ಪ್ರಾಸ್ಟೇಟ್ ಕ್ಯಾನ್ಸರ್ ಪುರುಷರಲ್ಲಿ ಸಾಮಾನ್ಯವಾಗಿ ಕಂಡುಬರುವ ಕ್ಯಾನ್ಸರ್ ಆಗಿದ್ದು, 40 ವರ್ಷ ಮೇಲ್ಪಟ್ಟವರು ಇದರ ಬಗ್ಗೆ ತಿಳಿಯುವುದು ಮುಖ್ಯ. ಈ ಲೇಖನ ಪ್ರಾಸ್ಟೇಟ್ ಕ್ಯಾನ್ಸರ್‌ನ ಕಾರಣಗಳು, ಆರಂಭಿಕ ಲಕ್ಷಣಗಳು, ಚಿಕಿತ್ಸಾ ವಿಧಾನಗಳು ಮತ್ತು ಹೆಚ್ಚಿನ ಬದುಕುಳಿಯುವಿಕೆಯ ಪ್ರಮಾಣದ ಬಗ್ಗೆ ವಿವರಿಸುತ್ತದೆ.
ಪುರುಷರಲ್ಲಿ ಅತ್ಯಂತ ಸಾಮಾನ್ಯವಾಗಿ ಕಂಡುಬರುವ ಕ್ಯಾನ್ಸರ್ ಅಂದ್ರೆ ಪ್ರಾಸ್ಟೇಟ್ ಕ್ಯಾನ್ಸರ್. 40 ವರ್ಷ ದಾಟಿದ ಪುರುಷರು ಕಡ್ಡಾಯವಾಗಿ ಪ್ರಾಸ್ಟೇಟ್ ಕ್ಯಾನ್ಸರ್ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಈ ಮೂಲಕ ಮುಂದಾಗುವ ಅನಾರೋಗ್ಯದ ಅಪಾಯಗಳಿಂದ ದೂರವಾಗಬಹುದು.
28
ಪ್ರಾಸ್ಟೇಟ್ ಕ್ಯಾನ್ಸರ್ ಕಾರಣ ಏನು?
ಪುರುಷರ ಸಂತಾನೋತ್ಪತ್ತಿ ವ್ಯವಸ್ಥೆಯ ಭಾಗವಾದ ಪ್ರಾಸ್ಟೇಟ್ ಗ್ರಂಥಿಯಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಪ್ರಾರಂಭವಾಗುತ್ತದೆ. ಮೂತ್ರಕೋಶದ ಕೆಳಗಿರುವ ಪ್ರಾಸ್ಟೇಟ್ ಗ್ರಂಥಿಯಲ್ಲಿನ ಜೀವಕೋಶಗಳು ಅನಿಯಂತ್ರಿತವಾಗಿ ಬೆಳೆಯಲು ಪ್ರಾರಂಭಿಸಿದಾಗ ಪ್ರಾಸ್ಟೇಟ್ ಕ್ಯಾನ್ಸರ್ ಉಂಟಾಗುತ್ತದೆ. ಈ ಕ್ಯಾನ್ಸರ್ ಪುರುಷರಿಗೆ ಹೆಚ್ಚು ತೊಂದರೆ ಉಂಟುಮಾಡುತ್ತದೆ ಎಂದು ಡಾ. ಸುರೇಂದರ್ ಕುಮಾರ್ ಹೇಳುತ್ತಾರೆ.
38
ತಪಾಸಣೆ ಅಗತ್ಯ
ಪ್ರಾಸ್ಟೇಟ್ ಕ್ಯಾನ್ಸರ್‌ಗೆ ನಿಖರ ಕಾರಣ ತಿಳಿಯುವುದು ಕಷ್ಟ. ಆದರೆ ವಯಸ್ಸು, ಅನುವಂಶಿಕತೆ, ಬೊಜ್ಜು, ಹಾರ್ಮೋನ್ ಬದಲಾವಣೆಗಳು ಪ್ರಾಸ್ಟೇಟ್ ಕ್ಯಾನ್ಸರ್‌ನ ಅಪಾಯವನ್ನು ಹೆಚ್ಚಿಸುತ್ತವೆ. ಆರಂಭಿಕ ಹಂತದಲ್ಲಿ ಲಕ್ಷಣಗಳಿರುವುದಿಲ್ಲ, ಆದ್ದರಿಂದ 40 ವರ್ಷ ಮೇಲ್ಪಟ್ಟ ಪುರುಷರು ನಿಯಮಿತ ತಪಾಸಣೆ ಮಾಡಿಸುವುದು ಮುಖ್ಯವಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವುದು ಮುಖ್ಯವಾಗಿದ್ದು, ಇದು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಮತ್ತು ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಇದು ಕೇವಲ 65 ವರ್ಷ ಮೇಲ್ಪಟ್ಟ ವಯಸ್ಸಾದ ಪುರುಷರಿಗೆ ಮಾತ್ರ ಬರುತ್ತದೆ ಎಂಬುದು ತಪ್ಪು ಕಲ್ಪನೆ ಎಂದು ವೈದ್ಯರು ಹೇಳುತ್ತಾರೆ.
58
ಆರಂಭಿಕ ಲಕ್ಷಣಗಳು ಏನು?
ಆರಂಭಿಕ ಹಂತದ ಪ್ರಾಸ್ಟೇಟ್ ಕ್ಯಾನ್ಸರ್ ಇರುವ ಅನೇಕ ಪುರುಷರಲ್ಲಿ ಯಾವುದೇ ಲಕ್ಷಣಗಳು ಕಾಣಿಸುವುದಿಲ್ಲ. ಮೂತ್ರ ವಿಸರ್ಜನೆಗೆ ಕಷ್ಟ, ರಾತ್ರಿ ಪದೇ ಪದೇ ಬಾತ್‌ರೂಮ್‌ಗೆ ಹೋಗುವುದು, ಅಥವಾ ಪೆಲ್ವಿಕ್ ನೋವಿನಂತಹ ಲಕ್ಷಣಗಳನ್ನು ಪ್ರಾಸ್ಟೇಟ್ ಕ್ಯಾನ್ಸರ್‌ನ ಚಿಹ್ನೆಗಳೆಂದು ಪರಿಗಣಿಸಲಾಗುತ್ತದೆ.
68
ಅಪಾಯಕಾರಿ ಕ್ಯಾನ್ಸರ್
ಎಲ್ಲಾ ಗಡ್ಡೆಗಳು ಒಂದೇ ರೀತಿ ಇರುವುದಿಲ್ಲ. ಕೆಲವು ಪ್ರಾಸ್ಟೇಟ್ ಕ್ಯಾನ್ಸರ್‌ಗಳು ವೇಗವಾಗಿ ಹರಡುತ್ತವೆ. ರೋಗದ ತೀವ್ರತೆಯನ್ನು ತಿಳಿಯಲು ಬಯಾಪ್ಸಿ, ಎಂಆರ್‌ಐ ಮತ್ತು ಜೆನೆಟಿಕ್ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಕೆಲವು ರೀತಿಯ ಪ್ರಾಸ್ಟೇಟ್ ಕ್ಯಾನ್ಸರ್‌ಗಳು ಅಪಾಯಕಾರಿಯಾಗಿರೋದರಿಂದ ಪುರುಷರು ತಮ್ಮ ಆರೋಗ್ಯದ ಬಗ್ಗೆ ಕಾಳಜಿಯನ್ನು ತಿಳಿದುಕೊಳ್ಳಬೇಕಾಗುತ್ತದೆ.
78
ಪ್ರಾಸ್ಟೇಟ್ ಕ್ಯಾನ್ಸರ್‌ಗೆ ಚಿಕಿತ್ಸೆ
ಪ್ರಾಸ್ಟೇಟ್ ಕ್ಯಾನ್ಸರ್ ಚಿಕಿತ್ಸೆಯ ಅಡ್ಡಪರಿಣಾಮಗಳ ಬಗ್ಗೆ, ವಿಶೇಷವಾಗಿ ಲೈಂ*ಗಿಕ ಕ್ರಿಯೆಯ ನಷ್ಟದ ಬಗ್ಗೆ ಅನೇಕ ಪುರುಷರು ಚಿಂತಿತರಾಗಿರುತ್ತಾರೆ. ಆದರೆ ಹೊಸ ಚಿಕಿತ್ಸೆಗಳು ಈ ಅಪಾಯಗಳನ್ನು ಕಡಿಮೆ ಮಾಡಿವೆ. ಈ ಬಗ್ಗೆ ವೈದ್ಯರೊಂದಿಗೆ ಮುಕ್ತವಾಗಿ ಮಾತನಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ.
88
ಬದುಕುಳಿಯುವ ಪ್ರಮಾಣ ಎಷ್ಟು?
ಇತರ ಕ್ಯಾನ್ಸರ್‌ಗಳಿಗೆ ಹೋಲಿಸಿದರೆ ಪ್ರಾಸ್ಟೇಟ್ ಕ್ಯಾನ್ಸರ್‌ನ ಬದುಕುಳಿಯುವಿಕೆಯ ಪ್ರಮಾಣ ಹೆಚ್ಚಾಗಿರೋದರಿಂದ ರೋಗಿಗಳು ಭಯಪಡಬೇಕಿಲ್ಲ. ಅಮೇರಿಕನ್ ಕ್ಯಾನ್ಸರ್ ಸೊಸೈಟಿ ಪ್ರಕಾರ, ಸುಮಾರು 98% ಪುರುಷರು ಕನಿಷ್ಠ ಐದು ವರ್ಷ ಬದುಕುತ್ತಾರೆ.