ವಿರಾಟ್ ಕೊಹ್ಲಿ - ಅನುಷ್ಕಾ ಶರ್ಮಾ ಕುಡಿಯೋ ನೀರಿನ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ !

Published : May 01, 2025, 01:36 PM ISTUpdated : May 02, 2025, 11:56 AM IST

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಬ್ಬರೂ ಫಿಟ್ನೆಸ್ ವಿಷಯದಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಈ ಜೋಡಿ ಯಾವ ಬ್ರಾಂಡ್ ನೀರು ಕುಡಿಯುತ್ತಾರೆ. ಅದರ ಬೆಲೆ ಎಷ್ಟಿದೆ ಅನ್ನೋದನ್ನು ನೋಡೋಣ.   

PREV
14
ವಿರಾಟ್ ಕೊಹ್ಲಿ - ಅನುಷ್ಕಾ ಶರ್ಮಾ ಕುಡಿಯೋ ನೀರಿನ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ !

ವಿರಾಟ್ ಕೊಹ್ಲಿ ಈ ಜೆನೆರೇಶನ್ ನ ಅತ್ಯಂತ ಪ್ರತಿಭಾನ್ವಿತ ಭಾರತೀಯ ಕ್ರಿಕೆಟಿಗರಲ್ಲಿ ಒಬ್ಬರು ಮತ್ತು ಜನರು ಅವರನ್ನು ಕಿಂಗ್ ಕೊಹ್ಲಿ (King KOhli) ಅಂತಾನೆ ಕರೆಯುತ್ತಾರೆ. ವಿರಾಟ್ ಮೈದಾನದಲ್ಲಿ ತಮ್ಮ ಅದ್ಭುತವಾದ ಬ್ಯಾಟಿಂಗ್ ಮೂಲಕ ಜಗತ್ತನ್ನೆ ಸೆಳೆದಿದ್ದಾರೆ, ಮಾತ್ರವಲ್ಲದೆ, ಅವರ ಫಿಟ್ನೆಸ್ ನೋಡಿ ಅನೇಕ ಜನರು ಆಶ್ಚರ್ಯಚಕಿತರಾಗಿದ್ದಾರೆ. 36 ನೇ ವಯಸ್ಸಿನಲ್ಲಿಯೂ ಅವರು ಮೈದಾನದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ವಿರಾಟ್ ಅವರ ಫಿಟ್ನೆಸ್ ಬಗ್ಗೆ ಜನ ಯಾವಾಗಲೂ ಉತ್ಸುಕರಾಗಿರುತ್ತಾರೆ. ವಿರಾಟ್ ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳಲು ಹೆಚ್ಚಿನ ಗಮನ ನೀಡುತ್ತಾರೆ. ಹಾಗಾದರೆ ಅವರ ಫಿಟ್ನೆಸ್‌ನ ರಹಸ್ಯವೇನು (fitness secret) ಎಂದು ತಿಳಿಯೋಣ.
 

24

ವಿರಾಟ್-ಅನುಷ್ಕಾ ಯಾವ ನೀರನ್ನು ಕುಡಿಯುತ್ತಾರೆ ಗೊತ್ತಾ?
ವಿರಾಟ್  (Virat Kohli)ಮೈದಾನದಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಾರೆ ಮತ್ತು ಅದರ ಜೊತೆಗೆ ತಮ್ಮನ್ನು ತಾವು ಹೈಡ್ರೇಟ್ ಮಾಡೊದನ್ನು ಮರೆಯೋದಿಲ್ಲ. ಕೊಹ್ಲಿ ಬ್ಲ್ಯಾಕ್ ನೀರನ್ನು ಕುಡಿಯುತ್ತಾರೆ ಎಂಬ ಸುದ್ದಿ ಇದೆ, ಆದರೆ ಅದು ನಿಜವಲ್ಲ. ಈ ಹಿಂದೆ, ವಿರಾಟ್ ಕೊಹ್ಲಿ ಸಾಮಾನ್ಯವಾಗಿ ಕಪ್ಪು ನೀರನ್ನು ಕುಡಿಯುತ್ತಾರೆ ಏಕೆಂದರೆ ಅದರಲ್ಲಿ ಹೇರಳವಾದ ಖನಿಜಗಳಿವೆ ಎಂದು ಅನೇಕ ವರದಿಗಳು ಹೇಳಿದ್ದವು. ಆದಾಗ್ಯೂ, ಇತ್ತೀಚಿನ ಮಾಹಿತಿಯ ಪ್ರಕಾರ, ವಿರಾಟ್ ಏವಿಯನ್ ನ್ಯಾಚುರಲ್ ಸ್ಪ್ರಿಂಗ್ ವಾಟರ್ ಕುಡಿಯುತ್ತಾರೆ ಮತ್ತು ಅವರ ಪತ್ನಿ  ಅನುಷ್ಕಾ ಶರ್ಮಾ (Anushka Sharma) ಕೂಡ ಅದೇ ನೀರನ್ನು ತೆಗೆದುಕೊಳ್ಳುತ್ತಾರೆ ಎನ್ನಲಾಗಿದೆ.

34

ಇವಿಯನ್ ನ್ಯಾಚುರಲ್ ಸ್ಪ್ರಿಂಗ್ ವಾಟರ್
ವರದಿಗಳ ಪ್ರಕಾರ, ಇವಿಯನ್ ನ್ಯಾಚುರಲ್ ಸ್ಪ್ರಿಂಗ್ ವಾಟರ್ (natural spring water)ಅನ್ನು ಫ್ರಾನ್ಸ್‌ನ ಜಿನೀವಾ ಸರೋವರದ ಬಳಿಯ ಇವಿಯನ್-ಲೆಸ್-ಬೈನ್ಸ್ ಪ್ರದೇಶದಿಂದ ಪಡೆಯಲಾಗುತ್ತದೆ. ಇವಿಯನ್ ನ್ಯಾಚುರಲ್ ಸ್ಪ್ರಿಂಗ್ ವಾಟರ್ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲದಿದ್ದರೂ, ಇದು ಖನಿಜಗಳನ್ನು ಹೊಂದಿದೆ ಎನ್ನುವ ಮಾಹಿತಿ ಇದೆ.  ಹಾಗಾಗಿಯೇ ಇದನ್ನು ಕೊಹ್ಲಿ ಮತ್ತು ಅನುಷ್ಕಾ ತಮ್ಮ ಆಹಾರ ಮತ್ತು ಫಿಟ್ನೆಸ್ ರುಟೀನ್ ನಲ್ಲಿ ಬಳಸುತ್ತಾರೆ. 

44

ಇದರ ಬೆಲೆ ಎಷ್ಟು ಗೊತ್ತಾ?
ಇದರ ಬೆಲೆಯ ಬಗ್ಗೆ ಹೇಳುವುದಾದರೆ, ಇವಿಯನ್ ನ್ಯಾಚುರಲ್ ಸ್ಪ್ರಿಂಗ್ ವಾಟರ್ ಲೀಟರ್‌ಗೆ 4,000 ರೂ. ಎಂದು ವರದಿಯಾಗಿದೆ. ಅಮೆಜಾನ್‌ನಲ್ಲಿ ಒಂದು ಡಜನ್ 1 ಲೀಟರ್ ಬಾಟಲಿಗಳ ಇವಿಯನ್ ಬೆಲೆ 4,200 ರೂ.ಗಳಾಗಿದ್ದರೆ, ಒಂದು ಲೀಟರ್ ಬಾಟಲಿಯ ಬೆಲೆ 600 ರೂ.ಗಳಷ್ಟಿದೆ. ವಿರಾಟ್ ಕೊಹ್ಲಿ ಸಾಮಾನ್ಯವಾಗಿ ಹೆಚ್ಚಿನ ಪ್ರೋಟೀನ್ ಸಸ್ಯಾಹಾರಿ ಆಹಾರವನ್ನು ಅನುಸರಿಸುತ್ತಾರೆ ಮತ್ತು ಅವರ ಊಟದಲ್ಲಿ ಆಲಿವ್ ಎಣ್ಣೆಯಿಂದ ಮಾಡಿದ ಪ್ಯಾನ್-ಗ್ರಿಲ್ಡ್ ಆಹಾರಗಳು (pan grilled food) ಹಾಗೂ ಬೇಯಿಸಿದ ಮತ್ತು ಆವಿಯಲ್ಲಿ ಬೇಯಿಸಿದ ಆಹಾರಗಳು ಸೇರಿವೆ. ಅವರ ಸರ್ವೈಕಲ್ ಸ್ಪೈನ್ ಕಾಯಿಲೆಯ ನಂತರ 2018 ರಲ್ಲಿ ಸಸ್ಯಾಹಾರಿಯಾದರು. ಈವಾಗ ಸಸ್ಯಾಹಾರವನ್ನೇ ಜನ ಸೇವಿಸುತ್ತಾರೆ. 

Read more Photos on
click me!

Recommended Stories