ಮೆಂತ್ಯ ಕಾಳಿನ ನೀರನ್ನು 15 ದಿನ ಕುಡಿಯಿರಿ ಸಾಕು.. ತೂಕ ಇಳಿಕೆಯಾಗುತ್ತೆ, ಈ 3 ಸಮಸ್ಯೆಗೆ ಪರಿಹಾರನೂ ಸಿಗುತ್ತೆ

Published : Dec 05, 2025, 12:06 PM IST

Fenugreek seed water benefits: ಮೆಂತ್ಯ ಕಾಳಿನಲ್ಲಿರುವ ಸಪೋನಿನ್‌ಗಳು ಮತ್ತು ಫೀನಾಲಿಕ್ ಸಂಯುಕ್ತಗಳು ಉರಿಯೂತವನ್ನು ಕಡಿಮೆ ಮಾಡಲು ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ವೈಜ್ಞಾನಿಕ ಸಂಶೋಧನೆ ಸೂಚಿಸುತ್ತದೆ.

PREV
16
ಯಾರು ಮತ್ತು ಹೇಗೆ ಸೇವಿಸಬೇಕು?

ಮೆಂತ್ಯ ಕಾಳನ್ನು ಎಲ್ಲಾ ಅಡುಗೆಗೂ ಬಳಸುವುದಿಲ್ಲ. ಆದರೆ ಇದನ್ನ ಕೆಲವೇ ರೆಸಿಪಿಗೆ ಬಳಸಿದರೂ ಆಹಾರದ ರುಚಿ ಹೆಚ್ಚುತ್ತದೆ. ಆಯುರ್ವೇದವು ಮೆಂತ್ಯ ಕಾಳನ್ನು ಅಮೃತದಂತಹ ಗಿಡಮೂಲಿಕೆ ಎಂದು ವಿವರಿಸಿರುವುದರಿಂದ 'ಆರೋಗ್ಯದ ನಿಧಿ' ಎಂದು ಪರಿಗಣಿಸಲಾಗುತ್ತದೆ. ಈ ಸಣ್ಣ ಬೀಜ ಅಪಾರ ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದು, ವಿಶೇಷವಾಗಿ ಮೆಂತ್ಯ ಕಾಳಿನ ನೀರು ಫೈಬರ್, ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಶಿಯಂ, ವಿಟಮಿನ್ ಬಿ 6 ಮತ್ತು ಉತ್ಕರ್ಷಣ ನಿರೋಧಕಗಳು ಸೇರಿದಂತೆ ಅನೇಕ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿದೆ. ಮೆಂತ್ಯ ಕಾಳಿನಲ್ಲಿರುವ ಸಪೋನಿನ್‌ಗಳು ಮತ್ತು ಫೀನಾಲಿಕ್ ಸಂಯುಕ್ತಗಳು ಉರಿಯೂತವನ್ನು ಕಡಿಮೆ ಮಾಡಲು ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ವೈಜ್ಞಾನಿಕ ಸಂಶೋಧನೆ ಸೂಚಿಸುತ್ತದೆ. ಹಾಗಾದರೆ ಅದನ್ನು ಯಾರು ಮತ್ತು ಹೇಗೆ ಸೇವಿಸಬೇಕು ಎಂಬುದನ್ನು ನೋಡೋಣ..

26
ಮೆಂತ್ಯ ನೀರನ್ನು ತಯಾರಿಸುವುದು ಹೇಗೆ?

ಮೆಂತ್ಯ ಬೀಜಗಳನ್ನು ನೀರಿನಲ್ಲಿ ನೆನೆಸಿದಾಗ ಅವುಗಳ ಎಲ್ಲಾ ಪೋಷಕಾಂಶಗಳು ನೀರಿನಲ್ಲಿ ಕರಗುತ್ತವೆ. ಈ ನೀರನ್ನು ತಯಾರಿಸಲು ಮೊದಲು ಒಂದು ಲೋಟ ಶುದ್ಧ ನೀರನ್ನು ತೆಗೆದುಕೊಂಡು ಅದಕ್ಕೆ 2-3 ಟೀ ಚಮಚ ಮೆಂತ್ಯ ಬೀಜಗಳನ್ನು ಸೇರಿಸಿ. ರಾತ್ರಿಯಿಡೀ ನೆನೆಸಿಡಿ. ನಂತರ ಮರುದಿನ ಬೆಳಗ್ಗೆ ನೀರನ್ನು ಕುದಿಸಿ ಸೋಸಿ ಕುಡಿಯಿರಿ. ನೀವು ಅದನ್ನು ಕುದಿಸದೆಯೂ ಕುಡಿಯಬಹುದು. ರುಚಿಯನ್ನು ಹೆಚ್ಚಿಸಲು ನೀವು ನಿಂಬೆ ರಸ ಮತ್ತು ಜೇನುತುಪ್ಪವನ್ನು ಕೂಡ ಸೇರಿಸಬಹುದು.

36
ಮೆಂತ್ಯ ನೀರು ಕುಡಿಯುವುದರಿಂದಾಗುವ ಪ್ರಯೋಜನಗಳು

1.ತೂಕ ಇಳಿಕೆ
ಚಳಿಗಾಲದಲ್ಲಿ ತೂಕ ಹೆಚ್ಚಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ಮೆಂತ್ಯಕಾಳಿನ ನೀರನ್ನು ಕುಡಿಯಲು ಪ್ರಯತ್ನಿಸಬಹುದು. ಇದರಲ್ಲಿ ಫೈಬರ್ ಇದ್ದು, ಇದು ನಿಮ್ಮನ್ನು ಹೆಚ್ಚು ಸಮಯದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಹಸಿವನ್ನು ನೀಗಿಸುತ್ತದೆ ಮತ್ತು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.

46
2. ಜೀರ್ಣಕ್ರಿಯೆಗೆ ಸಹಕಾರಿ

ಜೀರ್ಣಕ್ರಿಯೆ ಸಮಸ್ಯೆ ಇರುವವರಿಗೆ ಮೆಂತ್ಯಕಾಳಿನ ನೀರು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಮೆಂತ್ಯ ಬೀಜಗಳಲ್ಲಿರುವ ನಾರಿನ ಅಂಶವು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದು ಮಲಬದ್ಧತೆ, ಅಸಿಡಿಟಿ ಮತ್ತು ಎದೆಯುರಿ ಮುಂತಾದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

56
3. ರಕ್ತದಲ್ಲಿನ ಸಕ್ಕರೆ ಇಳಿಕೆ

ಮೆಂತ್ಯ ಕಾಳಿನ ನೀರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಗ್ಯಾಲಕ್ಟೋಮನ್ನನ್ ಸಂಯುಕ್ತವು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

66
4. ಕೊಲೆಸ್ಟ್ರಾಲ್ ಕಡಿಮೆಯಾಗಲು

ಮೆಂತ್ಯ ಕಾಳಿನ ನೀರು ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದ್ದು, ಇದು ಕೆಟ್ಟ ಕೊಲೆಸ್ಟ್ರಾಲ್ (LDL) ಅನ್ನು ಕಡಿಮೆ ಮಾಡಲು ಮತ್ತು ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

Read more Photos on
click me!

Recommended Stories