ಕಾರು ಮಾತ್ರವಲ್ಲ ಇದೀಗ ಭಾರತದ ಮೊದಲ ಹೈಬ್ರಿಡ್ ಬೈಕ್ ಯಮಹಾ FZ-S Fi ಬಿಡುಗಡೆ

Published : Mar 13, 2025, 11:00 PM ISTUpdated : Mar 13, 2025, 11:21 PM IST
ಕಾರು ಮಾತ್ರವಲ್ಲ ಇದೀಗ ಭಾರತದ ಮೊದಲ ಹೈಬ್ರಿಡ್ ಬೈಕ್ ಯಮಹಾ FZ-S Fi ಬಿಡುಗಡೆ

ಸಾರಾಂಶ

ಕಾರು ಮಾತ್ರವಲ್ಲ ಈಗ ಬೈಕ್ ಕೂಡ ಹೈಬ್ರಿಡ್ ಆಗಿದೆ. ಭಾರತದ ಮೊದಲ ಹೈಬ್ರಿಡ್ ಬೈಕ್ ಬಿಡುಗಡೆಯಾಗಿದೆ. ಯಮಹಾ FZ-S Fi ಹೈಬ್ರಿಡ್ ಬೈಕ್ ಭಾರತದಲ್ಲಿ ಬಿಡುಗೆಯಾಗಿದೆ. ಇದರ ಬೆಲೆ ಎಷ್ಟು?  

ಬೆಂಗಳೂರು(ಮಾ.13) ಹೈಬ್ರಿಡ್ ಕಾರಿಗೆ ಭಾರಿ ಬೇಡಿಕೆ ಇದೆ. ಮೈಲೇಜ್ ಸೇರಿದಂತೆ ಹಲವು ಕಾರಣಗಳಿಂದ ಹೆಚ್ಚಿನವರು ಹೈಬ್ರಿಡ್ ಕಾರು ಬಯಸುತ್ತಾರೆ. ಇದೀಗ ಕಾರು ಮಾತ್ರವಲ್ಲ, ಭಾರತದಲ್ಲಿ ಹೈಬ್ರಿಡ್ ಬೈಕ್ ಕೂಡ ಲಭ್ಯವಿದೆ. ಯಮಹಾ ಇಂಡಿಯಾ ಇದೀಗ ಭಾರತದಲ್ಲಿ ಮೊದಲ ಹೈಬ್ರಿಡ್ ಬೈಕ್ ಬಿಡುಡೆ ಮಾಡಿದೆ. FZ-S Fi ಬೈಕ್ ಭಾರತದ ಮೊದಲ ಹೈಬ್ರಿಡ್ ಬೈಕ್ ಆಗಿ ಬಿಡುಗಡೆಯಾಗಿದೆ. ಇದರ ಬೆಲೆ 1.44 ಲಕ್ಷ ರೂಪಾಯಿ(ಎಕ್ಸ್  ಶೋ ರೂಂ).  

