ನೀವು ದಿನಾ ಬಳಸೋ ಈ ವಸ್ತು ಟಾಯ್ಲೆಟ್ ಸೀಟಿಗಿಂತ ಗಲೀಜಾಗಿರುತ್ತೆ!

Published : Jun 30, 2023, 10:38 AM IST

ಟಾಯ್ಲೆಟ್ ಸೀಟ್‌ ಅತಿ ಹೆಚ್ಚು ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಹೊಂದಿದೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ. ಆದ್ರೆ ನಾವು ದಿನನಿತ್ಯದ ಜೀವನದಲ್ಲಿ ಬಳಸೋ ಈ ಕೆಲ ವಸ್ತುಗಳು ಟಾಯ್ಲೆಟ್ ಸೀಟಿಗಿಂತಲೂ ತುಂಬಾ ಕೆಟ್ಟದಾಗಿವೆ ಮತ್ತು ಡೇಂಜರಸ್ ಅನ್ನೋದು ನಿಮಗೆ ಗೊತ್ತಿದ್ಯಾ?

PREV
17
ನೀವು ದಿನಾ ಬಳಸೋ ಈ ವಸ್ತು ಟಾಯ್ಲೆಟ್ ಸೀಟಿಗಿಂತ ಗಲೀಜಾಗಿರುತ್ತೆ!

ಮೊಬೈಲ್‌
ದಿನನಿತ್ಯ ಬಳಸೋ ವಸ್ತುಗಳ ಪಟ್ಟಿಯಲ್ಲಿ ಅತ್ಯಂತ ಹೆಚ್ಚು ಗಲೀಜಾಗಿರುವ ವಸ್ತುಗಳನ್ನು ನೋಡಿದಾಗ ಮೊಬೈಲ್ ಅಗ್ರಸ್ಥಾನದಲ್ಲಿದೆ. ವಿವಿಧ ಅಧ್ಯಯನಗಳ ಪ್ರಕಾರ, ಸ್ಮಾರ್ಟ್‌ಫೋನ್ ಟಾಯ್ಲೆಟ್ ಸೀಟ್‌ಗಿಂತ ಸರಾಸರಿ 10 ಪಟ್ಟು ಹೆಚ್ಚು ಬ್ಯಾಕ್ಟೀರಿಯಾಗಳನ್ನು ಹೊಂದಿರುತ್ತದೆ. ನಾವು ಕೈಗಳಿಂದ ನಿರಂತರವಾಗಿ ಬೇರೆ ಬೇರೆ ವಸ್ತುಗಳನ್ನು ಮುಟ್ಟಿದ ನಂತರ ಮೊಬೈಲ್‌ನ್ನು ಮುಟ್ಟುವ ಕಾರಣ ಸ್ಮಾರ್ಟ್‌ಫೋನ್‌ ಹೆಚ್ಚು ಸೂಕ್ಷ್ಮಾಣುಗಳನ್ನು ಹೊಂದಿರುತ್ತದೆ. ಫೋನ್ ಅನ್ನು ಸ್ವಚ್ಛಗೊಳಿಸಲು ಸೋಪ್ ಅಥವಾ ಆಂಟಿಬ್ಯಾಕ್ಟೀರಿಯಲ್ ವೈಪ್ನೊಂದಿಗೆ ಒದ್ದೆಯಾದ ಬಟ್ಟೆಯನ್ನು ಬಳಸಬಹುದು.

27

ಕೀಬೋರ್ಡ್
ಕೀಬೋರ್ಡ್ ಆಗಾಗ ಸ್ಪರ್ಶಿಸುವ ಮತ್ತೊಂದು ಸೂಕ್ಷ್ಮ ವಸ್ತುವಾಗಿದೆ. ಅರಿಝೋನಾ ವಿಶ್ವವಿದ್ಯಾಲಯದ ಅಧ್ಯಯನವು ಸರಾಸರಿ ಕೀಬೋರ್ಡ್ ಪ್ರತಿ ಚದರ ಇಂಚಿಗೆ 3,000 ಬ್ಯಾಕ್ಟೀರಿಯಾಗಳನ್ನು ಹೊಂದಿದೆ ಎಂದು ಕಂಡುಹಿಡಿದಿದೆ. ಕೀಬೋರ್ಡ್ ಸ್ವಚ್ಛಗೊಳಿಸಲು, ಬ್ರಷ್ ಅಥವಾ ವ್ಯಾಕ್ಯೂಮ್ ಕ್ಲೀನರ್ ಬಳಸಬಹುದು.

37

ಮೌಸ್
ಕೀಬೋರ್ಡ್‌ನಂತೆಯೇ ಮೌಸ್ ಸಹ ತುಂಬಾ ಕೊಳಕಾಗಿರುತ್ತದೆ. ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಅಧ್ಯಯನವು ಒಂದು ಮೌಸ್‌ ಪ್ರತಿ ಚದರ ಇಂಚಿಗೆ 1,500 ಬ್ಯಾಕ್ಟೀರಿಯಾಗಳನ್ನು ಹೊಂದಿದೆ ಎಂದು ಕಂಡುಹಿಡಿದಿದೆ.

47

ರಿಮೋಟ್
ಮನೆಯಲ್ಲಿರುವ ಸೂಕ್ಷ್ಮಜೀವಿಗಳ ವಿಷಯಕ್ಕೆ ಬಂದಾಗ, ರಿಮೋಟ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬ್ಯಾಕ್ಟಿರೀಯಾ ಶೇಖರಣೆಯಾಗುತ್ತದೆ ಎಂಬುದು ತಿಳಿದುಬರುತ್ತದೆ. ಹೂಸ್ಟನ್ ವಿಶ್ವವಿದ್ಯಾಲಯದ ಅಧ್ಯಯನವು ಸರಾಸರಿ ರಿಮೋಟ್ ಪ್ರತಿ ಚದರ ಇಂಚಿಗೆ 200 ಬ್ಯಾಕ್ಟೀರಿಯಾಗಳನ್ನು ಹೊಂದಿದೆ ಎಂದು ಕಂಡುಹಿಡಿದಿದೆ. ಆಗಾಗ, ಬೇರೆ ಬೇರೆ ಜನರು ಇದನ್ನು ಸ್ಪರ್ಶಿಸೋದ್ರಿಂದ ರಿಮೋಟ್‌ ಅಷ್ಟೇನೂ ಸ್ವಚ್ಛವಾಗಿರುವುದಿಲ್ಲ.

57

ವಾಶ್‌ರೂಮ್‌ ಡೋರ್‌
ವಾಶ್‌ರೂಮ್ ಡೋರ್ ನಾಬ್‌ಗಳು ಅಥವಾ ಹ್ಯಾಂಡಲ್‌ಗಳನ್ನು ವಿವಿಧ ಜನರು ಸ್ಪರ್ಶಿಸುತ್ತಾರೆ, ವಿಶೇಷವಾಗಿ ಸಾರ್ವಜನಿಕ ವಾಶ್‌ರೂಮ್‌ಗಳಲ್ಲಿ, ಇದು ಸಾಮಾನ್ಯವಾಗಿದೆ. ಹೀಗಾಗಿ ವಾಶ್‌ರೂಮ್ ಅಥವಾ ಬಾತ್ರೂಮ್ ಡೋರ್ ಹ್ಯಾಂಡಲ್‌ಗಳು ಹೆಚ್ಚಿನ ಸೂಕ್ಷ್ಮಾಣುಗಳನ್ನು ಹೊಂದಿರುತ್ತವೆ.

67

ರೆಫ್ರಿಜರೇಟರ್ ಬಾಗಿಲು
ಫ್ರಿಜ್‌ನಿಂದ ಏನಾದರೊಂದು ವಸ್ತು ತೆಗೆಯಲು, ಇಡಲು ಎಲ್ಲರೂ ಫ್ರಿಡ್ಜ್‌ ಹ್ಯಾಂಡಲ್‌ನ್ನು ಆಗಾಗ ಮುಟ್ಟುತ್ತಿರುತ್ತಾರೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯ, ಡೇವಿಸ್ ನಡೆಸಿದ ಅಧ್ಯಯನವು ಸರಾಸರಿ ರೆಫ್ರಿಜರೇಟರ್ ಬಾಗಿಲು ಪ್ರತಿ ಚದರ ಇಂಚಿಗೆ 500 ಬ್ಯಾಕ್ಟೀರಿಯಾಗಳನ್ನು ಹೊಂದಿದೆ ಎಂದು ಕಂಡುಹಿಡಿದಿದೆ.

77

ನೀರಿನ ಟ್ಯಾಪ್‌
ಕೈತೊಳೆದುಕೊಳ್ಳದ ಜನರು ನೀರಿನ ನಲ್ಲಿಗಳನ್ನು ಹೆಚ್ಚಾಗಿ ಸ್ಪರ್ಶಿಸುತ್ತಾರೆ. ಆದ್ದರಿಂದ ಅವು ರೋಗಾಣುಗಳ ತಾಣವಾಗಿ ಮಾರ್ಪಡುತ್ತವೆ. ಕೈಗಳನ್ನು ತೊಳೆಯು ಮುನ್ನ ಸೋಪ್ ಅಥವಾ ಡಿಟರ್ಜೆಂಟ್‌ನೊಂದಿಗೆ ಟ್ಯಾಪ್‌ನ್ನು ಸ್ವಚ್ಛಗೊಳಿಸಬಹುದು.

Read more Photos on
click me!

Recommended Stories