ನಿಮ್ಮ ಮಗುವೂ(Child) ತುಂಬಾ ಕಿರಿಕಿರಿ ಮಾಡುತ್ತಿದ್ದರೆ, ಆಗ ನೀವು ಅದರಿಂದ ಕಿರಿಕಿರಿಗೊಳಗಾದರೆ, ಮಗುವನ್ನು ಬೈಯುವ ಬದಲು, ಅದರ ಕಾರಣಗಳ ಬಗ್ಗೆ ಗಮನ ಹರಿಸೋದು ಮುಖ್ಯ. ಅಂಬೆಗಾಲಿಡುವ ಮಗುವಿನ ಅಳುವಿಕೆಗೆ ಕಾರಣ ತಿಳಿದಾಗ, ಬಹುಶಃ ನೀವು ಮಗು ಹಾಗೆ ಮಾಡದಂತೆ ತಡೆಯಲು ಸಾಧ್ಯವಾಗುತ್ತೆ .
ಅಂಬೆಗಾಲಿಡುವ ಮಕ್ಕಳು ಅಳುವುದು ಸಾಮಾನ್ಯವೇ?
ಮಕ್ಕಳ ಕಿರುಚಾಟ ಸಾಮಾನ್ಯ ಮತ್ತು ಇದು ಅವರ ಭಾವನಾತ್ಮಕ(Emotional) ಬೆಳವಣಿಗೆಯ ಒಂದು ಭಾಗವಾಗಿದೆ. ಎರಡರಿಂದ ಮೂರು ವರ್ಷದ ಮಗು ಕಿರುಚಲು ಕಲಿಯುತ್ತದೆ. ಮಕ್ಕಳು ಇದನ್ನು ಕೆಲವು ಸೆಕೆಂಡುಗಳಿಂದ ಕೆಲವು ನಿಮಿಷಗಳವರೆಗೆ ಮಾಡಬಹುದು. 18 ರಿಂದ 24 ತಿಂಗಳ ನಡುವಿನ 87% ಮಕ್ಕಳು ಕೆಲವೊಮ್ಮೆ ಕಿರುಚಾಡ್ತಾರೆ. 30 ತಿಂಗಳಿನಿಂದ 36 ತಿಂಗಳ ನಡುವಿನ 91% ಮಕ್ಕಳು ಹಾಗೆ ಮಾಡ್ತಾರೆ.
ಅಮೇರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಪ್ರಕಾರ, ಅಂಬೆಗಾಲಿಡುವ ಮಕ್ಕಳು ತಮ್ಮ ಭಾವನೆಗಳನ್ನು ಅನೇಕ ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ. ಯಾವುದೇ ಮಗುವು ಒಂದೇ ರೀತಿ ಇರಲು ಸಾಧ್ಯವಿಲ್ಲ, ಆದ್ದರಿಂದ ನಿಮ್ಮ ಮಕ್ಕಳಲ್ಲಿ ಒಬ್ಬರು ಶಾಂತವಾಗಿರಬಹುದು ಆದರೆ ಇನ್ನೊಬ್ಬರು ತುಂಬಾ ಕೋಪಗೊಳ್ಳಬಹುದು(Angry) ಅಥವಾ ಕಿರುಚಾಡಬಹುದು.
ಫಸ್ಟ್ರೇಷನ್ (Frustration) ಮತ್ತು ಸ್ಟ್ರೆಸ್
ಯಾವುದೇ ಕೆಲಸ ಮಕ್ಕಳು ಅಂದುಕೊಂಡ ಹಾಗೆ ಆಗದಾಗ ಅವರ ಫಸ್ಟ್ರೇಷನ್ ತೋರಿಸಲು ಕಿರುಚಲು ಪ್ರಾರಂಭಿಸುತ್ತಾರೆ. ಮಕ್ಕಳು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗದ ಕಾರಣ ಅಳುತ್ತಾರೆ. ಕೆಲವು ಮಕ್ಕಳು ಹಸಿವು, ಆಯಾಸ, ಅನಾರೋಗ್ಯ ಮತ್ತು ನೋವಿನಂತಹ ಮಾನಸಿಕ ಅಥವಾ ದೈಹಿಕ ಒತ್ತಡಕ್ಕೆ ಒಳಗಾದಾಗ ಅಳುತ್ತಾರೆ.
ಮಾತನಾಡಲು (Talk) ಆಗದಿರೋದ್ರಿಂದ
ಅಂಬೆಗಾಲಿಡುವ ಮಕ್ಕಳಿಗೆ ಹೆಚ್ಚು ಪದ ಹೇಗೆ ಮಾತನಾಡಬೇಕೆಂದು ತಿಳಿದಿರೋದಿಲ್ಲ ಮತ್ತು ಅವರಿಗೆ ಪದಗಳ ಮೂಲಕ ಹೇಗೆ ಮಾತನಾಡಬೇಕೆಂದು ಸಹ ತಿಳಿದಿರೋಲ್ಲ. ಕಿರುಚುವ ಮೂಲಕ, ಅವರು ತಕ್ಷಣವೇ ಗಮನ ಸೆಳೆಯಬಹುದು ಎಂದು ಭಾವಿಸ್ತಾರೆ.
ಕುತೂಹಲವನ್ನು ಶಾಂತಗೊಳಿಸಲು
ಕೆಲವು ಮಕ್ಕಳು ತುಂಬಾ ತುಂಟರಿರುತ್ತಾರೆ, ಅವರ ಅಳುವಿಕೆಗೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ ಎಂದು ತಿಳಿಯಲು ಬಯಸುತ್ತಾರೆ. ಅದಕ್ಕಾಗಿ ಹಠ ಮಾಡಿ ಅಳಲು ಸ್ಟಾರ್ಟ್(Start) ಮಾಡುತ್ತಾರೆ. ಇವರನ್ನು ಶಾಂತಗೊಳಿಸಿದ ಕೂಡಲೇ ಬೇಗನೆ ಶಾಂತರಾಗುತ್ತಾರೆ.
ಏನು ಮಾಡಬೇಕು
ಯಾವುದೇ ರೋಗ, ನೋವಿನಿಂದಾಗಿ ಮಗು ಅಳುತ್ತಿಲ್ಲವಲ್ಲಾ(Crying) ಎಂದು ಟೆಸ್ಟ್ ಮಾಡಿ. ಅನೇಕ ಬಾರಿ, ಜ್ವರ, ಹಲ್ಲುಗಳಲ್ಲಿ ತೀವ್ರವಾದ ನೋವು ಮತ್ತು ಕಿವಿ ಸೋಂಕು ಇದ್ದಾಗ ಮಕ್ಕಳು ಅಳಲು ಪ್ರಾರಂಭಿಸುತ್ತಾರೆ.
ನಿಮ್ಮ ಗಮನವನ್ನು ಸೆಳೆಯಲು ಅಥವಾ ಸುಮ್ಮನೆ ಮಗು ಕಿರುಚುತ್ತಿದ್ದರೆ, ನೀವು ಮಗುವಿನ ಗಮನ ಬೇರೆಡೆಗೆ ಸೆಳೆಯಲು ಟ್ರೈ ಮಾಡಿ. ಮಕ್ಕಳ ಗಮನ (Attention)ಬೇರೆಡೆ ಸೆಳೆಯೋದು ಸುಲಭ.
ಮಗುವಿನ ಫಸ್ಟ್ರೇಷನ್ ಗೆ ಕಾರಣವೇನು?
ಒಂದುವೇಳೆ ಮಗು ಫಸ್ಟ್ರೇಷನ್ ಅಥವಾ ನಿರಾಶೆಯಿಂದ ಅಳುತ್ತಿದ್ದರೆ, ಆಗ ಮಗುವನ್ನು ನಿರ್ಲಕ್ಷಿಸಬೇಡಿ. ನೀವು ಮಗುವಿನ ಕಡೆಗೆ ಗಮನ ಹರಿಸಿದಾಗ,ಮಗು ಅಳೋದನ್ನು ನಿಲ್ಲಿಸ್ತಾನೆ ಮತ್ತು ಮಗುವಿನ ಈ ಹ್ಯಾಬಿಟ್(Habit) ಕ್ರಮೇಣ ಕೊನೆಗೊಳ್ಳುತ್ತೆ .