ಮುಳ್ಳು ಚುಚ್ಚಿಸಿಕೊಂಡಿದ್ದೀರಾ? ನೋವು ಅನುಭವಿಸೋದು ಬೇಡ, ಇಲ್ಲಿದೆ ಟಿಪ್ಸ್

Published : May 24, 2022, 05:33 PM ISTUpdated : May 24, 2022, 05:51 PM IST

ಮನೆಯಲ್ಲಿದ್ದರೆ ಅಥವಾ ಆಟವಾಡಲು ಹೊರಗಡೆ ಹೋದಾಗ ಮುಳ್ಳು ಚುಚ್ಚುವುದು ಸಾಮಾನ್ಯ. ಕೆಲವೊಮ್ಮೆ ಮುಳ್ಳು ಆಳಕ್ಕೆ ಹೋಗಬಹುದು, ಇನ್ನು ಕೆಲವೊಮ್ಮೆ ಮುಳ್ಳು ಮೇಲೆಯೆ ಇರಬಹುದು, ಆದರೆ ತೆಗೆಯಲು ಕಷ್ಟವಾಗುತ್ತಿರಬಹುದು. ಅನೇಕ ಸಂದರ್ಭಗಳಲ್ಲಿ, ಕೆಲವೊಂದು ಟ್ರಿಕ್ಸ್ ಉಪಯೋಗಿಸಿ ಮನೆಯಲ್ಲಿ ಮುಳ್ಳನ್ನು ಸುರಕ್ಷಿತವಾಗಿ ಮುಳ್ಳನ್ನು ತೆಗೆಯಬಹುದು. ಆದರೆ ಅನೇಕ ಬಾರಿ ಗಾಯವು ಸೋಂಕಿಗೆ ಒಳಗಾದಾಗ ಅಥವಾ ಸ್ವತಃ ಅದನ್ನು ತೆಗೆದುಹಾಕಲು ನಿಮಗೆ ಸಾಧ್ಯವಾಗದಿದ್ದರೆ,  ವೈದ್ಯರನ್ನು ಭೇಟಿ ಮಾಡಬೇಕಾಗುತ್ತದೆ.

PREV
19
ಮುಳ್ಳು ಚುಚ್ಚಿಸಿಕೊಂಡಿದ್ದೀರಾ? ನೋವು ಅನುಭವಿಸೋದು ಬೇಡ, ಇಲ್ಲಿದೆ ಟಿಪ್ಸ್

ಇಲ್ಲಿ ಮುಳ್ಳನ್ನು ಹೇಗೆ ಸುಲಭವಾಗಿ ತೆಗೆದು ಹಾಕುವುದು ಮತ್ತು ಯಾವ ಸಮಯದಲ್ಲಿ ಡಾಕ್ಟರ್ ಅನ್ನು ಭೇಟಿಮಾಡಬೇಕು ಎಂದು ಹೇಳಲಾಗಿದೆ. ಈ ಸಿಂಪಲ್ ಟ್ರಿಕ್ಸ್ ಟ್ರೈ ಮಾಡುವ ಮೂಲಕ ನೀವು ಸುಲಭವಾಗಿ ಮುಳ್ಳನ್ನು(Splinter) ತೆಗೆದು ಹಾಕಬಹುದು. 

29

ಮೊದಲು ನಿಮ್ಮ ಕೈಗಳನ್ನು ಮತ್ತು ಬಾಧಿತ ಪ್ರದೇಶವನ್ನು ಬೆಚ್ಚಗಿನ, ಸೋಪಿನ(Soap) ನೀರಿನಿಂದ ತೊಳೆಯುವುದು ಅತ್ಯಗತ್ಯ. ಇದು ಸೋಂಕನ್ನು ತಡೆಗಟ್ಟಲು ಸಹಾಯ ಮಾಡುತ್ತೆ. ಮುಳ್ಳನ್ನು ತೆಗೆಯುವ ಮೊದಲು ಯಾವಾಗಲೂ ಎಚ್ಚರಿಕೆಯಿಂದ ಪರೀಕ್ಷಿಸಿ. ಅದು ನಿಮ್ಮ ಚರ್ಮವನ್ನು ಹೇಗೆ ಪ್ರವೇಶಿಸಿದೆ, ಅದು ಯಾವ ದಿಕ್ಕಿನಲ್ಲಿ ಹೋಗುತ್ತಿದೆ, ಮತ್ತು ಅದರ ಯಾವುದೇ ಭಾಗವು ನಿಮ್ಮ ಚರ್ಮದ ಹೊರಗೆ ಹರಡಿಲ್ಲವೆಂದು ನೋಡಿ. 

