ಹಳೆ ಕೀಲು ನೋವು ಕಾಡುತಿದ್ದರೆ, ತಕ್ಷಣವೇ ಈ ಪರಿಣಾಮಕಾರಿ ಮನೆಮದ್ದು ಟ್ರೈ ಮಾಡಿ!

First Published | Mar 11, 2022, 5:05 PM IST

ಇತ್ತೀಚಿನ ದಿನಗಳಲ್ಲಿ ಕೀಲು ನೋವು ದೊಡ್ಡ ಸಮಸ್ಯೆಗಳಲ್ಲಿ ಒಂದಾಗಿದೆ. ವೃದ್ಧರು ಮಾತ್ರವಲ್ಲ, ಯುವಕರು ಕೂಡ ಇದಕ್ಕೆ ಬಲಿಯಾಗುತ್ತಿದ್ದಾರೆ. ಕುಳಿತುಕೊಳ್ಳುವ ಕೆಲಸಗಳು, ದೈಹಿಕವಾಗಿ ಸಕ್ರಿಯವಾಗಿರದಿರುವುದು ಮತ್ತು ಕಳಪೆ ಆಹಾರ ಸೇವನೆ ಇದಕ್ಕೆ ದೊಡ್ಡ ಕಾರಣಗಳಾಗಿವೆ. ನಿಸ್ಸಂಶಯವಾಗಿ ಇದು ತಕ್ಷಣ ಚಿಕಿತ್ಸೆ ಮಾಡಬೇಕಾದ ನೋವಿನ ಸಮಸ್ಯೆ.

ಕೀಲುಗಳ ಸಾಮಾನ್ಯ ಕಾರ್ಯನಿರ್ವಹಣೆ ಮೇಲೆ ಪರಿಣಾಮ ಬೀರುವ ಅನೇಕ ಪರಿಸ್ಥಿತಿಗಳಿವೆ. ಇದು ವಿವಿಧ ರೋಗಗಳಿಗೆ ಕಾರಣವಾಗುತ್ತದೆ. ಆಘಾತದಿಂದಾಗಿ ಗಾಯವು ಅವುಗಳಲ್ಲಿ ಒಂದಾಗಿದೆ. ಕೀಲುಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸದಿದ್ದರೆ, ವಯಸ್ಸಾದಂತೆ ಕೀಲುಗಳ ಸ್ಥಿತಿ ಹದಗೆಡಬಹುದು. ಕೀಲುಗಳು ಹಾನಿಯಾದಾಗ ಕೀಲುಗಳಲ್ಲಿ ನೋವು (Pain), ಹಠಾತ್ತಾಗಿ ಚಲಿಸಲು ತೊಂದರೆ, ಬಿಗಿತ, ಊತ ಇತ್ಯಾದಿಗಳು ಉಂಟಾಗಬಹುದು. ಈ ಸ್ಥಿತಿಯು ಸಂಧಿವಾತದಂತಹ ರೋಗದ ರೂಪವನ್ನು ಸಹ ಪಡೆಯುತ್ತದೆ.
 

ಆಯುರ್ವೇದದ(Ayurveda) ಪ್ರಕಾರ ಕೀಲುಗಳು ದುರ್ಬಲಗೊಳ್ಳಲು ವಿಷದ ಶೇಖರಣೆಯೇ ಕಾರಣ. ದೀರ್ಘಕಾಲದ ವರೆಗೆ ವಿಷದ ಸಂಗ್ರಹದಿಂದ, ಕೀಲುಗಳು ಉರಿಯೂತಕ್ಕೆ ಒಳಗಾಗುತ್ತವೆ ಮತ್ತು ಕಾಲಾನಂತರದಲ್ಲಿ ಅವುಗಳ ಶಕ್ತಿ ಕಡಿಮೆಯಾಗುತ್ತದೆ. ಮೊಣಕಾಲಿನ ಕೀಲಿನ ವಿಷಯದಲ್ಲೂ ಇದು ನಿಜ. ಕೀಲು ನೋವು  ನಿವಾರಣೆಗೆ ಆಯುರ್ವೇದ ತಜ್ಞರ ಕೆಲವು ಪರಿಣಾಮಕಾರಿ ಆಯುರ್ವೇದ ಪರಿಹಾರಗಳನ್ನು ಇಲ್ಲಿ ತಿಳಿಸಲಾಗಿದೆ. 

Tap to resize

ಉಪ್ಪು(Salt) ಮತ್ತು ಎಣ್ಣೆಯನ್ನು ಕಡಿಮೆ ಸೇವಿಸಿ.
ನೀವು ಹೆಚ್ಚು ಹುಳಿ, ಉಪ್ಪು, ಡೀಪ್ ಫ್ರೈಡ್(Deep fried) ಮತ್ತು ಹುದುಗಿಸಿದ ಆಹಾರವನ್ನು ಯಾವುದೇ ಸಮಯದಲ್ಲಿ ತಪ್ಪಿಸಬೇಕು. ಈ ವಿಷಯಗಳು ಕೀಲುಗಳ ಮೇಲೆ ಪರಿಣಾಮ ಬೀರುವುದಲ್ಲದೆ ಇತರ ಅಂಗಗಳಿಗೆ ಹಾನಿಮಾಡುತ್ತವೆ. ಆದುದಾರಿಂದ ಸಾಧ್ಯವಾದಷ್ಟು ಕಡಿಮೆ ಉಪ್ಪು ಸೇವಿಸಿ. 

ವಾತ ಹೆಚ್ಚಿಸುವ ಆಹಾರ ತಪ್ಪಿಸಿ
ನೀವು ವಾತ ಹೆಚ್ಚಿಸುವ ಆಹಾರ ಮತ್ತು ವಿಹಾರವನ್ನು ತಪ್ಪಿಸಬೇಕು. ಒಣ ಮತ್ತು ಹಳಸಿದ ಆಹಾರ ಮತ್ತು ವಿಹಾರದಂತಹ ಕ್ರಮಗಳಾದ ಅತಿಯಾದ ವ್ಯಾಯಾಮ, ತಡವಾಗಿ ಎಚ್ಚರವಿರುವುದು, ಒತ್ತಡದ ಜೀವನಶೈಲಿ (Life stle) ಇತ್ಯಾದಿಗಳನ್ನು ತಪ್ಪಿಸಬೇಕು. ಇದರಿಂದ ಕೀಲುನೋವು ಹೆಚ್ಚುತ್ತದೆ. 

ಆರೋಗ್ಯಕರ ಕೊಬ್ಬನ್ನು ತೆಗೆದುಕೊಳ್ಳಿ
ತುಪ್ಪ, ಎಳ್ಳೆಣ್ಣೆ, ಆಲಿವ್ ಎಣ್ಣೆ(Olive oil) ಇತ್ಯಾದಿಗಳನ್ನು ಮಾತ್ರ ನಿಮ್ಮ ಆಹಾರದಲ್ಲಿ ಬಳಸಿ. ಆರೋಗ್ಯಕರ ಕೊಬ್ಬು ಈ ವಿಷಯಗಳಲ್ಲಿ ಕಂಡುಬರುತ್ತದೆ, ಇದು ಕೀಲುಗಳು ಸೇರಿದಂತೆ ಒಟ್ಟಾರೆ ಆರೋಗ್ಯಕ್ಕೆ ಅತ್ಯಗತ್ಯವಾಗಿದೆ.ಆದುದರಿಂದ ಉತ್ತಮ ಆಹಾರ ಸೇವಿಸಿ. 

ಅಭ್ಯಂಗ ಮಸಾಜ್(Oil Massage) ಉತ್ತಮ ಮಾರ್ಗ
ಇದು ಎಲ್ಲಾ ರೀತಿಯ ಕೀಲು ನೋವಿಗೆ ಅತ್ಯುತ್ತಮ ಪರಿಹಾರವಾಗಿದೆ. ಎಳ್ಳೆಣ್ಣೆ, ಸಾಸಿವೆ ಎಣ್ಣೆ, ಹರಳೆಣ್ಣೆ ಇವು ಅಡುಗೆ ಮನೆಯಲ್ಲಿ ಸುಲಭವಾಗಿ ಸಿಗುವ ಕೆಲವು ಎಣ್ಣೆಗಳು, ನೋವು ನಿವಾರಣೆಗೆ ಕೀಲುಗಳ ಮೇಲೆ ಹಚ್ಚಬಹುದು. ಮಹಾ ನಾರಾಯಣ ಎಣ್ಣೆ, ನಿರ್ಗುಂಡಿ ಎಣ್ಣೆ, ಕೊಟ್ಟಂಚುಕಡಿ ತೈಲಂ, ಸಹಚರಾದಿ ತೈಲಂ, ಧನ್ವಂತರಂ ತೈಲಂ ಮುಂತಾದ ನೋವಿಗೆ ಸಹಾಯ ಮಾಡಬಲ್ಲ ಕೆಲವು ಆಯುರ್ವೇದ ತೈಲಗಳು.

ಗಿಡಮೂಲಿಕೆಗಳು ಸಹ ಪರಿಣಾಮಕಾರಿಯಾಗಿವೆ.
ಕೀಲು ನೋವಿಗೆ ಉತ್ತಮವಾಗಿ ಕೆಲಸ ಮಾಡುವ ಕೆಲವು ಆಯುರ್ವೇದ ಗಿಡಮೂಲಿಕೆಗಳೆಂದರೆ- ಶಲಾಕಿ, ಅಶ್ವಗಂಧ, ನಿರ್ಗುಂಡಿ, ರಾಸ್ನಾ, ಅರಿಶಿನ, ಶುಂಠಿ(Ginger), ಇತ್ಯಾದಿ. ಇವುಗಳನ್ನು ತೆಗೆದುಕೊಳ್ಳುವುದರಿಂದಲೂ ನಿಮಗೆ ಉತ್ತಮ ಸದೃಢ ಅರೋಗ್ಯ ಪಡೆದುಕೊಳ್ಳುವ ಸಾಧ್ಯತೆ ಇದೆ. 

Latest Videos

click me!