ಮೂಳೆಗಳು ಸ್ಟ್ರಾಂಗ್ ಆಗಿರಲು ಔಷಧಿ ಬಿಡಿ, ಈ ಜ್ಯೂಸ್ ಸೇವಿಸಿ

First Published | Jun 19, 2022, 11:47 AM IST

ತಪ್ಪಾದ ಫುಡ್ ಹ್ಯಾಬಿಟ್ಸ್ ಮತ್ತು ಸ್ಲೋ ಲೈಫ್ ಸ್ಟೈಲಿಂದಾಗಿ, ಅನೇಕ ಜನರು ಮೂಳೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಬೆನ್ನುನೋವು, ಜಾಯಿಂಟ್ ಪೈನ್, ಬೆರಳು ನೋವು, ಬೆನ್ನು ನೋವು ಮುಂತಾದ ಸಮಸ್ಯೆ ಸಾಮಾನ್ಯ ಮತ್ತು ಇವೆಲ್ಲವೂ ದುರ್ಬಲ ಮೂಳೆಯ ಸಂಕೇತವೂ ಹೌದು. ಒಂದು ಸಣ್ಣ ಕೆಲಸ ಮಾಡಿದ ನಂತರವೂ ನೀವು ಆಯಾಸಗೊಳ್ಳಲು ಪ್ರಾರಂಭಿಸಿದ್ರೆ, ಆಗ ನಿಮ್ಮ ಮೂಳೆ ದುರ್ಬಲಗೊಂಡಿವೆ ಅನ್ನೋದನ್ನು ಅರ್ಥ ಮಾಡಿಕೊಳ್ಳಿ.
 

ಸಾಕಷ್ಟು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸಿಗದಿರೋದು ದುರ್ಬಲ ಮೂಳೆ(Bones) ಸಮಸ್ಯೆಗೆ ದೊಡ್ಡ ಕಾರಣ. ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು ಆಸ್ಟಿಯೊಪೊರೋಸಿಸ್ ಎಂದು ಕರೆಯಲಾಗುತ್ತೆ, ಇದರಲ್ಲಿ ಮೂಳೆ ದುರ್ಬಲಗೊ ಳ್ಳುತ್ತೆ. ಸಮಯಕ್ಕೆ ಸರಿಯಾಗಿ ಗಮನ ಹರಿಸದಿದ್ರೆ ಈ ಸಮಸ್ಯೆ ಎಷ್ಟು ಗಂಭೀರವಾಗುತ್ತಂದ್ರೆ, ನೀವು ಬೀಳೋದರಿಂದ ಅಥವಾ ಬೆಂಡಾಗೋದ್ರಿಂದ ಅಥವಾ ಕೆಮ್ಮುವಿಕೆಯಂತಹ ಸೌಮ್ಯ ಒತ್ತಡದಿಂದಾಗಿ ಸಹ ಮೂಳೆ ಮುರಿತ ಸಂಭವಿಸಬಹುದು.
 

ಮೂಳೆ ಬಲಪಡಿಸುವ ಕ್ರಮಗಳಲ್ಲಿ ವ್ಯಾಯಾಮ, ಧೂಮಪಾನ(Smoking) ತಪ್ಪಿಸುವುದು, ಕೆಲವು ವಿಟಮಿನ್ ಮತ್ತು  ಮಿನರಲ್ ಪೂರಕ ತೆಗೆದುಕೊಳ್ಳೋದು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ, ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಇರುವ ಆಹಾರ ಸೇವಿಸೋದು ಸೇರಿವೆ. 

Tap to resize

ಹಾಲು, ಮೊಸರು ಮತ್ತು ಚೀಸ್ ನಂತಹ ಡೈರಿ ಉತ್ಪನ್ನಗಳಲ್ಲಿ(Dairy Products) ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಕಂಡುಬರುತ್ತೆ , ಆದರೆ ಕೆಲವು ಜ್ಯೂಸ್ ಸಹ ಇವೆ, ಇದು ನಿಮ್ಮ ಮೂಳೆಗೆ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ, ವಿಟಮಿನ್ ಡಿ, ರಂಜಕ, ವಿಟಮಿನ್ ಸಿ ಮತ್ತು ಇತರ ಪೋಷಕಾಂಶ ನೀಡುವ ಮೂಲಕ ಬಲಪಡಿಸುತ್ತೆ .


ಗ್ರೇಪ್ಸ್ ಜ್ಯೂಸ್
ಗ್ರೇಪ್ಸ್ ಜ್ಯೂಸ್ ಮೂಳೆ ಸ್ಟ್ರಾಂಗಾಗಿಡಲು ಸಹಾಯ ಮಾಡುತ್ತೆ . ಇದು ದೊಡ್ಡ ಪ್ರಮಾಣದ ವಿಟಮಿನ್ ಸಿ (Vitamin C) ಹೊಂದಿದೆ, ಇದು ಮೂಳೆಯ ಮ್ಯಾಟ್ರಿಕ್ಸ್ನಲ್ಲಿ ಕಾಲಜನ್ ಉತ್ಪಾದನೆಗೆ ಸಹಾಯ ಮಾಡುತ್ತೆ ಮತ್ತು ಮೂಳೆಯ ಆರೋಗ್ಯಕ್ಕಾಗಿ ಹಾನಿಕಾರಕ ಫ್ರೀ ರಾಡಿಕಲ್ಗಳನ್ನು ಹೊರಹಾಕುತ್ತೆ. 

ಒಂದು ಸ್ಟಡಿ ದ್ರಾಕ್ಷಿ ತಿರುಳು ಇಲಿಗಳಲ್ಲಿ ಮೂಳೆಯ ಗುಣಮಟ್ಟ ಸುಧಾರಿಸಿದೆ ಎಂದು ತಿಳಿಸಿದೆ, ಮತ್ತೊಂದು ಸ್ಟಡಿ ದ್ರಾಕ್ಷಿ ರಸ (Grape juice)ಕುಡಿಯುವುದರಿಂದ ಮೂಳೆಯ ಗುಣಮಟ್ಟ ಮತ್ತು ಮೂಳೆಯ ಖನಿಜಾಂಶವನ್ನು ಹೆಚ್ಚಿಸಲು ಸಹಾಯ ಮಾಡುತ್ತೆ ಎಂದು ಹೇಳುತ್ತೆ.
 

ಪಾಶ್ಚರೀಕರಿಸಿದ ಹಾಲು(Pasteurized Milk)
ಡೈರಿ ಉತ್ಪನ್ನಗಳು ಕ್ಯಾಲ್ಸಿಯಂನ ಉತ್ತಮ ಮೂಲಗಳಲ್ಲಿ ಒಂದು ಆದರೆ ಪಾಶ್ಚರೀಕರಿಸಿದ ಹಾಲು ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಹೊಂದಿರುತ್ತೆ. ಸಾಕಷ್ಟು ವಿಟಮಿನ್ ಡಿ ಪಡೆಯೋದರಿಂದ ಕ್ಯಾಲ್ಸಿಯಂ ಹೆಚ್ಚಾಗಿ ಹೀರಿಕೊಳ್ಳಲು ಸಾಧ್ಯವಾಗುತ್ತೆ. ಮೂಳೆ ಬಲಪಡಿಸಲು ನೀವು ಇದನ್ನು ಪ್ರತಿದಿನ ಸೇವಿಸಬೇಕು. ಇದಲ್ಲದೆ, ಇದರಲ್ಲಿ ಸಾಕಷ್ಟು ಪ್ರೋಟೀನ್ ಸಹ ಕಂಡುಬರುತ್ತೆ .


ಕೆಫೀರ್ ಹಾಲು
ನೀವು ಹಾಲು ಕುಡಿಯದಿದ್ದರೆ, ಕೆಫೀರ್ ನಿಮಗೆ ಅತ್ಯುತ್ತಮ ಆಯ್ಕೆ. ಇದು ಸಾಕಷ್ಟು ಕ್ಯಾಲ್ಸಿಯಂ ಅನ್ನು ಹೊಂದಿದೆ. ಇದು ವಿಟಮಿನ್ ಕೆ 2(Vitamin K2) ನ ಉತ್ತಮ ಮೂಲವಾಗಿದೆ, ಇದು ಮೂಳೆಯ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶವಾಗಿದೆ. ಆಸ್ಟಿಯೊಪೊರೋಸಿಸ್ ರೋಗಿಗಳ ಮೇಲೆ 2015 ರ ಅಧ್ಯಯನವು ತಿಳಿಸಿದಂತೆ ಇದನ್ನು ಆರು ತಿಂಗಳ ಕಾಲ ಸೇವಿಸುವುದರಿಂದ ಮೂಳೆ ಬಲಪಡಿಸಲು ಸಹಾಯ ಮಾಡಿತು ಎಂದು ಕಂಡುಹಿಡಿದಿದೆ.


ಗ್ರೀನ್  ಸ್ಮೂಥಿ(Green Smoothie)
ಡಾರ್ಕ್ ಗ್ರೀನ್ ಸೊಪ್ಪು ತರಕಾರಿ ಸಹ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಪಾಲಕ್ ಮತ್ತು ಕೇಲ್ ಎರಡೂ ದೊಡ್ಡ ಪ್ರಮಾಣದ ಕ್ಯಾಲ್ಸಿಯಂ ಹೊಂದಿದೆ . ಮೂಳೆ ಬಲಪಡಿಸಲು ನೀವು ಹಸಿರು ಎಲೆ ತರಕಾರಿಗಳ ಸ್ಮೂಥಿ ತಯಾರಿಸಿ ಕುಡಿಬೇಕು. ನೀವು ಅದರಲ್ಲಿ ಬಾಳೆಹಣ್ಣು ಮತ್ತು ಕಿತ್ತಳೆ ಸಹ ಸೇರಿಸಬಹುದು.

ಬಾದಾಮಿ ಮತ್ತು ಸೋಯಾ ಹಾಲು(Soya milk)
ಮೂಳೆಗಳನ್ನು ಆರೋಗ್ಯಕರ ಮತ್ತು ಬಲಪಡಿಸಲು ಬಾದಾಮಿ ಮತ್ತು ಸೋಯಾ ಹಾಲನ್ನು ಸಹ ಸೇವಿಸಬಹುದು. ಈ ಪಾನೀಯ ಸಾಮಾನ್ಯವಾಗಿ ಮೂಳೆಗಳ ಬೆಳವಣಿಗೆಗೆ ಬೇಕಾಗಿರುವ ಹಲವಾರು ಪೋಷಕಾಂಶಗಳನ್ನು ಹೊಂದಿರುತ್ತವೆ - ವಿಶೇಷವಾಗಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ.

Latest Videos

click me!