Bottle Cap Craft: ಬಾಟಲಿ ಮುಚ್ಚಳಗಳನ್ನು ಬಿಸಾಡಬೇಡಿ, ಹೀಗೆ ಮನೆಗೆ ಹೊಸ ಲುಕ್ ಕೊಡಿ!

Published : May 21, 2026, 11:54 AM IST

ಸಾಮಾನ್ಯವಾಗಿ ನಾವು ಗ್ಲಾಸ್ ಬಾಟಲಿಗಳ ಮುಚ್ಚಳಗಳನ್ನು ವೇಸ್ಟ್ ಎಂದು ಬಿಸಾಡುತ್ತೇವೆ. ಆದರೆ, ಸ್ವಲ್ಪ ಕ್ರಿಯೇಟಿವಿಟಿ ಬಳಸಿದರೆ, ಇದೇ ಮುಚ್ಚಳಗಳಿಂದ ಮನೆಯನ್ನು ಅಲಂಕರಿಸುವಂತಹ ಸುಂದರ ಹಾಗೂ ಉಪಯುಕ್ತ ವಸ್ತುಗಳನ್ನು ತಯಾರಿಸಬಹುದು.

PREV
15
ಬಾಟಲ್ ಕ್ಯಾಪ್ ಫ್ರಿಡ್ಜ್ ಮ್ಯಾಗ್ನೆಟ್

ಗ್ಲಾಸ್ ಬಾಟಲಿಗಳ ಮುಚ್ಚಳಗಳಿಂದ ನಿಮ್ಮ ಫ್ರಿಡ್ಜ್‌ಗಾಗಿ ಸ್ಟೈಲಿಶ್ ಹಾಗೂ ಕಲರ್‌ಫುಲ್ ಫ್ರಿಡ್ಜ್ ಮ್ಯಾಗ್ನೆಟ್‌ಗಳನ್ನು ಮಾಡಬಹುದು. ಮೊದಲು ಮುಚ್ಚಳಗಳನ್ನು ಚೆನ್ನಾಗಿ ಕ್ಲೀನ್ ಮಾಡಿ, ನಂತರ ಅಕ್ರಿಲಿಕ್ ಅಥವಾ ಸ್ಪ್ರೇ ಪೇಂಟ್‌ನಿಂದ ಅಲಂಕರಿಸಿ. ಅವುಗಳ ಒಳಗೆ ಚಿಕ್ಕ ಹೂವು, ಸ್ಟಿಕ್ಕರ್, ಫೋಟೋ ಅಥವಾ ಗ್ಲಿಟರ್ ಹಾಕಿ, ಹಿಂಭಾಗದಲ್ಲಿ ಗಟ್ಟಿಯಾದ ಮ್ಯಾಗ್ನೆಟ್ ಅಂಟಿಸಿ. ಇದರಿಂದ ನಿಮ್ಮ ಫ್ರಿಡ್ಜ್ ತುಂಬಾ ಕ್ರಿಯೇಟಿವ್ ಆಗಿ ಕಾಣುತ್ತದೆ.

25
ಮೆಟಾಲಿಕ್ ಫ್ಲವರ್ ಡೆಕೋರೇಷನ್
ಮನೆಯ ಅಲಂಕಾರಕ್ಕೆ ಏನಾದರೂ ವಿಶೇಷವಾದದ್ದನ್ನು ಸೇರಿಸಬೇಕೆಂದರೆ, ಬಾಟಲ್ ಮುಚ್ಚಳಗಳಿಂದ ಮೆಟಾಲಿಕ್ ಹೂವುಗಳನ್ನು ತಯಾರಿಸಬಹುದು. ಇದಕ್ಕಾಗಿ, ಮುಚ್ಚಳಗಳನ್ನು ಸ್ವಲ್ಪ ಬಗ್ಗಿಸಿ ಹೂವಿನ ದಳಗಳ ಆಕಾರ ನೀಡಿ. ಮಧ್ಯದಲ್ಲಿ ಗೋಲ್ಡನ್ ಬಣ್ಣದ ಕ್ಯಾಪ್ ಇಡಿ. ನಂತರ ಇವುಗಳನ್ನು ಕಡ್ಡಿಯ ಮೇಲೆ ಸಿಕ್ಕಿಸಿ, ನಿಮ್ಮಿಷ್ಟದ ಬಣ್ಣ ಹಚ್ಚಿ. ಈ ಡಿಐವೈ ಹೂವು ಯಾವುದೇ ಫ್ಲವರ್‌ವಾಸ್ ಅಥವಾ ಡೆಕೋರೇಷನ್ ಕಾರ್ನರ್‌ಗೆ ಹೊಸ ಅಂದ ನೀಡುತ್ತದೆ.
35
ವಿಂಡ್ ಚೈಮ್ಸ್ ಮಾಡಿ
ಗ್ಲಾಸ್ ಬಾಟಲ್ ಮುಚ್ಚಳಗಳಿಂದ ವಿಂಡ್ ಚೈಮ್ಸ್ ಮಾಡುವುದು ಕೂಡ ಒಂದು ಅದ್ಭುತ ಐಡಿಯಾ. ಈ ಮುಚ್ಚಳಗಳು ಕಬ್ಬಿಣದಿಂದ ಮಾಡಿರೋದ್ರಿಂದ, ಗಾಳಿಗೆ ಒಂದಕ್ಕೊಂದು ತಾಗಿ ಸುಮಧುರ ಶಬ್ದ ಮಾಡುತ್ತವೆ. ಇದಕ್ಕಾಗಿ, ಒಂದು ದುಂಡಗಿನ ಬೇಸ್ ತೆಗೆದುಕೊಂಡು, ಅದಕ್ಕೆ ದಾರದ ಸಹಾಯದಿಂದ ಮುಚ್ಚಳಗಳನ್ನು ಒಂದರ ಕೆಳಗೆ ಒಂದರಂತೆ ಕಟ್ಟಿ. ನಂತರ ಇದನ್ನು ಬಾಲ್ಕನಿ, ಕಿಟಕಿ ಅಥವಾ ಗಾಳಿಯಾಡುವ ಜಾಗದಲ್ಲಿ ನೇತುಹಾಕಿ. ಇದು ಮನೆಗೆ ಸುಂದರ ಲುಕ್ ಕೊಡುವುದರ ಜೊತೆಗೆ, ಇಂಪಾದ ಸದ್ದು ಕೂಡ ಕೇಳಿಸುತ್ತದೆ.
45
ಗ್ಲಾಸ್ ಬಾಟಲ್ ಕ್ಯಾಪ್ ಪೆಂಡೆಂಟ್

ನಿಮಗೆ ಕೈಯಿಂದ ಮಾಡಿದ ಆಭರಣಗಳು ಇಷ್ಟವಾದರೆ, ಗ್ಲಾಸ್ ಬಾಟಲ್ ಮುಚ್ಚಳಗಳಿಂದ ಟ್ರೆಂಡಿ ಪೆಂಡೆಂಟ್‌ಗಳನ್ನು ಸಹ ಮಾಡಬಹುದು. ಮುಚ್ಚಳವನ್ನು ಚೆನ್ನಾಗಿ ಸ್ವಚ್ಛಗೊಳಿಸಿ, ಅದರ ಅಂಚುಗಳನ್ನು ಸ್ಯಾಂಡ್‌ಪೇಪರ್‌ನಿಂದ ನಯಗೊಳಿಸಿ. ಈಗ ಅದರ ಮೇಲೆ ಬಣ್ಣ ಹಚ್ಚಿ, ಚಿತ್ರ ಬಿಡಿಸಿ ಅಥವಾ ಚಿಕ್ಕದಾದ ಕೋಟ್ ಬರೆಯಿರಿ. ಮೇಲೆ ಒಂದು ಸಣ್ಣ ರಂಧ್ರ ಮಾಡಿ, ಅದಕ್ಕೆ ಹುಕ್ ಮತ್ತು ಚೈನ್ ಹಾಕಿ. ಇದರಿಂದ ಸ್ಟೈಲಿಶ್ ಹಾಗೂ ವಿಶಿಷ್ಟವಾದ ಪೆಂಡೆಂಟ್ ರೆಡಿಯಾಗುತ್ತದೆ.

ಇದನ್ನೂ ಓದಿ: Bisleri Bottle Reuse: ಬಿಸಾಕೋ ಬಿಸ್ಲೆರಿ ಬಾಟಲ್‌ನಿಂದ ಗೊಂಬೆ, ಪ್ರಾಣಿ ಆಕಾರದ ಪ್ಲಾಂಟರ್ ಮಾಡಿ!

55
ಮಿನಿ ಕ್ಯಾಂಡಲ್ ಹೋಲ್ಡರ್

ಈ ಮುಚ್ಚಳಗಳನ್ನು ಮಿನಿ ಟೀ ಲೈಟ್ ಕ್ಯಾಂಡಲ್ ಹೋಲ್ಡರ್ ಮಾಡಲು ಕೂಡ ಬಳಸಬಹುದು. ಇದಕ್ಕಾಗಿ, ಕ್ಯಾಪ್ ಒಳಗೆ ಸ್ವಲ್ಪ ಮೇಣವನ್ನು ಹಾಕಿ, ಮಧ್ಯದಲ್ಲಿ ಹತ್ತಿಯ ಬತ್ತಿಯನ್ನು ಇಡಿ. ಬೇಕಿದ್ದರೆ, ಇದಕ್ಕೆ ಒಣಗಿದ ಹೂವು, ಗ್ಲಿಟರ್ ಅಥವಾ ಎಸೆನ್ಷಿಯಲ್ ಆಯಿಲ್ ಕೂಡ ಸೇರಿಸಬಹುದು. ಈ ಪುಟ್ಟ ಕ್ಯಾಂಡಲ್ ಹೋಲ್ಡರ್‌ಗಳು ಹಬ್ಬದ ಸಮಯದಲ್ಲಿ ಮತ್ತು ಮನೆಯ ಅಲಂಕಾರಕ್ಕೆ ತುಂಬಾ ಸುಂದರವಾಗಿ ಕಾಣಿಸುತ್ತವೆ.

ಇದನ್ನೂ ಓದಿ: Creative Mannequin Planter ಹಳೆ ಡಮ್ಮಿಯಿಂದ ಮಾಡಿ ಗಾರ್ಡನ್‌ಗೆ ಹೊಸ ಲುಕ್ ಕೊಡುವ ಪ್ಲಾಂಟರ್!

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories