ಸಾಮಾನ್ಯವಾಗಿ ಮಳೆ, ಚಳಿಗಾಲದಲ್ಲಿ ಮಕ್ಕಳು, ದೊಡ್ಡವರೆನ್ನದೆ ಎಲ್ಲರಿಗೂ ಶೀತ, ಕೆಮ್ಮು, ಮೂಗು ಕಟ್ಟುವಿಕೆ, ಗಂಟಲು ನೋವು, ಜ್ವರದಂತಹ ಸಮಸ್ಯೆಗಳು ಬರುತ್ತವೆ. ಇವುಗಳನ್ನು ಸರಿಪಡಿಸಲು ಶುಂಠಿ ಟೀ ಕುಡಿಯಬಹುದು. ಅಷ್ಟೇ ಅಲ್ಲದೆ, ದೇಹದ ತೂಕ ಇಳಿಸಲೂ ಶುಂಠಿ ಟೀ ಸಹಾಯ ಮಾಡುತ್ತದೆ. ಶುಂಠಿಯಲ್ಲಿರುವ ಜಿಂಜರಾಲ್ ದೇಹದ ಕ್ಯಾಲೊರಿಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.