ಟೂತ್‌ಪೇಸ್ಟ್‌ನಿಂದಾಗಿ 6 ಬಾರಿ ಗರ್ಭಪಾತ... ಮಗುವಿನ ಜೀವಕ್ಕೆ ಮಾರಕವಾಯ್ತು ಮಹಿಳೆಯ ಈ ಅಭ್ಯಾಸ!

Published : Nov 12, 2025, 12:28 PM IST

Pregnancy Health: ಗರ್ಭಾವಸ್ಥೆಯಲ್ಲಿ ಗಮನಹರಿಸಬೇಕಾದ ಹಲವು ವಿಷಯಗಳಿವೆ. ಆದರೆ ಟೂತ್‌ಪೇಸ್ಟ್ ಬಳಕೆ ಕೂಡ ಗರ್ಭಪಾತಕ್ಕೆ ಕಾರಣವಾಗಬಹುದೆಂದು ಎಂದಾದರೂ ಯೋಚಿಸಿದ್ದೀರಾ?. ಹೌದು. ಡಾ. ಕ್ರಿಸ್ಟಬೆಲ್ ಅಕಿನೋಲಾ ಇದೇ ವಿಚಾರಕ್ಕೆ ಮಹಿಳೆಯೊಬ್ಬರು ಮಗುವನ್ನ ಕಳೆದುಕೊಂಡಿದ್ದಾರೆ ಎಂದು ರಿವೀಲ್ ಮಾಡಿದ್ದಾರೆ.  

PREV
16
ಸಾಮಾನ್ಯ ಪದಾರ್ಥಗಳೂ ದೇಹಕ್ಕೆ ಅಪಾಯಕಾರಿ

ವೈದ್ಯಕೀಯ ಲೋಕವೇ ಚಿಂತಿಸುವಂತಹ ಪ್ರಕರಣ ಬೆಳಕಿಗೆ ಬಂದಿದೆ. ಪೌಷ್ಟಿಕತಜ್ಞೆ ಮತ್ತು ಮಹಿಳಾ ಆರೋಗ್ಯ ತಜ್ಞೆ ಡಾ. ಕ್ರಿಸ್ಟಬೆಲ್ ಅಕಿನೋಲಾ ನಾವು ಏನೂ ಯೋಚನೆ ಮಾಡದೆ ಬಳಸುವ ಟೂತ್‌ಪೇಸ್ಟ್‌ನಿಂದಾಗಿ ಮಹಿಳೆಯೊಬ್ಬರು ಮಗುವನ್ನ ಕಳೆದುಕೊಂಡಿದ್ದಾರೆ ಎಂದು ರಿವೀಲ್ ಮಾಡಿದ್ದಾರೆ. ಈ ಘಟನೆಯು ಕೆಲವೊಮ್ಮೆ ಸಾಮಾನ್ಯವೆಂದು ತೋರುವ ಪದಾರ್ಥಗಳು ಸಹ ದೇಹಕ್ಕೆ ಅಪಾಯಕಾರಿ ಎಂದು ತೋರಿಸುತ್ತದೆ.

26
ಸೈಲೆಂಟ್ ಪಾಯಿಸನ್

ದಿನಕ್ಕೆ ಎರಡು ಬಾರಿ ಹಲ್ಲುಜ್ಜುವ ಅಭ್ಯಾಸ ಆ ಮಹಿಳೆಗೆ ಮಾರಕವೆಂದು ಸಾಬೀತಾಯಿತು. ಆರು ಗರ್ಭಪಾತಗಳ ನಂತರ ಕಾರಣ ರೋಗವಲ್ಲ, ಬದಲಿಗೆ ಟೂತ್‌ಪೇಸ್ಟ್‌ನಲ್ಲಿರುವ "ಸೈಲೆಂಟ್ ಪಾಯಿಸನ್" ಟ್ರೈಕ್ಲೋಸನ್ ಎಂದು ಕಂಡುಹಿಡಿಯಲಾಯಿತು.

36
ಪುನರಾವರ್ತಿತ ಗರ್ಭಪಾತಕ್ಕೆ ಕಾರಣ

ವೈದ್ಯರ ಪ್ರಕಾರ, ಟ್ರೈಕ್ಲೋಸನ್ ದೇಹದ ಹಾರ್ಮೋನುಗಳಿಗೆ ಅಡ್ಡಿಪಡಿಸುವ ರಾಸಾಯನಿಕವಾಗಿದೆ. ಇದು ನಿರ್ದಿಷ್ಟವಾಗಿ ಗರ್ಭಧಾರಣೆಯನ್ನು ಕಾಪಾಡಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ಹಾರ್ಮೋನ್ ಪ್ರೊಜೆಸ್ಟರಾನ್ ಮೇಲೆ ಪರಿಣಾಮ ಬೀರುತ್ತದೆ. ಪ್ರೊಜೆಸ್ಟರಾನ್ ಮಟ್ಟಗಳು ಕಡಿಮೆಯಾದಾಗ ಗರ್ಭಾಶಯದ ಒಳಪದರವು ದುರ್ಬಲಗೊಳ್ಳುತ್ತದೆ. ಇದು ಗರ್ಭಧಾರಣೆಯ ಆರಂಭಿಕ ಹಂತಗಳಲ್ಲಿ ಭ್ರೂಣವು ಬದುಕಲು ಕಷ್ಟವಾಗುತ್ತದೆ. ಇದು ಪುನರಾವರ್ತಿತ ಗರ್ಭಪಾತಗಳಿಗೆ ಕಾರಣವಾಗಬಹುದು. 

46
ಸಂಶೋಧನೆ ಹೇಳಿದ್ದೇನು?

ಟ್ರೈಕ್ಲೋಸನ್ ಗರ್ಭಪಾತಕ್ಕೆ ಮಾತ್ರವಲ್ಲ, ಪುರುಷರು ಮತ್ತು ಮಹಿಳೆಯರಲ್ಲಿ ಬಂಜೆತನ, ಥೈರಾಯ್ಡ್ ಸಮಸ್ಯೆಗಳು, ಮಕ್ಕಳಲ್ಲಿ ಆರಂಭಿಕ ಪ್ರೌಢಾವಸ್ಥೆ, ಅಲರ್ಜಿಗಳು, ಅಸ್ತಮಾ ಮತ್ತು ಮೆದುಳಿಗೆ ಹಾನಿ ಉಂಟುಮಾಡಬಹುದು. ಈ ರಾಸಾಯನಿಕವು ದೇಹದ ಹಾರ್ಮೋನುಗಳ ವ್ಯವಸ್ಥೆಯನ್ನು ಅಡ್ಡಿಪಡಿಸುತ್ತದೆ ಮತ್ತು ದೀರ್ಘಾವಧಿಯ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ ಎಂದು ಸಂಶೋಧನೆ ಸೂಚಿಸುತ್ತದೆ.

56
ಟೂತ್‌ಪೇಸ್ಟ್ ಆರೋಗ್ಯಕ್ಕೆ ಹಾನಿಕಾರಕ

ಟ್ರೈಕ್ಲೋಸನ್ ಅನ್ನು ಈಗ ಪ್ರಪಂಚದಾದ್ಯಂತ ಅನೇಕ ದೇಶಗಳಲ್ಲಿ ನಿಷೇಧಿಸಲಾಗಿದೆ. ಆದರೆ ಕೆಲವು ಸ್ಥಳಗಳಲ್ಲಿ ಇದು ಇನ್ನೂ "ಬ್ಯಾಕ್ಟೀರಿಯಾ ವಿರೋಧಿ" ಅಥವಾ "ಮಲ್ಟಿ-ಕೇರ್" ಉತ್ಪನ್ನಗಳಾದ ಟೂತ್‌ಪೇಸ್ಟ್, ಸೋಪ್ ಮತ್ತು ಹ್ಯಾಂಡ್‌ವಾಶ್‌ಗಳಲ್ಲಿ ಕಂಡುಬರುತ್ತದೆ. ಹೆಚ್ಚಿನ ಜನರು ಅದರಲ್ಲಿರುವ ಪದಾರ್ಥಗಳನ್ನು ಓದುವುದಿಲ್ಲ ಮತ್ತು ತಿಳಿಯದೆಯೇ ಈ ರಾಸಾಯನಿಕವನ್ನು ಪ್ರತಿದಿನ ಬಳಸುತ್ತಾರೆ. ಇದು ಭ್ರೂಣ ಮತ್ತು ಮಗುವಿನ ಆರೋಗ್ಯಕ್ಕೆ ಅಪಾಯಕಾರಿ.

66
ಹಾಗಾದ್ರೆ ಏನ್ ಮಾಡ್ಬೇಕು?

*ನಿಮ್ಮ ಟೂತ್‌ಪೇಸ್ಟ್ ಮತ್ತು ಸೋಪಿನ ಮೇಲಿನ ಲೇಬಲ್‌ಗಳನ್ನು ಎಚ್ಚರಿಕೆಯಿಂದ ಓದಿ. ಅವುಗಳಲ್ಲಿ ಟ್ರೈಕ್ಲೋಸನ್ ಇದ್ದರೆ ತಕ್ಷಣವೇ ಬದಲಾಯಿಸಿ.
*"ಟ್ರೈಕ್ಲೋಸನ್-ಮುಕ್ತ" ಅಥವಾ "ನೈಸರ್ಗಿಕ" ಎಂದು ಹೇಳುವ ಉತ್ಪನ್ನಗಳನ್ನು ಆಯ್ಕೆ ಮಾಡಿಕೊಳ್ಳಿ.
*"ಆಂಟಿ-ಬ್ಯಾಕ್ಟೀರಿಯಲ್" ಅಥವಾ "ಮಲ್ಟಿ-ಕೇರ್" ಟ್ಯಾಗ್‌ಗಳೊಂದಿಗೆ ಉತ್ಪನ್ನಗಳನ್ನು ಖರೀದಿಸುವ ಮೊದಲು ಪದಾರ್ಥಗಳನ್ನು ಪರಿಶೀಲಿಸಿ.
*ವಿನೆಗರ್, ಅಡುಗೆ ಸೋಡಾ ಅಥವಾ ನಿಂಬೆ ಆಧಾರಿತ ಕ್ಲೀನರ್‌ಗಳಂತಹ ನ್ಯಾಚುರಲ್ ಕ್ಲೀನರ್ ಆಯ್ಕೆಗಳನ್ನು ಆರಿಸಿಕೊಳ್ಳಿ.

Read more Photos on
click me!

Recommended Stories