Health Alert: ಈ ಸಮಸ್ಯೆ ಹೊಂದಿರುವ ಜನ ತಪ್ಪಿಯೂ ಬಾದಾಮಿ ಸೇವಿಸಬಾರದು

First Published | Feb 26, 2022, 4:30 PM IST

ಬಾದಾಮಿ ಅರೋಗ್ಯಕರ ನಟ್ಸ್ ಗಳಲ್ಲಿ ಒಂದಾಗಿದೆ. ಇದನ್ನು ಪ್ರಪಂಚದ ಹೆಚ್ಚಿನ ಜನರು ಪ್ರತಿದಿನ ಸೇವನೆ ಮಾಡುತ್ತಾರೆ. ಪ್ರೋಟೀನ್, ಫೈಬರ್, ಪೊಟ್ಯಾಸಿಯಮ್, ಫಾಸ್ಫರಸ್, ಮೆಗ್ನೀಸಿಯಮ್ ಮತ್ತು ವಿಟಮಿನ್ ಎ ಪ್ರಯೋಜನಗಳಿಂದ ತುಂಬಿರುವ ಬಾದಾಮಿ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ನಿಮ್ಮ ಚರ್ಮವನ್ನು ಆರೋಗ್ಯಕರವಾಗಿಡಲು, ಹೃದ್ರೋಗದ ಅಪಾಯ ಕಡಿಮೆ ಮಾಡಲು, ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು  ಮತ್ತು ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡಲು ಇದು ಸಹಾಯಕವಾಗಿದೆ.
 

ಆದಾಗ್ಯೂ,  ಇತರ ಆರೋಗ್ಯಕರ ಆಹಾರದಂತೆಯೇ,  ಬಾದಾಮಿ(Almond) ಸೇವನೆ ಮಾಡುವುದು ಎಲ್ಲರ ಆರೋಗ್ಯಕ್ಕೆ ಒಳ್ಳೆಯದಲ್ಲ. ಏಕೆಂದರೆ ಇದು ಜಠರಗರುಳಿನ ಸಮಸ್ಯೆಗಳಿಗೆ ಕಾರಣವಾಗಬಹುದು. ಹೌದು, ಕೆಲವೊಂದು ಸಮಸ್ಯೆಗಳನ್ನು ಹೊಂದಿರುವ ಜನರು ಬಾದಾಮಿ ಸೇವನೆ ಮಾಡೋದನ್ನು ಅವಾಯ್ಡ್ ಮಾಡಬೇಕು.

ರಕ್ತದೊತ್ತಡ(Blood Pressure) ಮತ್ತು ಪ್ರತಿಜೀವಕ ಔಷಧಗಳನ್ನು ಹೊಂದಿರುವ ಜನರು ತಮ್ಮ ಆಹಾರದಲ್ಲಿ ಬಾದಾಮಿಯನ್ನು ಸೇರಿಸುವ ಮೊದಲು ತಮ್ಮ ಆಹಾರತಜ್ಞರೊಂದಿಗೆ ಚರ್ಚಿಸಬೇಕು. ಬಾದಾಮಿಯಲ್ಲಿ ಮ್ಯಾಂಗನೀಸ್ ನೈಸರ್ಗಿಕವಾಗಿ ಸಾಕಷ್ಟು ಹೆಚ್ಚಾಗಿದೆ. ಒಂದು ಹಿಡಿ ಬಾದಾಮಿ ನಿಮಗೆ 0.6 ಮಿಲಿಗ್ರಾಂಗಳಷ್ಟು ಖನಿಜವನ್ನು ಒದಗಿಸುತ್ತದೆ. ಇದು ದೈನಂದಿನ ಮೌಲ್ಯದ ಶೇಕಡಾ 27 ರಷ್ಟಿದೆ. ಮ್ಯಾಂಗನೀಸ್ ಸಮೃದ್ಧ ಆಹಾರದ ಮೇಲೆ ಸಾಕಷ್ಟು ಬಾದಾಮಿಯನ್ನು ಸೇವಿಸುವುದು ಔಷಧದ ಸಂವಹನಗಳನ್ನು ಪ್ರಚೋದಿಸಬಹುದು.

Latest Videos


They are rich is fibre, protein, healthy fats and immunity-boosting antioxidants. If you are not the one to like having bland soaked almonds in the morning, try having flavourful roasted almonds for snacks.

ನೀವು ಇತರ ರೀತಿಯ ಬೀಜಗಳ ಅಲರ್ಜಿ(Allergy)ಯನ್ನು ಹೊಂದಿದ್ದರೆ ಮತ್ತು ಬೀಜಗಳನ್ನು ತಿಂದ ನಂತರ ಬೇರೆ ಬೇರೆ ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಅಂತಹ ಸಂದರ್ಭದಲ್ಲಿ ಬಾದಾಮಿ ಸೇವನೆಯನ್ನು ಸಂಪೂರ್ಣವಾಗಿ ಅವಾಯ್ಡ್ ಮಾಡಿ. ಬೀಜಗಳನ್ನು ತಿನ್ನುವುದು ಅನಾಫಿಲ್ಯಾಕ್ ಗೆ ಕಾರಣವಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. 

The process of roasting brings out the deep-rooted flavours of almonds adding a palatable smokiness to them, making them better and tastier.

ಚಿಕ್ಕ ಮಕ್ಕಳು ಮತ್ತು ಕೆಲವು ವಯಸ್ಸಾದ ಜನರಲ್ಲಿ ಶೀತ(Cold)ವು ಉಸಿರುಗಟ್ಟುವ ಅಪಾಯವನ್ನು ಹೆಚ್ಚಿಸುವುದರಿಂದ ಅಂತವರು ಬಾದಾಮಿ ಬೀಜಗಳನ್ನು ಸೇವನೆ ಮಾಡಿದರೆ ಸಮಸ್ಯೆ ಉಂಟಾಗಬಹುದು. ಆದುದರಿಂದ ಸಾಧ್ಯವಾದಷ್ಟು ಬಾದಾಮಿಯನ್ನು ಅವಾಯ್ಡ್ ಮಾಡಲು ಪ್ರಯತ್ನಿಸಿ. 

ಯಾರಿಗಾದರೂ ಜೀರ್ಣಕಾರಿ(Digestion) ಸಮಸ್ಯೆಗಳಿದ್ದರೆ, ಅವರು ಬಾದಾಮಿಯನ್ನು ಸೇವಿಸಬಾರದು. ಇದು ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸಬಹುದು. ಆದುದರಿಂದ ಸೇವನೆ ಮುನ್ನ ತಜ್ಞರನ್ನು ಸಂಪರ್ಕಿಸುವುದು ಮುಖ್ಯವಾಗಿದೆ. 

ಅಸಿಡಿಟಿ(Acidity) ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆ ಆಗಿದೆ. ಆದ್ದರಿಂದ ಈಗಾಗಲೇ ಹೇಳಿದಂತೆ, ಅಸಿಡಿಟಿ ಇರುವವರು ಬಾದಾಮಿಯನ್ನು ಸೇವಿಸಬಾರದು. ಇಲ್ಲವಾದರೆ ಆಸಿಡಿಟಿ ಸಮಸ್ಯೆ ಹೆಚ್ಚುವ ಸಾಧ್ಯತೆ ಇದೆ. ಇದರಿಂದ ಹೊಟ್ಟೆ ಉಬ್ಬರ, ಗ್ಯಾಸ್ ಮೊದಲಾದ ತೊಂದರೆಗಳು ಉಂಟಾಗುತ್ತವೆ. 

ಮೂತ್ರಪಿಂಡಗಳು(Kidney) ಅಥವಾ ಪಿತ್ತಕೋಶಗಳಲ್ಲಿ ಕಲ್ಲುಗಳ ಸಮಸ್ಯೆ ಇರುವ ಜನರು ಸಹ ಬಾದಾಮಿಯನ್ನು ಯಾವುದೇ ರೂಪದಲ್ಲಿ ಸೇವಿಸಬಾರದು. ಇದರಿಂದ ಸಮಸ್ಯೆ ಹೆಚ್ಚಾಗಬಹುದು. ಹೌದು, ಬಾದಾಮಿಯಿಂದ ಕಿಡ್ನಿ ಸ್ಟೋನ್ ಸಮಸ್ಯೆ ಹೆಚ್ಚುವ ಸಾಧ್ಯತೆ ಇರುವುದರಿಂದ ಬಾದಾಮಿಯನ್ನು ಅವಾಯ್ಡ್ ಮಾಡುವುದು ಮುಖ್ಯವಾಗಿದೆ. 

ಅಧಿಕ ರಕ್ತದೊತ್ತಡದ ರೋಗಿಗಳು ಬಾದಾಮಿ(Almond) ತಿನ್ನುವುದನ್ನು ತಪ್ಪಿಸಬೇಕು. ಏಕೆಂದರೆ ಈ ಜನರು ನಿಯಮಿತವಾಗಿ ರಕ್ತದೊತ್ತಡದ ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಬಾದಾಮಿಯನ್ನು ಔಷಧಿಗಳೊಂದಿಗೆ ತಿನ್ನುವುದರಿಂದ ನಿಮ್ಮ ಆರೋಗ್ಯಕ್ಕೆ ಹಾನಿಯಾಗಬಹುದು.

 ಬಾದಾಮಿಯಲ್ಲಿ ಕ್ಯಾಲೊರಿಗಳು ಮತ್ತು ಕೊಬ್ಬುಗಳು ಸಮೃದ್ಧವಾಗಿವೆ, ಇದು ತೂಕವನ್ನು ಹೆಚ್ಚಿಸಲು ಕೆಲಸ ಮಾಡುತ್ತದ., ಆದ್ದರಿಂದ ನೀವು ತೂಕ(Weight) ವನ್ನು ಕಳೆದುಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರೆ, ನಂತರ ನಿಮ್ಮ ಆಹಾರದಿಂದ ಬಾದಾಮಿಯನ್ನು ಸಂಪೂರ್ಣವಾಗಿ ತೆಗೆದುಹಾಕಿ.
 

click me!