Health tips : ಹಲ್ಲುಗಳಲ್ಲಿ ಬ್ರೇಸೆಸ್ ಧರಿಸುವರು ಈ ವಿಷಯಗಳನ್ನು ನೆನಪಿನಲ್ಲಿಡಿ

First Published | Mar 15, 2022, 4:26 PM IST

ಜನರು ತಮ್ಮ ಹಲ್ಲುಗಳಿಗೆ ಸರಿಯಾದ ಆಕಾರವನ್ನು ನೀಡಲು ಬ್ರೇಸೆಸ್ ಅಥವಾ ತಂತಿಗಳನ್ನು ಧರಿಸುತ್ತಾರೆ. ಇದು ಹಲ್ಲುಗಳನ್ನು ಬಹಳ ಬೇಗ ಆಕಾರಕ್ಕೆ ಬರುವಂತೆ ಮಾಡುತ್ತದೆ. ಆದರೆ ಈ ಬ್ರೇಸೆಸ್ ಗಳು ಅನೇಕ ಸಮಸ್ಯೆಗಳಿಗೆ ಕಾರಣಬಹುದು. ಅವುಗಳನ್ನು ಸರಿಯಾದ ರೀತಿಯಲ್ಲಿ ನೋಡಿಕೊಂಡರೆ, ಆಗ ಯಾವುದೇ ಸಮಸ್ಯೆಗಳನ್ನು ಎದುರಿಸಬೇಕಾಗಿಲ್ಲ. ಆದರೆ ಎಲ್ಲಿ ನಿರ್ಲಕ್ಷ್ಯ ಇರುತ್ತದೆಯೋ ಅಲ್ಲಿ ಹಲ್ಲುಗಳಿಗೆ ಸಂಬಂಧಿಸಿದ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. 

braces

ಅನೇಕ ಜನರು ಉಗುರುಗಳನ್ನು ಅಗಿಯುವುದು ಅಥವಾ ಪೆನ್ಸಿಲ್ ಗಳು ಅಥವಾ ಪೆನ್ನುಗಳನ್ನು ಅಗಿಯುವ ಅಭ್ಯಾಸವನ್ನು ಹೊಂದಿರುತ್ತಾರೆ, ಅಂತಹ ಅಭ್ಯಾಸಗಳು ಬ್ರೇಸೆಸ್ ಗೆ(Braces) ಸಾಕಷ್ಟು ಹಾನಿಯನ್ನುಂಟು ಮಾಡುತ್ತವೆ ಮತ್ತು ಬ್ರೇಸೆಸ್ ಹಾನಿಗೊಳಗಾದರೆ, ಅದು ಖಂಡಿತವಾಗಿಯೂ  ಹಲ್ಲುಗಳ ಮೇಲೆ ಪರಿಣಾಮ ಬೀರುತ್ತದೆ. 

braces

ಬ್ರೇಸೆಸ್ ಗಳನ್ನು ಧರಿಸುವಾಗ, ನೆನಪಿನಲ್ಲಿಟ್ಟುಕೊಳ್ಳಲು ಬಹಳ ಮುಖ್ಯವಾದ ಕೆಲವು ಸಲಹೆಗಳನ್ನು ಇಲ್ಲಿ  ನೀಡಲಾಗಿದೆ. ಅವುಗಳನ್ನು ನೆನಪಿನಲ್ಲಿಟ್ಟುಕೊಂಡರೆ ಹಲ್ಲಿನ(Teeth) ಸಮಸ್ಯೆಗಳೆಲ್ಲವೂ ದೂರವಾಗುತ್ತವೆ.

Latest Videos


braces

ದಿನಕ್ಕೆ ಎರಡು ಬಾರಿ ಬ್ರಷ್(Brush) ಮಾಡಿ 

ಅಂದ ಹಾಗೆ,  ದಿನಕ್ಕೆ ಎರಡು ಬಾರಿ ಹಲ್ಲುಜ್ಜಬೇಕು, ಆದರೆ ಹಲ್ಲುಗಳಲ್ಲಿ ಬ್ರೇಸೆಸ್ ಗಳು ಇದ್ದಾಗ, ಬ್ರಷ್ ಮಾಡುವುದು ಹೆಚ್ಚು ಮುಖ್ಯವಾಗುತ್ತದೆ. ಬ್ಯಾಕ್ಟೀರಿಯಾವು  ಹಲ್ಲುಗಳು ಮತ್ತು ಬ್ರೇಸೆಸ್ ಗಳಲ್ಲಿ ಹೆಚ್ಚು ಕಾಲ ಸಿಕ್ಕಿಹಾಕಿಕೊಂಡಷ್ಟೂ, ಹಲ್ಲುಗಳು ಕೊಳೆಯುವುದು, ಕಲೆ ಅಥವಾ ಒಸಡಿನ ಸೋಂಕಿನ ಸಮಸ್ಯೆಗಳ ಅಪಾಯವು ಹೆಚ್ಚುತ್ತದೆ. 

