ಗ್ರಾಪಂಗಳು ಸರ್ಕಾರದ ಅನುದಾನಕ್ಕಿಂತ ಸ್ಥಳೀಯವಾಗಿ ಸಂಗ್ರಹವಾಗುವ ಸಂಪನ್ಮೂಲಗಳ ಮೇಲೆ ನೌಕರರ ವೇತನ, ಕುಡಿಯುವ ನೀರು, ಬೀದಿದೀಪಗಳ ನಿರ್ವಹಣೆ, ಸ್ವಚ್ಛತೆ ಮತ್ತಿತರ ಕಾರ್ಯಗಳಿಗೆ ಅನುದಾನ ಬಳಸಬೇಕಾಗುತ್ತದೆ. ಹೀಗಾಗಿ ಗ್ರಾಪಂಗಳಿಗೆ ತೆರಿಗೆ ಸಂಗ್ರಹಣೆ ಮುಖ್ಯವಾಗಿದೆ.
ಜಿ.ಡಿ. ಹೆಗಡೆ
ಕಾರವಾರ(ಮೇ.19): ಗ್ರಾಪಂಗಳು ಸಾರ್ವಜನಿಕರಿಗೆ ವಿಧಿಸುವ ಆಸ್ತಿ ತೆರಿಗೆ ಸಂಗ್ರಹಣೆಯಲ್ಲಿ ಉತ್ತರ ಕನ್ನಡ ಜಿಲ್ಲೆ ರಾಜ್ಯಕ್ಕೆ ಮೊದಲ ಸ್ಥಾನದಲ್ಲಿದೆ. ಕಳೆದ ೨೦೨೩- ೨೪ನೇ ಸಾಲಿನಲ್ಲಿ ಒಟ್ಟೂ ೨೨೯ ಗ್ರಾಪಂಗಳಿಂದ ₹೧೩೫೦.೧೧ ಲಕ್ಷ (₹೧೩೫ ಕೋಟಿ) ತೆರಿಗೆ ಸಂಗ್ರಹವಾಗಿದೆ.
undefined
ಅಂಕೋಲಾ ೨೧ ಗ್ರಾಪಂಗಳಿಂದ ₹೧೧೫.೭೨ ಲಕ್ಷದಲ್ಲಿ ₹ ೧೦೦.೩೪ ಲಕ್ಷ, ಭಟ್ಕಳ ೧೬ ಗ್ರಾಪಂಗಳಿಂದ ₹೧೮೫.೯೭ ಲಕ್ಷದಲ್ಲಿ ೧೪೮.೮೮ ಲಕ್ಷ, ದಾಂಡೇಲಿ ೪ ಗ್ರಾಪಂಗಳಿಂದ ₹೩೯.೩೩ ಲಕ್ಷದಲ್ಲಿ ₹೨೮.೩೮ ಲಕ್ಷ, ಹಳಿಯಾಳ ೨೦ ಗ್ರಾಪಂನಿಂದ ₹೨೦೪.೮೧ ಲಕ್ಷದಲ್ಲಿ ₹೧೩೪.೭೪ ಲಕ್ಷ, ಹೊನ್ನಾವರ ೨೬ ಗ್ರಾಪಂನಿಂದ ₹೧೬೬.೦೦ ಲಕ್ಷದಲ್ಲಿ ₹೧೨೯.೫೪ ಲಕ್ಷ, ಕಾರವಾರ ೧೮ ಗ್ರಾಪಂಗಳಿಂದ ₹೨೧೯.೮೬ ಲಕ್ಷದಲ್ಲಿ ₹೧೧೦.೨ ಲಕ್ಷ, ಕುಮಟಾ ೨೨ ಗ್ರಾಪಂಗಳಿಂದ ₹೨೭೬.೧೮ ಲಕ್ಷದಲ್ಲಿ ₹೧೬೬.೦ ಲಕ್ಷ, ಮುಂಡಗೋಡ ೧೬ ಗ್ರಾಪಂಗಳಿಂದ ₹೧೪೦.೨೯ ಲಕ್ಷದಲ್ಲಿ ₹೮೦.೩೬ ಲಕ್ಷ, ಸಿದ್ದಾಪುರ ೨೩ ಗ್ರಾಪಂಗಳಿಂದ ₹೧೩೫.೧೨ ಲಕ್ಷದಲ್ಲಿ ₹೧೧೧.೨೯ ಲಕ್ಷ, ಶಿರಸಿ ೩೨ ಗ್ರಾಪಂಗಳಿಂದ ₹೨೪೩.೮೭ ಲಕ್ಷದಲ್ಲಿ ₹೧೭೦.೦೦ ಲಕ್ಷ, ಜೋಯಿಡಾ ೧೬ ಗ್ರಾಪಂಗಳಿಂದ ₹೧೦೭.೧೬ ಲಕ್ಷದಲ್ಲಿ ₹೮೫.೦೫ ಲಕ್ಷ, ಯಲ್ಲಾಪುರ ೧೫ ಗ್ರಾಪಂಗಳಿಂದ ₹೧೧೮.೧೩ ಲಕ್ಷದಲ್ಲಿ ₹೮೪.೫೦ ಲಕ್ಷದಷ್ಟು ತೆರಿಗೆ ಸಂಗ್ರಹಣೆಯಾಗಿದೆ.
ಹವಾಮಾನ ವೈಪರೀತ್ಯ: ತುಟ್ಟಿಯಾದ ಔಷಧೀಯುಕ್ತ ಕುಮುಟಾ ಈರುಳ್ಳಿ!
ಗ್ರಾಪಂಗಳು ಸರ್ಕಾರದ ಅನುದಾನಕ್ಕಿಂತ ಸ್ಥಳೀಯವಾಗಿ ಸಂಗ್ರಹವಾಗುವ ಸಂಪನ್ಮೂಲಗಳ ಮೇಲೆ ನೌಕರರ ವೇತನ, ಕುಡಿಯುವ ನೀರು, ಬೀದಿದೀಪಗಳ ನಿರ್ವಹಣೆ, ಸ್ವಚ್ಛತೆ ಮತ್ತಿತರ ಕಾರ್ಯಗಳಿಗೆ ಅನುದಾನ ಬಳಸಬೇಕಾಗುತ್ತದೆ. ಹೀಗಾಗಿ ಗ್ರಾಪಂಗಳಿಗೆ ತೆರಿಗೆ ಸಂಗ್ರಹಣೆ ಮುಖ್ಯವಾಗಿದೆ.
ಅಭಿನಂದನೀಯ:
ಗ್ರಾಪಂಗಳು ವಿಧಿಸುವ ತೆರಿಗೆ ಸಂಗ್ರಹಣೆ ೧೨ ತಾಲೂಕುಗಳ ೨೨೯ ಗ್ರಾಪಂಗಳಿಂದ ₹೧೩೫೦.೧೧ ಲಕ್ಷ ನಮ್ಮ ಜಿಲ್ಲೆಯಲ್ಲಿ ಆಗಿದ್ದು, ರಾಜ್ಯಕ್ಕೆ ಮೊದಲ ಸ್ಥಾನದಲ್ಲಿದೆ. ಹೆಚ್ಚಿನ ಗ್ರಾಪಂಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರು ತೆರಿಗೆ ಬಾಕಿ ಇಟ್ಟುಕೊಳ್ಳದೇ ಪಾವತಿ ಮಾಡಿದ್ದು, ಅಭಿನಂದನೀಯವಾಗಿದೆ ಎಂದು ಜಿಪಂ ಸಿಇಒ ಈಶ್ವರಕುಮಾರ ಕಾಂದೂ ತಿಳಿಸಿದರು.