39

ಉತ್ತಮ ಲೈಟಿಂಗ್ (Lighting) ಮತ್ತು ಸಣ್ಣ ಗ್ಲಾಸ್ ಮುಳ್ಳುಗಳನ್ನು ಸುಲಭವಾಗಿ ನೋಡಲು ನಿಮಗೆ ಸಹಾಯ ಮಾಡುತ್ತೆ. ಮುಳ್ಳನ್ನು ಹೊರಗೆ ತಳ್ಳಲು ಎಂದಿಗೂ ಪ್ರಯತ್ನಿಸಬೇಡಿ. ಇದು ಸಣ್ಣ ತುಂಡುಗಳಾಗಿ ಒಡೆಯಲು ಕಾರಣವಾಗಬಹುದು ಮತ್ತು ಅದನ್ನು ತೆಗೆದುಹಾಕುವುದು ತುಂಬಾ ಕಷ್ಟವಾಗಬಹುದು.

49
ಪ್ಲಕ್ಕರ್ ಗಳು(Plucker)

ಮುಳ್ಳಿನ  ಒಂದು ಭಾಗವು ನಿಮ್ಮ ಚರ್ಮದ ಹೊರಗೆ ಇದ್ದಾಗ ಈ ವಿಧಾನವು ಉತ್ತಮವಾಗಿದೆ. ಇದಕ್ಕಾಗಿ, ನಿಮಗೆ ಪ್ಲಕ್ಕರ್, ಮೆಡಿಸಿನಲ್ ಆಲ್ಕೋಹಾಲ್ ಮತ್ತು ಹತ್ತಿ ಚೆಂಡು ಬೇಕು. ಹತ್ತಿಯ ಉಂಡೆಯನ್ನು ಆಲ್ಕೋಹಾಲ್ (Alchohol) ನಲ್ಲಿ ಅದ್ದಿ ಮುಳ್ಳು ಇರುವ ಜಾಗಕ್ಕೆ ಹಚ್ಚಿ. ನಂತರ ಅಂಟಿಕೊಂಡಿರುವ ಮುಳ್ಳಿನ  ಭಾಗವನ್ನು ಹಿಡಿದಿಡಲು ಪ್ಲಕ್ಕರ್ ಅನ್ನು ಬಳಸಿ. ಮುಳ್ಳು ಹೋದ ಅದೇ ದಿಕ್ಕಿನಿಂದ ಅದನ್ನು ಎಳೆಯಬೇಕು ಎಂಬುದನ್ನು ನೆನಪಿನಲ್ಲಿಡಿ.

59
ಸಣ್ಣ ಸೂಜಿ (Needle)

ಮುಳ್ಳುಗಳು ಸಂಪೂರ್ಣವಾಗಿ ನಿಮ್ಮ ಚರ್ಮದ ಕೆಳಗೆ ಇರುವಾಗ ಈ ವಿಧಾನವು ಅತ್ಯುತ್ತಮವಾಗಿದೆ. ಇದಕ್ಕಾಗಿ  ಸಣ್ಣ ಸೂಜಿಗಳು,  ಪ್ಲಕ್ಕರ್ ಗಳು, ಮೆಡಿಸಿನಲ್  ಆಲ್ಕೋಹಾಲ್ (Medicinal Alchohol) ಮತ್ತು ಹತ್ತಿ ಉಂಡೆಗಳು ಬೇಕಾಗುತ್ತವೆ. ಇದರಿಂದ ಸುಲಭವಾಗಿ ಮುಳ್ಳನ್ನು ಹೊರಕ್ಕೆ ತೆಗೆಯಬಹುದು. ಹೇಗೆ ನೋಡೋಣ… 

69

ಮೊದಲನೆಯದಾಗಿ, ಹತ್ತಿಯ ಉಂಡೆಯಿಂದ  ಆಲ್ಕೋಹಾಲ್ ಅನ್ನು ಹಚ್ಚಿ ಮತ್ತು ಸೂಜಿ ಮತ್ತು  ಪ್ಲಕ್ಕರ್ ಗಳನ್ನು ಡಿಇನ್ಫೆಕ್ಟ್ ಮಾಡಿ. ಗಾಯವಾದ ಸ್ಥಳದಿಂದ ನಿಮ್ಮ ಚರ್ಮವನ್ನು ನಿಧಾನವಾಗಿ ಮೇಲೆತ್ತಿ ಅಥವಾ ಕಟ್ (Cut) ಮಾಡಿ ಇದರಿಂದ ಮುಳ್ಳನ್ನು ತಲುಪಬಹುದು. ಒಮ್ಮೆ ನೀವು ಅದನ್ನು ಹಿಡಿದ ನಂತರ, ಅದು ಹೋದ ದಿಕ್ಕಿನಲ್ಲೇ ಅದನ್ನು ಎಳೆಯುವ ಮೂಲಕ ಅದನ್ನು ಹೊರತೆಗೆಯಲು  ಪ್ಲಕ್ಕರ್ ಗಳನ್ನು ಬಳಸಿ.

