ಮನೆಯಲ್ಲಿ ತಯಾರಿಸಿ ನ್ಯಾಚುರಲ್ ಮೌತ್ ವಾಶ್, ಹಲ್ಲಿನ ಸಮಸ್ಯೆಗಳೇ ಇರೋದಿಲ್ಲ

First Published Jul 6, 2022, 6:19 PM IST

ನೀವು ಎಷ್ಟೋ ಹಣ ಕೊಟ್ಟು ಮಾರ್ಕೆಟ್ ನಿಂದ ಬೇರೆ ಬೇರೆ ವಿಧದ ಮೌತ್ ವಾಶ್ ಬಳಕೆ ಮಾಡಿರಬಹುದು. ಆದ್ರೆ ಎಲ್ಲವೂ ಹಲ್ಲುಗಳಿಗೆ ಸುರಕ್ಷಿತವಾಗಿರೋದಿಲ್ಲ. ಅದಕ್ಕಾಗಿ ನೀವು ನ್ಯಾಚುರಲ್ ಮೌತ್ ವಾಶ್ ಬಳಕೆ ಮಾಡೋದು ಉತ್ತಮ. ಹಾಗಿದ್ರೆ ಮನೆಯಲ್ಲಿಯೇ ನ್ಯಾಚುರಲ್ ಮೌತ್ ವಾಶ್ ತಯಾರಿಸೋದು ಹೇಗೆ ನೋಡೋಣ…

ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ, 80% ಕ್ಕೂ ಹೆಚ್ಚು ಜನರು 34 ನೇ ವಯಸ್ಸಿನಲ್ಲಿ ಕನಿಷ್ಠ ಒಂದು ಬಾರಿಯಾದರೂ ಬಾಯಿಯಲ್ಲಿ ಉಳುಕಿನ ಸಮಸ್ಯೆಗೆ ಒಳಗಾಗುತ್ತಾರೆ. ಇದು ನಿಮ್ಮ ಬಾಯಿಯ(Mouth) ಆರೋಗ್ಯದ ಮೇಲೆ ಪರಿಣಾಮ ಬೀರುವ ಅತ್ಯಂತ ಸಾಮಾನ್ಯ ಕಾಯಿಲೆಗಳಲ್ಲಿ ಒಂದು. ಇದಲ್ಲದೆ, ಜಿಂಗೈವಿಟಿಸ್ ಕೊಳೆತ-ಕರಗುವಿಕೆ ಮತ್ತು ಬಾಯಿ ಕ್ಯಾನ್ಸರ್  ಸಹ ಉಂಟಾಗೋ ಸಾಧ್ಯತೆ ಇದೆ.

ಬಾಯಿಯ ಆರೋಗ್ಯ ಎಂದರೇನು? ಮತ್ತು ಇದು ಎಷ್ಟು ಮುಖ್ಯ?
ಬಾಯಿಯ ಆರೋಗ್ಯವು ಹಲ್ಲು(Teeth), ಒಸಡು ಮತ್ತು ಇಡೀ ಮುಖದ  ಆರೋಗ್ಯವನ್ನು ಸೂಚಿಸುತ್ತೆ, ಇದರ ಸಹಾಯದಿಂದ ನೀವು ನಗೋದು, ಮಾತನಾಡೋದು ಮತ್ತು ಜಗಿಯೋದನ್ನು ಮಾಡಬಹುದು. ಹಾಗಾಗಿ  ಬಾಯಿ ಆರೋಗ್ಯವಾಗಿರೋದು ತುಂಬಾ ಮುಖ್ಯ.

