನ ಜೀವನದಲ್ಲಿ ಕೆಲವು ವಿಷಯಗಳು ಮೊದಲೇ ನಿರ್ಧಾರವಾಗಿದ್ದು, ವಿಧಿ ಬರೆದ ಈ ಕೆಳಗಿನ ವಿಷಯಗಳನ್ನು ಯಾರೂ ಬದಲಿಸಲು ಸಾಧ್ಯವಿಲ್ಲ. 

25
1. ಬುದ್ಧಿವಂತಿಕೆ ಮತ್ತು ಜ್ಞಾನ

1. ಬುದ್ಧಿವಂತಿಕೆ ಮತ್ತು ಜ್ಞಾನ
ನಮಗೆ ತಿಳಿಯದ ವಿಷಯವೇನೆಂದರೆ, ಮನುಷ್ಯನ ಬುದ್ಧಿವಂತಿಕೆಯು ಅವನು ಹುಟ್ಟುವ ಮುನ್ನವೇ ನಿರ್ಧಾರವಾಗಿರುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಕೆಲವರಿಗೆ ಚಿಂತನಾ ಶಕ್ತಿ ಹೆಚ್ಚಾಗಿರುತ್ತದೆ, ಇನ್ನು ಕೆಲವರು ಯಾವುದನ್ನೇ ನೋಡಿದರೂ ತಕ್ಷಣ ಕಲಿಯುತ್ತಾರೆ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಯಾವುದಾದರೊಂದು ವಿಶೇಷ ಪ್ರತಿಭೆ ಅಡಗಿರುತ್ತದೆ ಎಂಬುದು ಚಾಣಕ್ಯರ ಮತ.

35
2. ಮರಣದ ಸಮಯ

2. ಮರಣದ ಸಮಯ
ಒಬ್ಬ ಮನುಷ್ಯ ಯಾವಾಗ, ಎಲ್ಲಿ ಮತ್ತು ಹೇಗೆ ಸಾಯುತ್ತಾನೆ ಎಂಬುದು ಕೂಡ ಮೊದಲೇ ಬರೆಯಲ್ಪಟ್ಟಿರುತ್ತದೆ. ಇದೆಲ್ಲವೂ ವಿಧಿಯ ಆಟದ ಒಂದು ಭಾಗ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಮನುಷ್ಯನ ಮರಣದ ಸಮಯವು ಮೊದಲೇ ನಿರ್ಧರಿಸಲ್ಪಟ್ಟಿರುತ್ತದೆ ಮತ್ತು ಆ ಸಮಯ ಬಂದಾಗ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.

45
3. ಕರ್ಮಗಳು

3. ಕರ್ಮಗಳು
ಆಚಾರ್ಯ ಚಾಣಕ್ಯರ ಪ್ರಕಾರ, ಒಬ್ಬ ಮನುಷ್ಯ ತನ್ನ ಜೀವನದಲ್ಲಿ ಮಾಡುವ ಎಲ್ಲಾ ಕರ್ಮಗಳು ಮೊದಲೇ ನಿರ್ಧರಿಸಲ್ಪಟ್ಟಿರುತ್ತವೆ. ಮನುಷ್ಯ ಹುಟ್ಟುವ ಮೊದಲೇ ಅವನ ಹಣೆಬರಹದಲ್ಲಿ ಈ ಕರ್ಮಗಳನ್ನು ಬರೆಯಲಾಗಿರುತ್ತದೆ. ತನ್ನ ಕರ್ಮದ ಫಲದಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

55
ವಿಶೇಷ ಸಲಹೆ

ವಿಶೇಷ ಸಲಹೆ
ಬದುಕಿರುವಷ್ಟು ದಿನ ಯಾರನ್ನೂ ಅತಿಯಾಗಿ ನೋಯಿಸಬೇಡಿ. ನಿಮಗೆ ಎಲ್ಲಾ ಸಮಯದಲ್ಲೂ ಬೆಂಬಲ ನೀಡುವವರನ್ನು ಮಾತ್ರ ನಿಮ್ಮ ಮನೆಗೆ ಆಹ್ವಾನಿಸಿ, ಎಲ್ಲರನ್ನೂ ನಿಮ್ಮ ಹತ್ತಿರ ಸೇರಿಸಿಕೊಳ್ಳಬೇಡಿ ಎಂದು ಚಾಣಕ್ಯರು ಎಚ್ಚರಿಸುತ್ತಾರೆ. 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories