ಚಳಿಗಾಲದಲ್ಲಿ ಸೋಮಾರಿತನ ಹೆಚ್ಚಾದರೂ, ತೂಕ ಇಳಿಸಿಕೊಳ್ಳಲು ಸೂಕ್ತ ಸಮಯ. ಸರಿಯಾದ ಆಹಾರ, ವ್ಯಾಯಾಮ ಮತ್ತು ಜೀವನಶೈಲಿಯ ಬದಲಾವಣೆಗಳಿಂದ ತೂಕ ನಿಯಂತ್ರಿಸಬಹುದು. ಬೆಚ್ಚಗಿನ ಪಾನೀಯಗಳ ಬದಲು ತಣ್ಣೀರು ಕುಡಿಯುವುದು ಮತ್ತು ನಿಯಮಿತ ದೈಹಿಕ ಚಟುವಟಿಕೆಗಳು ತೂಕ ಇಳಿಕೆಗೆ ಸಹಕಾರಿ.
ಚಳಿಗಾಲ ಬಂದ್ರೆ ಸಾಕು ಬಹುತೇಕರು ಸ್ವಲ್ಪ ಸೋಮಾರಿಗಳಾಗುತ್ತಾರೆ. ಯಾರು ಒಪ್ಪಿಕೊಂಡ್ರು ಒಪ್ಪಿಕೊಳ್ಳದಿದ್ರೂ ಇದು ನಿಜ. ಚಳಿಯನ್ನು ತಡೆದುಕೊಳ್ಳಲಾರದೇ ಬೆಳಗ್ಗೆ ಬೇಗ ಏಳಲು ಹಿಂದೇಟು ಹಾಕುತ್ತವೆ. ಚಳಿ ಅಂತಾ ಹೊದಿಕೆ ಹೊದ್ದಿಕೊಂಡು ಮಲಗುತ್ತವೆ. ಹಾಗೆ ವರ್ಕೌಟ್ ಮಾಡೋದು ಸ್ಪಲ್ಪ ಕಡಿಮೆಯಾಗಿ ಶಾರೀರಿಕ ಚಟುವಟಿಕೆಗಳು ಕಡಿಮೆಯಾಗುತ್ತವೆ. ಚಳಿಗಾಲದ ಸೋಮಾರಿತನದಿಂದ ದೇಹದ ತೂಕ ಹೆಚ್ಚಳವಾಗುತ್ತದೆ.ಆದ್ರೆ ಚಳಿಗಾಲದಲ್ಲಿ ಸ್ವಲ್ಪ ಬುದ್ಧಿವಂತಿಕೆಯಿಂದ ಯೋಚಿಸಿದರೆ, ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
26
ವಾಕಿಂಗ್ ಮತ್ತು ವರ್ಕೌಟ್
ಬೆಳಗ್ಗೆ ಚಳಿ ಬಹುತೇಕ ಹೆಚ್ಚಾಗಿರುತ್ತದೆ. ಈ ಸಮಯದಲ್ಲಿ ವಾಕಿಂಗ್ ಮತ್ತು ವರ್ಕೌಟ್ ಮಾಡೋದು ಸ್ವಲ್ಪ ಕಷ್ಟವಾಗುತ್ತದೆ. ಹಾಗಾಗಿ ಚಳಿ ಕಡಿಮೆಯಾದ್ಮೇಲೆ ಅಥವಾ ಸಂಜೆ ವರ್ಕೌಟ್ ಮಾಡಬಹುದು. ಈ ಚಳಿಗಾಲದಲ್ಲಿಯೇ ತೂಕ ಕಡಿಮೆ ಮಾಡಿಕೊಳ್ಳುವ ಅವಕಾಶಗಳು ಅಧಿಕವಾಗಿರುತ್ತವೆ. ಈ ಸಮಯದಲ್ಲಿ ಕ್ಯಾಲೋರಿಯನ್ನು ಸರಳವಾಗಿ ಬರ್ನ್ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ.
36
ಆಹಾರ ಹೇಗಿರಬೇಕು?
ಚಳಿಗಾಲದ ಸಮಯ ನಿಮ್ಮನ್ನು ಹೆಚ್ಚು ತಿನ್ನಲು ಪ್ರೇರೇಪಿಸುತ್ತದೆ. ತಂಪಾದ ವಾತಾವರಣದಲ್ಲಿ ದೇಹವನ್ನು ಬೆಚ್ಚಗಿಡಲು ದೈನಂದಿನ ಕ್ಯಾಲೋರಿ ನಿಮ್ಮ ಅಗತ್ಯತೆಯನ್ನು ಪೂರೈಸುತ್ತದೆ. ಹಸಿವಿನ ಕ್ರೇವಿಂಗ್‌ನಿಂದಾಗಿ ಕ್ಯಾಲೋರಿ ಬರ್ನ್ ಆಗುತ್ತಿರುತ್ತದೆ. ಹಾಗಾಗಿ ಸ್ವಲ್ಪ ವರ್ಕೌಟ್ ಮಾಡಿದ್ರೂ ತೂಕ ಇಳಿಯುವ ಸಾಧ್ಯತೆ ಹೆಚ್ಚಿರುತ್ತದೆ. ಈ ಸಮಯದಲ್ಲಿ ನಾರಿನಂಶವಿರೋ ಆಹಾರ ಸೇವನೆಗೆ ಆದ್ಯತೆ ನೀಡಬೇಕು. ಇದರಲ್ಲಿನ ಫೈಬರ್ ನಿಮಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಇದರಿಂದಾಗಿ ಅನಾರೋಗ್ಯಕರ ಆಹಾರ ಸೇವನೆಯಿಂದ ದೂರವಿರಬಹುದು.
ಚಳಿಗಾಲದಲ್ಲಿ ಬಿಸಿಯಾದ ಚಹಾ ಮತ್ತು ಕಾಫಿಯನ್ನು ಒಂದು ಕಪ್ ಹೆಚ್ಚಾಗಿ ಕುಡಿಯುತ್ತಾರೆ. ಆದ್ರೆ ಹಾಲು ಮತ್ತು ಸಕ್ಕರೆ ಹಾಕದಿರುವ ಬ್ಲಾಕ್ ಟೀ ಆಂಡ್ ಕಾಫಿ ಕುಡಿಯಿರಿ. ಇದರಲ್ಲಿ ಆಂಟಿಆಕ್ಸಿಡೆಂಟ್‌ಗಳು ಹೇರಳವಾಗಿದ್ದು, ಉರಿಯೂತ ನಿವಾರಕ ಗುಣಗಳನ್ನು ಹೊಂದಿವೆ. ಈ ಪಾನೀಯಗಳು ನಿಮ್ಮ ಚಯಾಪಚಯ ಕ್ರಿಯೆಯನ್ನು ವೇಗಗೊಳಿಸೋದರ ಜೊತೆ ಕೊಬ್ಬು ಕರಗಿಸಲು ಸಹಾಯ ಮಾಡುತ್ತವೆ.
ಚಳಿಗಾಲದಲ್ಲಿ ಬಹುತೇಕರು ಬಿಸಿನೀರು ಕುಡಿಯುತ್ತಾರೆ. ಈ ಸಮಯದಲ್ಲಿ ತೂಕ ಇಳಿಸಿಕೊಳ್ಳಬೇಕಂದ್ರೆ ತಣ್ಣೀರು ಕುಡಿಯುವಂತೆ ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಈ ಪ್ರಕ್ರಿಯೆಯು ಕೆಜಿ ತೂಕ ಇಳಿಸಿಕೊಳ್ಳಲು ಅಗತ್ಯವಾದ ಹಲವು ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ. ಅತಿ ತಣ್ಣನೆ ನೀರು ಆಗದಿದ್ದರೂ ಸಾಮಾನ್ಯ ತಾಪಮಾನದಲ್ಲಿರುವ ನೀರು ಕುಡಿಯಬೇಕು.
ಚಳಿಯಿಂದಾಗಿ ವರ್ಕೌಟ್ ಮಾಡಲು ಹೊರಗೆ ಹೋಗಲು ಆಗದಿದ್ದರೆ ಮನೆಯೊಳಗೆ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು. ಕ್ಲೀನಿಂಗ್, ತೊಳೆಯುವುದು, ಒರೆಸುವುದು, ತೋಟಗಾರಿಕೆ ಮತ್ತು ಇತರ ಮನೆಗೆಲಸಗಳನ್ನು ಮಾಡುವುದರಿಂದ ನೈಸರ್ಗಿಕವಾಗಿ ಕೊಬ್ಬನ್ನು ಕರಗಿಸಬಹುದು. ಪ್ರತಿ 30 ನಿಮಿಷಗಳಿಗೊಮ್ಮೆ ಎದ್ದು ಓಡಾಡಬೇಕು. ಆಫಿಸ್‌ನಲ್ಲಿ ಒಂದೇ ಕಡೆ ಕುಳಿತು ಕೆಲಸ ಮಾಡುತ್ತಿದ್ರೆ ಪ್ರತಿ ಅರ್ಧ ಗಂಟೆಗೊಮ್ಮೆ ಎದ್ದು ಓಡಾಡಬೇಕು. ಈ ಪ್ರಕ್ರಿಯೆ ತೂಕ ಇಳಿಕೆಗೆ ಕಾರಣವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.