Partner Health Habits: ಈ ಅಭ್ಯಾಸಗಳು ಚಿಕ್ಕದಾಗಿ ಕಾಣಿಸಬಹುದು. ಆದರೆ ಅವು ಮಹಿಳೆಯರ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ. ಆದ್ದರಿಂದ, ನೀವು ನಿಜವಾಗಿಯೂ ನಿಮ್ಮ ಸಂಗಾತಿಯನ್ನು ಪ್ರೀತಿಸುತ್ತಿದ್ದರೆ ಇದನ್ನು ಗಂಭೀರವಾಗಿ ಪರಿಗಣಿಸಿ.
ಸಂಬಂಧದಲ್ಲಿ ಪ್ರೀತಿ ಮತ್ತು ತಿಳುವಳಿಕೆ ಎಷ್ಟು ಮುಖ್ಯವೋ, ಪರಸ್ಪರರ ಆರೋಗ್ಯವನ್ನು ನೋಡಿಕೊಳ್ಳುವುದು ಅಷ್ಟೇ ಮುಖ್ಯ. ಕೆಲವೊಮ್ಮೆ ತಿಳಿಯದೆಯೇ ತಮ್ಮ ಸಂಗಾತಿಗೆ ಹಾನಿ ಮಾಡುವ ತಪ್ಪುಗಳನ್ನು ಮಾಡುತ್ತಾರೆ ಪುರುಷರು. ನಿರ್ದಿಷ್ಟವಾಗಿ ಕೆಲವು ಅಭ್ಯಾಸಗಳು ತಮ್ಮ ಪಾರ್ಟ್‌ನರ್ಸ್‌ಗೆ ಗಂಭೀರ ಹಾನಿಯನ್ನುಂಟುಮಾಡಬಹುದು. ಡಾ. ಮನನ್ ವೋರಾ ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಈ ಸಂಬಂಧ ವಿಡಿಯೋ ಶೇರ್ ಮಾಡಿದ್ದು, ಪುರುಷರ ಆ ಕೆಟ್ಟ ಅಭ್ಯಾಸಗಳು ಯಾವುವು ಮತ್ತು ಅವುಗಳನ್ನು ಏಕೆ ಬದಲಾಯಿಸಬೇಕು ಎಂಬುದನ್ನು ನೋಡೋಣ..
26
ಕೊಳಕು ಅಥವಾ ಉದ್ದವಾದ ಉಗುರುಗಳು
ಪುರುಷರು ತಮ್ಮ ಉಗುರುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳದಿದ್ದರೆ ಅಥವಾ ಉದ್ದವಾಗಿ ಬೆಳೆಸಿದ್ದರೆ ಅದರಲ್ಲಿ ಸುಲಭವಾಗಿ ಬ್ಯಾಕ್ಟೀರಿಯಾ ಮತ್ತು ಕೊಳೆ ಸೇರಿಕೊಳ್ಳುತ್ತದೆ. ಈ ಸೂಕ್ಷ್ಮಜೀವಿಗಳು ಸಂಗಾತಿಯ ಚರ್ಮ ಮತ್ತು ಖಾಸಗಿ ಭಾಗಗಳಿಗೆ ಸೋಂಕನ್ನು ಹರಡಬಹುದು. ಇದು ವಿಶೇಷವಾಗಿ ಶಿಲೀಂಧ್ರ ಮತ್ತು ಯೋನಿ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಡಾ. ವೋರಾ ವಿವರಿಸುತ್ತಾರೆ. ಆದ್ದರಿಂದ ಯಾವಾಗಲೂ ನಿಮ್ಮ ಉಗುರುಗಳನ್ನು ಸ್ವಚ್ಛವಾಗಿರಿಸಿ ಮತ್ತು ಚಿಕ್ಕದಾಗಿ ಕಟ್ ಮಾಡಿ.
36
ಸ್ನಾನ ಮಾಡದಿರುವ ಅಭ್ಯಾಸ
ಕೆಲವು ಪುರುಷರು ಬಿಸಿಲಿನಲ್ಲಿ ಬೆವರಿದ್ದರೂ ಸ್ನಾನ ಮಾಡುವುದಿಲ್ಲ. ಇದು ಅವರ ಆರೋಗ್ಯಕ್ಕೆ ಹಾನಿ ಮಾಡುವುದಲ್ಲದೆ, ಸಂಗಾತಿಗೂ ಹಾನಿ ಮಾಡುತ್ತದೆ. ಬೆವರು ಮತ್ತು ಧೂಳಿನಿಂದ ಹೆಚ್ಚಾಗಿ ದೇಹದ ಮೇಲೆ ಬ್ಯಾಕ್ಟೀರಿಯಾಗಳು ಸಂಗ್ರಹವಾಗುತ್ತವೆ. ಪುರುಷರು ದಿನಕ್ಕೆ ಒಮ್ಮೆ ಮಾತ್ರ ಸ್ನಾನ ಮಾಡಿದರೆ ಅಥವಾ ಕೆಲವೊಮ್ಮೆ ಸ್ನಾನ ಮಾಡದಿದ್ದರೆ ಇದು ಅವರ ಸಂಗಾತಿಯಲ್ಲಿ ಚರ್ಮದ ಸಮಸ್ಯೆಗಳು ಮತ್ತು ಶಿಲೀಂಧ್ರಗಳ ಸೋಂಕಿಗೆ ಕಾರಣವಾಗಬಹುದು. ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ವೈದ್ಯರು ದಿನಕ್ಕೆ ಎರಡು ಬಾರಿ ಅಂದರೆ ಬೆಳಗ್ಗೆ ಮತ್ತು ಸಂಜೆ ಸ್ನಾನ ಮಾಡಲು ಶಿಫಾರಸು ಮಾಡುತ್ತಾರೆ.
ಸಿಗರೇಟ್ ಹೊಗೆ ಪುರುಷನ ಶ್ವಾಸಕೋಶಕ್ಕೆ ಹಾನಿ ಮಾಡುವುದಲ್ಲದೆ, ಅವನ ಸಂಗಾತಿಯ ಆರೋಗ್ಯ ಮತ್ತು ಫಲವತ್ತತೆಯ ಮೇಲೂ ಪರಿಣಾಮ ಬೀರುತ್ತದೆ. ಸೆಕೆಂಡ್ ಹ್ಯಾಂಡ್ ಹೊಗೆ ಮಹಿಳೆಯರಲ್ಲಿ ಉಸಿರಾಟದ ಕಾಯಿಲೆಗಳು, ಅಲರ್ಜಿಗಳು ಮತ್ತು ಗರ್ಭಧಾರಣೆಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ ಎಂದು ಡಾ. ವೋರಾ ವಿವರಿಸುತ್ತಾರೆ.
56
ಶೌಚಾಲಯದ ಸೀಟನ್ನು ಕೊಳಕಾಗಿ ಬಿಡುವುದು
ಹಲವು ಬಾರಿ, ಪುರುಷರು ಮೂತ್ರ ವಿಸರ್ಜಿಸುವಾಗ ಶೌಚಾಲಯದ ಸೀಟನ್ನು ಕೊಳಕು ಮಾಡುತ್ತಾರೆ ಮತ್ತು ಅದನ್ನು ಸ್ವಚ್ಛಗೊಳಿಸುವುದಿಲ್ಲ. ಈ ಅಭ್ಯಾಸ ಮಹಿಳೆಯರಿಗೆ ಅಪಾಯಕಾರಿ ಎಂದು ಸಾಬೀತಾಗಿದೆ. ಕೊಳಕು ಸೀಟಿನಲ್ಲಿ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳು ಆಶ್ರಯಿಸುತ್ತವೆ ಎಂದು ವೈದ್ಯರು ಹೇಳುತ್ತಾರೆ. ಇದು ಮಹಿಳೆಯರಲ್ಲಿ ಮೂತ್ರನಾಳದ ಸೋಂಕಿನ (ಯುಟಿಐ) ಅಪಾಯವನ್ನು ಹೆಚ್ಚಿಸುತ್ತದೆ.
66
ರೋಮ್ಯಾನ್ಸ್ ಮುನ್ನ ಕೈ ತೊಳೆಯದಿರುವುದು
ಇದೆಲ್ಲದರ ಜೊತೆಗೆ ಕೈಗಳಲ್ಲಿರುವ ಸೂಕ್ಷ್ಮಜೀವಿಗಳು ನೇರವಾಗಿ ಮಹಿಳೆಯ ದೇಹಕ್ಕೆ ವರ್ಗಾಯಿಸಲ್ಪಡುತ್ತವೆ ಎಂದು ವೈದ್ಯರು ಹೇಳುತ್ತಾರೆ. ಇದು ಆಗಾಗ್ಗೆ ಯುಟಿಐ ಮತ್ತು ಸೋಂಕುಗಳಿಗೆ ಕಾರಣವಾಗಬಹುದು. ಆದ್ದರಿಂದ ರೋಮ್ಯಾನ್ಸ್ ಮಾಡುವ ಮೊದಲು ಕೈ ತೊಳೆಯುವುದು ಬಹಳ ಮುಖ್ಯ.
ಈ ಅಭ್ಯಾಸಗಳು ಚಿಕ್ಕದಾಗಿ ಕಾಣಿಸಬಹುದು. ಆದರೆ ಅವು ಮಹಿಳೆಯರ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ. ಆದ್ದರಿಂದ, ನೀವು ನಿಜವಾಗಿಯೂ ನಿಮ್ಮ ಸಂಗಾತಿಯನ್ನು ಪ್ರೀತಿಸುತ್ತಿದ್ದರೆ, ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಗಂಭೀರವಾಗಿ ಪರಿಗಣಿಸಿ. ಸಣ್ಣ ಮುನ್ನೆಚ್ಚರಿಕೆಗಳು ನಿಮ್ಮ ಸಂಬಂಧವನ್ನು ಬಲಪಡಿಸಬಹುದು ಮತ್ತು ನಿಮ್ಮಿಬ್ಬರ ಆರೋಗ್ಯವನ್ನು ರಕ್ಷಿಸಬಹುದು.