ಹೊಸ ಸಂಶೋಧನೆ- ಬಾವಲಿ ಅಲ್ಲ ಈ ಪ್ರಾಣಿಯಿಂದ ಹರಡಿದಂತೆ ಕೊರೋನಾ?

Rashmi Rao   | Asianet News
Published : Apr 19, 2020, 09:57 AM IST

ಕೊರೋನಾ ವೈರಸ್ ಮನುಷ್ಯರಿಗೆ ಹೇಗೆ ಹರಡುತ್ತದೆ ಎಂಬುದರ ಕುರಿತು ಇನ್ನೂ ಸಂಶೋಧನೆಗಳು ನಡೆಯುತ್ತಿದೆ. ಚೀನಾದ ಹುಬೈ ಪ್ರಾಂತ್ಯದ ವುಹಾನ್‌ನ ಫ್ಯಾಟ್‌ ಮಾರುಕಟ್ಟೆಯಿಂದ ಮೊದಲ ಬಾರಿಗೆ ವೈರಸ್ ಹರಡಿರುವುದು ಖಚಿತ, ಅಲ್ಲಿ ಕಾಡು ಪ್ರಾಣಿಗಳ ಮಾಂಸವನ್ನು ವ್ಯಾಪಕವಾಗಿ ವ್ಯಾಪಾರ ಮಾಡಲಾಗುತ್ತದೆ. ಆದರೆ ಮಾನವರಲ್ಲಿ ಈ ಜೀವಿಯಂದ ಹರಡುತ್ತದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಹಿಂದೆ ಅದು ಬಾವಲಿಗಳ ಮೂಲಕ ಹರಡಿತು ಎಂದು ಹೇಳಲಾಗುತ್ತಿತ್ತು. ಕೆನಡಾದ ಸಂಶೋಧಕರು ಕೊರೋನಾ ವೈರಸ್ ಜೀನೋಮ್ ಅನ್ನು ವಿಶ್ಲೇಷಿಸಿ ನಾಯಿಗಳ ಮೂಲಕ ಹರಡಬಹುದು ಎಂದು ಹೇಳಿದ್ದಾರೆ. ಆದರೆ ಅಧ್ಯಯನಕ್ಕೆ ಸಾಕಷ್ಟು ಪುರಾವೆ ಲಭ್ಯವಿಲ್ಲ ಎಂದು ಹೇಳುವ ಮೂಲಕ ಇದನ್ನು ಟೀಕಿಸಲಾಗುತ್ತಿದೆ.

PREV
19
ಹೊಸ ಸಂಶೋಧನೆ- ಬಾವಲಿ ಅಲ್ಲ ಈ ಪ್ರಾಣಿಯಿಂದ ಹರಡಿದಂತೆ ಕೊರೋನಾ?

ವಿಶ್ವವಿದ್ಯಾಲಯದ ಜೀವಶಾಸ್ತ್ರಜ್ಞ ಶುಹುವಾ ಶಿಯಾ, ಕೊರೋನಾ ವೈರಸ್ ಮೊದಲು ಬಾವಲಿಗಳಿಗೆ ಹರಡಿದ್ದು, ಬಳಿಕ ನಾಯಿಗಳು ಆ ಬಾವಲಿಗಳನ್ನು ತಿನ್ನುತ್ತವೆ ಮತ್ತು ಅದು ಜನರಿಗೆ ಹರಡಲು ಕಾರಣವಾಗಿದೆ ಎಂಬ ಆಧಾರದ ಮೇಲೆ ಈ ಅಧ್ಯಯನವನ್ನು ಮಾಡಿದ್ದೇನೆ ಎಂದು ಹೇಳಿದ್ದಾರೆ. ಈ ಸಿದ್ಧಾಂತದ ಬಗ್ಗೆ ವಿಜ್ಞಾನಿಗಳು ಇದೀಗ ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ.