braces

ಬ್ರೇಸಸ್ ಇದ್ದರೆ  ಬಾಯಿಯನ್ನು(Mouth) ನೀರಿನಿಂದ ತೊಳೆಯಿರಿ ಮತ್ತು ಊಟದ ನಂತರ ಪ್ರತಿ ಬಾರಿ ಹಲ್ಲುಗಳನ್ನು ಚೆನ್ನಾಗಿ ಬ್ರಷ್ ಮಾಡಿ, ಇದರಿಂದ ನಿಮ್ಮ ಬ್ರೇಸೆಸ್ ಗಳಲ್ಲಿ ಉಳಿದಿರುವ ಎಲ್ಲ ಆಹಾರ ಪದಾರ್ಥಗಳನ್ನು ಸುಲಭವಾಗಿ ತೆಗೆದುಹಾಕಲು ಸಾಧ್ಯವಾಗುತ್ತದೆ.

braces

ಹಲ್ಲುಗಳ ಸ್ವಚ್ಛಗೊಳಿಸುವಿಕೆ ನೆನಪಿನಲ್ಲಿಡಿ 

 ಹಲ್ಲುಗಳಲ್ಲಿ ಬ್ರೇಸೆಸ್ ಇದ್ದಾಗ, ಬ್ರಷ್ ನಿಂದ ಹಲ್ಲುಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದು ಕಷ್ಟ. ಬ್ರೇಸ್ ಗಳನ್ನು ಧರಿಸುವಾಗ ಫ್ಲೋಸಿಂಗ್(Flossing) ಮಾಡುವ ಸರಿಯಾದ ತಂತ್ರವು ಕುಳಿಗಳ ಒಸಡುಗಳ ಊತ ಮತ್ತು ಕೆಟ್ಟ ಉಸಿರಾಟದಂತ ಸಮಸ್ಯೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.  

braces

ದಿನಕ್ಕೆ ಒಮ್ಮೆಯಾದರೂ  ಹಲ್ಲುಗಳನ್ನು(Tooth) ಫ್ಲೋಸ್ ಮಾಡುತ್ತೀರಿ ಎಂದು ಖಚಿತಪಡಿಸಿಕೊಳ್ಳಿ. ಫ್ಲೋಸಿಂಗ್ ಗೆ ಅವಸರ ಮಾಡಬೇಡಿ. ಏಕೆಂದರೆ ಇದು  ಬ್ರೇಸೆಸ್ ಗಳೊಂದಿಗೆ ಮೂರು ಪಟ್ಟು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಮತ್ತು ಇದು ಹಲ್ಲುಗಳಲ್ಲಿನ ಉಳಿದ ಕಣಗಳನ್ನು ತೆಗೆದು ಹಾಕುವುದರಿಂದ ಮಲಗುವ ಮೊದಲು ಫ್ಲೋಸ್ ಮಾಡುವುದು ಇನ್ನೂ ಉತ್ತಮ.

braces

ದಂತವೈದ್ಯರಿಂದ(Dentist) ಸಲಹೆ ತೆಗೆದುಕೊಳ್ಳುತ್ತಲೇ ಇರಿ 

ಬ್ರೇಸೆಸ್ ಹೊಂದಿದ್ದರೆ. ಕಾಲಕಾಲಕ್ಕೆ ದಂತವೈದ್ಯರ ಬಳಿಗೆ ಹೋಗುವುದು ಬಹಳ ಮುಖ್ಯ. ಏಕೆಂದರೆ ದಂತವೈದ್ಯರು ಕಾಲಕಾಲಕ್ಕೆ  ಹಲ್ಲುಗಳನ್ನು ಸರಿಯಾಗಿ ಪರಿಶೀಲಿಸುತ್ತಾರೆ ಮತ್ತು ಬ್ರೇಸೆಸ್ ಗಳನ್ನು ಸರಿಪಡಿಸುತ್ತಾರೆ. 

braces

ಬ್ರೇಸಸ್ ಚಿಕಿತ್ಸೆಯು ಆರ್ಥೋ ದಂತವೈದ್ಯರು ಒದಗಿಸುವ ಚಿಕಿತ್ಸೆಗಳನ್ನು ಒಳಗೊಂಡಿದೆ. ಆದ್ದರಿಂದ, ಕಾಲಕಾಲಕ್ಕೆ ಹಲ್ಲುಗಳನ್ನು ಬ್ರೇಸೆಸ್ ಗಳಿಂದ ಪರೀಕ್ಷಿಸುವುದು ಬಹಳ ಮುಖ್ಯವಾಗಬಹುದು. ದಂತ ವೈದ್ಯರು ನೀಡುವ ಸಲಹೆಯನ್ನು  ಪಾಲಿಸಲೇಬೇಕು ಮತ್ತು ಅದೇ ಸಮಯದಲ್ಲಿ  ಹಲ್ಲುಗಳ ಸ್ವಚ್ಛತೆಯ(Teeth cleaning) ಬಗ್ಗೆ ಗಮನ ನೀಡಬೇಕು.

click me!