Empire State Building proposal: ಇತ್ತೀಚೆಗೆ ಪ್ರಪೋಸ್ ಮಾಡೋದು ದೊಡ್ಡ ಟ್ರೆಂಡ್ ಆಗಿದೆ. ಮೊದಲೇ ಲವ್ ಮಾಡೋಣ ಎಂದು ಫಿಕ್ಸ್ ಆಗಿ, ಇನ್ನೇನು ಮದುವೆ ಆಗಬೇಕು ಎನ್ನುವಷ್ಟರಲ್ಲಿ ಪ್ರಪೋಸ್ ಮಾಡುತ್ತಾರೆ. ಈಗ 1500 ಅಡಿ ಎತ್ತರದಲ್ಲಿ ಜೋಡಿಯೊಂದು ಪ್ರಪೋಸ್ ಮಾಡಿಕೊಂಡಿದೆ.
ಅತ್ಯಂತ ಎತ್ತರದ ಗೋಪುರ ನ್ಯೂಯಾರ್ಕ್‌ನ ಪ್ರಸಿದ್ಧ 'ಎಂಪೈರ್ ಸ್ಟೇಟ್ ಬಿಲ್ಡಿಂಗ್' ನ 103ನೇ ಮಹಡಿಯ ರಹಸ್ಯ ದಾರಿಯ ಮೂಲಕ ಹತ್ತಿದ ಜೋಡಿಯೊಂದು ಅಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡಿದೆ.
25
ಬ್ಯಾನರ್ ಪ್ರದರ್ಶನ ಮಾಡಿದ್ರು
ಇವಾನ್ ಕುಜ್ನೆಟ್ಸೊವ್ (32), ಏಂಜೆಲಿನಾ ನಿಕೋಲಾವ್ (33) ಅವರು ಯಾವುದೇ ಸುರಕ್ಷತಾ ಹಗ್ಗಗಳನ್ನು ಕೂಡ ಕಟ್ಟಿಕೊಳ್ಳದೆ, ಅತ್ತರದ ಬಿಲ್ಡಿಂಗ್ ಹತ್ತೋದರಲ್ಲಿ ಈ ಜೋಡಿ ಫೇಮಸ್ ಆಗಿದೆ. ಈ ಟವರ್ ಮೇಲೆ ಹತ್ತಿ ಕಟ್ಟಡದ ತುದಿಯಲ್ಲಿ ನಿಂತು, "ಯಾವಾಗ ಪ್ರೀತಿಯ ಶಕ್ತಿಯು ಅಧಿಕಾರದ ಮೇಲಿನ ಪ್ರೀತಿಯನ್ನು ಸೋಲಿಸುತ್ತದೆಯೋ, ಆಗ ಜಗತ್ತಿಗೆ ಶಾಂತಿ ಸಿಗುತ್ತದೆ" ಎಂಬ ಜಿಮಿ ಹೆಂಡ್ರಿಕ್ಸ್ ಅವರ ಪ್ರಸಿದ್ಧ ಸಾಲುಗಳಿದ್ದ ಬ್ಯಾನರ್ ಪ್ರದರ್ಶನ ಮಾಡಿದ್ದಾರೆ.
35
ಫೋಟೋಗಳು ವೈರಲ್
ಕಟ್ಟಡ ಹತ್ತಿದವರಲ್ಲಿ ಒಬ್ಬರಾದ 33 ವರ್ಷದ ಏಂಜೆಲಾ ನಿಕೊಲೌ, ಈ ಸಾಹಸದ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ನಗರದ ಹಿನ್ನೆಲೆಯಲ್ಲಿ ತಮ್ಮ ಎಂಗೇಜ್ಮೆಂಟ್ ಉಂಗುರದ ಫೋಟೋವನ್ನು ಅವರು ಹೈಲೈಟ್ ಮಾಡಿದ್ದಾರೆ. ಅವರ ಪ್ರೊಫೈಲ್‌ನಲ್ಲಿ, ಅವರು ಮತ್ತು ಅವರ 32 ವರ್ಷದ ಕ್ಲೈಂಬಿಂಗ್ ಪಾರ್ಟ್ನರ್ ಇವಾನ್ ಕುಜ್ನೆತ್ಸೊವ್ (ಆನ್‌ಲೈನ್‌ನಲ್ಲಿ ಇವಾನ್ ಬೀರ್ಕಸ್ ಎಂದು ಫೇಮಸ್) ಹಲವು ಗಗನಚುಂಬಿ ಕಟ್ಟಡಗಳ ಮೇಲೆ ನಿಂತು ಪೋಸ್ ನೀಡಿರುವ ಫೋಟೋಗಳಿವೆ.