79
ಟೇಪ್ (Tape)

ನಿಮ್ಮ ಚರ್ಮದಲ್ಲಿ ಸಿಲುಕಿರುವ ಸಣ್ಣ ಮುಳ್ಳುಗಳಿಗೆ ಈ ವಿಧಾನವು ಉತ್ತಮ. ಇದಕ್ಕೆ ಪ್ಯಾಕಿಂಗ್ ಟೇಪ್ ಅಥವಾ ಡಕ್ಟ್ ಟೇಪ್ ನಂತಹ ಸಾಕಷ್ಟು ಅಂಟಾಗಿರುವ ಟೇಪ್ ಅಗತ್ಯವಿದೆ.  ಹಾಗಾದ್ರೆ ಟೇಪ್ ಬಳಸಿ ಮುಳ್ಳು ತೆಗೆಯೋದು ಹೇಗೆ ಎಂದು ಯೋಚನೆ ಮಾಡ್ತಿದ್ದೀರಾ? ಮುಂದೆ ಓದಿ ನಿಮಗೇನೆ ಗೊತ್ತಾಗುತ್ತೆ… 
 

89

ಮಾಡಬೇಕಾಗಿರುವುದು ಇಷ್ಟೇ, ಮುಳ್ಳನ್ನು ಹಿಡಿಯಲು ಟೇಪ್ ನಿಂದ ಆ ಜಾಗಕ್ಕೆ ತುಂಬಾ ಮೃದುವಾಗಿ ಸ್ಪರ್ಶಿಸುವುದು. ನಂತರ ಅದನ್ನು ಟೇಪ್ ಗೆ ನಿಧಾನವಾಗಿ ಅಂಟಿಸಿ. ಈ ಮುಳ್ಳು ಟೇಪ್ ಗೆ ಅಂಟಿಕೊಂಡ ನಂತರ, ನಿಮ್ಮ ಚರ್ಮದಿಂದ ಟೇಪ್ ಅನ್ನು ನಿಧಾನವಾಗಿ ಎಳೆಯಿರಿ. ಅಂದರೆ, ಮುಳ್ಳನ್ನು ಸಹ ಟೇಪ್ ನಿಂದ ತೆಗೆದು ಹಾಕಲಾಗುತ್ತದೆ. ಮುಳ್ಳನ್ನು ತೆಗೆದ ತಕ್ಷಣ, ಆ ಸ್ಥಳವನ್ನು ಬೆಚ್ಚಗಿನ ನೀರು ಮತ್ತು ಸಾಬೂನಿನಿಂದ ತೊಳೆಯಿರಿ. ಗಾಯವನ್ನು ಚೆನ್ನಾಗಿ ಒಣಗಿಸಿ, ಮತ್ತು ಬ್ಯಾಂಡೇಜ್ ನಿಂದ(Bandage) ಮುಚ್ಚಿ.

99

ಗಾಯ(Wound) ತುಂಬಾ ದೊಡ್ಡದಾಗಿರುವಾಗ ಅಥವಾ ಆಳವಾಗಿದ್ದಾಗ ನೀವು ವೈದ್ಯರ ಬಳಿಗೆ ಹೋಗಬೇಕು. ಅಲ್ಲದೆ ನಿಮ್ಮ ಗಾಯವು ಸೋಂಕಿಗೆ ಒಳಗಾಗಿದೆ ಎಂದು ನೀವು ಶಂಕಿಸಿದರೆ, ಮತ್ತು ಆ ಸ್ಥಳದಲ್ಲಿ ಊತ, ಕೆಂಪಾಗುವಿಕೆ, ತೀವ್ರ ನೋವು ಕಾಣಿಸಿಕೊಂಡರೆ, ನೀವು ತಕ್ಷಣವೇ ನಿಮ್ಮ ವೈದ್ಯರನ್ನು ಭೇಟಿಯಾಗಬೇಕು. ವೈದ್ಯರ ಬಳಿಗೆ ಹೋಗುವ ಮೊದಲು ಗಾಯವನ್ನು ಬ್ಯಾಂಡೇಜ್ ನಿಂದ ಮುಚ್ಚಿ ಮತ್ತು ರಕ್ತಸ್ರಾವವಾಗುತ್ತಿದ್ದರೆ ಅದನ್ನು ನಿಲ್ಲಿಸಲು ಪ್ರಯತ್ನಿಸಿ.

Read more Photos on
click me!

Recommended Stories