Health Tips: ಈ ವರ್ಷ ಮಾಡಿದ ತಪ್ಪನ್ನು ಹೊಸ ವರ್ಷದಲ್ಲಿ ಮಾಡೋದು ಬೇಡ, ನಿಮ್ಮ ಹಾರ್ಟ್, ನಿಮ್ಮ ಕೇರ್

Published : Dec 31, 2025, 05:00 PM IST

Health Tips : ನಿಂತಲ್ಲಿ, ಕುಳಿತಲ್ಲಿ ಕುಸಿದು ಬಿದ್ದು ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗ್ತಿದೆ. ಹೃದಯ ದುರ್ಬಲಗೊಳ್ಳಲು ಜೀವನಶೈಲಿ ಮುಖ್ಯ ಕಾರಣ ಅಂತ ವೈದ್ಯರು ಹೇಳ್ತಿದ್ದಾರೆ. 2026ರಲ್ಲಿ ನಿಮ್ಮ ಹಾರ್ಟ್ ಗಟ್ಟಿ ಇರ್ಬೇಕು ಅಂದ್ರೆ ಈ ಕೆಲ್ಸ ಮಾಡಿ. 

PREV
16
ಹೆಚ್ಚಾಗ್ತಿದೆ ಹೃದಯ ಸಂಬಂಧಿ ಖಾಯಿಲೆ

ಭಾರತದಲ್ಲಿ ಎಲ್ಲಾ ವಯಸ್ಸಿನ ಜನರಲ್ಲಿ ಹೃದಯ ಸಂಬಂಧಿ ಕಾಯಿಲೆ ವೇಗವಾಗಿ ಹೆಚ್ಚಾಗ್ತಿದೆ. ಬಿಪಿ, ಕೊಲೆಸ್ಟ್ರಾಲ್, ಸಕ್ಕರೆ ಖಾಯಿಲೆ, ಹಠಾತ್ ಹೃದಯಾಘಾತ ಸಾಮಾನ್ಯವಾಗಿದೆ. ದೀರ್ಘಕಾಲ ಕುಳಿತುಕೊಳ್ಳುವುದು, ಒತ್ತಡ, ಜಂಕ್ ಫುಡ್, ವ್ಯಾಯಾಮದ ಕೊರತೆ ಮತ್ತು ಕಳಪೆ ಜೀವನಶೈಲಿ ಹೃದಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಅನೇಕ ಯುವಕರು ಬೊಜ್ಜು, ಆಯಾಸ, ಅನಿಯಮಿತ ಹೃದಯ ಬಡಿತದಂತಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.

26
ಇದು ಅಪಾಯಕಾರಿ

25 ರಿಂದ 75 ವರ್ಷ ವಯಸ್ಸಿನ ಜನರಲ್ಲಿ ಎದೆ ನೋವು, ಉಸಿರಾಟದ ತೊಂದರೆ, ಆಯಾಸ, ಕಾಲುಗಳಲ್ಲಿ ಊತ, ತಲೆತಿರುಗುವಿಕೆ ಮತ್ತು ತ್ವರಿತ ಹೃದಯ ಬಡಿತದ ಲಕ್ಷಣ ಕಾಣಿಸಿಕೊಳ್ತಿದೆ. ಈ ರೋಗಲಕ್ಷಣಗಳನ್ನು ನಿರ್ಲಕ್ಷಿಸುವುದು ಅಪಾಯಕಾರಿ ಏಕೆಂದರೆ ಇದು ಹೃದಯಾಘಾತ, ಪಾರ್ಶ್ವವಾಯು ಅಥವಾ ಹಠಾತ್ ಹೃದಯ ಸ್ತಂಭನದ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ನಿಮ್ಮ ಜೀವನಶೈಲಿಯನ್ನು ಸಮಯಕ್ಕೆ ಸರಿಯಾಗಿ ಸುಧಾರಿಸುವುದು ಬಹಳ ಮುಖ್ಯ. 2026 ರ ಹೊಸ ವರ್ಷದಲ್ಲಿ ನಿಮ್ಮ ಹೃದಯವನ್ನು ಆರೋಗ್ಯವಾಗಿಡಲು ನೀವು ಏನು ಮಾಡ್ಬೇಕು?

36
ಪ್ರತಿದಿನ ವ್ಯಾಯಾಮ

2025ರಲ್ಲಿ ನಿಮ್ಮ ಆರೋಗ್ಯವನ್ನು ನಿರ್ಲಕ್ಷ್ಯಿಸಿದ್ರೆ ಚಿಂತಿಸಬೇಡಿ. 2026ರ ಮೊದಲ ದಿನದಿಂದಲೇ ನಿಮ್ಮ ದಿನಚರಿ ಬದಲಿಸಿ. ಪ್ರತಿದಿನ 45 ನಿಮಿಷಗಳ ಕಾಲ ವಾಕಿಂಗ್ ಇಲ್ಲ ಲಘು ಜಾಗಿಂಗ್, ಯೋಗ, ಸ್ಟ್ರೆಚಿಂಗ್, ಸೈಕ್ಲಿಂಗ್ ಅಥವಾ ಮನೆಯಲ್ಲಿ ಸರಳ ವ್ಯಾಯಾಮ ಮಾಡೋದನ್ನು ಮರೆಯಬೇಡಿ. ಇದು ಹೃದಯದ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಇದು ದೇಹದ ರಕ್ತನಾಳಗಳನ್ನು ತೆರೆದಿಡುತ್ತದೆ. ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ತೂಕ ಹೆಚ್ಚಾಗುವುದನ್ನು ತಡೆಯುತ್ತದೆ. ವ್ಯಾಯಾಮ ಹೃದಯ ಸ್ನಾಯುಗಳನ್ನು ಬಲಪಡಿಸುತ್ತದೆ. ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ.

46
ಸಮತೋಲಿತ ಆಹಾರ

ದೈನಂದಿನ ವ್ಯಾಯಾಮದ ಜೊತೆ ಆಹಾರ ಕೂಡ ಬಹಳ ಮುಖ್ಯ. ಹಣ್ಣುಗಳು, ಹಸಿರು ತರಕಾರಿಗಳು, ದ್ವಿದಳ ಧಾನ್ಯಗಳು,ಡ್ರೈ ಫ್ರೂಟ್ಸ್ ಮತ್ತು ಮನೆಯಲ್ಲಿ ತಯಾರಿಸಿದ ಊಟವನ್ನು ಸೇವನೆ ಮಾಡಿ. ಹುರಿದ ಆಹಾರ, ಅತಿಯಾದ ಸಿಹಿತಿಂಡಿ, ಸಂಸ್ಕರಿಸಿದ ಆಹಾರ ಮತ್ತು ಹೆಚ್ಚುವರಿ ಉಪ್ಪನ್ನು ತಿನ್ನಬೇಡಿ. ಇದು ಹೃದಯವನ್ನು ದುರ್ಬಲಗೊಳಿಸುತ್ತವೆ.

56
ಸಾಕಷ್ಟು ನಿದ್ರೆ

ಕೆಲ್ಸದ ಒತ್ತಡದಲ್ಲಿ ಜನರು ನಿದ್ರೆ ಬಿಡುತ್ತಿದ್ದಾರೆ. ಇಡೀ ದಿನ ಕೆಲಸ ಮಾಡಿ, ರಾತ್ರಿ ಮೊಬೈಲ್ ನಲ್ಲಿ ಸಮಯ ಕಳೆಯುವವರ ಸಂಖ್ಯೆ ಕೂಡ ಸಾಕಷ್ಟಿದೆ. ನಿದ್ರೆ ಹೃದಯಕ್ಕೆ ಉತ್ತಮ. ಸಂಪೂರ್ಣ ನಿದ್ರೆ ಅತ್ಯಗತ್ಯ. ನಿದ್ರೆಯ ಕೊರತೆ ಒತ್ತಡವನ್ನು ಹೆಚ್ಚಿಸುತ್ತದೆ. ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಪ್ರತಿದಿನ ಒಂದೇ ಸಮಯದಲ್ಲಿ ಮಲಗುವುದು ಮತ್ತು ಎಚ್ಚರಗೊಳ್ಳುವ ಅಭ್ಯಾಸ ಮಾಡಿಕೊಳ್ಳಿ. ಮಲಗುವ ಸಮಯಕ್ಕೆ 30 ನಿಮಿಷಗಳ ಮೊದಲು ನಿಮ್ಮ ಮೊಬೈಲ್ ಫೋನ್ ಮತ್ತು ಟಿವಿಯನ್ನು ಆಫ್ ಮಾಡಿ.

66
ಒತ್ತಡವನ್ನು ಕಡಿಮೆ ಮಾಡಿ

2025 ರಲ್ಲಿ ಒತ್ತಡ ಹೆಚ್ಚಾಗಿದ್ದರೂ, 2026 ರಲ್ಲಿ ನಿಮ್ಮ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಒತ್ತಡ ಹೃದಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಧ್ಯಾನ, ದೀಘ್ರ ಉಸಿರಾಟ, ಸಂಗೀತ ಕೇಳುವುದು, ಡ್ರಾಯಿಂಗ್, ಗಾರ್ಡನಿಂಗ್, ಬೆಳಗಿನ ಬಿಸಿಲಿನಲ್ಲಿ ಕುಳಿತುಕೊಳ್ಳುವುದು ಅಥವಾ ಕೆಲಸಕ್ಕೆ ಸಣ್ಣ ಬ್ರೇಕ್ ತೆಗೆದುಕೊಳ್ಳುವ ಮೂಲಕ ಮನಸ್ಸನ್ನು ಶಾಂತಗೊಳಿಸಬಹುದು. ಮಾನಸಿಕ ಶಾಂತಿ ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories