Psychology of love: 'ಐ ಲವ್ ಯೂ' ಅನ್ನೋ ಮಾತು ತುಂಬಾ ವಿಶೇಷ. ಆದರೆ ಎಲ್ಲರೂ ತಮ್ಮ ಪ್ರೀತಿಯನ್ನು ಮಾತಿನಲ್ಲಿ ಹೇಳೋಕೆ ಆಗಲ್ಲ. ಕೆಲವರು ತಮ್ಮ ಕೆಲಸಗಳಲ್ಲಿ ತೋರಿಸ್ತಾರೆ. ಹಾಗಿದ್ರೆ 'ಐ ಲವ್ ಯೂ' ಹೇಳದವರೇ ಹೆಚ್ಚು ಪ್ರೀತಿಸ್ತಾರಾ? ಈ ಬಗ್ಗೆ ಹಲವರಲ್ಲಿ ಗೊಂದಲವಿದೆ. ಇಲ್ಲಿದೆ ನೋಡಿ ಉತ್ತರ.
ಮನಃಶಾಸ್ತ್ರಜ್ಞರು ಏನು ಹೇಳ್ತಾರೆ? ಪ್ರೀತಿ ಅಂದ್ರೆ ಬರೀ ಮಾತಲ್ಲ, ಅದು ನಮ್ಮ ನಡವಳಿಕೆ, ನೋಟ, ಕಾಳಜಿಯಲ್ಲೂ ಕಾಣಿಸುವ ಭಾವನೆ. ಆದ್ರೆ, 'ಐ ಲವ್ ಯೂ' ಹೇಳುವವರು ಹೆಚ್ಚು ಪ್ರೀತಿಸ್ತಾರಾ? ಅಥವಾ ಹೇಳದವರು ಹೆಚ್ಚು ಪ್ರೀತಿಸ್ತಾರಾ? ಅನ್ನೋ ಗೊಂದಲ ಹಲವರಲ್ಲಿದೆ. ಈ ಬಗ್ಗೆ ಮನಃಶಾಸ್ತ್ರಜ್ಞರು ಏನು ಹೇಳ್ತಾರೆ ಅಂತ ನೋಡೋಣ.
26
ಬರೀ ಮಾತುಗಳಿಂದ ಅಳೆಯಬೇಡಿ
ಬರೀ ಮಾತುಗಳಿಂದ ಅಳೆಯಬೇಡಿ ಮನಃಶಾಸ್ತ್ರದ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯು ಪ್ರೀತಿಯನ್ನು ವ್ಯಕ್ತಪಡಿಸುವ ರೀತಿ ಬೇರೆ ಬೇರೆ. ಕೆಲವರಿಗೆ 'ಐ ಲವ್ ಯೂ' ಅಂತ ಪದೇ ಪದೇ ಹೇಳುವುದು ಸಹಜ. ಆದರೆ, ಕೆಲವರು ಹಾಗೆ ಹೇಳಲು ಹಿಂಜರಿಯುತ್ತಾರೆ. ಅವರು ತಮ್ಮ ಪ್ರೀತಿಯನ್ನು ಕೆಲಸಗಳ ಮೂಲಕ, ನಿಮ್ಮ ಕಷ್ಟಗಳಿಗೆ ಸ್ಪಂದಿಸುವುದರ ಮೂಲಕ ತೋರಿಸುತ್ತಾರೆ. ಹೀಗಾಗಿ ಪ್ರೀತಿಯನ್ನು ಬರೀ ಮಾತುಗಳಿಂದ ಅಳೆಯುವುದು ಕಷ್ಟ.
36
ಭಾವನೆಗಳಿಗಿಂತ ಹೆಚ್ಚಾಗಿ ಕ್ರಿಯೆ ನಂಬುವವರು
ಭಾವನೆಗಳಿಗಿಂತ ಹೆಚ್ಚಾಗಿ ಕ್ರಿಯೆ ನಂಬುವವರು ಕೆಲವರು ಚಿಕ್ಕಂದಿನಿಂದಲೇ ತಮ್ಮ ಭಾವನೆಗಳನ್ನು ಹೊರಹಾಕದೆ ಬೆಳೆದಿರುತ್ತಾರೆ. ಕುಟುಂಬದ ವಾತಾವರಣ, ಪಾಲನೆ-ಪೋಷಣೆ ಮತ್ತು ಹಿಂದಿನ ಅನುಭವಗಳು ವ್ಯಕ್ತಿಯ ಪ್ರೀತಿ ವ್ಯಕ್ತಪಡಿಸುವ ರೀತಿಯ ಮೇಲೆ ಪರಿಣಾಮ ಬೀರುತ್ತವೆ. ಇಂತಹವರು 'ಐ ಲವ್ ಯೂ' ಎಂದು ಹೇಳಲು ಮುಜುಗರ ಪಡಬಹುದು. ಇವರು ಭಾವನೆಗಳಿಗಿಂತ ಹೆಚ್ಚಾಗಿ ಕ್ರಿಯೆಗಳನ್ನು ನಂಬುತ್ತಾರೆ.
ನಡವಳಿಕೆಯಲ್ಲಿ ಸ್ಥಿರತೆ ಇರುತ್ತೆ ಇನ್ನು, ಯಾವಾಗಲೂ 'ಐ ಲವ್ ಯೂ' ಹೇಳುವವರೆಲ್ಲಾ ನಿಜವಾಗಿಯೂ ಪ್ರೀತಿಸುತ್ತಾರೆ ಅನ್ನೋ ಗ್ಯಾರಂಟಿ ಇಲ್ಲ. ಕೆಲವೊಮ್ಮೆ ಅದು ಕೇವಲ ಅಭ್ಯಾಸವಾಗಿರಬಹುದು. ನಿಜವಾದ ಪ್ರೀತಿ ಕಷ್ಟದ ಸಮಯದಲ್ಲಿ ಜೊತೆ ನಿಲ್ಲುವುದು, ನಿಮ್ಮ ಭಾವನೆಗಳನ್ನು ಗೌರವಿಸುವುದು, ನಿಮ್ಮ ಸಂತೋಷದ ಬಗ್ಗೆ ಕಾಳಜಿ ವಹಿಸುವುದರಲ್ಲಿ ಕಾಣಿಸುತ್ತದೆ. ಮನಃಶಾಸ್ತ್ರಜ್ಞರ ಪ್ರಕಾರ, ಒಬ್ಬ ವ್ಯಕ್ತಿ ನಿಮ್ಮನ್ನು ನಿಜವಾಗಿಯೂ ಪ್ರೀತಿಸುತ್ತಿದ್ದರೆ, ಅವರ ನಡವಳಿಕೆಯಲ್ಲಿ ಸ್ಥಿರತೆ ಇರುತ್ತದೆ.
56
ಸಂವಹನ ಬಹಳ ಮುಖ್ಯ
ಸಂವಹನ ಬಹಳ ಮುಖ್ಯ ಪ್ರೀತಿಯನ್ನು ವ್ಯಕ್ತಪಡಿಸದಿರುವುದು ಯಾವಾಗಲೂ ಒಳ್ಳೆಯದಲ್ಲ. ಯಾಕಂದ್ರೆ, ಯಾವುದೇ ಸಂಬಂಧದಲ್ಲಿ ಸಂವಹನ ಬಹಳ ಮುಖ್ಯ. ಕೆಲವರಿಗೆ ಪ್ರೀತಿಯನ್ನು ಮಾತಿನಲ್ಲಿ ಕೇಳುವುದರಿಂದ ಭದ್ರತೆ ಮತ್ತು ನಂಬಿಕೆ ಸಿಗುತ್ತದೆ. ಮನಃಶಾಸ್ತ್ರದ ಪ್ರಕಾರ, ಇಬ್ಬರು ವ್ಯಕ್ತಿಗಳು ತಮ್ಮ ಭಾವನೆಗಳನ್ನು ಪರಸ್ಪರ ಅರ್ಥವಾಗುವ ರೀತಿಯಲ್ಲಿ ವ್ಯಕ್ತಪಡಿಸಿಕೊಳ್ಳುವುದು ಉತ್ತಮ.
66
ಪ್ರೀತಿ ಎಂಬುದು ಕೇವಲ ಒಂದು ಮಾತಲ್ಲ
ಪ್ರೀತಿ ಎಂಬುದು ಕೇವಲ ಒಂದು ಮಾತಲ್ಲ ಪ್ರೀತಿಯನ್ನು ಅಳೆಯಲು ಕೇವಲ 'ಐ ಲವ್ ಯೂ' ಎಂಬ ಮಾತನ್ನು ಮಾತ್ರ ನೋಡಬಾರದು. ಆ ವ್ಯಕ್ತಿ ನಿಮ್ಮೊಂದಿಗೆ ಹೇಗೆ ವರ್ತಿಸುತ್ತಾನೆ, ನಿಮಗೆ ಗೌರವ ಕೊಡುತ್ತಾನಾ, ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಾನಾ, ನಿಮಗಾಗಿ ಸಮಯ ಮೀಸಲಿಡುತ್ತಾನಾ ಎಂಬ ವಿಷಯಗಳನ್ನು ಗಮನಿಸಬೇಕು. ಯಾಕೆಂದರೆ ಪ್ರೀತಿ ಎಂಬುದು ಕೇವಲ ಒಂದು ಮಾತಲ್ಲ, ಅದು ನಿರಂತರ ಕಾಳಜಿ, ವಾತ್ಸಲ್ಯ ಮತ್ತು ಜವಾಬ್ದಾರಿಯ ಸಂಯೋಜನೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.