Soaked almonds benefits: ನಟ್ಸ್‌ಗಳಲ್ಲಿ ಬಾದಾಮಿ ಅತ್ಯುತ್ತಮ ಮತ್ತು ಪೌಷ್ಟಿಕಾಂಶವುಳ್ಳದ್ದು. ಬಾದಾಮಿಯನ್ನು ಹಲವು ರೀತಿ ತಿನ್ನಬಹುದು. ಕೆಲವರು ನೆನೆಸಿದರೆ, ಇನ್ನು ಕೆಲವರು ಹಾಗೆಯೇ ತಿನ್ನುತ್ತಾರೆ. ನಿಜವಾಗಿಯೂ ಬಾದಾಮಿಯನ್ನು ಹೇಗೆ ತಿಂದರೆ ಆರೋಗ್ಯಕ್ಕೆ ಒಳ್ಳೆಯದು?.
ಬಾದಾಮಿಯನ್ನು ಹಾಗೆಯೇ ತಿನ್ನುವುದಕ್ಕಿಂತ ನೆನೆಸಿ ತಿನ್ನುವುದು ಉತ್ತಮ. ದೇಹವು ಇದನ್ನು ಚೆನ್ನಾಗಿ ಹೀರಿಕೊಳ್ಳುತ್ತದೆ. ಪ್ರತಿದಿನ ಎಂಟು ಗಂಟೆಗಳ ಕಾಲ ಬಾದಾಮಿಯನ್ನು ನೀರಿನಲ್ಲಿ ನೆನೆಸಿದ ನಂತರ ತಿನ್ನುವುದು ತುಂಬಾ ಒಳ್ಳೆಯದು.
26
ಕಾಯಿಲೆ ತಡೆಯಲು ಸಹಕಾರಿ
ನೆನೆಸಿದ ಬಾದಾಮಿಯಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು, ವಿಟಮಿನ್ ಇ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪೋಷಕಾಂಶಗಳು ಸಮೃದ್ಧವಾಗಿವೆ. ನೆಗಡಿ, ಜ್ವರದಂತಹ ಕಾಯಿಲೆಗಳನ್ನು ತಡೆಯಲು ಬಾದಾಮಿ ಸಹಕಾರಿ.
36
ಹೃದಯದ ಆರೋಗ್ಯ ಸುಧಾರಣೆ
ನೆನೆಸಿದ ಬಾದಾಮಿಯು ಜೀರ್ಣಕಾರಿ ಸಮಸ್ಯೆ ಅಥವಾ ಸೂಕ್ಷ್ಮ ಹಲ್ಲುಗಳನ್ನು ಹೊಂದಿರುವವರಿಗೆ ಹೆಚ್ಚು ಪ್ರಯೋಜನಕಾರಿ. ನೆನೆಸಿದ ಬಾದಾಮಿಯ ರುಚಿ ಕಡಿಮೆ ಇದ್ದರೂ, ಪೋಷಕಾಂಶಗಳು ಹೆಚ್ಚು. ಬಾದಾಮಿಯಲ್ಲಿರುವ ಆರೋಗ್ಯಕರ ಕೊಬ್ಬುಗಳು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ.
ಬೆಳಗಿನ ಉಪಾಹಾರಕ್ಕೆ ಮೊದಲು ನಿರ್ದಿಷ್ಟ ಪ್ರಮಾಣದಲ್ಲಿ (ಸುಮಾರು 10 ಗ್ರಾಂ) ನೆನೆಸಿದ ಬಾದಾಮಿ ತಿನ್ನುವುದು ದೇಹದ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ನ್ಯೂಟ್ರಿಯೆಂಟ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ಹೇಳುತ್ತದೆ.
56
ಹಾಗೆಯೇ ತಿಂದರೆ..
ಬಾದಾಮಿಯನ್ನು ಹಾಗೆಯೇ ತಿನ್ನುವುದು ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೆನೆಸದ ಕಾರಣ ಪೋಷಕಾಂಶಗಳ ನಷ್ಟ ಅಥವಾ ನೀರಿನ ಹೀರಿಕೊಳ್ಳುವಿಕೆಯನ್ನು ತಪ್ಪಿಸಬಹುದು. ಬಾದಾಮಿ ಸೇವನೆಯು ಉತ್ತಮ ಹೃದಯದ ಆರೋಗ್ಯ, ಆರೋಗ್ಯಕರ ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟಕ್ಕೆ ಸಂಬಂಧಿಸಿದೆ.
66
ಅತಿಯಾಗಿ ತಿನ್ನುವುದನ್ನ ತಡೆಯಲು ಸಹಕಾರಿ
ನೆನೆಸಿದ ಬಾದಾಮಿ ಆರೋಗ್ಯಕರ ಕೊಬ್ಬುಗಳು, ಫೈಬರ್, ಮೆಗ್ನೀಶಿಯಂ ಮತ್ತು ವಿಟಮಿನ್ ಇ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಬಾದಾಮಿಯನ್ನು ನೆನೆಸದೆ ಹಾಗೆಯೇ ತಿನ್ನುವುದು ಅತಿಯಾಗಿ ತಿನ್ನುವುದನ್ನು ತಡೆಯಲು ಸಹಾಯ ಮಾಡುತ್ತದೆ.