ದಯವಿಟ್ಟು ಮಕ್ಕಳಿಗೆ ಸೌತೆಕಾಯಿ- ಟೊಮ್ಯಾಟೋ ಒಟ್ಟಿಗೆ ಕೊಡಬೇಡಿ; ಇದರಿಂದ ಕಾದಿದೆ ದೊಡ್ಡ ಅಪಾಯ!

Published : Mar 13, 2025, 03:10 PM ISTUpdated : Mar 13, 2025, 03:14 PM IST
ದಯವಿಟ್ಟು ಮಕ್ಕಳಿಗೆ ಸೌತೆಕಾಯಿ- ಟೊಮ್ಯಾಟೋ ಒಟ್ಟಿಗೆ ಕೊಡಬೇಡಿ; ಇದರಿಂದ ಕಾದಿದೆ ದೊಡ್ಡ ಅಪಾಯ!

ಸಾರಾಂಶ

ತೂಕ ಇಳಿಕೆಗೆ ಡಯೆಟ್ ಮುಖ್ಯವಾದರೂ, ತಜ್ಞರ ಸಲಹೆ ಪಡೆಯುವುದು ಅಗತ್ಯ. ಆಯುರ್ವೇದದ ಪ್ರಕಾರ, ಸೌತೆಕಾಯಿ ಮತ್ತು ಟೊಮೆಟೊವನ್ನು ಒಟ್ಟಿಗೆ ತಿನ್ನಬಾರದು. ಸೌತೆಕಾಯಿ ದೇಹವನ್ನು ತಂಪಾಗಿಸಿದರೆ, ಟೊಮೆಟೊ ಬೆಚ್ಚಗಿಡುತ್ತದೆ. ಇವೆರಡೂ ಜೀರ್ಣವಾಗಲು ಬೇರೆ ಸಮಯ ತೆಗೆದುಕೊಳ್ಳುತ್ತವೆ. ನಿಂಬೆ ರಸವನ್ನು ಸೇರಿಸುವುದರಿಂದ ಸಮಸ್ಯೆ ಹೆಚ್ಚಾಗಬಹುದು. ಮಕ್ಕಳಿಗೆ ಇವೆರಡನ್ನೂ ಒಟ್ಟಿಗೆ ನೀಡದಿರುವುದು ಉತ್ತಮ.

ತೂಕ ಇಳಿಸಿಕೊಳ್ಳಬೇಕು ಅಂದ್ರೆ ಪ್ರತಿಯೊಬ್ಬರು ಮೊದಲು ಯೋಚನೆ ಮಾಡುವುದು ಡಯಟ್. ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಹರಿದು ಬರುವ ಟಿಪ್ಸ್‌ಗಳನ್ನು ನೋಡಿದರೆ ಯಾವುದು ಫಾಲೋ ಮಾಡ್ಬೇಕು ಯಾವುದು ಫಾಲೋ ಮಾಡಬಾರದು ಗೊತ್ತಾಗದೆ ತಲೆ ಕೆಟ್ಟಿ ಹೋಗುತ್ತದೆ. ಕೆಲವರು ಕೇವಲ ಡಯಟ್ ಮಾಡ್ಕೊಂಡು ತೂಕ ಇಳಿಸಿಕೊಳ್ಳುತ್ತಾರೆ. ಡಯಟ್ ಫಾಲೋ ಮಾಡುವ ಮುನ್ನ ನಿಮ್ಮ ನ್ಯೂಟ್ರಿಷನಿಸ್ಟ್‌ ಮತ್ತು ಡಯಟೀಶಿಯನ್‌ ಸಂಪರ್ಕ ಮಾಡಬೇಕು. ಆಮೇಲೆ ಸರಿಯಾದ ಸಮಯದಲ್ಲಿ ತೂಕ ಇಳಿಯುತ್ತದೆ. ಆದರೆ ಯಾದಾರೂ ನಿಮಗೆ ಸೌತೆಕಾಯಿ- ಟೊಮ್ಯಾಟೋ ಕಥೆ ಹೇಳಿದಾರಾ?

ಆಯುರ್ವೇದದ ಪ್ರಕಾರ ಸೌತೆಕಾಯಿ ಮತ್ತು ಟೊಮ್ಯಾಟೋವನ್ನು ಒಟ್ಟಿಗೆ ಸೇವಿಸಬಾರದು. ಇದರಿಂದ ಮೊದಲು ಎದುರಾಗುವ ಸಮಸ್ಯೆನೇ ಅಜೀರ್ಣ. ಸೌತೆಕಾಯಿ ನಮ್ಮ ದೇಹಕ್ಕೆ ಶೀತ ಅಥವಾ ಕೋಲ್ಡ್‌...ಸಪ್ಪೆ ಅಥವಾ ಸ್ವೀಟ್ ರುಚಿಯನ್ನು ನೀಡುತ್ತದೆ. ಇದರ ಅರ್ಥ ನಮ್ಮ ದೇಹವನ್ನು ತಂಪು ಮಾಡುತ್ತದೆ. ಆದರೆ ಟೊಮ್ಯಾಟೋ ತದ್ವಿರುದ್ಧ ಏಕೆಂದರೆ ದೇಹದಲ್ಲಿ ಇರುವ ಮೂರು ದೋಷಗಳಾದ ವಾತ ಪಿತ್ತ ಕಫ ಮೇಲೆ ಪರಿಣಾಮ ಬೀರಲಿದ್ದು ದೇಹವನ್ನು ಬೆಚ್ಚಗೆ ಅಥವಾ ಬಿಸಿಯಾಗಿಡುತ್ತದೆ. ಹೀಗಾಗಿ ಸೌತೆಕಾಯಿ ಮತ್ತು ಟೊಮ್ಯಾಟೋ ಎರಡೂ ವಿರುದ್ಧ ದಿಕ್ಕಿನಲ್ಲಿ ಕೆಲಸ ಮಾಡುತ್ತದೆ. 

ತಲೆ ಬಾಚಿದ ಕೂದಲನ್ನು ಯಾವುದೇ ಕಾರಣಕ್ಕೂ ನೆಲದ ಮೇಲೆ ಬಿಡಬೇಡಿ; ಮಾಟ ಮಂತ್ರ ಮಾಡುವವರಿಂದ ಎಚ್ಚರ!

ಸೌತೆಕಾಯಿ ಮತ್ತು ಟೊಮ್ಯಾಟೋ ಜೀರ್ಣವಾಗಲು ತೆಗೆದುಕೊಳ್ಳುವ ಸಮಯ ಬೇರೆ ಬೇರೆ. ಸೌತೆಕಾಯಿ ಸಿಕ್ಕಾಪಟ್ಟೆ ಲೈಟ್ ಮತ್ತು ಬೇಗ ಜೀರ್ಣವಾಗುತ್ತದೆ ಆದರೆ ಟೊಮ್ಯಾಟೋ ಮತ್ತು ಅದರ ಬೀಜಗಳು ಜೀರ್ಣವಾಗಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಅಷ್ಟೇ ಅಲ್ಲ ಸಲಾಡ್‌ ತಿನ್ನಬೇಕು ಎಂದು ಟೊಮ್ಯಾಟೋ ಮತ್ತು ಸೌತೆಕಾಯಿ ಮೇಲೆ ಏನಾದರೂ ನಿಂಬೆ ರಸ ಹಾಕಿಕೊಂಡರೆ ಅಪಾಯ ಮತ್ತೆ ಹೆಚ್ಚಾಗುತ್ತದೆ. ಏಕೆಂದರೆ ಟೊಮ್ಯಾಟೋ ರೀತಿ ನಿಂಬೆ ಹಣ್ಣು ಮತ್ತು ಅದರ ರಸ ಕೂಡ ನಮ್ಮ ದೇಹ ಬೆಚ್ಚಗಿಡುತ್ತದೆ. ಸೌತೆಕಾಯಿ ಟೊಮ್ಯಾಟೋ ಆರೋಗ್ಯಕ್ಕೆ ಒಳ್ಳೆಯದು ಎಂದು ಮಕ್ಕಳಿಗೆ ಒಟ್ಟಿಗೆ ಕೊಡಬೇಡಿ ಏಕೆಂದರೆ ಅವರಿಗೆ ಅಜೀಣ ಸಮಸ್ಯೆ ಆದರೆ ಹಿಂಸೆ ಪಡುತ್ತಾರೆ ಹಾಗೂ ಒಂದರಿಂದ ಮತ್ತೊಂದಕ್ಕೆ ಸಮಸ್ಯೆ ಹೆಚ್ಚಾಗುತ್ತದೆ. 

ರನ್ಯಾ ರಾವ್ ಜೀವನ ಘನಘೋರ ಆಗುತ್ತಿದ್ದಂತೆ ದುಬೈ ಟ್ರಿಪ್‌ ಫೋಟೋಗಳನ್ನು ಡಿಲೀಟ್ ಮಾಡಿದ ಸ್ಟಾರ್ ನಟಿಯರು!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾತ್ರಿ ವೇಳೆ ಅಪ್ಪಿತಪ್ಪಿಯೂ ತಿನ್ನಬಾರದ ಹಣ್ಣುಗಳು ಇವು: ತಜ್ಞರು ಹೇಳೋದೇನು?
ಸೀನು ಯಾಕೆ ಬರುತ್ತೆ ಗೊತ್ತಾ? ಇಲ್ಲಿದೆ ಅದರ ಹಿಂದಿರುವ ಕುರಿತ ಅಚ್ಚರಿಯ ಸಂಗತಿಗಳು!