ಹೇಳದೇ ಕೇಳದೇ ಬರೋ kidney stoneಗೆ ಇಲ್ಲಿದೆ ಪರಿಹಾರ!

Published : May 25, 2022, 04:00 PM IST

ಇತ್ತೀಚೆಗಂತೂ ಜನರು ಬೇಸಿಗೆಯಲ್ಲಿ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಯೋಚಿಸಲು ಪ್ರಾರಂಭಿಸಿದ್ದಾರೆ. ಯಾಕೆಂದ್ರೆ ಬೇಸಿಗೆಯಲ್ಲಿ ಕಾಡುವ ಸಮಸ್ಯೆಗಳು ಹೆಚ್ಚಾಗಿರುತ್ತವೆ. ಹೆಚ್ಚಿನ ತಾಪಮಾನವು ಬೇಸಿಗೆಯಲ್ಲಿ ಡಿಹೈಡ್ರೇಷನ್ ಗೆ ಕಾರಣವಾಗಬಹುದು. ಇದಲ್ಲದೇ ಹಲವು ಸಮಸ್ಯೆಗಳು ಸಹ ಶಾಖದಿಂದಾಗಿ ಉಂಟಾಗುತ್ತದೆ. ಅದರಲ್ಲಿ ಕಿಡ್ನಿ ಸ್ಟೋನ್ ಕೂಡ ಒಂದಾಗಿದೆ. 

PREV
19
ಹೇಳದೇ ಕೇಳದೇ ಬರೋ kidney stoneಗೆ ಇಲ್ಲಿದೆ ಪರಿಹಾರ!

ಹೆಚ್ಚಿನ ಬಿಸಿಲಿನಿಂದಾಗಿ(Summer) ನಿರ್ಜಲೀಕರಣ (Dehydration) ಸಮಸ್ಯೆ ಉಂಟಾಗುವುದು ಆಗಾಗ್ಗೆ ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗುತ್ತದೆ. ಮೂತ್ರಪಿಂಡದ ಕಲ್ಲುಗಳು ಗಾತ್ರದಲ್ಲಿ ಬದಲಾಗುತ್ತಿರುತ್ತವೆ, ಅದು ಚಿಕ್ಕದಾಗಿರಬಹುದು ಮತ್ತು ಗಾಲ್ಫ್ ಚೆಂಡಿನಷ್ಟು ದೊಡ್ಡದಾಗಿರಬಹುದು. ಬೇಸಿಗೆಯಲ್ಲಿ ಈ ಸಮಸ್ಯೆಯಿಂದ ಹೆಚ್ಚಿನ ಜನರು ಬಳಲುತ್ತಾರೆ. ಇದಕ್ಕೆ ಪರಿಹಾರ ಎಂದರೆ ಮುಖ್ಯವಾಗಿ ನೀವು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. 

29

ಮೂತ್ರಪಿಂಡದ ಕಲ್ಲುಗಳು(Kidney stone) ಪುರುಷರು ಮತ್ತು ಮಹಿಳೆಯರ ಮೇಲೆ ಪರಿಣಾಮ ಬೀರುತ್ತವೆ, ಮತ್ತು ಅದರ ಅಪಾಯ ಸಾಮಾನ್ಯವಾಗಿ ವಯಸ್ಸಾದಂತೆ ಅಥವಾ ಈಗಾಗಲೇ ಮೂತ್ರಪಿಂಡದ ಕಲ್ಲುಗಳ (Kidney Stones) ಇತಿಹಾಸವನ್ನು ಹೊಂದಿದ್ದರೆ ಹೆಚ್ಚಾಗುತ್ತದೆ. ಕೆಲವೊಮ್ಮೆ ಸಮಸ್ಯೆಗಳು ಚಿಕ್ಕಮಟ್ಟದಲ್ಲಿಯೇ ನಿವಾರಣೆಯಾಗುತ್ತೆ. ಆದರೆ ಕೆಲವೊಮ್ಮೆ ವಿಪರೀತ ನೋವಿನಿಂದ ಕೂಡಿರುತ್ತದೆ. 

39

ಮೂತ್ರಪಿಂಡದ ಕಲ್ಲುಗಳ ಕೆಲವು ಸಾಮಾನ್ಯ ಲಕ್ಷಣಗಳಲ್ಲಿ ತೀವ್ರವಾದ ಸೆಳೆತ ಅಥವಾ ಬೆನ್ನು(Back) ಮತ್ತು ತೋಳುಗಳಲ್ಲಿ ನೋವು ಕೂಡ ಸೇರಿವೆ. ನೋವು ಆಗಾಗ್ಗೆ ಕಿಬ್ಬೊಟ್ಟೆಯ ಕೆಳಭಾಗ ಅಥವಾ ತೊಡೆಸಂದು ಭಾಗದಲ್ಲೂ ಕಂಡು ಬರುತ್ತೆ, ಮತ್ತು ಈ ನೋವುಗಳು ಹಾಗೇ ಉಳಿಯುವುದಿಲ್ಲ, ಬದಲಾಗಿ ಬಂದು ಹೋಗುತ್ತವೆ,  ಏಕೆಂದರೆ ದೇಹವು ಕಲ್ಲುಗಳನ್ನು ತೊಡೆದುಹಾಕಲು ಪ್ರಯತ್ನಿಸುತ್ತದೆ.

49

ಮೂತ್ರಪಿಂಡದ ಕಲ್ಲಿನ ಇತರ ಕೆಲವು ಲಕ್ಷಣಗಳನ್ನು ನೀವು ತಿಳಿದುಕೊಂಡರೆ ಉತ್ತಮ
- ಪದೇ ಪದೇ ಮೂತ್ರವಿಸರ್ಜನೆ Urination) ಮಾಡುವುದು
– ಮೂತ್ರ ವಿಸರ್ಜನೆ ಸಮಯದಲ್ಲಿ ಕಿರಿಕಿರಿಯ ಭಾವನೆ ಉಂಟಾಗುವುದು
– ವಿನಾಕಾರಣ ವಾಕರಿಕೆ ಮತ್ತು ವಾಂತಿಯ ಭಾವನೆ ಉಂಟಾಗುವುದು. 

59

– ರಕ್ತದಿಂದಾಗಿ ಮೂತ್ರವು ಗಾಢ ಅಥವಾ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಕೆಲವೊಮ್ಮೆ ಮೂತ್ರದಲ್ಲಿ ಸಣ್ಣ ಪ್ರಮಾಣದ ಕೆಂಪು ರಕ್ತ(Blood) ಕಣಗಳು ಸಹ ಹೊರ ಬರುತ್ತವೆ. ಈ ರೀತಿಯಾದಲ್ಲಿ ಕೂಡಲೇ ವೈದ್ಯರಲ್ಲಿ ಪರೀಕ್ಷೆ ಮಾಡಿಸಿ. ಇಲ್ಲವಾದರೆ ಗಂಭೀರ ಸಮಸ್ಯೆ ಉಂಟಾಗಬಹುದು.  
– ಪುರುಷರು ಶಿಶ್ನದ ತುದಿಯಲ್ಲಿ ನೋವನ್ನು ಅನುಭವಿಸಬಹುದು. ಇದನ್ನು ಕಡೆಗಣಿಸಬೇಡಿ. 

69

ಮೂತ್ರಪಿಂಡದ ಕಲ್ಲಿನ ಗಾತ್ರವು ಚಿಕ್ಕದಾಗಿದ್ದರೆ, ಅದನ್ನು ಔಷಧಿಗಳ (Medicine) ಮೂಲಕ ತೆಗೆದು ಹಾಕಬಹುದು ಮತ್ತು ಮೂತ್ರವಿಸರ್ಜನೆಯ ಮೂಲಕ ಹೊರತೆಗೆಯಬಹುದು, ಇದಕ್ಕಾಗಿ, ವೈದ್ಯರು ಸೂಚಿಸಿದ ಕೆಲವು ಔಷಧಿಗಳನ್ನು ತೆಗೆದುಕೊಳ್ಳಬಹುದು. ಇದರಿಂದ ಸುಲಭವಾಗಿ ಕಿಡ್ನಿ ಸ್ಟೋನ್ ನಿವಾರಣೆ ಮಾಡಬಹುದು.

