ಟ್ರೈ ಮಾಡಿ Aroma Therapy, ಮನಸ್ಸಾಗುವುದು ಹ್ಯಾಪಿ ಹ್ಯಾಪಿ

First Published | Feb 26, 2022, 4:21 PM IST

ಇಂದಿನ ಗಡಿಬಿಡಿಯ ಜೀವನದಲ್ಲಿ, ಜನರು ತಮ್ಮ ಕೆಲಸದಲ್ಲಿ ತುಂಬಾ ನಿರತರಾಗಿದ್ದಾರೆ. ಇದರಿಂದಾಗಿ ಒತ್ತಡದ ಮಟ್ಟವೂ (stress level) ಗಮನಾರ್ಹವಾಗಿ ಹೆಚ್ಚಾಗಿದೆ. ಕಚೇರಿಗೆ ತಲುಪಲು ಗಂಟೆಗಳ ಕಾಲ ಚಾಲನೆ ಮಾಡುವುದು ಮತ್ತು ನಂತರ 9-10 ಗಂಟೆಗಳು ಕುಳಿತುಕೊಳ್ಳುವ ಕೆಲಸವನ್ನು ಮಾಡುವುದು ಆಯಾಸಕ್ಕೆ ಕಾರಣವಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ದೇಹವನ್ನು ನಿರಾಳವಾಗಿಸಬೇಕಾದ ಅಗತ್ಯ ಬಹಳಷ್ಟಿದೆ. ದೇಹವನ್ನು ವಿಶ್ರಾಂತಿಗೊಳಿಸಲು ಅತ್ಯುತ್ತಮ ಮತ್ತು ವಿಶ್ರಾಂತಿ ಮಾರ್ಗವೆಂದರೆ ಅರೋಮಾ ಥೆರಪಿ (aroma therapy). 

ಅರೋಮಾ ಥೆರಪಿ (aroma therapy) ಸಾಕಷ್ಟು ಪ್ರಯೋಜನಕಾರಿಯಾಗಿದೆ. ದೇಹವನ್ನು ವಿಶ್ರಾಂತಿಗೊಳಿಸಲು ಎಣ್ಣೆಯನ್ನು ಮಾತ್ರ ಬಳಸಲಾಗುತ್ತದೆ. ಅರೋಮಾ ಥೆರಪಿಯು ಮನಸ್ಸಿಗೆ ಶಾಂತಿಯನ್ನು ಒದಗಿಸುವುದಲ್ಲದೆ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಅರೋಮಾ ಥೆರಪಿಯ ಪ್ರಯೋಜನಗಳನ್ನು ತಿಳಿದುಕೊಳ್ಳಿ.

ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತೆ 
 ಚಿಕಿತ್ಸೆಯಲ್ಲಿ ಅರೋಮಾ ಧ್ಯಾನದ ಪ್ರಮುಖ ಭಾಗವಾಗಿದೆ. ಅರೋಮಾ ಥೆರಪಿ ರಕ್ತದೊತ್ತಡವನ್ನು (blood pressure) ಕಡಿಮೆ ಮಾಡಿ ಮನಸ್ಸನ್ನು ನಿರಾಳಗೊಳಿಸುತ್ತದೆ. ಇದನ್ನು ಮಾಡುವುದರಿಂದ ನರಮಂಡಲವೂ ಸುಧಾರಿಸುತ್ತದೆ. ಇದರಿಂದ ಮನಸ್ಸು ಒತ್ತಡ ಮುಕ್ತವಾಗುತ್ತದೆ. ಉತ್ತಮ ಅರೋಗ್ಯ ನಿಮ್ಮದಾಗುತ್ತದೆ. 
 

Tap to resize

ಉತ್ತಮ ನಿದ್ರೆ  (sound sleep)
ಅರೋಮಾ ಥೆರಪಿ ಉತ್ತಮ ನಿದ್ರೆಗೆ ಬಹಳ ಮುಖ್ಯ. ಎಣ್ಣೆಯನ್ನು ಹಚ್ಚುವ ಮೂಲಕ ಅಥವಾ ಎಣ್ಣೆಯ ವಾಸನೆಯಿಂದ ದೇಹವು ವಿಶ್ರಾಂತಿ ಪಡೆಯುತ್ತದೆ ಮತ್ತು ಇದು ಉತ್ತಮ ನಿದ್ರೆಗೆ ಕಾರಣವಾಗುತ್ತದೆ ಎಂದು ನಂಬಲಾಗಿದೆ. ಅರೋಮಾ ಥೆರಪಿಯಲ್ಲಿ ಎಣ್ಣೆಯನ್ನು ಬಳಸಲು ಅನೇಕ ಮಾರ್ಗಗಳಿವೆ, ಆದರೆ ಉತ್ತಮ ನಿದ್ರೆಗಾಗಿ ನೀವು ಲ್ಯಾವೆಂಡರ್ ಎಣ್ಣೆಯನ್ನು ಬಳಸಬಹುದು. ನೀವು ಯೋಚಿಸಿದಾಗ ನಿಮ್ಮ ದಿಂಬಿನ ಬಳಿಯೂ ಅದನ್ನು ಸಿಂಪಡಿಸಬಹುದು. 

ಆಯಾಸವನ್ನು ಕಡಿಮೆ ಮಾಡುತ್ತದೆ
ಅರೋಮಾ ಥೆರಪಿಯಲ್ಲಿ ಬಳಸುವ ಎಣ್ಣೆಯು ನರವ್ಯೂಹದ ಮೇಲೂ ಪರಿಣಾಮ ಬೀರುತ್ತದೆ, ಇದು ದೇಹವನ್ನು ಸಂಪೂರ್ಣವಾಗಿ ಶಾಂತಗೊಳಿಸುತ್ತದೆ. ಇದರಿಂದ ದೇಹದಲ್ಲಿ ಶಕ್ತಿ ಸೃಷ್ಟಿಯಾಗಿ, ಇದು ಆಯಾಸವನ್ನು ನಿವಾರಿಸುತ್ತದೆ. ದೇಹಕ್ಕೆ ಹೆಚ್ಚಿನ ಆರಾಮ ದೊರೆಯುತ್ತದೆ. 

 ಸ್ನಾಯುವಿನ ನೋವಿನಿಂದ ವಿಶ್ರಾಂತಿ
 ಅರೋಮಾ ಥೆರಪಿಯು ಮನಸ್ಸಿಗೆ ಶಾಂತಿಯನ್ನು ನೀಡುವುದಲ್ಲದೆ ನೋವನ್ನು ನಿವಾರಿಸುತ್ತದೆ. ಇದು ಹೊಟ್ಟೆನೋವು, ದೇಹನೋವು (body pain), ಮೊಣಕಾಲು ನೋವು, ತಲೆನೋವಿನಲ್ಲೂ ಪರಿಹಾರ ನೀಡುತ್ತದೆ. ನಿಮ್ಮ ನೆಚ್ಚಿನ ಎಣ್ಣೆಯಲ್ಲಿ ಸ್ವಲ್ಪ ನೀರನ್ನು ಮಿಶ್ರಣ ಮಾಡಿ. ಈಗ ಈ ಎಣ್ಣೆಯಿಂದ ಮಸಾಜ್ ಮಾಡಿ.  ಇದರಿಂದ ವಿಶ್ರಾಂತಿ ಸಿಗುತ್ತದೆ ಮತ್ತು ನೋವು ಕಡಿಮೆಯಾಗುತ್ತದೆ. 

ಮನೆಯಲ್ಲಿ ಅರೋಮಾಥೆರಪಿ ಮಾಡುವುದು ಹೇಗೆ?
ಒಂದು ಬೌಲ್ ನಲ್ಲಿ 5-6 ಹನಿ ಎಣ್ಣೆಯನ್ನು ಹಾಕಿ. ನೀವು ಲ್ಯಾವೆಂಡರ್, ಟೀ ಟ್ರೀ, ನಿಂಬೆ ಅಥವಾ ನಿಮಗೆ ಇಷ್ಟವಾದ ಯಾವುದೇ ಎಣ್ಣೆಯನ್ನು ತೆಗೆದುಕೊಳ್ಳಬಹುದು.
ಈಗ ಅದಕ್ಕೆ 2-3 ಹನಿ ನೀರು ಹಾಕಿ ಸ್ವಲ್ಪ ಕಾಲ ಬಿಸಿ ಮಾಡಿ.
ಈಗ ಅದನ್ನು ಬಳಸಬಹುದು. ಈ ಮಿಶ್ರಣವನ್ನು ಗರಿಷ್ಠ 1 ಗಂಟೆಗಳ ಕಾಲ ಬಳಸಿ. 

ಅರೋಮಾ ಥೆರಪಿಯಲ್ಲಿ ಪ್ರಯೋಜನಕಾರಿ ತೈಲಗಳು 
ಲ್ಯಾವೆಂಡರ್ ಎಣ್ಣೆ (lavender oil) - ಇದು ಸಾಮಾನ್ಯವಾಗಿ ಬಳಸುವ ಎಣ್ಣೆಯಾಗಿದೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ನಿದ್ರೆಯನ್ನು ಉತ್ತಮಗೊಳಿಸುತ್ತದೆ.  ಇದು ಮನಸಿಗೆ ಆರಾಮ ನೀಡುತ್ತದೆ. ದೇಹವು ನಿರಾಳವಾಗುತ್ತದೆ. ಮನಸ್ಸಿಗೆ ನೆಮ್ಮದಿ ನೀಡುತ್ತದೆ. 

ಟೀ ಟ್ರೀ ಎಣ್ಣೆ (tea tree oil)

ಟೀ ಟ್ರೀ ಎಣ್ಣೆಯನ್ನು ನೋವನ್ನು ಕಡಿಮೆ ಮಾಡಲು ಮತ್ತು ಚರ್ಮವನ್ನು ಗುಣಪಡಿಸಲು ಬಳಸಲಾಗುತ್ತದೆ.  ಇದಲ್ಲದೆ, ಗಾಯದ ಮೇಲೆ ಸಹ ಇದನ್ನು ಹಚ್ಚಲಾಗುತ್ತದೆ. ಅಷ್ಟೇ ಅಲ್ಲ, ಇದನ್ನು ಕೂದಲು ಉದುರುವಿಕೆ ಮತ್ತು ತಲೆಹೊಟ್ಟು ನಿವಾರಣೆಗೆ ಸಹ ಬಳಸಲಾಗುತ್ತದೆ.  

ನಿಂಬೆ ಎಣ್ಣೆ (lemon oil) -ಕೆಲವರಿಗೆ ನಿಂಬೆಹಣ್ಣಿನ ಸುವಾಸನೆ ತುಂಬಾ ಇಷ್ಟವಾಗುತ್ತದೆ. ನಿಂಬೆಯಿಂದ ಮನಸ್ಥಿತಿ ಉತ್ತಮವಾಗುತ್ತದೆ. ನಿಂಬೆಹಣ್ಣಿನ ತಾಜಾ ಪರಿಮಳವು  ಮನಸ್ಸಿಗೆ ಉತ್ತಮ ಸಂದೇಶಗಳನ್ನು ಕಳುಹಿಸುತ್ತದೆ ಮತ್ತು ದೇಹವನ್ನು ಚುರುಕಾಗಿರಿಸುತ್ತದೆ.  ಇದು ದಿನವಿಡೀ ನಿಮ್ಮನ್ನು ಸಂತೋಷವಾಗಿರುವಂತೆ ನೋಡಿಕೊಳ್ಳುತ್ತದೆ. 

ಪೆಪ್ಪರ್ ಮಿಂಟ್ ಎಣ್ಣೆ (peppermint oil) - ಪೆಪ್ಪರ್ ಮಿಂಟ್ ಎಣ್ಣೆಯನ್ನು ಅರೋಮಾ ಥೆರಪಿಯಲ್ಲಿ ಬಳಸಲಾಗುತ್ತದೆ. ಇದರಿಂದ ಉಸಿರಾಟಕ್ಕೆ ತಾಜಾತನ ಮತ್ತು ಮೆದುಳು ಕ್ರಿಯಾಶೀಲವಾಗುತ್ತದೆ. ಇದು ನಿಮ್ಮ ದೇಹವನ್ನು ಸಕ್ರಿಯವಾಗಿರಿಸುತ್ತದೆ. ಇದು ಮೂಗು ಕಟ್ಟುವಿಕೆ ಮೊದಲಾದ ಸಮಸ್ಯೆಗಳನ್ನು ಸಹ ನಿವಾರಣೆ ಮಾಡುತ್ತದೆ. 

Latest Videos

click me!