ನೀವು ದೀರ್ಘಾಯುವಾಗಿ, ಆರೋಗ್ಯದಿಂದಿರಬೆಕು ಅಂದ್ರೆ 30ರ ನಂತ್ರ ಇವುಗಳನ್ನ ಸೇವಿಸಿ

Published : May 03, 2025, 04:45 PM ISTUpdated : May 05, 2025, 12:05 PM IST

ನೀವು ಆರೋಗ್ಯದಿಂದ ಇರಬೇಕು, ನೀವು ದೀರ್ಘಕಾಲದವರೆಗೂ ಬದುಕಬೇಕು ಅಂದ್ರೆ, ಮೂವತ್ತು ವಯಸ್ಸು ಕಳೆದ ಬಳಿಕ ಈ ಆಹಾರ ಸೇವಿಸಿ.   

PREV
17
ನೀವು ದೀರ್ಘಾಯುವಾಗಿ, ಆರೋಗ್ಯದಿಂದಿರಬೆಕು ಅಂದ್ರೆ 30ರ ನಂತ್ರ ಇವುಗಳನ್ನ ಸೇವಿಸಿ

ವಯಸ್ಸು 30 ಆದ ಬಳಿಕ ಆರೋಗ್ಯ ನಿಧಾನವಾಗಿ ಕ್ಷೀಣಿಸುತ್ತಾ ಬರುತ್ತೆ, ಒಂದಲ್ಲ ಒಂದು ಆರೋಗ್ಯ ಸಮಸ್ಯೆಗಳು (health issues) ನಮ್ಮನ್ನು ಕಾಡೋದಕ್ಕೆ ಶುರು ಮಾಡುತ್ತೆ, ಅದರಲ್ಲೂ ಮಹಿಳೆಯರು ಹೆಚ್ಚಿನ ಸಮಸ್ಯೆಯನ್ನು ಹೊಂದುತ್ತಾರೆ. ಇಂತಹ ಸಂದರ್ಭಗಳಲ್ಲಿ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾದಂತಹ ಪೋಷಕಾಂಶಗಳನ್ನು ತಿನ್ನೋದು ತುಂಬಾನೆ ಮುಖ್ಯ. ಅವುಗಳ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ. 

27

ಮಲ್ಟಿವಿಟಾಮಿನ್ಸ್ (Multivitamins): 
ಇದು ಬ್ಯುಸಿ ಶೆಡ್ಯೂಲ್ ಇರುವವರಿಗೆ, ಸರಿಯಾಗಿ ಆಹರ ತಿನ್ನೋದಕ್ಕೆ ಸಾಧ್ಯವಾಗದೇ ಇರುವವರಿಗೆ ಅಗತ್ಯವಾಗಿ ಬೇಕಾದಂತಹ ಸಪ್ಲಿಮೆಂಟ್. ಹಾಗಾಗಿ ವಿಟಾಮಿನ್ ಬಿ, ಝಿಂಕ್, ಐರನ್ ಇರುವಂತಹ ಉತ್ತಮ ಕ್ವಾಲಿಟಿಯ ಸಪ್ಲಿಮೆಂಟ್ಸ್ ತಿನ್ನೋದು ಉತ್ತಮ. 

37

ವಿಟಮಿನ್ ಸಿ  (Vitamin C): 
ಇಮ್ಯೂನಿಟಿ ಪವರ್ ಹೆಚ್ಚಿಸುವಂತಹ ವಿಟಮಿನ್ ಇದು. ತುಂಬಾನೆ ಒತ್ತಡ, ಸರಿಯಾಗಿ ನಿದ್ರೆ ಮಾಡದೇ ಇರೋದು, ಮಾಲಿನ್ಯಕ್ಕೆ ನಿಮ್ಮನ್ನು ಒಡ್ಡಿದಂತಹ ಸಂದರ್ಭದಲ್ಲಿ ಇದು ಅಗತ್ಯವಾಗಿ ಬೇಕಾಗುತ್ತೆ. ವಿಟಮಿನ್ ಸಿ ಚರ್ಮದ ಆರೋಗ್ಯ, ಇಮ್ಯೂನಿಟಿ ಪವರ್ ಹೆಚ್ಚಿಸಲು ಅತ್ಯಗತ್ಯ. ವಿಟಮಿನ್ ಸಿ ಅಂದ್ರೆ, ಸಿಟ್ರಸ್ ಹಣ್ಣುಗಳು ಬರುತ್ತವೆ.

