Celebrity Trainer Weight Loss Tips: ಸೆಲೆಬ್ರಿಟಿ ಫಿಟ್‌ನೆಸ್ ತರಬೇತುದಾರ ಸಿದ್ಧಾರ್ಥ್ ಸಿಂಗ್ ಅವರು 90 ದಿನಗಳಲ್ಲಿ 5 ರಿಂದ 10 ಕೆಜಿ ತೂಕ ಇಳಿಸಿಕೊಳ್ಳಲು ಮೂರು ಸರಳ ಸಲಹೆಗಳನ್ನು ನೀಡಿದ್ದಾರೆ. ಈ ಆರೋಗ್ಯಕರ ಅಭ್ಯಾಸಗಳು ದೀರ್ಘಕಾಲೀನ ಫಲಿತಾಂಶಗಳನ್ನು ನೀಡುತ್ತವೆ.
ತೂಕ ಇಳಿಸಿಕೊಳ್ಳುವುದೆಂದರೆ ಕೇವಲ ಕ್ಯಾಲೊರಿಗಳನ್ನು ಕಡಿಮೆ ಮಾಡುವುದು ಅಥವಾ ಜಿಮ್‌ನಲ್ಲಿ ಗಂಟೆಗಟ್ಟಲೆ ಬೆವರು ಸುರಿಸುವುದಲ್ಲ. ನಿಮ್ಮ ದೇಹವು ದೀರ್ಘಕಾಲದವರೆಗೆ ಸುಲಭವಾಗಿ ಅನುಸರಿಸಬಹುದಾದ ಸಣ್ಣ, ಆರೋಗ್ಯಕರ ಅಭ್ಯಾಸಗಳನ್ನು ನೀವು ಅಳವಡಿಸಿಕೊಂಡಾಗ ನಿಜವಾದ ಫಲ ಸಿಗುತ್ತದೆ.
26
ಆರೋಗ್ಯಕರ ಜೀವನಶೈಲಿ
ಬಹುತೇಕ ಜನರು ತೂಕ ಇಳಿಸಿಕೊಂಡ ನಂತರ ಕಡಿಮೆ ಅವಧಿಯಲ್ಲಿ ಮತ್ತೆ ತೂಕ ಹೆಚ್ಚಿಸಿಕೊಳ್ಳುತ್ತಾರೆ. ವ್ಯಾಯಾಮದಿಂದ ಬಿಡುವು ತೆಗೆದುಕೊಂಡರೆ ಮತ್ತೆ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ವ್ಯಾಯಾಮದ ಜೊತೆಯಲ್ಲಿ ಆರೋಗ್ಯಕರ ಜೀವನಶೈಲಿಯ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕೆಂದು ಫಿಟ್ನೆಸ್ ತರಬೇತುದಾರು ಸಲಹೆ ನೀಡುತ್ತಾರೆ.
36
90 ದಿನಗಳಲ್ಲಿ 5 ರಿಂದ 10 ಕೆಜಿ ತೂಕ ಕಡಿಮೆ
ಖ್ಯಾತ ನಟಿ ತಮನ್ನಾ ಭಾಟಿಯಾ ಸೇರಿದಂತೆ ಹಲವು ಸೆಲೆಬ್ರಿಟಿಗಳ ಫಿಟ್‌ನೆಸ್ ತರಬೇತುದಾರರಾಗಿರುವ ಸಿದ್ಧಾರ್ಥ್ ಸಿಂಗ್ ಕೆಲವೊಂದು ಮಾಹಿತಿಗಳನ್ನು ನೀಡಿದ್ದಾರೆ. ಸಿದ್ಧಾರ್ಥ್ ಸಿಂಗ್ ತಮ್ಮ ಇನ್‌ಸ್ಟಾಗ್ರಾಂ ಖಾತೆ ಮೂಲಕ ಮೂರು ಸಲಹೆಗಳನ್ನು ನೀಡಿದ್ದಾರೆ. ಈ ಮೂರು ಸಲಹೆಗಳನ್ನು ನಿರಂತರವಾಗಿ ಅನುಸರಿಸಿದ್ರೆ ಕೇವಲ 90 ದಿನಗಳಲ್ಲಿ 5 ರಿಂದ 10 ಕೆಜಿ ತೂಕ ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಸಿದ್ಧಾರ್ಥ್ ಸಿಂಗ್ ಅವರ ಪ್ರಕಾರ, ಪ್ರತಿದಿನ ಸೇವಿಸುವ ಆಹಾರದಲ್ಲಿ ಪ್ರೋಟಿನ್ ಹೊಂದಿರುವಂತೆ ನೋಡಿಕೊಳ್ಳಬೇಕು. ಈ ಪ್ರೋಟಿನ್ ತುಂಬಾ ಸಮಯದವರೆಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಇದರಿಂದ ಪದೇ ಪದೇ ತಿನ್ನಬೇಕು ಎಂಬ ಭಾವನೆ ಕಡಿಮೆ ಮಾಡುತ್ತದೆ. ಆಹಾರದಲ್ಲಿನ ಪ್ರೋಟಿನ್ ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಉತ್ತಮ ಪ್ರೋಟಿನ್ ಸಹಾಯದಿಂದ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಅತ್ಯಧಿಕ ಪ್ರೋಟಿನ್ ಅಂಶ ಹೊಂದಿರುವ ಮೊಟ್ಟೆ, ಕಾಟೇಜ್ ಚೀಸ್, ಮಸೂರ, ಕಿಡ್ನಿ ಬೀನ್ಸ್, ಕಡಲೆ, ತೋಫು ಅಥವಾ ಗ್ರೀಕ್ ಮೊಸರನ್ನು ಆಯ್ಕೆ ಹೊಂದಿರಬೇಕು.
ಹಸಿವು ಆಗ್ತಿದ್ದರೆ ಬಹುತೇಕ ಸಮಯದಲ್ಲಿ ದೇಹಕ್ಕೆ ಶೇ.90 ರಷ್ಟು ನೀರು ಬೇಕಾಗುತ್ತದೆ. ಸಿದ್ಧಾರ್ಥ್ ಸಿಂಗ್ ಪ್ರಕಾರ, ಹಸಿವು ಆದಾಗೆಲ್ಲಾ ಮೊದಲು 1 ಲೋಟ/ಗ್ಲಾಸ್ ನೀರು ಕುಡಿಯಬೇಕು. ಸಾಕಷ್ಟು ನೀರು ಕುಡಿಯುದರಿಂದ ಹೆಚ್ಚಿನ ಆಹಾರ ಸೇವನೆ ಕಡಿಮೆಯಾಗುತ್ತದೆ. ಕಡಿಮೆ ತಿಂದ್ರೂ ಪ್ರೋಟಿನ್‌ವುಳ್ಳ ಆಹಾರ ಸೇವನೆ ಮಾಡಬೇಕು. ಹೆಚ್ಚು ನೀರು ಕುಡಿಯೋದರಿಂದ ನಿರ್ವಿಶೀಕರಣ ಮತ್ತು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ತೂಕ ಇಳಿಕೆ ಬಯಸೋರು ಹೆಚ್ಚು ನೀರು ಕುಡಿಯಲು ಆದ್ಯತೆ ನೀಡಬೇಕು.
ಕೇವಲ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳೋದರಿಂದ ತೂಕ ಇಳಿಸಿಕೊಳ್ಳಲು ಸಾಧ್ಯವಿಲ್ಲ. ದಿನನಿತ್ಯ ವ್ಯಾಯಾಮ ಮಾಡೋದರಿಂದ ದೇಹವನ್ನು ಟೋನ್ ಮಾಡಲು ಮತ್ತು ಫಿಟ್ ಆಗಿಡಲು ಸಹಾಯ ಮಾಡುತ್ತದೆ. ದೀರ್ಘಸಮಯ ಒಂದೇ ಕಡೆ ಕುಳಿತುಕೊಳ್ಳುತ್ತಿದ್ದರೆ ನಿಮ್ಮ ಜೀವನಶೈಲಿಗೆ ವ್ಯಾಯಾಮ ಕಡ್ಡಾಯವಾಗುತ್ತದೆ. ವ್ಯಾಯಾಮದ ಜೊತೆಯಲ್ಲಿ 30–40 ನಿಮಿಷಗಳ ದೈನಂದಿನ ನಡಿಗೆ, ಯೋಗ, ಶಕ್ತಿ ತರಬೇತಿ ಅಥವಾ ಕಾರ್ಡಿಯೋದೊಂದಿಗೆ ಪ್ರಾರಂಭಿಸಬಹುದು.
(Disclaimer: ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ)