Food And Drinks: ಈ 5 ವಸ್ತುಗಳು ಕೇವಲ 2 ದಿನದಲ್ಲಿ ವಾಸನೆಯುಕ್ತ ಮೂತ್ರ ಸಮಸ್ಯೆ ನಿವಾರಿಸುತ್ತವೆ!

Suvarna News   | Asianet News
Published : Mar 12, 2022, 03:01 PM IST

ಸಾಮಾನ್ಯವಾಗಿ ಮೂತ್ರದಲ್ಲಿ ಸ್ವಲ್ಪ ವಾಸನೆಯಿರುವುದಾಗಿದ್ದರೂ ಕೆಲವರ ಮೂತ್ರದಲ್ಲಿ ಹೆಚ್ಚು ವಾಸನೆ ಬರುತ್ತದೆ. ಸಾಕಷ್ಟು ನೀರು ಕುಡಿಯದೇ ಇರುವ ಕಾರಣ ಮೂತ್ರದ ಬಣ್ಣ ಹಳದಿ ಮತ್ತು ವಾಸನೆಯಿಂದ ಕೂಡಿರುತ್ತದೆ ಎಂಬ ನಂಬಿಕೆ ಇದೆ. ಆದಾಗ್ಯೂ, ಅನೇಕ ಆಹಾರ ಪದಾರ್ಥಗಳಿವೆ, ಇದು ಮೂತ್ರದ ಬಣ್ಣ ಮತ್ತು ವಾಸನೆಯ ಮೇಲೆ ಪರಿಣಾಮ ಬೀರುತ್ತದೆ.   

PREV
110
Food And Drinks: ಈ 5  ವಸ್ತುಗಳು ಕೇವಲ 2 ದಿನದಲ್ಲಿ ವಾಸನೆಯುಕ್ತ ಮೂತ್ರ ಸಮಸ್ಯೆ ನಿವಾರಿಸುತ್ತವೆ!
smelly urine

ದುರ್ವಾಸನೆ ಬೀರುವ ಮೂತ್ರವಿಸರ್ಜನೆಗೆ(Urination) ಇತರ ಕಾರಣಗಳೆಂದರೆ ಮೂತ್ರಪಿಂಡದ ಸಮಸ್ಯೆಗಳು, ಸೋಂಕುಗಳು, ಯಾವುದೇ ಯಕೃತ್ತಿಗೆ ಸಂಬಂಧಿಸಿದ ರೋಗ ಅಥವಾ ಅಧಿಕ ರಕ್ತದೊತ್ತಡ, ಇತ್ಯಾದಿ. ಈ ಸಮಸ್ಯೆಯನ್ನು ನಿವಾರಣೆ ಮಾಡಿ ವಾಸನೆ ರಹಿತ ಮೂತ್ರ ವಿಸರ್ಜನೆ ಮಾಡಲು ನೀವು ಈ ಟಿಪ್ಸ್ ಪಾಲಿಸಿ.

210
smelly urine

ಕೆಲವೊಮ್ಮೆ ಮೂತ್ರದ ಬಣ್ಣ (Urine color)ಬದಲಾಗುವುದು ಅಥವಾ ವಾಸನೆ ಬದಲಾಗುವುದು ಸಾಮಾನ್ಯ ಸಮಸ್ಯೆಯಾಗಿದೆ, ಆದರೆ  ಆಗಾಗ್ಗೆ ಈ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ, ಇದು ಗಂಭೀರ ಆರೋಗ್ಯ ಸಮಸ್ಯೆಯ ಸಂಕೇತವಾಗಿರಬಹುದು, ಇದನ್ನು ತಕ್ಷಣ ಚಿಕಿತ್ಸೆ ಮಾಡಬೇಕಾಗುತ್ತದೆ.

310
smelly urine

ಇದ್ದಕ್ಕಿದ್ದಂತೆ ಮೂತ್ರದ ಬಣ್ಣದ ಬದಲಾವಣೆ ಮತ್ತು ಹೆಚ್ಚು ವಾಸನೆಯುಕ್ತ ಮೂತ್ರ ಮಾಡುವುದು ಮೂತ್ರನಾಳದ ಸೋಂಕು (ಯುಟಿಐ)(UTI) ಅಥವಾ ಮೂತ್ರಪಿಂಡದ ಸೋಂಕಿನ ಲಕ್ಷಣಗಳಾಗಿರಬಹುದು ಎಂದು ತಜ್ಞರು ನಂಬುತ್ತಾರೆ. ಹಾಗಾದಾಗ ನೀವು ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಆದಾಗ್ಯೂ, ಅದರಿಂದ ನಿಮಗೆ ಪರಿಹಾರವನ್ನು ನೀಡುವ ಕೆಲವು ಕ್ರಮಗಳಿವೆ. ದೊಡ್ಡ ವಿಷಯವೆಂದರೆ ವಿಜ್ಞಾನಿಗಳು ಸಹ ಈ ಕ್ರಮಗಳನ್ನು ಬೆಂಬಲಿಸುತ್ತಾರೆ.

410
smelly urine

ಸಾಕಷ್ಟು ನೀರು(Water) ಕುಡಿಯಿರಿ ಮತ್ತು ನೀರಿನ ವಸ್ತುಗಳನ್ನು ತಿನ್ನಿ.
ಮೂತ್ರದ ವಾಸನೆ ಅಥವಾ ಅದರ ಬಣ್ಣವನ್ನು ಬದಲಾಯಿಸುವುದು ಯುಟಿಐನ ಸಂಕೇತವಾಗಿರಬಹುದು ಆದ್ದರಿಂದ ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ಸಾಕಷ್ಟು ನೀರು ಕುಡಿಯುವುದು. ಹೆಚ್ಚು ನೀರು ಕುಡಿಯುವುದರಿಂದ ಮೂತ್ರ ಪಿಂಡದ ಹಲವು ಸಮಸ್ಯೆಗಳನ್ನು ನಿವಾರಣೆ ಮಾಡಬಹುದು. 

510
smelly urine

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡಯಾಬಿಟಿಸ್ ಅಂಡ್ ಡೈಜೆಸ್ಟಿವ್ ಅಂಡ್ ಮೂತ್ರಪಿಂಡ(Kidney) ರೋಗಗಳ (ಎನ್ ಐಡಿಡಿಕೆ) ಪ್ರಕಾರ, ನೀರು ಕುಡಿಯುವುದರಿಂದ ನಿಮ್ಮ ಸೋಂಕಿಗೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ನಿವಾರಿಸಲು ಸಹಾಯ ಮಾಡುತ್ತದೆ. ದಿನಕ್ಕೆ ಕನಿಷ್ಠ 8 ಲೋಟ ನೀರು ಕುಡಿಯಿರಿ.

610
smelly urine

ವಿಟಮಿನ್ ಸಿ(Vitamin C) ವಸ್ತುಗಳ ಸೇವನೆಯನ್ನು ಹೆಚ್ಚಿಸಿ
ಈ ಸಮಸ್ಯೆಯನ್ನು ತಪ್ಪಿಸಲು ನೀವು ವಿಟಮಿನ್ ಸಿ ಸಮೃದ್ಧ ಆಹಾರಗಳನ್ನು ಹೆಚ್ಚು ಸೇವಿಸಬೇಕು. ವಿಟಮಿನ್ ಸಿ ಮೂತ್ರವನ್ನು ಹೆಚ್ಚು ಆಮ್ಲೀಯವಾಗಿಸುತ್ತದೆ. ಇದು ಮೂತ್ರನಾಳದಲ್ಲಿ ಬ್ಯಾಕ್ಟೀರಿಯಾಗಳು ವೃದ್ಧಿಯಾಗುವುದನ್ನು ತಡೆಯುತ್ತದೆ. 

710
smelly urine

ಆದಾಗ್ಯೂ ಯುಟಿಐಗಳ ತೀವ್ರ ಸಂದರ್ಭದಲ್ಲಿ ಹುಳಿ ಅಥವಾ ಇತರ ಆಮ್ಲೀಯ ಆಹಾರಗಳನ್ನು ತಪ್ಪಿಸಬೇಕು. ಇದಕ್ಕಾಗಿ ಕಿತ್ತಳೆ(Orange), ಋತುಮಾನಕ್ಕೆ ಅನುಗುಣವಾದ ಹಣ್ಣುಗಳು ಇತ್ಯಾದಿಗಳ ಸೇವನೆಯನ್ನು ಹೆಚ್ಚಿಸಬೇಕು. ಇದರಿಂದ ಉತ್ತಮ ಅರೋಗ್ಯ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ. 

810
smelly urine

ಕ್ರ್ಯಾನ್ಬೆರಿ(Cranberry) ರಸವನ್ನು ಕುಡಿಯಿರಿ
ಮೂತ್ರವಿಸರ್ಜನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತಪ್ಪಿಸಲು ಕ್ರ್ಯಾನ್ಬೆರಿ ರಸವು  ಪ್ರಯೋಜನಕಾರಿಯಾಗಿದೆ. ಇದನ್ನು ದೀರ್ಘಕಾಲದಿಂದ ಯುಟಿಐಗಳಿಗೆ ಮನೆ ಪರಿಹಾರವಾಗಿ ಬಳಸಲಾಗುತ್ತಿದೆ. ಒಂದು ಅಧ್ಯಯನದ ಪ್ರಕಾರ, ಕ್ರ್ಯಾನ್ಬೆರಿಗಳಲ್ಲಿ ಪ್ರೊ ಆಂಥೋಸಯಾನಿಡಿನ್ ಇದೆ, ಇದು ಬ್ಯಾಕ್ಟೀರಿಯಾವನ್ನು ಹೊರಹಾಕುತ್ತದೆ ಮತ್ತು ಸೋಂಕುಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

910
smelly urine

ಆಪಲ್ ವಿನೆಗರ್(Apple Vinegar)
2018 ರಲ್ಲಿ ಪ್ರಕಟವಾದ ಅಧ್ಯಯನ ವರದಿಯು ಆಪಲ್ ವಿನೆಗರ್ ಕೆಲವು ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ ಎಂದು ತೋರಿಸಿದೆ, ಇದು ಮೂತ್ರವಿಸರ್ಜನೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಇದು ಯುಟಿಐಗಳನ್ನು ಸರಿಪಡಿಸಬಹುದಾದರೂ, ಇದಕ್ಕೆ ಯಾವುದೇ ಮನವರಿಕೆಯಾಗುವ ಪುರಾವೆಗಳಿಲ್ಲ.

1010
smelly urine

ಪ್ರೋಬಯಾಟಿಕ್ ಗಳು
ಪ್ರೋಬಯಾಟಿಕ್ ಗಳು ವಾಸನೆಯ ಮೂತ್ರವಿಸರ್ಜನೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತವೆ. ಪ್ರೋಬಯಾಟಿಕ್ ಗಳು ಕೆಲವು ಆಹಾರಗಳಲ್ಲಿ ಕಂಡುಬರುವ ಜೀವಂತ ಸೂಕ್ಷ್ಮಜೀವಿಗಳಾಗಿವೆ. ಪ್ರೋಬಯಾಟಿಕ್ ಗಳು ಪ್ರಯೋಜನಕಾರಿ ಬ್ಯಾಕ್ಟೀರಿಯಾ(Bacteria)ಗಳಾಗಿವೆ, ಇದು ದೇಹ ಮತ್ತು ಮೆದುಳು ಎರಡರ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ. ಆದ್ದರಿಂದ ನೀವು ಮೊಸರು ಮತ್ತು ಟೋಫುನಂತಹ ಪ್ರೋಬಯಾಟಿಕ್ ಆಹಾರಗಳ ಸೇವನೆಯನ್ನು ಹೆಚ್ಚಿಸಬೇಕು.

Read more Photos on
click me!

Recommended Stories