ಸಾಮಾನ್ಯವಾಗಿ ಒಬ್ಬ ಮನುಷ್ಯ ಗಂಟೆಗೆ 8 ರಿಂದ 9 ಕಿಲೋಮೀಟರ್ ವೇಗದಲ್ಲಿ ನಡೆಯಬಲ್ಲ. ಆದರೆ, ಮನುಷ್ಯನ ನಡಿಗೆಗಿಂತಲೂ ಕಡಿಮೆ ವೇಗದಲ್ಲಿ ಚಲಿಸುವ ರೈಲೊಂದು ನಮ್ಮ ದೇಶದಲ್ಲಿದೆ. ಅಷ್ಟೊಂದು ನಿಧಾನವಾದರೂ, ಈ ರೈಲನ್ನು ಹತ್ತಲು ಜನರು ಮುಗಿಬೀಳುತ್ತಾರೆ. ಏನಿದರ ವಿಶೇಷತೆ? ಇಲ್ಲಿದೆ ಮಾಹಿತಿ.
ನಮ್ಮ ದೇಶದಲ್ಲಿ ಬಹುತೇಕ ಎಲ್ಲರೂ ಒಂದಲ್ಲ ಒಂದು ಬಾರಿ ರೈಲಿನಲ್ಲಿ ಪ್ರಯಾಣಿಸಿರುತ್ತಾರೆ. ದೂರದ ಪ್ರಯಾಣಕ್ಕೆ ರೈಲುಗಳೇ ಜನರಿಗೆ ಅಚ್ಚುಮೆಚ್ಚು. ಇತ್ತೀಚೆಗೆ ಅತಿ ವೇಗವಾಗಿ ಚಲಿಸುವ ರೈಲುಗಳು ಬಂದಿವೆ. ನಮ್ಮ ದೇಶದಲ್ಲಿ ಪ್ರತಿನಿತ್ಯ 19 ಸಾವಿರ ರೈಲುಗಳು ಕೋಟ್ಯಾಂತರ ಪ್ರಯಾಣಿಕರನ್ನು ಮತ್ತೊಂದು ಸ್ಥಳಕ್ಕೆ ಸುರಕ್ಷಿತವಾಗಿ ಕೊಂಡೊಯ್ಯುತ್ತಾ ಬಂದಿದೆ.
26
ಈ ರೈಲಿಗಿಂತ ನಾವೇ ಫಾಸ್ಟ್ ಆಗಿ ನಡೀಬಹುದು...!
ಆದರೆ, ಇಂದಿಗೂ ಭಾರತದಲ್ಲಿ ಅತ್ಯಂತ ನಿಧಾನವಾಗಿ ಚಲಿಸುವ ರೈಲೊಂದು ಇದೆ. ಅಷ್ಟು ನಿಧಾನವಾದರೂ, ಈ ರೈಲನ್ನು ಹತ್ತಲು ಪ್ರತಿದಿನ ಜನರು ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಈ ರೈಲು ಎಲ್ಲಿದೆ? ಇದರ ವಿಶೇಷತೆ ಏನು? ನೋಡೋಣ ಬನ್ನಿ.
36
ಅದ್ಭುತವಾದ ರೈಲು ಪ್ರಯಾಣ..!
ನಮ್ಮ ನೆರೆಯ ತಮಿಳಿನಾಡಿನಲ್ಲಿ ಈ ಟಾಯ್ ಟ್ರೈನ್ ಸಂಚರಿಸುತ್ತದೆ. ಈ ಟ್ರೈನ್‌ನ ಹೆಸರು ಮೆಟ್ಟುಪಾಳಯಂ-ಊಟಿ ಪ್ಯಾಸೆಂಜರ್(ಟ್ರೈನ್ ನಂಬರ್:56136). ಈ ರೈಲು ತುಂಬಾ ನಿಧಾನವಾಗಿ ಹೋದರೂ, ಪ್ರಯಾಣಿಕರಿಗೆ ಇನ್ನಷ್ಟು ನಿಧಾನವಾಗಿ ಹೋದರೆ ಚೆನ್ನಾಗಿತ್ತು ಎನಿಸುತ್ತದೆ. ಏಕೆಂದರೆ, ದಟ್ಟವಾದ ಕಾಡುಗಳು, ಮಂಜು ಮುಸುಕಿದ ಬೆಟ್ಟಗಳು, ಕತ್ತಲೆಯ ಸುರಂಗಗಳು ಮತ್ತು ಚಹಾ ತೋಟಗಳ ನಡುವೆ ಈ ರೈಲು ಸಾಗುತ್ತದೆ. ಈ ಪ್ರಯಾಣವು ಜನರಿಗೆ ಅದ್ಭುತ ಅನುಭವವನ್ನು ನೀಡುತ್ತದೆ.
ಈ ರೈಲು ಮೆಟ್ಟುಪಾಳಯಂ ಮತ್ತು ಊಟಿ ನಡುವಿನ ನೀಲಗಿರಿ ಬೆಟ್ಟಗಳಲ್ಲಿ ಚಲಿಸುತ್ತದೆ. ಇದು ಭಾರತದ ಅತ್ಯಂತ ನಿಧಾನಗತಿಯ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ರೈಲು ಗಂಟೆಗೆ ಕೇವಲ 9 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ. ಅಂದರೆ, ಮನುಷ್ಯರೇ ಇದಕ್ಕಿಂತ ವೇಗವಾಗಿ ನಡೆಯಬಹುದು. ಒಟ್ಟು 46 ಕಿಲೋಮೀಟರ್ ದೂರವನ್ನು ಕ್ರಮಿಸಲು ಈ ರೈಲು ಐದು ಗಂಟೆ ತೆಗೆದುಕೊಳ್ಳುತ್ತದೆ. ನಿಧಾನವಾದರೂ, ಈ ಪ್ರಯಾಣ ಎಲ್ಲರ ನೆನಪಿನಲ್ಲಿ ಉಳಿಯುತ್ತದೆ.
56
ರೈಲು ನಿಧಾನವಾಗಿ ಚಲಿಸಲು ಕಾರಣವೇನು..?
ಈ ರೈಲು ನೀಲಗಿರಿ ಪರ್ವತಗಳ ಕಡಿದಾದ ಇಳಿಜಾರಿನಲ್ಲಿ ಚಲಿಸುತ್ತದೆ. ಹಾಗಾಗಿ, ಸುರಕ್ಷತೆಯ ದೃಷ್ಟಿಯಿಂದ ಇತರ ಪ್ಯಾಸೆಂಜರ್ ರೈಲುಗಳಿಗಿಂತ ಕಡಿಮೆ ವೇಗದಲ್ಲಿ ಇದನ್ನು ಚಲಾಯಿಸಲಾಗುತ್ತದೆ. ನಿಧಾನವಾಗಿ ಚಲಿಸಿದರೂ, ಸುತ್ತಮುತ್ತಲಿನ ಸುಂದರ ದೃಶ್ಯಗಳು ಪ್ರಯಾಣಿಕರನ್ನು ಆಕರ್ಷಿಸುತ್ತವೆ. ಈ ಟ್ರೈನ್ 46 ಕಿಲೋ ಮೀಟರ್ ದೂರದಲ್ಲಿ 16 ಸುರಂಗಗಳನ್ನು ಹಾಗೂ 250 ಬ್ರಿಡ್ಜ್‌ಗಳನ್ನು ದಾಟಿ ಸಾಗುತ್ತದೆ.
66
ಬಾಲಿವುಡ್‌ನ ಫೇಮಸ್ ಹಾಡು ಇದೇ ರೈಲಿನಲ್ಲಿ ಚಿತ್ರೀಕರಣಗೊಂಡಿದ್ದು!
ಈ ರೈಲು ಪ್ರವಾಸಿಗರ ಪಾಲಿಗೆ ಅವಿಸ್ಮರಣೀಯ ಕ್ಷಣಗಳನ್ನು ಕಟ್ಟಿಕೊಡುವುದರಲ್ಲಿ ಎರಡು ಮಾತಿಲ್ಲ. ಇನ್ನು ವಿಶೇಷವೆಂದರೆ, ಶಾರುಖ್ ಖಾನ್ ಮತ್ತು ಮಲೈಕಾ ಅರೋರಾ ಅಭಿನಯದ 'ದಿಲ್ ಸೆ' ಚಿತ್ರದ ಪ್ರಸಿದ್ಧ 'ಛಯ್ಯಾ ಛಯ್ಯಾ' ಹಾಡನ್ನು ಇದೇ ರೈಲಿನಲ್ಲಿ ಚಿತ್ರೀಕರಿಸಲಾಗಿದೆ. ಇದಷ್ಟೇ ಅಲ್ಲದೇ ಈ ಟ್ರೈನ್‌ನಲ್ಲಿ ನೀವೂ ಪ್ರಯಾಣಿಸಬೇಕು ಎಂದಾದರೇ, ಒಂದು ತಿಂಗಳು ಮುಂಗಡವಾಗಿಯೇ ಟಿಕೆಟ್ ಬುಕ್ ಮಾಡಿಕೊಳ್ಳಬೇಕಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.