ಅವರ ಪೇಜ್‌ನಲ್ಲಿರುವ ಒಂದು ಪಿನ್ ಮಾಡಿದ ಪೋಸ್ಟ್, 2024ರ ನೆಟ್‌ಫ್ಲಿಕ್ಸ್ ಡಾಕ್ಯುಮೆಂಟರಿ "ಸ್ಕೈವಾಕರ್ಸ್: ಎ ಲವ್ ಸ್ಟೋರಿ" ಬಗ್ಗೆ ಹೇಳುತ್ತದೆ. ಈ ಡಾಕ್ಯುಮೆಂಟರಿಯಲ್ಲಿ ನೆಟ್‌ಫ್ಲಿಕ್ಸ್ ಈ ಜೋಡಿಯನ್ನು "ಡೇರ್‌ಡೆವಿಲ್ ಇನ್‌ಫ್ಲುಯೆನ್ಸರ್‌ಗಳು" ಎಂದು ಬಣ್ಣಿಸಿದೆ. "ಈ ಜೋಡಿ ತಮ್ಮ ಪ್ರೀತಿ, ಸ್ವಾತಂತ್ರ್ಯ ಮತ್ತು ಜೀವವನ್ನು ಪಣಕ್ಕಿಟ್ಟು ಬೃಹತ್ ಗಗನಚುಂಬಿ ಕಟ್ಟಡವನ್ನು ಹತ್ತುತ್ತಾರೆ" ಎಂದು ವಿವರಿಸಿದೆ.
ಈ ಘಟನೆ ಬಗ್ಗೆ ಪ್ರತಿಕ್ರಿಯಿಸಲು ನೆಟ್‌ಫ್ಲಿಕ್ಸ್ ನಿರಾಕರಿಸಿದೆ ಎಂದು ಸಿಎನ್‌ಎನ್ ವರದಿ ಮಾಡಿದೆ.
55
ಅನೇಕ ಕೇಸ್ ದಾಖಲು
ಯಾವುದೇ ಸುರಕ್ಷತಾ ಸಲಕರಣೆಗಳಿಲ್ಲದೆ ಜೀವಕ್ಕೆ ಅಪಾಯ ತಂದೊಡ್ಡಿಕೊಳ್ಳಬಹುದಾದ, ಅಕ್ರಮವಾಗಿ ಕಟ್ಟಡ ಹತ್ತಿದ ಈ ಜೋಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಇವರ ಮೇಲೆ ಅತಿಕ್ರಮಣ, ಸಾರ್ವಜನಿಕ ಆಸ್ತಿಗೆ ಹಾನಿ, ಶಾಂತಿ ಭಂಗ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ.
ಅಂದಹಾಗೆ ಬಿಹಾರದಲ್ಲಿ ಕೂಡ ಜೋಡಿಯೊಂದು ಟವರ್ ಹತ್ತಿ ಪ್ರಪೋಸ್ ಮಾಡಬೇಕು ಎಂದುಕೊಂಡಿತ್ತು. ಇನ್ನೇನು ಟವರ್ ಹತ್ತಿ ಪ್ರಪೋಸ್ ಮಾಡಬೇಕು ಎನ್ನುವಷ್ಟರಲ್ಲಿ ಪೊಲೀಸರು ಟವರ್ ಹತ್ತಿ, ಅವರಿಬ್ಬರನ್ನು ಇಳಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.