ಚಳಿ ಜಾಸ್ತಿ ಅಂತ ವಿಪರೀತ ಟೀ, ಕಾಫಿ ಕುಡೀತೀರಾ? ಒಮ್ಮೆ ಈ ಸುದ್ದಿ ಓದಿ ಬಿಡಿ

Published : Jan 07, 2026, 11:27 AM IST

Winter Tea Coffee Habits: ನಮ್ಮಲ್ಲಿ ಹೆಚ್ಚಿನವರು ಸದಾ ಟೀ ಅಥವಾ ಕಾಫಿ ಕುಡಿಯುತ್ತಲೇ ಇರುತ್ತಾರೆ. ಹಾಲಿನ ಚಹಾ, ಕಪ್ಪು ಚಹಾ, ಪುದೀನಾ ಚಹಾ, ಶುಂಠಿ ಚಹಾ ಹೀಗೆ ಹಲವಾರು ಬಗೆಯ ಚಹಾಗಳಿವೆ. ಏನಾದರೂ ಒಂದು ನೆಪ ಹೇಳಿ ಇದನ್ನು ಕುಡಿಯುತ್ತಲೇ ಇರುತ್ತಾರೆ. ಇದು ಒಳ್ಳೇದಾ?.  

PREV
16
ಕೆಲವು ಆರೋಗ್ಯ ಸಮಸ್ಯೆ ಬರ್ಬೋದು

ಚಹಾ  ಅಥವಾ ಟೀ ಆರೋಗ್ಯಕ್ಕೆ ಒಳ್ಳೆಯದೇನೋ ಹೌದೂ. ಆದರೆ ಕೆಲವು ಆರೋಗ್ಯ ಸಮಸ್ಯೆಗಳಿಗೂ ಆಗಬಹುದು ಕಾರಣ ಎನ್ನುತ್ತವೆ ಅಧ್ಯಯನಗಳು. ನಿಯಮಿತವಾಗಿ ಚಹಾ ಕುಡಿಯುವುದರಿಂದ ಹೃದ್ರೋಗ, ಪಾರ್ಶ್ವವಾಯು ಮತ್ತು ಟೈಪ್ 2 ಮಧುಮೇಹದ ಅಪಾಯ ಕಡಿಮೆಯಾಗುತ್ತದೆ. ಆದರೂ ಮುಖ್ಯವಾಗಿ ಸೇವಿಸುವ ಚಹಾದ ಪ್ರಕಾರ ಮತ್ತು ಪ್ರಮಾಣವನ್ನು ಟೀ ಉಪಯೋಗ ಅವಲಂಬಿಸಿರುತ್ತದೆ.

26
ಚಹಾದಲ್ಲಿ ಏನಿದೆ?

ಚಹಾದಲ್ಲಿ ಫ್ಲೇವನಾಯ್ಡ್‌ಗಳು ಮತ್ತು ಕ್ಯಾಟೆಚಿನ್‌ಗಳಿವೆ. ಇವು ಆಕ್ಸಿಡೇಟಿವ್ ಒತ್ತಡದ ವಿರುದ್ಧ ಹೋರಾಡಲು ಎರಡು ಪ್ರಬಲ ಉತ್ಕರ್ಷಣ ನಿರೋಧಕಗಳಾಗಿವೆ. ಇದು ಕೆಲವು ರೀತಿಯ ಕ್ಯಾನ್ಸರ್ ಅಪಾಯವನ್ನೂ ಕಡಿಮೆ ಮಾಡಬಹುದು.

36
ಚಹಾದ ಉಪಯೋಗಗಳು

ಶುಂಠಿ ಅಥವಾ ಪುದೀನಾದಂತಹ ಗಿಡಮೂಲಿಕೆಗಳು ಅಜೀರ್ಣವನ್ನು ನಿವಾರಿಸಬಲ್ದು. ದೇಹದ ನೈಸರ್ಗಿಕ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಜೊತೆಗೆ, ಶೀತ ಮತ್ತು ಜ್ವರವಿದ್ದರೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಲವು ಚಹಾಗಳು ಸಹಕರಿಸುತ್ತವೆ.

46
ಅತಿಯಾಗಿ ಸೇವಿಸಿದರೆ...

ಆದರೆ ಅತಿಯಾಗಿ ಸೇವಿಸಿದರೆ ಅಮೃತವೂ ವಿಷವೆಂಬುವಂತೆ, ಸಮಸ್ಯೆ ಇದೆ. ಚಹಾದಲ್ಲಿರುವ ಟ್ಯಾನಿನ್‌ಗಳು ದೇಹ ಕಬ್ಬಿಣಾಂಶವನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ. ಇದು ರಕ್ತಹೀನತೆ ಇರುವವರಲ್ಲಿ ಅಪಾಯ ಹೆಚ್ಚಿಸಬಲ್ಲದು. ಹೆಚ್ಚಿನ ಕೆಫೀನ್ ಸೇವನೆ (ದಿನಕ್ಕೆ 400 ಮಿಗ್ರಾಂ ಗಿಂತ ಹೆಚ್ಚು) ಮೆಲಟೋನಿನ್ ಉತ್ಪಾದನೆಗೆ ಅಡ್ಡಿಪಡಿಸುತ್ತದೆ. ನಿದ್ರೆಯ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಚಡಪಡಿಕೆ, ಹೃದಯ ಬಡಿತವನ್ನೂ ಹೆಚ್ಚಿಸುತ್ತದೆ.

56
ಖಾಲಿ ಹೊಟ್ಟೆಯಲ್ಲಿ ಕುಡಿದಾಗ..

ಖಾಲಿ ಹೊಟ್ಟೆಯಲ್ಲಿ  ಚಹಾ ಕುಡಿಯುವುದು ವಾಕರಿಕೆ ಅಥವಾ ಆಸಿಡ್ ರಿಫ್ಲಕ್ಸ್‌ಗೆ ಕಾರಣವಾಗಬಹುದು. ಕೆಲವು ವ್ಯಕ್ತಿಗಳಲ್ಲಿ ಇದು ತಲೆತಿರುಗುವಿಕೆಗೂ ಕಾರಣವಾಗಬಹುದು. ಕಾಲಾನಂತರದಲ್ಲಿ, ಟ್ಯಾನಿನ್‌ಗಳು ಹಲ್ಲಿನ ದಂತಕವಚದ ಮೇಲೆ ಪರಿಣಾಮ ಬೀರಬಹುದು.  

66
ಗರ್ಭಿಣಿಯರು ಕುಡಿಬೋದಾ?

ಸಾಮಾನ್ಯವಾಗಿ, ದಿನಕ್ಕೆ ಸುಮಾರು 3 ರಿಂದ 4 ಕಪ್ ಚಹಾ ಕುಡಿಯುವುದು ಹೆಚ್ಚಿನ ಜನರಿಗೆ ಸುರಕ್ಷಿತ ಎನ್ನಬಹುದು. ಆದಾಗ್ಯೂ, ಕೆಲವರು ಕೆಫೀನ್‌ಗೆ ಸೂಕ್ಷ್ಮವಾಗಿದ್ದರೆ ಅಥವಾ ಕೆಲವು ಆರೋಗ್ಯ ಸಮಸ್ಯೆಗಳಿದ್ದರೆ ಅದನ್ನು ಕಡಿಮೆ ಮಾಡಬೇಕಾಗಬಹುದು. ಗರ್ಭಿಣಿಯರು 2 ಕಪ್‌ಗಿಂತ (200 ಮಿಗ್ರಾಂ ಕೆಫೀನ್) ಹೆಚ್ಚು ಕುಡಿಯಬಾರದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories