ಧ್ಯಾನ ಮಾಡಿ ಖಿನ್ನತೆ ದೂರ ಮಾಡಿ

Published : Jun 30, 2022, 06:44 PM IST

ಆರೋಗ್ಯವಾಗಿರಲು ಯೋಗ ಮತ್ತು ಧ್ಯಾನ ಮಾಡೋದು ಒಳ್ಳೆಯದು. ಇದು ದೇಹ ಮತ್ತು ಮನಸ್ಸನ್ನು ಆರೋಗ್ಯಕರವಾಗಿರಿಸುತ್ತೆ. ಮನಸ್ಸಿನ ಶಾಂತಿಗಾಗಿ ಧ್ಯಾನ ಮಾಡೋದು ಬೆಸ್ಟ್ . ಧ್ಯಾನ ಮಾಡುವ ಮೂಲಕ ನೀವು ಡಿಪ್ರೆಶನ್ ದೂರ ಮಾಡಬಹುದು. 

PREV
18
ಧ್ಯಾನ ಮಾಡಿ ಖಿನ್ನತೆ ದೂರ ಮಾಡಿ

ಇಂದಿನ ಫಾಸ್ಟ್ ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳಿವೆ. ನಿದ್ರಾಹೀನತೆ(Sleeplessness), ಆತಂಕ, ಒತ್ತಡ, ಖಿನ್ನತೆ ಸಾಮಾನ್ಯವಾಗಿದೆ. ಹಾಗಾಗಿ ಈ ಸಮಸ್ಯೆಗಳನ್ನು ದೂರ ಮಾಡಲು  ಧ್ಯಾನ ಮಾಡುವುದು ಉತ್ತಮ ಮಾರ್ಗ. ಇದು ಮನಸ್ಸನ್ನು ಸ್ವಲ್ಪ ಸಮಯದವರೆಗೆ ರಿಲ್ಯಾಕ್ಸ್ ಆಗಿರಿಸುತ್ತೆ.

28

ಧ್ಯಾನ (Meditation) ಮಾಡೋದ್ರಿಂದ, ಮೆದುಳು ಆಕ್ಟೀವ್ ಮೋಡ್ ನಲ್ಲಿ ನಿದ್ರಿಸುತ್ತೆ , ಇದರಿಂದ ದೇಹದಲ್ಲಿನ ಎಲೆಕ್ಟ್ರಾನ್ಗೆ ಒಂದು ಫ್ಲೋ ಸಿಗುತ್ತೆ ಮತ್ತು ಮೆದುಳು ಸಕಾರಾತ್ಮಕ ದಿಕ್ಕಿನಲ್ಲಿ ಕಾರ್ಯನಿರ್ವಹಿಸುತ್ತೆ. ಧ್ಯಾನದ ನಮಗಾಗುವ ಪ್ರಯೋಜನ ಮತ್ತು ವಿಧಗಳ ಬಗ್ಗೆ ತಿಳಿಯೋಣ. 
 

38

ಧ್ಯಾನದ ವಿಧಗಳು
ವಿಪಶ್ಯನಾ ಮೆಡಿಟೇಶನ್ - ಇದು ಸಾಂಪ್ರದಾಯಿಕ ಬೌದ್ಧ ಮತ್ತು ಭಾರತೀಯ ಧ್ಯಾನ ತಂತ್ರವಾಗಿದೆ. ಈ ಧ್ಯಾನದಲ್ಲಿ, ಮೆದುಳಿಗೆ(Brain) ಬರುವ ಆಲೋಚನೆ ತಡೆಯುವ ಕಲೆ ಬಗ್ಗೆ ತಿಳಿಸಲಾಗುತ್ತದೆ. ಅದರಲ್ಲಿ, ಆಂತರಿಕ ಶಾಂತಿಗಾಗಿ ಮನಸ್ಸನ್ನು ಶಾಂತಗೊಳಿಸಲಾಗುತ್ತೆ.

48

ವಿಪಶ್ಯನಾ ಧ್ಯಾನದಲ್ಲಿ ವರ್ತಮಾನದ ಮೇಲೆ ಸಂಪೂರ್ಣ ಗಮನ ಹರಿಸಬೇಕು. ನೀವು ಭೂತಕಾಲ ಮತ್ತು ಭವಿಷ್ಯತ್ತಿನಿಂದ ಹೊರಬರಬೇಕು. ಇದು ಒತ್ತಡವನ್ನು(Stress) ಕಡಿಮೆ ಮಾಡುತ್ತೆ  ಮತ್ತು ಆತಂಕವನ್ನು ಸಹ ದೂರ ಮಾಡುತ್ತೆ. ಇದು ಮನಸ್ಸಿನ ದುಃಖ ತೆಗೆದುಹಾಕುತ್ತೆ. 

58

 ಪ್ರೀತಿ-ದಯೆ ಧ್ಯಾನ - 
ಈ ಧ್ಯಾನದಲ್ಲಿ, ನೀವು ನಿಮ್ಮ ಪ್ರೀತಿಯ (Love)ಭಾವನೆ ಜಾಗೃತಗೊಳಿಸಬೇಕು. ಅನೇಕ ಬಾರಿ ಸಹಾನುಭೂತಿ ಮತ್ತು ದಯೆಯ ಅಗತ್ಯವಿರುತ್ತೆ. ಇದು ಎಲ್ಲಾ ಒಳ್ಳೆಯದು ಮತ್ತು ಎಲ್ಲಾ ಜನರು ಒಳ್ಳೆಯವರು ಎಂಬ ಭಾವನೆಯನ್ನು ಮೂಡಿಸುತ್ತೆ. ಈ ಭಾವನೆಯು ನಿಮ್ಮನ್ನು ಮಾನಸಿಕವಾಗಿ ಬಲಪಡಿಸಿ, ನಿಮ್ಮನ್ನು ಸ್ಟ್ರಾಂಗ್ ಆಗಿರಿಸುತ್ತೆ. ಇದು ಜನರ ಬಗ್ಗೆ ನಿಮ್ಮ ಭಾವನೆಯನ್ನು ಬದಲಾಯಿಸುತ್ತೆ. 

68

ಕಾನ್ಸನ್ಟ್ರೇಟಿವ್ (Concentrative) ಮೆಡಿಟೇಶನ್- ಇದರಲ್ಲಿ, ನಾವು ನಮ್ಮ ಎಲ್ಲಾ ಗಮನ ಒಂದು ನಿರ್ದಿಷ್ಟ ವಿಷಯದ ಮೇಲೆ ಕೇಂದ್ರೀಕರಿಸುತ್ತೇವೆ. ಸುತ್ತಲಿನ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ನೀವು ಇದನ್ನು ಮಾಡಬೇಕು. ಅದು ನಿಮ್ಮ ಉಸಿರಾಟದ ಶಬ್ಧವಾಗಿರಲಿ, ಮಂತ್ರವಾಗಿರಲಿ, ಒಂದು ನಿರ್ದಿಷ್ಟ ಪದವಾಗಿರಲಿ ಅದನ್ನು ಗಮನದಲ್ಲಿಟ್ಟುಕೊಳ್ಳಬೇಕು.

78

ಮೈಂಡ್ ಫುಲ್ ನೆಸ್(Mindfulness) ಮೆಡಿಟೇಶನ್  - ಇದು ಒಂದು ರೀತಿಯ ಅರಿವಿನ ಚಿಕಿತ್ಸೆಯಾಗಿದೆ. ಈ ಧ್ಯಾನ ಮಾಡುವ ಮೂಲಕ ನೀವು ಪ್ರಸ್ತುತ ಪರಿಸ್ಥಿತಿಯಲ್ಲಿ ನಿಮ್ಮನ್ನು ಜಾಗೃತಗೊಳಿಸಿಕೊಳ್ಳುತ್ತೀರಿ ಮತ್ತು ಪ್ರಸ್ತುತವಾಗಿರುತ್ತೀರಿ. ಇದು ಮೆದುಳನ್ನು ಜಾಗರೂಕರನ್ನಾಗಿ ಮಾಡುತ್ತೆ. ಅನೇಕ ಮಾನಸಿಕ ಕಾಯಿಲೆ ಗುಣಪಡಿಸಲು, ಖಿನ್ನತೆ ಮತ್ತು ಒತ್ತಡ ನಿವಾರಿಸಲು ಸಹಾಯ ಮಾಡುತ್ತೆ.

88


ಮೂವ್ಮೆಂಟ್(Movement)  ಮೆಡಿಟೇಶನ್ - ಒಂದೇ ಸ್ಥಳದಲ್ಲಿ ಕುಳಿತು ಧ್ಯಾನ ಮಾಡಲು ನಿಮಗೆ ಕಷ್ಟವೆನಿಸಿದರೆ, ಆಗ ನೀವು ಮೂವ್ಮೆಂಟ್  ಮೆಡಿಟೇಶನ್ ಮಾಡಬಹುದು. ನೀವು ಅದರಲ್ಲಿ ಯಾವುದೇ ಕೆಲಸ ಮಾಡಬಹುದು. ನೀವು ನಡೆಯಬಹುದು, ಆದರೆ ನೀವು ಒಂದು ಕಡೆಗೆ ಗಮನ ಕೇಂದ್ರೀಕರಿಸಬೇಕು. ಹಾಗೆ ಮಾಡುವುದರಿಂದ ನಿಮ್ಮ ಮನಸ್ಸಿಗೆ ಶಾಂತಿ ಸಿಗುತ್ತೆ  ಮತ್ತು ನೀವು ಒಳ್ಳೆಯದನ್ನು ಅನುಭವಿಸುತ್ತೀರಿ.

Read more Photos on
click me!

Recommended Stories