ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೋ ಟಾಲಿವುಡ್ ಇಂಡಸ್ಟ್ರಿಯಲ್ಲಿ ಹಾಟ್ ಟಾಪಿಕ್ ಆಗಿದೆ. ಸ್ವತಃ ಕೇಂದ್ರ ಸರ್ಕಾರದ ಸಚಿವರೇ ಈ ಬಗ್ಗೆ ಹೆಚ್ಚಿನ ಮುತುವರ್ಜಿ ತೋರಿದ್ದಾರೆ. ಈ ನಡುವೆ ನಟಿ ಮಾಧವಿ ಲತಾ ಆಡಿರುವ ಮಾತುಗಳು ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ.
ಬ್ರಿಟನ್ ಮೂಲದ ಭಾರತೀಯ ಪ್ರಜೆ ಜಾರಾ ಪಟೇಲ್ ಅವರ ದೇಹಕ್ಕೆ ರಶ್ಮಿಕಾ ಮಂದಣ್ಣ ಅವರ ಮುಖವನ್ನು ಹಾಕಿ ಎಐ ಟೆಕ್ನಾಲಜಿಯಲ್ಲಿ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಬಿಡಲಾಗಿತ್ತು.
ಈ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿ ರಶ್ಮಿಕಾ ಮಂದಣ್ಣ ಟ್ವೀಟ್ ಮಾಡಿದ್ದರು. ಸ್ವತಃ ಅಮಿತಾಬ್ ಬಚ್ಛನ್ ಕೂಡ ರಶ್ಮಿಕಾ ಮಂದಣ್ಣ ಅವರ ಬೆಂಬಲಕ್ಕೆ ನಿಂತಿದ್ದರು.
ಇದರ ನಡುವೆ ಟಾಲಿವುಡ್ ನಟಿ ಮಾಧವಿ ಲತಾ ತೀರಾ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಡೀಪ್‌ಫೇಕ್ ವಿಡಿಯೋದಲ್ಲಿ ಆ ಹುಡುಗಿ ಎಷ್ಟು ಎಕ್ಸ್‌ಪೋಸ್ ಮಾಡಿದ್ದಾರೋ, ಅದಕ್ಕಿಂತ ಹೆಚ್ಚಿನ ಎಕ್ಸ್‌ಪೋಸ್ ಮಾಡಿಕೊಂಡು ರಶ್ಮಿಕಾ ಸಿನಿಮಾ ಕಾರ್ಯಕ್ರಮಗಳಿಗೆ ಬರುತ್ತಾರೆ ಎಂದಿದ್ದಾರೆ.
ಇನ್ಸ್‌ಟಾಗ್ರಾಮ್‌ನಲ್ಲಿ ರಶ್ಮಿಕಾ ಮಂದಣ್ಣ ಅವರ ಹಾಟ್ ಫೋಟೋಗಳೊಂದಿಗೆ ಮಾಡಿರುವ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ. 'ಇನ್ನೊಂದು ಹುಡುಗಿಯ ದೇಹಕ್ಕೆ ರಶ್ಮಿಕಾ ಮಂದಣ್ಣ ಅವರ ಮುಖವನ್ನು ಅಂಟಿಸಲಾಗಿದೆ. ಅದಕ್ಕಿಂತ ಹೊರತಾದ ಕೆಟ್ಟ ಅಂಶಗಳು, ಅಶ್ಲೀಲತೆ ಆ ವಿಡಿಯೋದಲ್ಲಿಲ್ಲ' ಎಂದು ಅವರು ಹೇಳಿದ್ದಾರೆ.
ಈವೆಂಟ್‌ಗಳಲ್ಲಿ ರಶ್ಮಿಕಾ ಧರಿಸುವ ಡ್ರೆಸ್‌ಗಳು ಮತ್ತು ಅವರು ತೋರಿಸುವ Boo** ಶೋಗಿಂತ ಹೆಚ್ಚೇನೂ ಆ ವೀಡಿಯೊದಲ್ಲಿ ಇಲ್ಲ. ಒಂದೇ ವ್ಯತ್ಯಾಸವೆಂದರೆ ಇಲ್ಲಿ ಬೇರೆಯವರ ದೇಹವನ್ನು ಇರಿಸಲಾಗಿದೆ ಎಂದು ಮಾಧವಿ ಲತಾ ಬರೆದಿದ್ದಾರೆ.
ಉಳಿದಂತೆ ಸ್ಟಾರ್ ಹೀರೋಯಿನ್‌ಗಳಿಗೆ ಇದರಲ್ಲಿ ಯಾವುದೇ ಸಮಸ್ಯೆ ಇರೋದಿಲ್ಲ. ನನ್ನ ಫೋಟೋ ಬಿಟ್ಟು ಬೇರೆಯವರ ಮುಖ ಹಾಕಿದ್ದಾರಲ್ಲ ಎಂದು ಹೇಳಿದರೆ ಸಮಾಜದಲ್ಲಿ ದೊಡ್ಡ ವಿಷಯವಾಗುತ್ತದೆ ಅನ್ನೋ ಕಾರಣಕ್ಕೆ ವಿವಾದ ಮಾಡಿದ್ದಾರೆ ಎಂದಿದ್ದಾರೆ.
ಇತ್ತೀಚೆಗೆ ಜರ್ನಲಿಸ್ಟ್ ಅಸೋಸಿಯೇಷನ್, ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿ ರಶ್ಮಿಕಾ ಮಂದಣ್ಣಗೆ ಬೆಂಬಲ ನೀಡುವುದಾಗಿ ಘೋಷಿಸಿದೆ. ಇದನ್ನು ಕೇಳಿ ನನಗೆ ನಗು ಬಂದಿದೆ
ಪ್ರೀತಿಯ ಪತ್ರಕರ್ತರೇ, ನೀವು ರಶ್ಮಿಕಾ ಮಂದಣ್ಣ ಅವರ ಜೊತೆಯಲ್ಲಿ ಇಲ್ಲ. ಸಮಾಜದಲ್ಲಿ ಇರುವ ಇತರ ಮಹಿಳೆಯರ ಭದ್ರತೆಗಾಗಿ ನೀವು ನಿಮ್ಮ ಕೆಲಸವನ್ನು ಮಾಡಿ. ಅದಕ್ಕೆ ಕಾಣಿಕೆ ನೀಡಿ ಎಂದು ಮಾಧವಿ ಲತಾ ಹೇಳಿದ್ದಾರೆ.
ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ನಿಮ್ಮ ಪತ್ರಿಕೋದ್ಯಮಕ್ಕೆ ಬೆಲೆ ಬರುತ್ತದೆ ಎಂದು ಅವರು ಸಲಹೆಯನ್ನೂ ನೀಡಿದ್ದಾರೆ.
ಇವರೆಲ್ಲಾ ಸಿನಿಮಾದಲ್ಲಿ ಬಟ್ಟೆ ಬಿಚ್ಚಿಕೊಂಡು ನಟಿಸಿದರೆ ಮಾತ್ರವೇ ಹೀರೋಯಿನ್ ಆಗುವಂಥವರು. ಹಳೆಯ ಸಿನಿಮಾಗಳ ನಾಯಕಿಯರಂತೆ ಇವರಲ್ಲ ಎಂದು ಮಾಧವಿ ಲತಾ ಹೇಳಿದ್ದಾರೆ.
ಈ ವಿಷಯದ ಬಗ್ಗೆ ಮಾತನಾಡುವುದು ಒಳ್ಳೆಯದು, ಆದರೆ ರಶ್ಮಿಕಾ ಅವರ ವಿಡಿಯೋ ಎನ್ನುವ ಕಾರಣಕ್ಕಲ್ಲ. ರಶ್ಮಿಕಾ ಅವರ ಒರಿಜಿನಲ್ ಡ್ರೆಸ್‌ಗಳಿಗಿಂತ ಹೆಚ್ಚು ಆಕ್ಷೇಪಾರ್ಹ ಉಡುಗೆಯನ್ನುಆಕೆ ಧರಿಸಿರಲಿಲ್ಲ ಎಂದು ಹೇಳಿದ್ದಾರೆ..
ಅದಲ್ಲದೆ ಅದು ಸ್ವಿಮ್ ಸೂಟ್. ಸ್ವಿಮ್ ಸೂಟ್‌ಗಳು ಇರೋದೇ ಹಾಗೆ. ಅದಲ್ಲದೆ, ಹೋದಲ್ಲಿ ವಿಡಿಯೋದಲ್ಲಿ ಇರುವ ಸೈಜ್‌ಗಳು ಮಾತ್ರವೇ ಮುಖ್ಯವಾಗುತ್ತದೆ. ಇದರ ಹೊರತಾಗಿ ಆ ವಿಡಿಯೋದಲ್ಲಿ ಮತ್ತೇನೂ ಇಲ್ಲ ಎಂದು ಹೇಳಿದ್ದಾರೆ.
ಪತ್ರಕರ್ತರಾಗಿ ನಿಮಗೆ ಜವಾಬ್ದಾರಿಯಿದೆ. ರಶ್ಮಿಕಾಗೆ ನಿಮ್ಮ ಬೆಂಬಲ ಬೇಕಾಗಿಲ್ಲ. ಹೊರಗಡೆ ಸಮಾಜಕ್ಕೆ ನಿಮ್ಮ ಬೆಂಬಲ ಬೇಕಾಗಿದೆ. ಹಾಗೆ ಮಾಡಿದರೆ ಉತ್ತಮ ಕಾರ್ಯ ಎನಿಸುತ್ತದೆ ಎಂದು ಹೇಳಿದ್ದಾರೆ.
ರಶ್ಮಿಕಾ ಅವರ ಮಾರ್ಫಿಂಗ್ ವಿಡಿಯೋಗೆ ಎಲ್ಲರೂ ಆಕ್ಷೇಪ ವ್ಯಕ್ತಪಡಿಸಿ ಬೆಂಬಲ ನೀಡುತ್ತಿರುವಾಗಲೇ ನಟಿ ಮಾಧವಿ ಲತಾ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.