29

ರಾಯಲ್ ಸೊಸೈಟಿ ಫಾರ್ ದಿ ಪ್ರಿವೆನ್ಷನ್ ಆಫ್ ಕ್ರೌಲ್ಟಿ ಟು ಅನಿಮಲ್ಸ್ (ಆರ್‌ಎಸ್‌ಪಿಸಿಎ) ಮುಖ್ಯ ಪಶುವೈದ್ಯ ಅಧಿಕಾರಿ ಕ್ಯಾರೊಲಿನ್ ಅಲೆನ್ ಇದು ಕೇವಲ ಒಂದು ಸಿದ್ಧಾಂತ ಎಂದು ಹೇಳಿದ್ದಾರೆ, ಇದರ ಹಿಂದೆ ಯಾವುದೇ ಸಾಕ್ಷಿ‌ ಇಲ್ಲ. ಕೊರೋನಾ ವೈರಸ್ ನಾಯಿಗಳ ಮೂಲಕ ಹರಡಿದೆ ಎಂದು ಸಾಬೀತುಪಡಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಜನರು ತಮ್ಮ ಸಾಕು ನಾಯಿಗಳನ್ನು ಓಡಿಸಬಾರದು ಮತ್ತು ನಾಯಿಗಳಿಗೆ ಹಾನಿ ಮಾಡಬಾರದು ಎಂದು ಕಟ್ಟುನಿಟ್ಟಾಗಿ ವಾರ್ನ್‌ ಮಾಡಿದ್ದಾರೆ. 

39

ನಾಯಿಗಳು, ಬಾವಲಿಗಳು, ಹಾವುಗಳು, ಇಲಿಗಳು ಮತ್ತು ಇತರ ಸಾಕುಪ್ರಾಣಿಗಳ ಮೂಲಕವೂ ವೈರಸ್ ಹರಡಬಹುದು ಎಂದು ಕೆಲವು ವಿಜ್ಞಾನಿಗಳು ಹೇಳಿದ್ದಾರೆ. 

49

ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಬಾವಲಿಗಳ ಮೇಲೆ ಪ್ರಯೋಗಗಳನ್ನು ಮಾಡಲಾಗುತ್ತಿದೆ ಅಂತೆ.

59

ನಂತರ ಕೊರೋನಾ ವೈರಸ್ ಪ್ಯಾಂಗೊಲಿನ್ ಮೂಲಕ ಜನರಿಗೆ ಹರಡಿತು ಎಂದು ಹೇಳಲಾಗಿದೆ. 

69

ಒಂದು ಸಮಯದಲ್ಲಿ ಕೊರೋನಾ ವೈರಸ್ ಹಾವುಗಳಿಂದ ಹರಡಬಹುದೆಂದು ಚರ್ಚಿಸಲಾಯಿತು, ಆದರೆ ಕೇವಲ ಇದು ಒಂದು ಅನುಮಾನ ಮಾತ್ರವಾಗಿತ್ತು.

79

ಕೆಲವು ವಿಜ್ಞಾನಿಗಳು ಕೊರೋನಾ ಇಲಿಗಳ ಮೂಲಕ ಜನರಿಗೆ ಹರಡಿರಬಹುದು ಎಂದು ನಂಬಿದ್ದರು. ಇದನ್ನು ಕಂಡುಹಿಡಿಯಲು ಇಲಿಗಳ ಮೇಲೆ ಹಲವಾರು ಪ್ರಯೋಗಗಳನ್ನು ನಡೆಸಲಾಯಿತು. 

89

ಕೊರೋನಾಗಳನ್ನು ಹರಡಲು ನಾಯಿಗಳು ಕಾರಣವೆಂಬುದು ತಪ್ಪು ಸಂಶೋಧನೆ. ಇದು ನಾಯಿಗಳಿಗೆ  ಅಪಾಯವನ್ನು ಹೆಚ್ಚಿಸುತ್ತದೆ. ಪ್ರಾಣಿ ಹಕ್ಕುಗಳ ಕಾರ್ಯಕರ್ತರು ಈ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದ್ದಾರೆ. 

99

ಈ ಅಧ್ಯಯನವು ಅಂದಾಜಿನ ಮೇಲೆ ಹೆಚ್ಚು ಆಧಾರಿತವಾಗಿದೆ, ಇದಕ್ಕೆ ಪೂರಕವಾದ ಡೇಟಾವೂ ಹೆಚ್ಚು ಲಭ್ಯವಿಲ್ಲ. ದಾರಿತಪ್ಪಿ ಅಂತಹ ತೀರ್ಮಾನಕ್ಕೆ ಬಂದರೆ ನಾಯಿಗಳ ಜೀವಕ್ಕೆ ಅಪಾಯವಿದೆ ಅನೇಕ ವಿಜ್ಞಾನಿಗಳು ಹೇಳಿದ್ದಾರೆ. 

click me!

Recommended Stories