ಈ 6 ವಸ್ತುಗಳನ್ನು ರಾತ್ರಿ ನೀರಲ್ಲಿ ಹಾಕಿ ಬೆಳಿಗ್ಗೆ ಕುಡಿದ್ರೆ ರೋಗ ದೂರ

First Published Jul 5, 2022, 6:34 PM IST

ಜನ ರಾತ್ರಿಯಲ್ಲಿ ಬಾದಾಮಿ (almond) ನೆನೆಸಿ ಬೆಳಿಗ್ಗೆ ಮಕ್ಕಳಿಗೆ ನೀಡುತ್ತಾರೆ, ಇದರಿಂದ ಅವರ ಮೆದುಳು ತೀಕ್ಷ್ಣವಾಗಿರುತ್ತದೆ. ಆದರೆ ಬಾದಾಮಿ ಮಾತ್ರವಲ್ಲ, ಕೆಲವು ಆಹಾರಗಳನ್ನು ಸೇವಿಸೋದ್ರಿಂದ ಆರೋಗ್ಯ ಉತ್ತಮವಾಗುತ್ತೆ ಅನ್ನೋದು ನಿಮಗೆ ಗೊತ್ತಾ? ನೀವು ಅವುಗಳನ್ನು ರಾತ್ರಿಯಲ್ಲಿ ನೆನೆಸಿ ಬೆಳಿಗ್ಗೆ ಸೇವಿಸಿದ್ರೆ, ಅನೇಕ ರೋಗಗಳು ದೂರಾಗುತ್ತೆ. 

ಹೌದು, ನಮ್ಮ ಅಡುಗೆಮನೆಯಲ್ಲಿ ಕೆಲವು ಆಹಾರಗಳಿವೆ, ಅವುಗಳನ್ನು ನೀರಿನಲ್ಲಿ ನೆನೆಸಿದ ನಂತರ ಹೆಚ್ಚು ಪ್ರಯೋಜನ ಸಿಗುತ್ತೆ ಮತ್ತು ಅವುಗಳನ್ನು ಸೇವಿಸೋದ್ರಿಂದ ಅನೇಕ ರೋಗಗಳನ್ನು ಸಹ ದೂರ ಮಾಡಬಹುದು. ಇಂದು ನಾವು ನಿಮಗೆ ಕೆಲವು ಆಹಾರಗಳ ಬಗ್ಗೆ ಮಾಹಿತಿ ನೀಡುತ್ತೇವೆ. ಇವುಗಳನ್ನು ನೀರಿನಲ್ಲಿ ನೆನೆಸಿ ಸೇವನೆ ಮಡೊದ್ರಿಂದ ಉತ್ತಮ ಆರೋಗ್ಯ (health) ನಿಮ್ಮದಾಗಲು ಸಹಾಯ ಮಾಡುತ್ತೆ. 
 

ಮಲಬದ್ಧತೆ
ನೀವು ಹೊಟ್ಟೆನೋವಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಮತ್ತು ನಿಮಗೆ ಜೀರ್ಣಕಾರಿ ಸಮಸ್ಯೆಗಳು ಇದ್ದರೆ ಅಥವಾ ಮಲಬದ್ಧತೆ (constipation) ಸಮಸ್ಯೆ ಇದ್ದರೆ, ನೀವು ರಾತ್ರಿಯಲ್ಲಿ ಎರಡು ಅಂಜೂರವನ್ನು ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಸೇವಿಸಬೇಕು. ಇದು ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಬಹುದು.

ಇರೆಗ್ಯುಲರ್ ಪಿರಿಯಡ್ಸ್ 
ನೀವು ಇರೆಗ್ಯುಲರ್ ಪಿರಿಯಡ್ಸ್ (irregular periods) ಸಮಸ್ಯೆಯಿಂದ ಬಳಲುತ್ತಿದ್ದರೆ, ಋತುಚಕ್ರದ ಸಮಯದಲ್ಲಿ ನಿಮಗೆ ಸಾಕಷ್ಟು ನೋವು ಇದ್ದರೆ, ಅಲ್ಲದೇ ಪಿಸಿಒಎಸ್ ಸಮಸ್ಯೆ ಇದ್ದರೆ ಅಥವಾ ಈ ಪಿರಿಯಡ್ಸ್ ಸಮಯದಲ್ಲಿ  ಹೆಚ್ಚು ರಕ್ತಸ್ರಾವವಾಗುತ್ತಿದ್ದರೆ ನೀವು ರಾತ್ರಿ 8 ರಿಂದ 10 ಒಣದ್ರಾಕ್ಷಿಗಳನ್ನು ನೀರಿನಲ್ಲಿ ಹಾಕಿ, ಬೆಳಿಗ್ಗೆ ಅದರ ನೀರಿನೊಂದಿಗೆ ನೆನೆಸಿದ ಒಣದ್ರಾಕ್ಷಿಗಳನ್ನು ಸೇವಿಸಬೇಕು. ಇದು ಋತುಚಕ್ರಕ್ಕೆ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆಯನ್ನು ನಿವಾರಿಸುತ್ತದೆ.

