ಔಷಧಿ ಬೇಡ… ಜಾಂಡೀಸ್ ನಿವಾರಣೆಗೆ ಈ ಗಿಡಮೂಲಿಕೆ ಸಾಕು
First Published | Jun 18, 2022, 4:04 PM ISTಲಿವರ್ (Liver) ಸರಿಯಾಗಿ ಕೆಲಸ ಮಾಡದಿದ್ದಾಗ, ಅದು ರಕ್ತದಲ್ಲಿ ಬಿಲಿರುಬಿನ್ (Bilirubin) ಎಂಬ ಕೊಳಕು ವಸ್ತುವನ್ನು ನಿರ್ಮಿಸಲು ಪ್ರಾರಂಭಿಸುತ್ತದೆ. ರಕ್ತದಲ್ಲಿ ಈ ಪದಾರ್ಥದ ಹೆಚ್ಚಳದಿಂದಾಗಿ, ಕಣ್ಣು ಮತ್ತು ಉಗುರಿನಲ್ಲಿ ಹಳದಿಯಾಗುವುದು ಕಂಡುಬರುತ್ತೆ. ರೋಗಿಯು ಆಯಾಸ (Strain), ಕಿಬ್ಬೊಟ್ಟೆ ನೋವು, ತೂಕ ನಷ್ಟ (Weight Loss), ವಾಂತಿ ಮತ್ತು ಜ್ವರದಂತಹ ಹಲವು ರೋಗ ಲಕ್ಷಣಗಳನ್ನು ಹೊಂದಿರುತ್ತದೆ. ಔಷಧದಲ್ಲಿ ಜಾಂಡೀಸ್ (Jaundice) ಗೆ ಅನೇಕ ರೀತಿಯ ಚಿಕಿತ್ಸೆಗಳಿವೆ, ಆದರೆ ಕೆಲವು ಮನೆಮದ್ದುಗಳ ಮೂಲಕವೂ ನೀವು ಸಮಸ್ಯೆ ನಿವಾರಿಸಬಹುದು.