Jobs: ಎಐ ಜಮಾನಾದಲ್ಲೂ ಈ ಉದ್ಯೋಗಗಳು ಸೇಫ್! ಯಾವುವು ಗೊತ್ತಾ?

Published : May 30, 2026, 08:22 PM IST

AI-proof jobs: ಕೃತಕ ಬುದ್ಧಿಮತ್ತೆ (AI) ಕ್ರಾಂತಿಯಿಂದಾಗಿ ಅನೇಕರ ಉದ್ಯೋಗಕ್ಕೆ ಕುತ್ತು ಬಂದಿದೆ. ಆದರೆ ಎಐ ಎಷ್ಟೇ ಮುಂದುವರಿದರೂ, ಮುಂದಿನ ಹಲವು ದಶಕಗಳ ಕಾಲ ಸುರಕ್ಷಿತವಾಗಿರುವ ಕೆಲವು ಉದ್ಯೋಗಗಳಿವೆ. ಅವುಗಳ ಬಗ್ಗೆ ಇಲ್ಲಿದೆ ಮಾಹಿತಿ.

PREV
14
ಮುಂದಿನ 100 ವರ್ಷಗಳ ಕಾಲ ಶೇ.100ರಷ್ಟು ಭದ್ರತೆ

ಮುಂದಿನ 100 ವರ್ಷಗಳ ಕಾಲ ಶೇ.100ರಷ್ಟು ಭದ್ರತೆ
ಕೃತಕ ಬುದ್ಧಿಮತ್ತೆ (AI) ಬಂದ ಮೇಲೆ ಉದ್ಯೋಗ ಭದ್ರತೆ ಅನ್ನೋದು ಮಾಯವಾಗಿದೆ. ಐಟಿಯಿಂದ ಹಿಡಿದು ಹಲವು ಕ್ಷೇತ್ರಗಳಲ್ಲಿ ಎಐ ಬಳಕೆ ಹೆಚ್ಚಾಗಿದ್ದು, ಮನುಷ್ಯರು ಮಾಡುತ್ತಿದ್ದ ಕೆಲಸವನ್ನು ಅದೇ ಮಾಡುತ್ತಿದೆ. ಇದರಿಂದಾಗಿ ಸಣ್ಣ ಸ್ಟಾರ್ಟ್‌ಅಪ್‌ಗಳಿಂದ ಹಿಡಿದು ದೊಡ್ಡ ಕಂಪನಿಗಳವರೆಗೆ ಉದ್ಯೋಗ ಕಡಿತ ಮಾಡುತ್ತಿವೆ. ಆದರೆ, ಎಐ ಎಷ್ಟೇ ವೇಗವಾಗಿ ಬೆಳೆದರೂ ಕೆಲವು ಉದ್ಯೋಗಗಳನ್ನು ಮುಟ್ಟಲು ಸಾಧ್ಯವಿಲ್ಲ. ಮುಂದಿನ 100 ವರ್ಷಗಳ ಕಾಲ ಶೇ.100ರಷ್ಟು ಭದ್ರತೆ ಇರುವ ಆ ಉದ್ಯೋಗಗಳ ಬಗ್ಗೆ ಇಲ್ಲಿ ತಿಳಿಯೋಣ.

24
ವೆಲ್ಡರ್ ಅಥವಾ ಪ್ಲಂಬರ್ ಉದ್ಯೋಗ

ವೆಲ್ಡರ್ ಅಥವಾ ಪ್ಲಂಬರ್ ಉದ್ಯೋಗ
ಈಗ ಎಲ್ಲೆಲ್ಲೂ 'ಕೃತಕ ಬುದ್ಧಿಮತ್ತೆ' (AI)ದ್ದೇ ಮಾತು. ChatGPT, ಜೆಮಿನಿಯಂತಹ ಟೂಲ್‌ಗಳಿಂದಾಗಿ ಸಾಫ್ಟ್‌ವೇರ್ ಎಂಜಿನಿಯರ್‌ಗಳಿಂದ ಹಿಡಿದು ಕಂಟೆಂಟ್ ರೈಟರ್‌ಗಳವರೆಗೆ 'ನನ್ನ ಕೆಲಸ ಹೋಗುತ್ತಾ?' ಎಂಬ ಭಯದಲ್ಲಿದ್ದಾರೆ. ಆದರೆ, ಪ್ಲಂಬಿಂಗ್, ಎಲೆಕ್ಟ್ರಿಕಲ್, ಬಡಗತನದಂತಹ ಕೈಕೆಲಸಗಳನ್ನು ಯಾವುದೇ ಟೆಕ್ನಾಲಜಿ ಅಥವಾ ರೋಬೋಟ್‌ಗಳು ಬದಲಾಯಿಸಲು ಸಾಧ್ಯವಿಲ್ಲ. ಹೀಗಾಗಿ ಕೋಡಿಂಗ್ ಮಾಡುವವರಿಗಿಂತ ವೆಲ್ಡರ್ ಅಥವಾ ಪ್ಲಂಬರ್ ಉದ್ಯೋಗ ಹೆಚ್ಚು ಸುರಕ್ಷಿತ. ಪ್ಲಂಬರ್‌ಗಳು, ಎಲೆಕ್ಟ್ರಿಷಿಯನ್‌ಗಳು, ಬಡಗಿಗಳು, ಕಟ್ಟಡ ಕಾರ್ಮಿಕರು ಮತ್ತು ಆರ್ಕಿಟೆಕ್ಟ್‌ಗಳ ಕೆಲಸಕ್ಕೆ ಸದ್ಯಕ್ಕೆ ಧಕ್ಕೆ ಇಲ್ಲ. ಯಾಕೆಂದರೆ ಪ್ರತಿ ಮನೆಯ ನಿರ್ಮಾಣ, ರಿಪೇರಿ ವಿಭಿನ್ನವಾಗಿರುತ್ತದೆ. ಇದಕ್ಕೆ ಬೇಕಾದ ದೈಹಿಕ ಕೌಶಲ್ಯ ಮತ್ತು ಸ್ಥಳಕ್ಕೆ ತಕ್ಕಂತೆ ಯೋಚಿಸುವ ಸಾಮರ್ಥ್ಯ ರೋಬೋಟ್‌ಗಳಿಗೆ ಇನ್ನೂ ಬಂದಿಲ್ಲ.