ಮಧುಮೇಹ 
ನೀವು ಮಧುಮೇಹಿ (diabetes) ರೋಗಿಯಾಗಿದ್ದರೆ ಮತ್ತು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಬಯಸಿದರೆ, ಮೆಂತ್ಯ ಬೀಜಗಳನ್ನು ರಾತ್ರಿಯಲ್ಲಿ ನೀರಿನಲ್ಲಿ ನೆನೆಸಿ ಮತ್ತು ಬೆಳಿಗ್ಗೆ ಈ ನೀರು ಮತ್ತು ಮೆಂತ್ಯೆ ಬೀಜಗಳನ್ನು ಸೇವಿಸಿ. ಇದು ನಿಮ್ಮ ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಸರಿಯಾಗಿರಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಯ್ದುಕೊಳ್ಳುತ್ತದೆ.

ಕೂದಲು ಉದುರುವಿಕೆ 
ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಜನರು ಕೂದಲು ಉದುರುವಿಕೆಯ (hair fall) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದಕ್ಕಾಗಿ 8 ರಿಂದ 10 ಕರಿಬೇವಿನ ಎಲೆಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಈ ನೀರನ್ನು ಸೇವಿಸಬೇಕು. ಇದು ಕೂದಲು ಉದುರುವುದನ್ನು ತಡೆಯುತ್ತದೆ ಮತ್ತು ಇದು ಕೂದಲನ್ನು ಬಲಪಡಿಸುತ್ತದೆ.

ಜೀರ್ಣಕ್ರಿಯೆ ಸಮಸ್ಯೆಗಳು 
ನೀವು ಜೀರ್ಣಕಾರಿ ಸಮಸ್ಯೆಗಳನ್ನು ಹೊಂದಿದ್ದರೆ ಮತ್ತು ಆಹಾರವು ಸರಿಯಾಗಿ ಜೀರ್ಣವಾಗದಿದ್ದರೆ, ಅಸಿಡಿಟಿ (acidity), ವಾಕರಿಕೆ ಮತ್ತು ವಾಂತಿಯಂತಹ ಸಮಸ್ಯೆ ಇದ್ದರೆ, ನೀವು ರಾತ್ರಿಯಲ್ಲಿ ಅಜ್ವೈನ್, ಜೀರಿಗೆ ಮತ್ತು ಸೋಂಪು ಸಮಪ್ರಮಾಣದಲ್ಲಿ ಮಿಕ್ಸ್ ಮಾಡಿ ಮತ್ತು ಅವುಗಳನ್ನು ಒಂದು ಲೋಟ ನೀರಿನಲ್ಲಿ ಕರಗಿಸಿ ಮತ್ತು ಬೆಳಿಗ್ಗೆ ಈ ನೀರನ್ನು ಸೇವಿಸಿ. ಇದು ಎಲ್ಲಾ ಜೀರ್ಣಕಾರಿ ಸಮಸ್ಯೆಗಳನ್ನು ತೆಗೆದುಹಾಕುತ್ತದೆ. ಇದು ತೂಕ ಇಳಿಸಿಕೊಳ್ಳಲು ಸಹ ಸಹಾಯ ಮಾಡುತ್ತದೆ.

ಚರ್ಮ ಮತ್ತು ಕೂದಲು 
ಕೂದಲು ಸುಂದರವಾಗಿರಬೇಕೆಂದು ಮತ್ತು ಚರ್ಮವು ಕಳಂಕರಹಿತವಾಗಿರಬೇಕೆಂದು ಎಲ್ಲರೂ ಬಯಸುತ್ತಾರೆ. ಇದಕ್ಕಾಗಿ, ನೀವು ಸ್ವಲ್ಪ ಕಪ್ಪು ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿಡಿ ಮತ್ತು ಬೆಳಿಗ್ಗೆ, ಈ ನೀರು ಮತ್ತು ಒಣದ್ರಾಕ್ಷಿಗಳನ್ನು ಸ್ವಲ್ಪ ಉಗುರುಬೆಚ್ಚಗಿನ ನೀರು ಸೇರಿಸಿ ಸೇವಿಸಿ.  ಇದು ನಿಮ್ಮ ಚರ್ಮ ಮತ್ತು ಕೂದಲಿಗೆ ಪ್ರಯೋಜನಕಾರಿಯಾಗಿದೆ.

click me!