ಯಮಹಾ FZ-S Fi  ಹೈಬ್ರಿಡ್ ಆಕರ್ಷಕಕ ವಿನ್ಯಾಸ ಹೊಂದಿದೆ. ಟ್ಯಾಂಕ್ ಕವರ್‌ ನಲ್ಲಿ ಶಾರ್ಪ್ ಎಡ್ಜ್ ಗಳಿದ್ದು, ಲುಕ್ ಮತ್ತಷ್ಟು ಹೆಚ್ಚಿಸಿದೆ. ಮುಂಭಾಗದ ಏರ್ ಇಂಟೇಕ್ ಪ್ರದೇಶದಲ್ಲಿ ಸ್ಥಾಪಿಸಲಾಗಿರುವ ಟರ್ನ್ ಸಿಗ್ನಲ್‌ ಬೈಕ್‌ಗೆ ಮತ್ತಷ್ಟು ಆಕರ್ಷಕ ಮತ್ತು ಏರೋಡೈನಾಮಿಕ್ ರೂಪವನ್ನು ಒದಗಿಸಿದೆ. 149 ಸಿಸಿ ಬ್ಲೂ ಕೋರ್ ಎಂಜಿನ್‌ ಹೊಂದಿದೆ.  ಯಮಹಾದ ಸ್ಮಾರ್ಟ್ ಮೋಟಾರ್ ಜನರೇಟರ್ (ಎಸ್ಎಂಜಿ) ಮತ್ತು ಸ್ಟಾಪ್ & ಸ್ಟಾರ್ಟ್ ಸಿಸ್ಟಮ್ (ಎಸ್ಎಸ್ಎಶ್) ತಂತ್ರಜ್ಞಾನಗಳಿಂದ ಶಬ್ದವಿಲ್ಲದೆ ಮೋಟಾರ್ ಸೈಕಲ್ ಸ್ಟಾರ್ಟ್ ಮಾಡಬಹುದಾಗಿದೆ, ಬ್ಯಾಟರಿ ಸಹಾಯದಿಂದ ಆಕ್ಸಲರೇಷನ್ ಪಡೆಯಬಹುದಾಗಿದೆ ಮತ್ತು ಇಂಧನ ದಕ್ಷತೆ ಉತ್ತಮಗೊಂಡಿದೆ. ಬೈಕ್ ಒಮ್ಮೆ ನಿಂತಾಗ ಎಂಜಿನ್ ಸ್ವಯಂಚಾಲಿತವಾಗಿ ಆಫ್ ಆಗಿ, ಕ್ಲಚ್ ಒತ್ತಿದಾಗ ತಕ್ಷಣ ಮತ್ತೆ ಆರಂಭವಾಗುತ್ತದೆ.

ಹೋಳಿ ಹಬ್ಬದ ಡಿಸ್ಕೌಂಟ್ ಆಫರ್ ಘೋಷಿಸಿದ ಓಲಾ,ಬರೋಬ್ಬರಿ 26,750 ರೂ ಕಡಿತ

ಮೋಟಾರ್ ಸೈಕಲ್ ರೈಡರ್‌ ಗಳ ಅನುಕೂಲತೆಗಾಗಿ ಈ ಹೊಸ ಬೈಕ್‌ನಲ್ಲಿ 4.2 ಇಂಚಿನ ಬಣ್ಣದ ಟಿ ಎಫ್ ಟಿ ಡಿಸ್‌ಪ್ಲೇ ಒದಗಿಸಲಾಗಿದೆ. ಇದು ವೈ-ಕನೆಕ್ಟ್ ಆಪ್ ಮೂಲಕ ಸ್ಮಾರ್ಟ್‌ ಫೋನ್‌ಗೆ ಸಂಪರ್ಕಗೊಳ್ಳುತ್ತದೆ. ಗೂಗಲ್ ಮ್ಯಾಪ್‌ ಜೊತೆಗೆ ಜೋಡಿಸಲಾಗಿರುವ ಟರ್ನ್-ಬೈ-ಟರ್ನ್ (ಟಿಬಿಟಿ) ನ್ಯಾವಿಗೇಷನ್ ಸೌಲಭ್ಯವನ್ನು ಹೊಂದಿದ್ದು, ಇದು ರಸ್ತೆಯ ದಾರಿ, ದಿಕ್ಕುಗಳು ಮತ್ತು ಸಣ್ಣ ಸಣ್ಣ ತಿರುವುಗಳ ವಿವರಗಳನ್ನು ತೋರಿಸುತ್ತದೆ. ಸವಾರರಿಗೆ ಸಮಸ್ಯೆ ಮುಕ್ತ ರೈಡಿಂಗ್ ಅನುಭವವನ್ನು ಒದಗಿಸುತ್ತದೆ.

ಆರಾಮದಾಯಕವಾಗಿ ಲಾಂಗ್ ರೈಡ್ ಹೋಗುವಂತೆ  ಸೂಕ್ತ ರೀತಿಯಲ್ಲಿ ಹ್ಯಾಂಡಲ್‌ ಬಾರ್ ಸ್ಥಾನವನ್ನು ಸರಿಪಡಿಸಲಾಗಿದೆ. ಗ್ಲೌಸ್ ಧರಿಸಿದಾಗಲೂ ಬಳಸಲು ಸುಲಭವಾಗುವಂತೆ ಹ್ಯಾಂಡಲ್ ಬಾರ್ ನ ಸ್ವಿಚ್‌ ಗಳನ್ನು ಅನುಕೂಲಕರವಾದ ಉತ್ತಮ ಸ್ಥಾನದಲ್ಲಿ ಅಳವಡಿಸಲಾಗಿದೆ. ಹಾರ್ನ್ ಸ್ವಿಚ್ ಕೂಡ ಆರಾಮದಾಯಕವಾಗಿ ಬಳಸಲು ಅನುವಾಗುವಂತೆ ಮರುವಿನ್ಯಾಸಗೊಳಿಸಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಇಂಧನ ಟ್ಯಾಂಕ್‌ ಗೆ ಏರ್ ಪ್ಲೇನ್ ಶೈಲಿಯ ಕ್ಯಾಪ್ ಇದ್ದು, ಪೆಟ್ರೋಲ್ ತುಂಬುವಾಗಲೂ ಅದು ಅಟ್ಯಾಚ್ ಆಗಿಯೇ ಇರುತ್ತದೆ. ಅನುಕೂಲತೆಯನ್ನು ಹೆಚ್ಚಿಸುತ್ತದೆ. ಹೊಚ್ಚ ಹೊಸ 2025 ‘2025 ‘FZ-S Fi Hybrid’’ ಮೋಟಾರ್ ಸೈಕಲ್ ರೇಸಿಂಗ್ ಬ್ಲೂ ಮತ್ತು ಸಯಾನ್ ಮೆಟಾಲಿಕ್ ಗ್ರೇ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದೆ.

2025 ‘FZ-S Fi Hybrid’ ಮೂಲಕ ಯಮಹಾ ಕಂಪನಿಯು ದಕ್ಷತೆ, ಕಾರ್ಯಕ್ಷಮತೆ ಮತ್ತು ಸ್ಮಾರ್ಟ್ ಸಂಪರ್ಕದ ಮೂಲಕ ರೈಡಿಂಗ್ ಅನುಭವವನ್ನು ಉತ್ತಮಗೊಳಿಸುವ ಭವಿಷ್ಯದ ಮೋಟಾರ್‌ ಸೈಕಲ್‌ ಗಳ ವಿಚಾರದ ದೊಡ್ಡ ಹೆಜ್ಜೆ ಇಟ್ಟಿದೆ.

ರೆಟ್ರೋ ಶೈಲಿಯಲ್ಲಿ ಬರುತ್ತಿದೆ ಯಮಹಾ RX 100, ಬರೋಬ್ಬರಿ 60 ಕಿ.ಮಿ ಮೈಲೇಜ್!

PREV
click me!

Recommended Stories

Hero Splendor ಬೈಕ್‌ಗಳಿಗಿಂತ ಕಡಿಮೆ ಬೆಲೆಗೆ ಸಿಗುವ ಎಲೆಕ್ಟ್ರಿಕ್ ಸ್ಕೂಟರ್‌ಗಳು
ಭರ್ಜರಿಯಾಗಿ ಮರಳಿದ ಭಾರತದ ಕೈನೆಟಿಕ್, ಕೇವಲ 1,000 ರೂಗೆ ಬುಕ್ ಮಾಡಿ ಎಲೆಕ್ಟ್ರಿಕ್ ಸ್ಕೂಟರ್