34
ನಾಯಕತ್ವದ ಜವಾಬ್ದಾರಿಗಳು

ಸಂಸ್ಥೆಗಳನ್ನು ಮುನ್ನಡೆಸುವ ಜವಾಬ್ದಾರಿಗಳಲ್ಲಿ, ಎಐ ಕೇವಲ ಡೇಟಾ ನೀಡಬಲ್ಲದು, ಆದರೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. 
ಸಿಇಒಗಳು ಮತ್ತು ಬಿಸಿನೆಸ್ ಲೀಡರ್‌ಗಳು: ಒಂದು ಸಂಸ್ಥೆಯ ಭವಿಷ್ಯದ ಯೋಜನೆ, ಸಂಸ್ಕೃತಿ ಮತ್ತು ಮಾನವ ಸಂಪನ್ಮೂಲವನ್ನು ನಿರ್ವಹಿಸಲು ನಾಯಕತ್ವದ ಗುಣಗಳು ಅತ್ಯಗತ್ಯ. ರಾಜಕೀಯ ನಾಯಕರು ಮತ್ತು ನೀತಿ ನಿರೂಪಕರು: ಕಾನೂನುಗಳನ್ನು ರೂಪಿಸಲು, ಜನರ ಭಾವನೆಗಳನ್ನು ಅರ್ಥಮಾಡಿಕೊಂಡು ಯೋಜನೆಗಳನ್ನು ಜಾರಿಗೊಳಿಸಲು ಸಾಮಾಜಿಕ ತಿಳುವಳಿಕೆ ಬೇಕು. ಹೀಗಾಗಿ, ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಮನುಷ್ಯರೇ ಆಡಳಿತಗಾರರಾಗಿರುತ್ತಾರೆ. ಯಂತ್ರಗಳು ಸರ್ಕಾರವನ್ನು ನಡೆಸಲು ಸಾಧ್ಯವಿಲ್ಲ.

44
ಶಿಕ್ಷಣ ಕ್ಷೇತ್ರ:

ಶಿಕ್ಷಣ ಕ್ಷೇತ್ರ
ಶಿಕ್ಷಕರು ಮತ್ತು ಪ್ರಾಧ್ಯಾಪಕರು: ಎಐ ಒಂದು ಪಾಠವನ್ನು ಹೇಳಿಕೊಡಬಹುದು, ಆದರೆ ವಿದ್ಯಾರ್ಥಿಯ ವೈಯಕ್ತಿಕ ಪ್ರತಿಭೆಯನ್ನು ಗುರುತಿಸಿ, ಅವನನ್ನು ಪ್ರೋತ್ಸಾಹಿಸಿ, ಉತ್ತಮ ಶಿಸ್ತು ಕಲಿಸುವ 'ಗುರು' ಆಗಲು ಸಾಧ್ಯವಿಲ್ಲ. 
ಸ್ಪೋರ್ಟ್ಸ್ ಕೋಚ್‌ಗಳು: ಕ್ರೀಡಾಪಟುಗಳ ದೈಹಿಕ ಮತ್ತು ಮಾನಸಿಕ ಸ್ಥಿತಿಯನ್ನು ಅರಿತು, ಅವರನ್ನು ಉತ್ತೇಜಿಸಿ ಗೆಲ್ಲುವಂತೆ ಮಾಡುವ ಕಲೆ ಮನುಷ್ಯರಿಗೆ ಮಾತ್ರ ಸಾಧ್ಯ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories