ಹಾಟ್ ನಟಿಗೆ 12 ಲಕ್ಷ ಫಾಲೋವರ್ಸ್,ಆಪ್‌ನಿಂದ ಸ್ಪರ್ಧಿಸಿ ಕೇವಲ 2 ಸಾವಿರ ಮತ ಪಡೆದ ಚಾಹತ್ ಟ್ರೋಲ್!

First Published Dec 4, 2023, 8:05 PM IST

ಮಧ್ಯಪ್ರದೇಶದ ಆಮ್ ಆದ್ಮಿ ಪಾರ್ಟಿ ನಾಯಕಿ, ನಟಿ ಚಾಹತ್ ಪಾಂಡೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಕ್ರಿಯ. ವಿಡಿಯೋ, ಫೋಟೋ ಪೋಸ್ಟ್ ಮಾಡಿ ಭಾರಿ ಲೈಕ್ಸ್, ಕಮೆಂಟ್ ಪಡೆಯುತ್ತಾರೆ. ಇನ್ನು ಧಾರವಾಹಿಗಳಲ್ಲಿ ಚಹಾತ್ ಪಾಂಡೆ ಭಾರಿ ಜನಪ್ರಿಯರಾಗಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ 12 ಲಕ್ಷ ಫಾಲೋವರ್ಸ್ ಪಡೆದಿರುವ ಈ ನಟಿ ಈ ಬಾರಿ ಮಧ್ಯಪ್ರದೇಶ ಚುನಾವಣೆಯಲ್ಲಿ ಸ್ಪರ್ಧಿಸಿ ಕೇವಲ 2 ಸಾವಿರ ಮತ ಪಡೆದಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುುತ್ತಿದೆ.

ಮಧ್ಯಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಬಿರುಗಾಳಿಗೆ ಕಾಂಗ್ರೆಸ್, ಆಪ್ ಸೇರಿದಂತೆ ಇತರ ಪಕ್ಷಗಳು ಧೂಳೀಪಟವಾಗಿದೆ. ಈ ಚುನಾವಣೆಯಲ್ಲಿ ಆಪ್ ನಾಯಕಿ, ನಟಿ ಚಾಹತ್ ಪಾಂಡೆ ಸ್ಪರ್ಧೆ ಭಾರಿ ಕುತೂಹಲ ಮೂಡಿಸಿತ್ತು. ಕಾರಣ ಚಾಹತ್ ಪಾಂಡೆ ಅತ್ಯಂತ ಜನಪ್ರಿಯ ನಟಿ.

ಧಾರವಾಹಿಗಳಲ್ಲಿ ಜನಪ್ರಿಯವಾಗಿರುವ ಚಹಾತ್ ಪಾಂಡೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಡ್ಯಾನ್ಸ್ ವಿಡಿಯೋ, ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಪ್ರತಿ ಪೋಸ್ಟ್‌ಗೂ ಲಕ್ಷ ಲಕ್ಷ ಲೈಕ್ಸ್, ಕಮೆಂಟ್ ಬರುತ್ತಿದೆ.

ಹಾಟ್ ನಟಿ ಚಹಾತ್ ಪಾಂಡೆ ಮಧ್ಯಪ್ರದೇಶ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದಿಂದ ಸ್ಪರ್ಧಿಸಿದ್ದರು. ದಾಮೋಹ ಕ್ಷೇತ್ರದಿಂದ ಅಖಾಡಕ್ಕಿಳಿದ ಚಾಹತ್ ಪಾಂಡೆ ಗಳಿಸಿದ್ದು ಕೇವಲ 2,292 ಮತಗಳು ಮಾತ್ರ
 

ಇನ್‌ಸ್ಟಾಗ್ರಾಂನಲ್ಲಿ ಚಹಾತ್ ಪಾಂಡೆ 12 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಇನ್ನು ಪ್ರತಿ ವಿಡಿಯೋ ಹಾಗೂ ಪೋಸ್ಟ್‌ಗೂ ಲಕ್ಷ ಲೈಕ್ಸ್ ಖಚಿತವಾಗಿದೆ. ಆದರೆ ಮತಗಳಿಕೆಯಲ್ಲಿ 2 ಸಾವಿರಕ್ಕೆ ಸೀಮಿತವಾಗಿದ್ದಾರೆ. ಇದೇ ವಿಚಾರ ಮುಂದಿಟ್ಟು ಹಲವರು ಟ್ರೋಲ್ ಮಾಡುತ್ತಿದ್ದಾರೆ.

ಚಹಾತ್ ಪಾಂಡೆ ಡ್ಯಾನ್ಸ್ ವಿಡಿಯೋ, ಪೋಟೋಗೆ ಬರವು ಕಮೆಂಟ್‌ನಷ್ಟೂ ಮತ ಪಡೆಯಲಿಲ್ಲ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೇ ಇದ್ದು, ಜನರ ಜೊತೆ ಬೆರೆಯದಿದ್ದರೆ ಲೈಕ್ಸ್ ಮಾತ್ರ ಸಿಗಲಿದೆ, ಮತ ಸಿಗುವುದಿಲ್ಲ ಎಂದು ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ.

ಆಪ್ ಅಭ್ಯರ್ಥಿ ಚಹಾತ್ ಪಾಂಡೆ ಸೋಶಿಯಲ್ ಮೀಡಿಯಾದಲ್ಲಿನ ರೀಲ್ಸ್‌ಗಳ ಪೈಕಿ ಬಾಲಿವಡ್‌ನ ಲಡ್ಕಾ ಆಂಖ್ ಮಾರೆ ಹಾಡಿಗೆ ಹೆಜ್ಜೆ ಹಾಕಿದ್ದು ಭಾರಿ ವೈರಲ್ ಆಗಿತ್ತು. 
 

ಸೋಶಿಯಲ್ ಮಿಡಿಯಾ ಕಮೆಂಟ್, ಟ್ರೋಲ್ಸ್‌ಗೆ ತಲೆಕೆಡಿಸಿಕೊಳ್ಳದ ಚಾಹತ್ ಪಾಂಡೆ, ಮತ್ತಷ್ಟು ಹೊಸ ವಿಡಿಯೋ ಹಾಗೂ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರೆ.
 

ದಾಮೋಹ ಕ್ಷೇತ್ರದಿಂದ ಚಹಾತ್ ಪಾಂಡೆ ಹಾಗೂ ಕಾಂಗ್ರೆಸ್‌ನ ಅಜಯ್ ಕುಮಾರ್ ಟೆಂಡನ್ ಸೇರಿದಂತೆ 19 ಅಭ್ಯರ್ಥಿಗಳನ್ನು ಸೋಲಿಸಿದ ಜಯಂತ್ ಮಾಲೈ 111449 ಮತ ಪಡೆದು ಗೆಲುವು ದಾಖಲಿಸಿದ್ದಾರೆ.
 

click me!