47

ಕ್ಯಾಲ್ಸಿಯಂ (Calcium): 
ಮೂಳೆಗಳ ಆರೋಗ್ಯಕ್ಕೆ ಕ್ಯಾಲ್ಸಿಯಂ ಅತ್ಯಗತ್ಯ. ಕ್ಯಾಲ್ಸಿಯಂ ಇಲ್ಲದೇ ಇದ್ದರೆ ಮೂಳೆಗಳು ವೀಕ್ ಆಗುತ್ತಾ ಹೋಗುತ್ತೆ. ಮುಖ್ಯವಾಗಿ ಮಹಿಳೆಯರು ಕ್ಯಾಲ್ಶಿಯಂ ಪೂರಕ ಸೇವನೆ ಮಾಡಬೇಕು. ಅದರ ಬದಲು ನೀವು ಹಾಲು, ಮೊಸರು, ಚೀಸ್ ಮತ್ತು ಹಸಿರು ತರಕಾರಿಗಳಾದ ಬ್ರಾಕೋಲಿ ಮತ್ತು ಪಾಲಕ್ ಸಹ ಸೇವಿಸಬಹುದು.  ಕ್ಯಾಲ್ಸಿಯಂ ಮೂಳೆಗಳ ಸಾಂದ್ರತೆ ಹೆಚ್ಚಿಸುವುದಲ್ಲದೇ, ಆಸ್ಟಿಯೊಪೊರೋಸಿಸ್‌ನಂತಹ ಸಮಸ್ಯೆಗಳನ್ನು ತಡೆಗಟ್ಟುತ್ತದೆ. 

57

ವಿಟಮಿನ್ ಡಿ (Vitamin D) :
ವಿಟಮಿನ್ ಡಿ ಕೂಡ ದೇಹಕ್ಕೆ ಅತ್ಯಗತ್ಯವಾದ ಸಪ್ಲಿಮೆಂಟ್. ಮೀನು (ಸಾಲ್ಮನ್, ಮ್ಯಾಕೆರೆಲ್), ಮೊಟ್ಟೆಯ ಹಳದಿ ಭಾಗ ಮತ್ತು ಸೂರ್ಯನ ಬೆಳಕಿನಲ್ಲಿ ಸಮಯ ಕಳೆಯುವುದು ವಿಟಮಿನ್ ಡಿ ಪೂರೈಕೆಗೆ ಸಹಾಯ ಮಾಡುತ್ತೆ.  ವಿಟಮಿನ್ ಡಿ ಮೂಳೆಗಳನ್ನು ಬಲಪಡಿಸುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

67

ಪ್ರೊಟೀನ್ (Protein): 
30ರ ನಂತರ ಮೂಳೆಗಳು ಗಟ್ಟಿಯಾಗಿದ್ರೆ ಮಾತ್ರ ನಾವು ಗಟ್ಟಿಯಾಗಿರೋದಕ್ಕೆ ಸಾಧ್ಯ. ಮೂಳೆಗಳ ರಚನೆ ಮತ್ತು ದುರಸ್ತಿಗೆ ಪ್ರೊಟೀನ್ ಮುಖ್ಯವಾಗಿದೆ. ಮೂಳೆಗಳು ಸ್ಟ್ರಾಂಗ್ ಆಗಿರಬೇಕು, ದೇಹಕ್ಕೆ ಶಕ್ತಿ ಬೇಕು ಅಂತಾದ್ರೆ ಪ್ರೊಟೀನ್ ಪೂರಕ ಸೇವಿಸಿ. ಇಲ್ಲವೇ, ಬೀನ್ಸ್, ಲೆಂಟಿಲ್, ಬಾದಾಮಿ ಮತ್ತು ಮೊಳಕೆ ಕಾಳುಗಳನ್ನು ಸಹ ನೀವು ಸೇವಿಸಬಹುದು.

77

ಮೆಗ್ನೀಸಿಯಮ್ (Megnesium):
ಮೆಗ್ನೀಸಿಯಮ್ ಕೂಡ ಮೂಳೆಗಳ ಸಾಂದ್ರತೆಯನ್ನು ಹೆಚ್ಚಿಸೋದಕ್ಕೆ ಸಹಾಯ ಮಾಡುತ್ತೆ.  ಮೂಳೆಗಳು ಸ್ಟ್ರಾಂಗ್ ಆಗಿರಲು ನೀವು ಮೆಗ್ನೇಶಿಯಮ್ ಪೂರಕಗಳನ್ನು ಸೇವಿಸಬಹುದು, ಅಥವಾ  ಬಾದಾಮಿ, ಚಿಯಾ ಬೀಜಗಳು ಧಾನ್ಯಗಳು ಮತ್ತು ಚಾಕೊಲೇಟ್ ಕೂಡ ಸೇವಿಸಬಹುದು. 
 

Read more Photos on
click me!

Recommended Stories