79

ಆದರೆ ಮೂತ್ರದಲ್ಲಿನ ಕಲ್ಲು ಗಾತ್ರದಲ್ಲಿ ದೊಡ್ಡದಾಗಿದ್ದರೆ ನೋವು ಕೂಡ ಹೆಚ್ಚಾಗಿರುತ್ತದೆ. ಈ ಸಂದರ್ಭದಲ್ಲಿ ಮೂತ್ರ ಮಾಡುವಾಗ ಅಥವಾ ಇತರ ಸಂದರ್ಭದಲ್ಲಿ ಜೀವ ಹಿಂಡುವಂತಹ ನೋವನ್ನು ಅನುಭವಿಸುವಿರಿ. ನೀವು ತುಂಬಾ ತೀವ್ರವಾದ ನೋವಿನಿಂದ ಬಳಲುತ್ತಿದ್ದರೆ, ಶಸ್ತ್ರಚಿಕಿತ್ಸೆಯ (Surgery) ಅಗತ್ಯವಿರಬಹುದು. ಕೂಡಲೇ ವೈದ್ಯರನ್ನು ಸಂಪರ್ಕಿಸಿ. 

89
ಮೂತ್ರಪಿಂಡದ ಕಲ್ಲುಗಳನ್ನು ತಡೆಗಟ್ಟಲು ಏನು ಮಾಡಬಹುದು?

ಮೂತ್ರಪಿಂಡದ ಕಲ್ಲುಗಳನ್ನು ತಡೆಗಟ್ಟುವ ಸರಳ ಮಾರ್ಗವೆಂದರೆ ಚೆನ್ನಾಗಿ ಹೈಡ್ರೇಟ್ (Hydrate) ಆಗಿರುವುದು. ಇದರರ್ಥ ಬೇಸಿಗೆಯಲ್ಲಿ ಸಾಧ್ಯವಾದಷ್ಟು ನೀರು (Water) ಕುಡಿಯುತ್ತಲೇ ಇರಿ. ಈ ಸೀಸನ್ ನಲ್ಲಿ, ನೀವು ಯಾವುದೇ ವ್ಯಾಯಾಮವನ್ನು (Exercise) ಮಾಡುವಾಗ ಅಥವಾ ಆಟವನ್ನು ಆಡುವಾಗ, ನೀರು ಕುಡಿಯೋದನ್ನು ಮಿಸ್ ಮಾಡಬೇಡಿ. ಸಾದಾ ನೀರಿನಿಂದ ಹಿಡಿದು, ಹಣ್ಣಿನ ರಸಗಳು ಮತ್ತು ತರಕಾರಿ ರಸಗಳವರೆಗೆ, ಎಲ್ಲವನ್ನೂ ಸೇವಿಸಿ .

99

ಇದೆಲ್ಲದರ ಜೊತೆಗೆ ಆರೋಗ್ಯ ಮತ್ತು ಸಕ್ಕರೆ ಸೇವನೆಯನ್ನು (Sugar Consumption) ಸಮತೋಲನಗೊಳಿಸಲು, ಕ್ಯಾಲೋರಿಗಳು ಅಥವಾ ಕಡಿಮೆ ಕ್ಯಾಲೊರಿಗಳಿಲ್ಲದ ಡ್ರಿಂಕ್ಸ್ (Drinks) ಕುಡಿಯುವುದು ಉತ್ತಮ.ಆಲ್ಕೋಹಾಲ್(Alcohol) ಪಾನೀಯಗಳು ದೇಹದಿಂದ ನೀರನ್ನು ಹೀರಿಕೊಳ್ಳುತ್ತದೆ ಮತ್ತು ಅನಗತ್ಯ ಕ್ಯಾಲೋರಿಗಳನ್ನು ಹೆಚ್ಚಿಸುವುದರಿಂದ ಆಲ್ಕೋಹಾಲ್ ಸೇವನೆಯನ್ನು ತಪ್ಪಿಸೋದು ಉತ್ತಮ. 
 

Read more Photos on
click me!

Recommended Stories