ಸ್ಟ್ರಾಂಗ್ ಮೂಳೆಗಳಿಗೆ ಆಹಾರ ಕ್ರಮ: ಈ ಸೂಪರ್ ಫುಡ್ಸ್ ತಿನ್ನೋದ ಮರೀಬೇಡಿ
ಮೂಳೆಗಳು ನಮ್ಮ ದೇಹಕ್ಕೆ ಆಧಾರವಾಗಿದ್ದು, ದೇಹಕ್ಕೆ ಪೂರಕವಾಗಿ ಕೆಲಸ ಮಾಡುತ್ತವೆ, ಆದ್ದರಿಂದ ಯಾವಾಗಲೂ ಆರೋಗ್ಯ ಮತ್ತು ಸದೃಢವಾಗಿ ಇರುವುದು ಮುಖ್ಯ. ಬಾಲ್ಯ, ಹದಿಹರೆಯ ಮತ್ತು ಯೌವನದ ಮೊದಲ ಕೆಲವು ವರ್ಷ ಮೂಳೆಗಳಲ್ಲಿ ಖನಿಜಗಳು ಸಂಗ್ರಹವಾಗುತ್ತದೆ. ಆದರೆ ಒಮ್ಮೆ ನೀವು 30 ವರ್ಷ ದಾಟಿದ ನಂತರ ಮೂಳೆಗಳು ಈ ಖನಿಜಗಳನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತವೆ. ಚಿಕ್ಕ ವಯಸ್ಸಿನಿಂದಲೇ ಮೂಳೆಗಳನ್ನು ಆರೋಗ್ಯಕರವಾಗಿ ಮತ್ತು ಸದೃಢವಾಗಿಡುವ ಆಹಾರ ಕ್ರಮದಲ್ಲಿ ಕೆಲವು ಅಂಶಗಳನ್ನು ಸೇರಿಸಿಕೊಳ್ಳುವುದು ಬಹಳ ಮುಖ್ಯ.

ದುರ್ಬಲ ಮೂಳೆಗಳಿಂದ ಈ ರೋಗಗಳು ಉಂಟಾಗಬಹುದು
ಮೂಳೆಗಳು ದುರ್ಬಲವಾಗಿದ್ದರೆ, ರಿಕೆಟ್ಗಳು ಮತ್ತು ಆಸ್ಟಿಯೊಪೊರೋಸಿಸ್ ನಂತಹ ಕಾಯಿಲೆಗಳು ಬರಬಹುದು ಮತ್ತು ಲಘು ಗಾಯವನ್ನು ಹೊಂದಿದ್ದರೆ ಸಾಕು ಮೂಳೆ ಮುರಿಯುವ ಅಪಾಯವೂ ಹೆಚ್ಚು.

ಮೂಳೆಗಳನ್ನು ಆರೋಗ್ಯವಾಗಿ ಮತ್ತು ಸದೃಢವಾಗಿಡಲು ಸಾಕಷ್ಟು ಕ್ಯಾಲ್ಸಿಯಂ ತೆಗೆದುಕೊಳ್ಳುವುದು ಬಹಳ ಮುಖ್ಯ ಮತ್ತು ವಿಟಮಿನ್ ಡಿ ಕೂಡ ದೇಹಕ್ಕೆ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಒಬ್ಬ ವಯಸ್ಕ ವ್ಯಕ್ತಿಗೆ ಪ್ರತಿದಿನ 700mg ಕ್ಯಾಲ್ಸಿಯಂ ಬೇಕಾಗುತ್ತದೆ.

ಗಟ್ಟಿಯಾದ ಮೂಳೆಗಳಿಗಾಗಿ ಮೊಸರು
ಮೊಸರು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಎರಡಕ್ಕೂ ಉತ್ತಮ ಮೂಲ. ಮೊಸರು ಸೇವನೆಯು ಮೂಳೆಗಳ ಆರೋಗ್ಯಕರ ಮತ್ತು ಉತ್ತಮ ಬೆಳವಣಿಗೆಗೆ ಕಾರಣವಾಗುತ್ತದೆ .

ವಯಸ್ಸಾದವರಿಗೆ ಮೊಸರಿನ ಸೇವನೆ ಮೂಲಕ ಮೂಳೆ ಮುರಿತ ಉಂಟಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ದೈನಂದಿನ ಆಹಾರದಲ್ಲಿ ಮೊಸರನ್ನು ಸೇರಿಸಿಕೊಳ್ಳಬೇಕು.

ಮೊಟ್ಟೆ ಮೂಳೆಗಳಿಗೆ ಪ್ರಯೋಜನಕಾರಿ.
ಮೊಟ್ಟೆ ಪ್ರಿಯರಿಗೆ ಇದು ಶುಭ ಸುದ್ದಿ. ಮೊಟ್ಟೆಯಲ್ಲಿ ವಿಟಮಿನ್ ಡಿ ಇದ್ದು ಮೂಳೆಗಳನ್ನು ಬಲಗೊಳಿಸಲು ನೆರವಾಗುತ್ತದೆ. ಮೊಟ್ಟೆಯ ಹಳದಿ ಭಾಗ ವಿಟಮಿನ್ ಡಿ ಯನ್ನು ಹೊಂದಿರುತ್ತದೆ.

ಮೊಟ್ಟೆಯ ಬಿಳಿಯನ್ನು ಮಾತ್ರ ತಿನ್ನುವುದಾದರೆ, ವಿಟಮಿನ್ ಡಿ ಯ ಯಾವುದೇ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಮೊಟ್ಟೆಯ ಹಳದಿ ಸೇರಿ ಇಡಿಯ ಮೊಟ್ಟೆಯನ್ನು ತಿನ್ನಬೇಕು.

ಪ್ರತಿದಿನ ಹಸಿರು ಸೊಪ್ಪುಗಳನ್ನು ಸೇವಿಸಿ
ಪಾಲಕ್ ನಂತಹ ಹಸಿರು ಸೊಪ್ಪುಗಳು ಮೂಳೆಗಳಿಗೆ ಬಹಳ ಮುಖ್ಯ. 1 ಕಪ್ ಪಾಲಕ್ ನಲ್ಲಿ ದೈನಂದಿನ ಅಗತ್ಯದ 25% ನಷ್ಟು ಕ್ಯಾಲ್ಸಿಯಂ ಇದೆ.

ಪಾಲಕ್ ನಲ್ಲಿ ಕಬ್ಬಿಣ ಮತ್ತು ವಿಟಮಿನ್ ಎ ಅಂಶವಿದ್ದು, ಇದು ರಕ್ತ ಮತ್ತು ಕಣ್ಣಿಗೆ ಪ್ರಯೋಜನಕಾರಿ. ಆದ್ದರಿಂದ ಪಾಲಕ್ ಅನ್ನು ಆಹಾರಕ್ರಮದ ಭಾಗವಾಗಿ ಮಾಡಿಕೊಳ್ಳಿ.

ಪ್ರೋಟೀನ್ ಯುಕ್ತ ಆಹಾರಗಳನ್ನು ಸೇವಿಸಿ
ಮೂಳೆಗಳಿಗೆ ಕ್ಯಾಲ್ಸಿಯಂ ಮಾತ್ರವಲ್ಲ, ಪ್ರೋಟೀನ್ ಕೂಡ ತುಂಬಾ ಮುಖ್ಯ. ಮೂಳೆಗಳು ಶೇ.50ರಷ್ಟು ಪ್ರೋಟೀನ್‌ಗಳಿಂದ ಮಾಡಲ್ಪಟ್ಟಿವೆ. ಪ್ರೋಟೀನ್ ಕಡಿಮೆ ಸೇವಿಸಿದಲ್ಲಿ ಕ್ಯಾಲ್ಸಿಯಂ ಹೀರಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ. ಇದರಿಂದ ಮೂಳೆ ಮುರಿತ ಉಂಟಾಗುವ ಅಪಾಯವನ್ನು ಹೆಚ್ಚಿಸುತ್ತದೆ.

ಬಾದಾಮಿ, ಓಟ್ಸ್, ಚೀಸ್, ಹಾಲು, ಬ್ರೊಕೋಲಿಯಂತಹ ವಸ್ತುಗಳನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬೇಕು.ಇದರಿಂದ ಮೂಳೆಗಳು ಗಟ್ಟಿಯಾಗುತ್ತವೆ. ತೊಂದರೆಗಳು ತಪ್ಪುತ್ತವೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.