ನಾವೆಲ್ಲರೂ ಬಾಲ್ಯದಲ್ಲಿ ದಿನಕ್ಕೆ ಎರಡು ಬಾರಿ ಹಲ್ಲುಜ್ಜಬೇಕೆಂಬುದನ್ನು ಕಲಿತಿದ್ದೇವೆ. ಆದರೆ ಕೇವಲ ಬ್ರಷ್(Brush) ಮಾಡೋದ್ರಿಂದ ನಿಮ್ಮ ಹಲ್ಲು ಸುರಕ್ಷಿತವಾಗಿರೋದಿಲ್ಲ. ಫ್ಲೋಸಿಂಗ್ ಮತ್ತು ಮೌತ್ ವಾಶಿಂಗ್ ಕೂಡ ಅಗತ್ಯ. ಇದು ನಿಮ್ಮ ಉಸಿರನ್ನು ತಾಜಾಗೊಳಿಸುವುದಲ್ಲದೆ, ನಿಮ್ಮ ಹಲ್ಲು ಕೊಳೆಯದಂತೆ ರಕ್ಷಿಸುತ್ತೆ. ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಮೌತ್ ವಾಶ್ ಗಳು ಲಭ್ಯವಿವೆ, ಆದರೆ ನ್ಯಾಚುರಲ್ ಉತ್ಪನ್ನ ಬಳಸಿಕೊಂಡು ನೀವು ಇವುಗಳನ್ನು ನಿಮ್ಮ ಮನೆಯಲ್ಲಿಯೇ ತಯಾರಿಸಬಹುದು.

ಅಲೋವೆರಾ ಜ್ಯೂಸ್(Aloevera juice) - ಒಸದಡಿನ ರಕ್ತಸ್ರಾವದ ಸಮಸ್ಯೆಗೆ ಪ್ರಯೋಜನಕಾರಿ
ಕೂದಲು, ಚರ್ಮ ಮತ್ತು ಜೀರ್ಣಕ್ರಿಯೆಯಲ್ಲಿ ಅಲೋವೆರಾದ ಪ್ರಯೋಜನ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿವೆ. ಆದರೆ ಬಾಯಿಯ ಆರೋಗ್ಯದಲ್ಲಿ ಅದರ ಪ್ರಯೋಜನ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ. ಇದು ಒಸಡುಗಳಿಂದ ರಕ್ತಸ್ರಾವ ಮತ್ತು ಪ್ಲೇಕ್ ಕಡಿಮೆ ಮಾಡಲು ಸಹಾಯ ಮಾಡುತ್ತೆ. ಸಂಶೋಧನೆ ಪ್ರಕಾರ, ಅಲೋವೆರಾ ಜ್ಯೂಸ್ ಬಾಯಿ ತೊಳೆಯಲು ಸಹ ಬಳಸಬಹುದು.

ಮೌತ್ ವಾಶ್(Mouth wash) ಮಾಡಲು ಬೇಕಾಗೋ ಸಾಮಗ್ರಿಗಳಿವು :
1/2 ಕಪ್ ಅಲೋವೆರಾ ಜ್ಯೂಸ್
1/2 ಕಪ್ ಶುದ್ಧ ನೀರು

ಬಳಸೋದು ಹೇಗೆ?
ನೀರಿಗೆ ಅಲೋವೆರಾ ಜ್ಯೂಸ್ ಸೇರಿಸಿ. ಮತ್ತು ಪ್ರತಿದಿನ ಬ್ರಷ್ ಮಾಡಿದ ನಂತರ ಈ ದ್ರಾವಣದಿಂದ ತೊಳೆಯಿರಿ.

ಕೊಬ್ಬರಿ ಎಣ್ಣೆ (Coconut oil)- ಒಸಡಿನ ಉರಿಯೂತದಿಂದ ಪರಿಹಾರ
ಕೊಬ್ಬರಿ ಎಣ್ಣೆ ಅನೇಕ ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ದೇಹದ ಅನೇಕ ರೀತಿಯ ರೋಗ ತಡೆಗಟ್ಟುವುದು ಸೇರಿದಂತೆ ಬಾಯಿಯ ಆರೋಗ್ಯ ಸುಧಾರಿಸುವ ಕೆಲಸ ಮಾಡುತ್ತೆ. ಆಯಿಲ್ ಪುಲ್ಲಿಂಗ್ ಗಾಗಿ ಇದನ್ನು ಬಳಸಲಾಗುತ್ತೆ. ಇದರಲ್ಲಿರುವ ಲಾರಿಕ್ ಆಸಿಡ್ ಉರಿಯೂತ ಶಮನಕಾರಿ ಮತ್ತು ಆಂಟಿ ಮೈಕ್ರೋಬಿಯಲಾಗಿದೆ. ಇದು ಬಾಯಿಯಲ್ಲಿ ಪ್ಲೇಕ್ ಮತ್ತು ಅದರಿಂದ ಉಂಟಾಗುವ ತೊಂದರೆ ತಡೆಗಟ್ಟುವ ಕೆಲಸ ಮಾಡುತ್ತೆ .

ಕೊಬ್ಬರಿ ಎಣ್ಣೆಯನ್ನು ಬಳಕೆ ಮಾಡೋದು ಹೇಗೆ? 
100 ವರ್ಜಿನ್ (Virgin)ಅಥವಾ ಸಂಸ್ಕರಿಸದ ಕೊಬ್ಬರಿ ಎಣ್ಣೆ

ಬಳಸೋದು ಹೇಗೆ?
ಕೊಬ್ಬರಿ ಎಣ್ಣೆ ಬಾಯಿಗೆ ಹಾಕಿ ಮುಕಳಿಸಿ. ಇದನ್ನು 10-15 ನಿಮಿಷಗಳ ಕಾಲ ಮಾಡಿ, ನಂತರ ಉಗುಳಿ ಮತ್ತು ನೀರಿನಿಂದ ತೊಳೆಯಿರಿ. ಹೀಗೆ ಮಾಡೋದ್ರಿಂದ ಹಲ್ಲು ಸ್ಟ್ರಾಂಗ್ ಆಗಿ ಉಳಿಯುತ್ತೆ.
 

ಉಪ್ಪು(Salt)- ಹಲ್ಲುಗಳ ದೌರ್ಬಲ್ಯ ತೆಗೆದುಹಾಕುತ್ತೆ 
ಉಪ್ಪಿನಲ್ಲಿ ಫ್ಲೋರೈಡ್ ಕಾಂಪೌಂಡ್ ಕಂಡುಬರುತ್ತೆ. ಇದು ಕ್ಯಾರೊಸ್ಟಾಟಿಕ್ ಪರಿಣಾಮ ಹೊಂದಿದೆ, ಉಪ್ಪು ಹಲ್ಲು ದುರ್ಬಲಗೊಳ್ಳುವ ಮೂಲಕ ಒಡೆಯೋದನ್ನು ತಡೆಯುತ್ತೆ. ಉಪ್ಪು ನೀರಿನಿಂದ ತೊಳೆಯುವುದರಿಂದ, ಬಾಯಿಯಲ್ಲಿ ಬ್ಯಾಕ್ಟೀರಿಯಾ ಉತ್ಪಾದಿಸುವ ಪ್ಲೇಕ್ ಬೆಳೆಯೋದಿಲ್ಲ. ಇದು ಬಾಯಿಯಲ್ಲಿ ಕೊಳೆತ ಮತ್ತು ಊತದಿಂದ ಪರಿಹಾರ ನೀಡುತ್ತೆ .

ಸಾಮಗ್ರಿಗಳು
1/2 ಟೀಸ್ಪೂನ್ ಟೇಬಲ್ ಸಾಲ್ಟ್ 
1/2 ಲೋಟ ಬೆಚ್ಚಗಿನ ನೀರು

ಬಳಸೋದು ಹೇಗೆ?
ನೀರಿಗೆ ಉಪ್ಪನ್ನು ಸೇರಿಸಿ ಮತ್ತು ಚೆನ್ನಾಗಿ ಮಿಕ್ಸ್ ಮಾಡಿ. ಈಗ ಈ ಮಿಶ್ರಣದಿಂದ ನಿಮ್ಮ ಹಲ್ಲು ಸ್ವಚ್ಛಗೊಳಿಸಿ. ಊಟ ಮಾಡಿದ ನಂತರ ನೀವು ಇದನ್ನು ಮಾಡಬಹುದು. ಇದರಿಂದ ಬಾಯಿಯ ಆರೋಗ್ಯ(Mouth decide) ಉತ್ತಮವಾಗಿರುತ್ತೆ.

ಅಡುಗೆ ಸೋಡಾ(Baking soda) - ಬಾಯಿಯ ದುರ್ವಾಸನೆಯಿಂದ ರಕ್ಷಿಸುತ್ತೆ 
ಕೆಟ್ಟ ಉಸಿರಾಟ ಮತ್ತು ಬಾಯಿಯ ಬ್ಯಾಕ್ಟೀರಿಯಾ ತೊಡೆದು ಹಾಕಲು ಅಡುಗೆ ಸೋಡಾ ಉತ್ತಮ ಆಯ್ಕೆ. ಇದು ಸಲೈವಾದ ಪಿಎಚ್ ಮಟ್ಟ ಹೆಚ್ಚಿಸುವ ಕೆಲಸ ಮಾಡುತ್ತೆ. ಬಾಯಿ ಆರೋಗ್ಯ ಸುಧಾರಿಸುವುದರ ಜೊತೆಗೆ, ಬೇಕಿಂಗ್ ಸೋಡಾದಲ್ಲಿರುವ ಬಿಳಿಯಾಗುವಿಕೆ ಪರಿಣಾಮ ಹಲ್ಲು ಹಳದಿಯಾಗೋದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತೆ.

ಸಾಮಗ್ರಿಗಳು
1/2 ಟೀಸ್ಪೂನ್ ಅಡುಗೆ ಸೋಡಾ
1/2 ಲೋಟ ಬೆಚ್ಚಗಿನ ನೀರು(Water)

ಬಳಸೋದು ಹೇಗೆ?
ಅರ್ಧ ಲೋಟ ಬೆಚ್ಚಗಿನ ನೀರಿನಲ್ಲಿ ಅಡುಗೆ ಸೋಡಾ ಮಿಕ್ಸ್ ಮಾಡಿ. ಮತ್ತು ಬ್ರಷ್ ಮಾಡಿದ ನಂತರ ಈ ದ್ರಾವಣದಿಂದ ನಿಮ್ಮ ಹಲ್ಲುಗಳನ್ನು ತೊಳೆಯಿರಿ. ಇದರಿಂದ ಹಲ್ಲುಗಳು ಹೊಳೆಯುತ್ತದೆ. 
 

ದಾಲ್ಚಿನ್ನಿ ಮತ್ತು ಲವಂಗದ(Clove) ಎಣ್ಣೆ - ನೋವು ಮತ್ತು ವಾಸನೆ ದೂರ ಮಾಡಲು ಸಹಾಯ ಮಾಡುತ್ತೆ 
ಲವಂಗ ಮತ್ತು ದಾಲ್ಚಿನ್ನಿ ಎಣ್ಣೆ ಉಸಿರಾಟ ತಾಜಾವಾಗಿಡಲು ಮತ್ತು ಉಳುಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತೆ. ಲವಂಗವು ಆಂಟಿಆಕ್ಸಿಡೆಂಟ್ ಗುಣಲಕ್ಷಣ ಹೊಂದಿದೆ. ಇದು ಹಲ್ಲುನೋವಿನೊಂದಿಗೆ ಬಾಯಿಯ ದುರ್ವಾಸನೆ ನಿವಾರಿಸುವ ಕೆಲಸ ಮಾಡುತ್ತೆ. ದಾಲ್ಚಿನ್ನಿ ಸ್ಟ್ರೆಪ್ಟೋಕಾಕಸ್ ಮ್ಯೂಟಾನ್ಸ್ ಎಂಬ ಬ್ಯಾಕ್ಟೀರಿಯಾದಿಂದ ಮತ್ತು ಓರೋಫೇಸಿಯಲ್ ಸ್ಥಿತಿಯಿಂದ ನಿಮ್ಮ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳುತ್ತೆ.

ಇದನ್ನು ತಯಾರಿಸಲು ಏನೆಲ್ಲಾ ಸಾಮಾಗ್ರಿಗಳು ಬೇಕು?
1 ಕಪ್ ಶುದ್ಧ ನೀರು
10 ಹನಿ ದಾಲ್ಚಿನ್ನಿ ಎಣ್ಣೆ
10 ಹನಿ ಲವಂಗದ ಎಣ್ಣೆ.

ಬಳಸೋದು ಹೇಗೆ?
ಎಲ್ಲಾ ಸಾಮಾಗ್ರಿ ಒಟ್ಟಿಗೆ ಮಿಶ್ರಣ ಮಾಡಿ. ಈ ತಯಾರಿಸಿದ ಮಿಶ್ರಣವನ್ನು ನೀವು ಸಂಗ್ರಹಿಸಬಹುದು. ಪ್ರತಿದಿನ ಇದನ್ನು ಹಲ್ಲುಗಳಿಗೆ ಹಚ್ಚಿ ಮತ್ತು ನೀರಿನಿಂದ ತೊಳೆಯಿರಿ. ಇದರಿಂದ ಹಲ್ಲು ನೋವು ನಿವಾರಣೆಯಾಗುತ್ತೆ.
 

click me!