ಕಲೆಸುವಾಗ ಹಿಟ್ಟಿನಲ್ಲಿ ನೀರು ಜಾಸ್ತಿಯಾಯ್ತಾ? ಒಣಹಿಟ್ಟು ಸೇರಿಸೋ ಬದಲು ಈ ಸಿಂಪಲ್‌ ಟಿಪ್ಸ್ ಫಾಲೋ ಮಾಡಿ

Published : May 21, 2026, 11:20 AM IST

Fix sticky dough: ರೊಟ್ಟಿ ಅಥವಾ ಚಪಾತಿ ಮಾಡಲು ಹಿಟ್ಟು ಕಲೆಸುವಾಗ ಅಪ್ಪಿತಪ್ಪಿ ನೀರು ಜಾಸ್ತಿಯಾಗಿ ಹಿಟ್ಟು ಕೈಗೆ ಅಂಟಿಕೊಳ್ಳುತ್ತಿದೆಯೇ? ಗಾಬರಿಯಾಗಬೇಡಿ! ಅಂಟಂಟಾದ ಹಿಟ್ಟನ್ನು ಸುಲಭವಾಗಿ ಸರಿಪಡಿಸಿ, ಮೃದುವಾದ ಚಪಾತಿ ತಯಾರಿಸಲು ಇಲ್ಲಿವೆ 6 ಅದ್ಭುತ ಕಿಚನ್ ಟಿಪ್ಸ್.

PREV
17
ಈ ಕೆಳಗಿನ ಟಿಪ್ಸ್ ಫಾಲೋ ಮಾಡಿ

ಚಪಾತಿ, ರೊಟ್ಟಿ ಅಥವಾ ಪರೋಟ ಮಾಡಲು ಹಿಟ್ಟು ಸರಿಯಾದ ಹದದಲ್ಲಿ ಇರಬೇಕು. ಹಿಟ್ಟು ತುಂಬಾ ಗಟ್ಟಿಯಾದರೆ ಚಪಾತಿ ಚೆನ್ನಾಗಿ ಬರುವುದಿಲ್ಲ. ಆದ್ದರಿಂದ ಅತಿ ಮೆದುವೂ ಅಲ್ಲದೆ, ಅತಿ ಗಟ್ಟಿಯೂ ಅಲ್ಲದೆ ಹದವಾಗಿರಬೇಕು ಹಿಟ್ಟು. ಕೆಲವೊಮ್ಮೆ ಹಿಟ್ಟು ಕಲಿಸುವಾಗ ನೀರು ಹೆಚ್ಚಾಗಿ ಅದು ಕೈಗೆ ಅಂಟಿಕೊಳ್ಳುತ್ತದೆ. ಇದರಿಂದ ಚಪಾತಿ ಲಟ್ಟಿಸುವುದು ಕಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ ಚಿಂತಿಸಬೇಡಿ, ಈ ಕೆಳಗಿನ ಟಿಪ್ಸ್ ಅನುಸರಿಸಿ.

27
ಮೆದುವಾದ ಹಿಟ್ಟನ್ನು ಸರಿಪಡಿಸಲು ಉಪಾಯ

1) ಎಣ್ಣೆ ಅಥವಾ ಹಾಲು
ಹಿಟ್ಟು ಅಂಟಿಕೊಳ್ಳುತ್ತಿದ್ದರೆ ಕೈಗೆ ಸ್ವಲ್ಪ ಅಡುಗೆ ಎಣ್ಣೆ ಅಥವಾ ಹಾಲನ್ನು ಸವರಿಕೊಂಡು ಹಿಟ್ಟನ್ನು ಮತ್ತೊಮ್ಮೆ ನಾದಿಕೊಳ್ಳಿ. ಇದರಿಂದ ಹಿಟ್ಟು ಕೈಗೆ ಅಂಟುವುದಿಲ್ಲ ಮತ್ತು ಉಂಡೆ ಅಥವಾ ಬಿಲ್ಲೆಯನ್ನ ಸುಲಭವಾಗಿ ತಯಾರಿಸಬಹುದು.

37
2) ಫ್ರಿಡ್ಜ್‌ನಲ್ಲಿಡಿ

ಇದು ಅತ್ಯಂತ ಪರಿಣಾಮಕಾರಿ ವಿಧಾನ. ಮೆದುವಾದ ಹಿಟ್ಟನ್ನು ಒಂದು ಏರ್‌ಟೈಟ್ ಡಬ್ಬದಲ್ಲಿ ಹಾಕಿ 15 ರಿಂದ 20 ನಿಮಿಷಗಳ ಕಾಲ ಫ್ರಿಡ್ಜ್‌ನಲ್ಲಿಡಿ. ಫ್ರಿಡ್ಜ್‌ನ ತಂಪಾದ ವಾತಾವರಣದಲ್ಲಿ ಹಿಟ್ಟಿನಲ್ಲಿರುವ ಗ್ಲುಟನ್ ಸರಿಯಾಗಿ ಹೊಂದಿಕೊಳ್ಳುತ್ತದೆ ಮತ್ತು ಜಿಗುಟುತನ ಕಡಿಮೆಯಾಗುತ್ತದೆ.

47
3) ಒಣ ಹಿಟ್ಟು ಬೆರೆಸಿ

ಸ್ವಲ್ಪ ಒಣ ಹಿಟ್ಟನ್ನು ಮೆದುವಾದ ಹಿಟ್ಟಿನ ಮೇಲೆ ಉದುರಿಸಿ ಹಗುರವಾಗಿ ಮತ್ತೊಮ್ಮೆ ಕಲಸಿ. ನೆನಪಿರಲಿ, ಒಂದೇ ಬಾರಿಗೆ ಅತಿಯಾದ ಒಣ ಹಿಟ್ಟು ಹಾಕಬೇಡಿ, ಇಲ್ಲದಿದ್ದರೆ ಚಪಾತಿ ಗಟ್ಟಿಯಾಗುತ್ತವೆ.

57
4) ತುಪ್ಪದ ಬಳಕೆ

ಕಿಚನ್ ಪ್ಲಾಟ್‌ಫಾರ್ಮ್ ಅನ್ನು ಸ್ವಚ್ಛಗೊಳಿಸಿ ಅದರ ಮೇಲೆ ಒಂದು ಚಮಚ ತುಪ್ಪ ಸವರಿ. ನಂತರ ಅದರ ಮೇಲೆ ಹಿಟ್ಟನ್ನು ಇಟ್ಟು ಕೈಯಿಂದ ಚೆನ್ನಾಗಿ ನಾದಿ. ಇದರಿಂದ ಹಿಟ್ಟಿನ ಹದ ಸರಿಯಾಗುತ್ತದೆ.

67
5) ಬಟರ್ ಪೇಪರ್ ಅಥವಾ ಪ್ಲಾಸ್ಟಿಕ್ ಶೀಟ್ ಬಳಕೆ

ಇದು ಅತ್ಯಂತ ಸುರಕ್ಷಿತ ವಿಧಾನ. ಒಂದು ಪ್ಲಾಸ್ಟಿಕ್ ಕವರ್ ಅಥವಾ ಬಟರ್ ಪೇಪರ್ ತೆಗೆದುಕೊಂಡು ಅದಕ್ಕೆ ಸ್ವಲ್ಪ ತುಪ್ಪ ಅಥವಾ ಒಣ ಹಿಟ್ಟು ಸವರಿ. ಅದರ ಮಧ್ಯೆ ಹಿಟ್ಟಿನ ಉಂಡೆ ಇಟ್ಟು, ಮೇಲೆ ಇನ್ನೊಂದು ಪ್ಲಾಸ್ಟಿಕ್ ಪದರ ಹಾಕಿ ಲಟ್ಟಿಸಿ. ಚಪಾತಿ ಎಲ್ಲೂ ಅಂಟಿಕೊಳ್ಳದೆ ಸುಲಭವಾಗಿ ಬರುತ್ತದೆ.

77
6) ತೆರೆದಿಡಿ

ಹಿಟ್ಟು ಸ್ವಲ್ಪವೇ ಮೆದುವಾಗಿದ್ದರೆ, ಪಾತ್ರೆಯ ಮುಚ್ಚಳ ತೆಗೆದು 5-10 ನಿಮಿಷಗಳ ಕಾಲ ಫ್ಯಾನ್ ಗಾಳಿಗೆ ಇಡಿ. ಗಾಳಿ ತಗುಲಿದಾಗ ಹಿಟ್ಟಿನ ಮೇಲ್ಭಾಗದ ತೇವಾಂಶ ಆರಿ ಅದು ಲಟ್ಟಿಸಲು ಸುಲಭವಾಗುತ್ತದೆ.

ಟಿಪ್ಸ್: ಹಿಟ್ಟು ಕಲಿಸುವಾಗ ಯಾವಾಗಲೂ ನೀರನ್ನು ಸ್ವಲ್ಪ ಸ್ವಲ್ಪವೇ ಹಾಕಿಕೊಳ್ಳಿ. ಒಂದು ವೇಳೆ ಅಕಸ್ಮಾತ್ ನೀರು ಹೆಚ್ಚಾದರೆ ಮಾತ್ರ ಮೇಲೆ ತಿಳಿಸಿದ ಉಪಾಯಗಳನ್ನು ಬಳಸಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories