Male Fertility : ಸ್ಪರ್ಮ್ ಕೌಂಟ್ ಕಡಿಮೆಯಾಗಿ ಅನೇಕ ಪುರುಷರು ಅಪ್ಪನಾಗುವ ಅವಕಾಶ ಕಳೆದುಕೊಳ್ತಿದ್ದಾರೆ. ಇದಕ್ಕೆ ಬರೀ ತಂಬಾಕು ಕಾರಣ ಆಗ್ತಿಲ್ಲ. ಇದಕ್ಕೆ ಯಾವೆಲ್ಲ ಕಾರಣ ಇದೆ ? ಪರಿಹಾರ ಏನು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಇತ್ತೀಚಿನ ವರ್ಷಗಳಲ್ಲಿ ಪುರುಷರಲ್ಲಿ ಕಡಿಮೆ ವೀರ್ಯಾಣುಗಳ ಸಂಖ್ಯೆ (Low Sperm Count) ಸಮಸ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಕೇವಲ ಧೂಮಪಾನ ಅಥವಾ ತಂಬಾಕು ಮಾತ್ರ ಕಾರಣ ಎಂದು ಹಲವರು ಭಾವಿಸುತ್ತಾರೆ. ಆದರೆ ವೈದ್ಯರ ಪ್ರಕಾರ, ಅನಾರೋಗ್ಯಕರ ಜೀವನಶೈಲಿ, ಪೌಷ್ಟಿಕಾಂಶದ ಕೊರತೆ, ಮಾನಸಿಕ ಒತ್ತಡ, ಬೊಜ್ಜು ಹಾಗೂ ಕೆಲವು ಆರೋಗ್ಯ ಸಮಸ್ಯೆಗಳೂ ಪುರುಷರ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತವೆ. ಸಮಯಕ್ಕೆ ಸರಿಯಾಗಿ ಗಮನಹರಿಸದಿದ್ದರೆ, ಮಗುವಿನ ಕನಸು ನನಸಾಗುವ ಸಾಧ್ಯತೆ ದೂರವಾಗುತ್ತದೆ.
26
ಸ್ಪರ್ಮ್ ಕೌಂಟ್ ಕಡಿಮೆ ಅಂದ್ರೇನು?
ಒಂದು ಮಿಲಿಲೀಟರ್ ವೀರ್ಯದಲ್ಲಿ 15 ಮಿಲಿಯನ್ಗಿಂತ ಕಡಿಮೆ ವೀರ್ಯಾಣುಗಳಿದ್ದರೆ ಅದನ್ನು ವೈದ್ಯಕೀಯವಾಗಿ ಒಲಿಗೋಸ್ಪರ್ಮಿಯಾ (Oligospermia) ಎಂದು ಕರೆಯಲಾಗುತ್ತದೆ. ವೀರ್ಯಾಣುಗಳ ಸಂಖ್ಯೆ ಕಡಿಮೆಯಾದರೆ ನೈಸರ್ಗಿಕವಾಗಿ ಗರ್ಭಧರಿಸುವ ಸಾಧ್ಯತೆ ಇಳಿಮುಖವಾಗಬಹುದು. ಕೆಲವರಲ್ಲಿ ವೀರ್ಯದಲ್ಲಿ ವೀರ್ಯಾಣುಗಳೇ ಇಲ್ಲದಿರುವ ಅಜೋಸ್ಪರ್ಮಿಯಾ (Azoospermia) ಸಮಸ್ಯೆಯೂ ಕಂಡುಬರಬಹುದು.
36
ಕಡಿಮೆ ಸ್ಪರ್ಮ್ ಲಕ್ಷಣಗಳು
ಸ್ಪರ್ಮ್ ಕೌಂಟ್ ಕಡಿಮೆ ಆಗಿದೆ ಎಂಬುದನ್ನು ಪತ್ತೆ ಮಾಡೋದು ಸುಲಭವಲ್ಲ. ಯಾವುದೇ ವಿಶೇಷ ಲಕ್ಷಣ ಕಾಣಿಸೋದಿಲ್ಲ. ದೀರ್ಘಕಾಲ ಪ್ರಯತ್ನಿಸಿದರೂ ಪಾಲಕರಾಗದಿರುವುದು, ಲೈಂಗಿಕ ಆಸಕ್ತಿ ಕಡಿಮೆಯಾಗುವುದು, ನಿಮಿರುವಿಕೆಯ ಸಮಸ್ಯೆ, ಖಾಸಗಿ ಅಂಗದಲ್ಲಿ ನೋವು ಅಥವಾ ಊತ, ಹಾರ್ಮೋನುಗಳ ಅಸಮತೋಲನಕ್ಕೆ ಸಂಬಂಧಿಸಿದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಸ್ಪರ್ಮ್ ಕೌಂಟ್ ಕಡಿಮೆ ಆಗಲು ಅನೇಕ ಕಾರಣವಿದೆ. ಧೂಮಪಾನ ಮತ್ತು ತಂಬಾಕು ಸೇವನೆ ಒಂದು ಕಾರಣವಾಗಿದೆ. ಆದ್ರೆ ಇದೇ ಅಂತಿಮವಲ್ಲ. ಧೂಮಪಾನ ಮತ್ತು ತಂಬಾಕು ಸೇವನೆ ಮಾಡದ ಪುರುಷರಲ್ಲೂ ಸ್ಪರ್ಮ್ ಕೌಂಟ್ ಕಡಿಮೆಯಾಗುವ ಸಾಧ್ಯತೆ ಇದೆ. ಅದಕ್ಕೆ ಅತಿಯಾದ ಮದ್ಯಪಾನ ಕೂಡ ಒಂದು ಕಾರಣ. ಜೊತೆಗೆ ಬೊಜ್ಜು ಮತ್ತು ವ್ಯಾಯಾಮದ ಕೊರತೆ, ನಿರಂತರ ಮಾನಸಿಕ ಒತ್ತಡ, ಹಾರ್ಮೋನುಗಳ ಅಸಮತೋಲನ, ಥೈರಾಯ್ಡ್ ಸಮಸ್ಯೆಗಳು, ವೆರಿಕೋಸೆಲೆ ಮತ್ತು ಕೆಲವು ಸೋಂಕುಗಳು, ಕೆಲವು ಔಷಧಿಗಳ ದೀರ್ಘಕಾಲದ ಬಳಕೆ ಇದಕ್ಕೆ ಕಾರಣವಾಗುತ್ತದೆ.
56
ಇದಕ್ಕೆ ಚಿಕಿತ್ಸೆ
ಸ್ಪರ್ಮ್ ಕೌಂಟ್ ಕಡಿಮೆ ಇದೆ ಅಂದ್ರೆ ಅದು ಶಾಶ್ವತ ಬಂಜೆತನ ಎಂದರ್ಥವಲ್ಲ. ಕಾರಣವನ್ನು ಗುರುತಿಸಿ ಸೂಕ್ತ ಚಿಕಿತ್ಸೆ ಪಡೆದ ಅನೇಕ ಪುರುಷರು ಪಾಲಕರಾಗಿದ್ದಾರೆ. ಅಗತ್ಯವಿದ್ದರೆ ಔಷಧಿ, ಶಸ್ತ್ರಚಿಕಿತ್ಸೆ ಅಥವಾ ಫಲವತ್ತತೆ ಚಿಕಿತ್ಸೆಯ ಮೂಲಕವೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
66
ಸ್ಪರ್ಮ್ ಕೌಂಟ್ ಹೆಚ್ಚಳಕ್ಕೆ ಏನು ಮಾಡ್ಬೇಕು?
ಪೌಷ್ಟಿಕ ಆಹಾರ ಸೇವನೆ, ಪ್ರತಿದಿನ ವ್ಯಾಯಾಮ, ಆರೋಗ್ಯಕರ ತೂಕ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇದಲ್ಲದೆ ಸಾಕಷ್ಟು ನಿದ್ರೆ, ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು ಅತ್ಯಗತ್ಯ. ಧೂಮಪಾನ, ತಂಬಾಕು ಮತ್ತು ಅತಿಯಾದ ಮದ್ಯಪಾನದಿಂದ ದೂರ ಇರಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.