ನೇಲ್ ಪಾಲಿಶ್ ಒಣಗಿದ್ರೆ ಕಸಕ್ಕೆ ಹಾಕ್ಬೇಡಿ, 5 ನಿಮಿಷದ ಈ ಹ್ಯಾಕ್ ಟ್ರೈ ಮಾಡಿ

Published : Jul 06, 2026, 01:24 PM IST

ಡ್ರೆಸ್ ಕಲರ್ ಗೆ ಮ್ಯಾಚ್ ಆಗುವ ನೇಲ್ ಪಾಲಿಶ್ ಹಚ್ಚಿಕೊಳ್ದೆ ಹುಡುಗೀರು ಮನೆಯಿಂದ ಹೊರಗೆ ಹೋಗೋದಿಲ್ಲ. ಕೆಲವೊಮ್ಮೆ ಒಣಗಿದ ನೇಲ್ ಪಾಲಿಶ್ ನೋಡಿ ಮನಸ್ಸು ಭಾರವಾಗುತ್ತೆ. ದುಬಾರಿ ಬೆಲೆಯ ನೇಲ್‌ ಪಾಲಿಶ್‌ ಒಣಗಿದ್ರೆ  ಟೆನ್ಷನ್ ಮಾಡ್ಕೊಳ್ಬೇಡಿ. ಸರಳ ಟಿಪ್ಸ್ ಫಾಲೋ ಮಾಡಿ ಅದನ್ನು ರೀ ಯೂಸ್ ಮಾಡಿ.

PREV
14
ನೇಲ್ ಪಾಲಿಶ್ ಒಣಗ್ತಿದ್ಯಾ?

ದುಬಾರಿ ಬೆಲೆಕೊಟ್ಟು, ಬ್ರ್ಯಾಂಡ್ ನೇಲ್ ಪಾಲಿಶ್ ಖರೀದಿ ಮಾಡಿರ್ತೇವೆ. ಒಂದೋ ಎರಡೂ ಬಾರಿ ಅದನ್ನು ಯೂಸ್ ಕೂಡ ಮಾಡಿರ್ತೇವೆ. ಅಗತ್ಯವಿದ್ದಾಗ ಹಚ್ಕೊಳ್ಳೋಕೆ ಹೋದ್ರೆ ಅದು ಒಣಗ್ತಿರುತ್ತೆ. ಈ ಟೈಂನಲ್ಲಿ ನೇಲ್ ಪಾಲಿಶ್ ಹಾಳಾಯ್ತು ಅಂತ ಕಸಕ್ಕೆ ಹಾಕ್ಬೇಡಿ. ಮನೆಯಲ್ಲಿ ಐದೇ ನಿಮಿಷಕ್ಕೆ ಒಂದು ಟ್ರಿಕ್ ಮೂಲಕ ಮತ್ತೆ ನೇಲ್ ಪಾಲಿಶ್ ರೀ ಯೂಸ್ ಮಾಡಿ.

24
ಈ ಟ್ರಿಕ್ ಟ್ರೈ ಮಾಡಿ

ನೀವಿದಕ್ಕೆ ದುಬಾರಿ ಕೆಮಿಕಲ್ ಯೂಸ್ ಮಾಡ್ಬೇಕಾಗಿಲ್ಲ. ಇಲ್ಲ ಥಿನ್ನರ್ ಅಗತ್ಯವೂ ಇಲ್ಲ. ಬಿಸಿ ನೀರಿದ್ರೆ ಸಾಕು. ಮೊದಲು ಸ್ವಲ್ಪ ನೀರನ್ನು ಬಿಸಿ ಮಾಡಿ. ನೀರು ಕುದಿಯಬಾರದು. ಉಗುರು ಬೆಚ್ಚಗಿದ್ರೆ ಸಾಕು. ನಂತ್ರ ನೇಲ್ ಪಾಲಿಶ್ ಬಾಟಲಿ ಮುಚ್ಚಳವನ್ನು ಬಿಗಿಯಾಗಿ ಹಾಕಿ. ಲೂಸ್ ಆಗಿದ್ರೆ ನೇಲ್ ಪಾಲಿಶ್ ಬಾಟಲಿ ಒಳಗೆ ನೀರು ಹೋಗುವ ಸಾಧ್ಯತೆ ಇರುತ್ತದೆ. ಬಿಸಿ ಮಾಡಿದ ನೀರಿನಲ್ಲಿ ಮುಚ್ಚಳ ಹಾಕಿದ ನೇಲ್ ಪಾಲಿಶ್ ಐದು ನಿಮಿಷ ಇಡಿ. ಬಾಟಲಿಯ ಅರ್ಧ ಅಥವಾ ಮುಕ್ಕಾಲು ಭಾಗ ನೀರಿನಲ್ಲಿ ಮುಳುಗಿದರೆ ಸಾಕು.

34
ಹೀಗೆ ರೀ ಯೂಸ್ ಮಾಡಿ

ಐದು ನಿಮಿಷದ ನಂತ್ರ ನೇಲ್ ಪಾಲಿಶ್ ಬಾಟಲಿ ತೆಗೆದು ಚೆನ್ನಾಗಿ ಶೇಕ್ ಮಾಡಿ.. ಬಾಟಲಿ ಒಳಗೆ ನೀರು ಹೋಗದಂತೆ ಚೆನ್ನಾಗಿ ಒರೆಸಿ. ನಂತರ ಮುಚ್ಚಳ ತೆಗೆಯಿರಿ. ಗಟ್ಟಿಯಾಗಿದ್ದ ನೇಲ್ ಪಾಲಿಶ್ ಮೃದುವಾಗಿ, ಹೊಸದರಂತೆ ಕಾಣುತ್ತದೆ. ಟೆನ್ಷನ್ ಇಲ್ದೆ ಅದನ್ನು ಮತ್ತೆ ಬಳಸಬಹುದು.

44
ನೇಲ್ ಪಾಲಿಶ್ ಬೇಗ ಒಣಗದಂತೆ ಹೀಗೆ ಮಾಡಿ

ಪ್ರತಿ ಬಾರಿ ನೀವು ನೇಲ್ ಪಾಲಿಶ್ ಬಳಸಿದ ತಕ್ಷಣ ಅದ್ರ ಮುಚ್ಚಳವನ್ನು ಬಿಗಿಯಾಗಿ ಹಾಕಬೇಕು. ಬಾಟಲಿಯ ನೆಕ್ ಭಾಗವನ್ನು ನೇಲ್ ಪಾಲಿಷ್ ರಿಮೂವರ್ನಿಂದ ಸ್ವಚ್ಛಗೊಳಿಸಬೇಕು. ಇದರಿಂದ ಮುಚ್ಚಳ ಸರಿಯಾಗಿ ಮುಚ್ಚುತ್ತದೆ. ನೇರ ಬಿಸಿಲು ಅಥವಾ ಹೆಚ್ಚು ಬಿಸಿಯಾಗುವ ಸ್ಥಳದಲ್ಲಿ ನೇಲ್ ಪಾಲಿಶ್ ಇಡಬೇಡಿ. ತಂಪಾದ ಜಾಗದಲ್ಲಿ ನೇಲ್ ಪಾಲಿಶ್ ಇಡಿ. ಬಳಸುವ ಮೊದಲು ಬಾಟಲಿಯನ್ನು ನಿಧಾನವಾಗಿ ಅಲ್ಲಾಡಿಸಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories