Hair straightening side effects: ಹೇರ್ ಸ್ಟ್ರೈಟ್‌ನಿಂಗ್ ನಂತರ ವಾಂತಿ, ತಲೆತಿರುಗುವಿಕೆ ಮತ್ತು ತೀವ್ರ ತಲೆನೋವಿನಿಂದ ಬಳಲುತ್ತಿದ್ದ ಬಾಲಕಿಗೆ ಕಿಡ್ನಿ ಫೇಲ್ಯೂರ್ ಆಗಿ ಹಲವಾರು ದಿನಗಳವರೆಗೆ ಮಕ್ಕಳ ವಿಭಾಗದಲ್ಲಿ ಚಿಕಿತ್ಸೆ ನೀಡಲಾಯಿತು. ಕಳೆದ ಸೋಮವಾರ ಡಿಸ್ಚಾರ್ಜ್ ಮಾಡಲಾಯಿತು.
ಕೂದಲು ಸುಂದರವಾಗಿ ಕಾಣಲೆಂದು ಹೇರ್ ಸ್ಟ್ರೈಟ್‌ನಿಂಗ್ ಮಾಡಿಸಲು ಹೋದ ಯುವತಿಯೋರ್ವಳು ಆಸ್ಪತ್ರೆಗೆ ದಾಖಲಾಗಿದ್ದಾಳೆ. ಹೌದು, ನಿಮಗಿದು ಆಶ್ಚರ್ಯವೆನಿಸಿದರೂ ನೀವು ಓದುತ್ತಿರುವುದೇ ನಿಜ. ಹೇರ್ ಸ್ಟ್ರೈಟ್‌ನಿಂಗ್ ಟ್ರೀಟ್‌ಮೆಂಟ್‌ಗೆ ಹೋಗಿದ್ದ 17 ವರ್ಷದ ಬಾಲಕಿ ಕಿಡ್ನಿ ಫೇಲ್ಯೂರ್ ಆಗಿ ದೀರ್ಘಕಾಲದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
27
ಮತ್ತೊರ್ವ ಮಹಿಳೆಗೂ ಹೀಗೆ ಆಗಿತ್ತು
ಈ ಆಘಾತಕಾರಿ ಘಟನೆ ಇಸ್ರೇಲ್ ದೇಶದಲ್ಲಿ ನಡೆದಿದ್ದು, ಇಂತಹ ಶಾಕಿಂಗ್ ವಿಚಾರವನ್ನು ಜೆರುಸಲೆಮ್‌ನ ಶಾರೆ ಜೆಡೆಕ್ ವೈದ್ಯಕೀಯ ಕೇಂದ್ರ (Shaare Zedek Medical Center Hospital in Jerusalem, Israel)ದ ಮೂಲಗಳು ತಿಳಿಸಿವೆ. ಹಾಗೆಯೇ ಒಂದು ತಿಂಗಳ ಹಿಂದೆಯಷ್ಟೇ ಹೇರ್ ಸ್ಟ್ರೈಟ್‌ನಿಂಗ್‌ನಿಂದಾಗಿ 25 ವರ್ಷದ ಮತ್ತೊರ್ವ ಮಹಿಳೆ ಕೂಡ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
37
ಮುಂದುವರಿದಿದೆ ಚಿಕಿತ್ಸೆ
ಹೇರ್ ಸ್ಟ್ರೈಟ್‌ನಿಂಗ್ ನಂತರ ವಾಂತಿ, ತಲೆತಿರುಗುವಿಕೆ ಮತ್ತು ತೀವ್ರ ತಲೆನೋವಿನಿಂದ ಬಳಲುತ್ತಿದ್ದ ಬಾಲಕಿಗೆ ಕಿಡ್ನಿ ಫೇಲ್ಯೂರ್ ಆಗಿ ಹಲವಾರು ದಿನಗಳವರೆಗೆ ಮಕ್ಕಳ ವಿಭಾಗದಲ್ಲಿ ಚಿಕಿತ್ಸೆ ನೀಡಲಾಯಿತು. ಕಳೆದ ಸೋಮವಾರ ಡಿಸ್ಚಾರ್ಜ್ ಮಾಡಲಾಯಿತು. ಸದ್ಯ ಆಸ್ಪತ್ರೆಯ ಹೊರರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ಹೇಳಲಾಗಿದೆ.
2023 ರಲ್ಲಿ ಆಸ್ಪತ್ರೆಯ ನೆಫ್ರಾಲಜಿ ಸಂಸ್ಥೆಯ ಮುಖ್ಯಸ್ಥರಾದ ಪ್ರೊಫೆಸರ್ ಲಿಂಡಾ ಶವಿತ್ ಮತ್ತು ಸಂಸ್ಥೆಯ ವೈದ್ಯ ಡಾ. ಅಲೋನ್ ಬೆನಾಯಾ ಅವರು ಪ್ರಕಟಿಸಿದ ಅಧ್ಯಯನವು ತೀವ್ರ ಮೂತ್ರಪಿಂಡ ವೈಫಲ್ಯದಿಂದ ದೇಶಾದ್ಯಂತ ತುರ್ತು ವಿಭಾಗಗಳಿಗೆ ಹಾಜರಾದ 14 ರಿಂದ 58 ವರ್ಷ ವಯಸ್ಸಿನ 26 ಮಹಿಳೆಯರ ಪ್ರಕರಣಗಳನ್ನು ದಾಖಲಿಸಿದೆ.
57
ಪರವಾನಗಿ ರದ್ದು
ಇವರೆಲ್ಲರೂ ಗ್ಲೈಆಕ್ಸಿಲಿಕ್ ಆಸಿಡ್ (Glyoxylic acid) ಹೊಂದಿರುವ ಹೇರ್ ಸ್ಟ್ರೈಟ್‌ನಿಂಗ್ ಚಿಕಿತ್ಸೆಗಳಿಗೆ ಒಳಗಾಗಿದ್ದಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಅಂದಿನಿಂದ ಆರೋಗ್ಯ ಸಚಿವಾಲಯವು ಗ್ಲೈಆಕ್ಸಿಲಿಕ್ ಆಸಿಡ್ ಹೊಂದಿರುವ ಡಜನ್‌ಗಟ್ಟಲೆ ಸೌಂದರ್ಯವರ್ಧಕ ಉತ್ಪನ್ನಗಳ ಪರವಾನಗಿಗಳನ್ನು ರದ್ದುಗೊಳಿಸಿದೆ.
67
ನೇರವಾಗಿ ಹಚ್ಚಬಾರದು
"ಹೇರ್ ಸ್ಟ್ರೈಟ್‌ನಿಂಗ್ ಉತ್ಪನ್ನಗಳನ್ನು ನೇರವಾಗಿ ನೆತ್ತಿ ಅಥವಾ ಕೂದಲಿನ ಬೇರುಗಳಿಗೆ ಹಚ್ಚಬಾರದು. ಅವುಗಳಿಂದ ಕನಿಷ್ಠ 1.5 ಸೆಂಟಿಮೀಟರ್ ದೂರದಲ್ಲಿ ಹಚ್ಚಬೇಕು" ಎಂದು ಶವಿತ್ ಹೇಳುತ್ತಾರೆ.
77
ಅನೇಕರಿಗೆ ಇದು ಎಚ್ಚರಿಕೆ
"ಅಷ್ಟೇ ಅಲ್ಲ, ಕೇಶ ವಿನ್ಯಾಸಕರು ಮತ್ತು ಕ್ಲೈಂಟ್‌ಗಳು ಇಬ್ಬರೂ ಉತ್ಪನ್ನವನ್ನು ಬಿಸಿ ಮಾಡದಂತೆ ಜಾಗರೂಕರಾಗಿರಬೇಕು. ತಯಾರಕರ ಸೂಚನೆಗಳ ಪ್ರಕಾರ ಮಾತ್ರ ವರ್ತಿಸಬೇಕು." ಎಂದು ಸೂಚಿಸಿದರು. ಆದರೆ ಸುಂದರವಾಗಿ ಕಾಣಲು ಹೇರ್ ಸ್ಟ್ರೈಟ್‌ನಿಂಗ್ ಮಾಡುತ್ತಿರುವ ಅನೇಕ ಜನರಿಗೆ ಇದು ಒಂದು ಎಚ್ಚರಿಕೆಯಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.