ಸ್ತನ ಕ್ಯಾನ್ಸರ್‌ನಿಂದ ಕೂದಲು ಕಳೆದುಕೊಂಡರೂ ಕುಗ್ಗದ ಖ್ಯಾತ ಶೆಫ್ ಪಂಕಜ್ ಭದೌರಿಯಾ.. ಮಹಿಳೆಯರಿಗೆ ಹೇಳಿದ ಕಿವಿಮಾತಿದು

Published : Aug 21, 2026, 01:52 PM IST

Breast cancer awareness India: ಮಾಸ್ಟರ್‌ಶೆಫ್ ಇಂಡಿಯಾ ವಿಜೇತೆ ಪಂಕಜ್ ಭದೌರಿಯಾ ಅವರು ತಾವು ಎದುರಿಸುತ್ತಿರುವ ಸ್ತನ ಕ್ಯಾನ್ಸರ್ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಕಿಮೊಥೆರಪಿಯಿಂದ ಕೂದಲು ಕಳೆದುಕೊಂಡರೂ ಕುಗ್ಗದ ಅವರ ಆತ್ಮಸ್ಥೈರ್ಯ ಮತ್ತು ಮಹಿಳೆಯರಿಗಾಗಿ ನೀಡಿದ ಪ್ರಮುಖ ಸಲಹೆ ಇಲ್ಲಿದೆ.

PREV
15
ಸಾವಿರಾರು ಜನರಿಗೆ ಸ್ಫೂರ್ತಿಯಾದ ಖ್ಯಾತ ಶೆಫ್ ಪಂಕಜ್ ಭದೌರಿಯಾ

ಸಾವಿರಾರು ಜನರಿಗೆ ಸ್ಫೂರ್ತಿಯಾದ ಖ್ಯಾತ ಶೆಫ್ ಪಂಕಜ್ ಭದೌರಿಯಾ
ಮಾಸ್ಟರ್‌ಶೆಫ್ ಇಂಡಿಯಾ ಸೀಸನ್ 1 ರ ವಿಜೇತೆ ಹಾಗೂ ಭಾರತದ ಮನೆಮಾತಾಗಿರುವ ಖ್ಯಾತ ಶೆಫ್ ಪಂಕಜ್ ಭದೌರಿಯಾ ಅವರು ತಾವು ಎದುರಿಸುತ್ತಿರುವ ಸ್ತನ ಕ್ಯಾನ್ಸರ್ (Breast Cancer) ಕಾಯಿಲೆಯ ಕುರಿತು ಅತ್ಯಂತ ಭಾವನಾತ್ಮಕ ಮತ್ತು ಕಣ್ಣು ತೆರೆಸುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಕ್ಯಾನ್ಸರ್ ವಿರುದ್ಧದ ಈ ಕಠಿಣ ಹೋರಾಟದಲ್ಲಿ ಅವರು ತೋರುತ್ತಿರುವ ಧೈರ್ಯ ಮತ್ತು ಆತ್ಮಸ್ಥೈರ್ಯ ಈಗ ಸಾವಿರಾರು ಜನರಿಗೆ ಸ್ಫೂರ್ತಿಯಾಗಿದೆ.

25
"ಕ್ಯಾನ್ಸರ್ ದೇಹ ಪರೀಕ್ಷಿಸಿತು, ಆದರೆ ಆತ್ಮಸ್ಥೈರ್ಯವನ್ನಲ್ಲ"

ಪಂಕಜ್ ಭದೌರಿಯಾ ಅವರು ಹಂಚಿಕೊಂಡಿರುವ ಜೀವನದ ಈ ಕಹಿ ಸತ್ಯ ಮತ್ತು ಚೇತರಿಕೆಯ ಹಾದಿಯ ವಿವರ ಇಲ್ಲಿದೆ..

“ಕ್ಯಾನ್ಸರ್ ದೇಹ ಪರೀಕ್ಷಿಸಿತು, ಆದರೆ ಆತ್ಮಸ್ಥೈರ್ಯವನ್ನಲ್ಲ”
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಕಪ್ಪು ಉಡುಪು ಧರಿಸಿ ಮುಗುಳ್ನಗುತ್ತಿರುವ ಫೋಟೋವೊಂದನ್ನು ಹಂಚಿಕೊಂಡಿರುವ ಪಂಕಜ್, "ಕ್ಯಾನ್ಸರ್ ನನ್ನ ದೇಹಕ್ಕೆ ಸವಾಲು ಹಾಕಿರಬಹುದು, ಆದರೆ ನನ್ನ ಛಲವನ್ನು ಮುರಿಯಲು ಅದರಿಂದ ಸಾಧ್ಯವಾಗಲಿಲ್ಲ. ಇಂದು ನಾನು ಬದುಕಿನ ಪ್ರತಿ ಕ್ಷಣವನ್ನು ಒಂದು ಉದ್ದೇಶದೊಂದಿಗೆ ಜೀವಿಸುತ್ತಿದ್ದೇನೆ. ಕ್ಯಾನ್ಸರ್ ನನ್ನ ಜೀವನದ ಒಂದು ಪುಟವಷ್ಟೇ ಹೊರತು, ಅದೇ ಪೂರ್ತಿ ಕಥೆಯಲ್ಲ," ಎಂದು ಬರೆದುಕೊಂಡಿದ್ದಾರೆ. ಈ ಹೋರಾಟವು ತಮಗೆ ಬದುಕಿನ ಬಗ್ಗೆ ಹೊಸ ದೃಷ್ಟಿಕೋನವನ್ನು ನೀಡಿದೆ ಎಂದು ಅವರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

35
ಕ್ಯಾನ್ಸರ್ ಪತ್ತೆ ಮತ್ತು ಚಿಕಿತ್ಸೆಯ ಹಂತಗಳು

ಕ್ಯಾನ್ಸರ್ ಪತ್ತೆ ಮತ್ತು ಚಿಕಿತ್ಸೆಯ ಹಂತಗಳು
ಮೇ 2024ರಲ್ಲಿ ಮೊದಲ ಬಾರಿಗೆ ತಮಗೆ ಸ್ತನ ಕ್ಯಾನ್ಸರ್ ಇರುವುದನ್ನು ಪಂಕಜ್ ಬಹಿರಂಗಪಡಿಸಿದ್ದರು. ಆಸ್ಪತ್ರೆಯ ಹಾಸಿಗೆಯ ಮೇಲಿದ್ದ ಫೋಟೋ ಹಂಚಿಕೊಂಡು ಅಭಿಮಾನಿಗಳ ಪ್ರಾರ್ಥನೆಗೆ ಕೋರಿದ್ದರು. ಮರುದಿನವೇ ಅವರು ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ, ಶಸ್ತ್ರಚಿಕಿತ್ಸೆಯ ನಂತರದ ಬಯಾಪ್ಸಿ ವರದಿಯು ಸವಾಲನ್ನು ಇನ್ನಷ್ಟು ಹೆಚ್ಚಿಸಿತು. ಅವರಿಗೆ '2mm ಇನ್ವೇಸಿವ್ HER2-ಪಾಸಿಟಿವ್' ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು, ಪ್ರಸ್ತುತ ವೈದ್ಯರು ಅವರಿಗೆ 12 ಕಿಮೊಥೆರಪಿ ಸೆಷನ್‌ಗಳು ಮತ್ತು ಒಂದು ವರ್ಷದ ಟಾರ್ಗೆಟೆಡ್ ಥೆರಪಿ ತೆಗೆದುಕೊಳ್ಳಲು ಸೂಚಿಸಿದ್ದಾರೆ.

45
ಕೂದಲು ಉದುರುವಿಕೆಯ ಭಾವನಾತ್ಮಕ ನೋವು

ಕೂದಲು ಉದುರುವಿಕೆಯ ಭಾವನಾತ್ಮಕ ನೋವು
ಕ್ಯಾನ್ಸರ್ ಚಿಕಿತ್ಸೆಯ ಅಡ್ಡಪರಿಣಾಮವಾಗಿ ಕೂದಲು ಉದುರುವುದು ಪ್ರತಿಯೊಬ್ಬ ಮಹಿಳೆಗೂ ಮಾನಸಿಕವಾಗಿ ದೊಡ್ಡ ಆಘಾತ ನೀಡುತ್ತದೆ. ಪಂಕಜ್ ಕೂಡ ಈ ನೋವನ್ನು ಅನುಭವಿಸಿದ್ದಾರೆ. ಕಿಮೊಥೆರಪಿ ಪ್ರಾರಂಭವಾಗುವ ಮುನ್ನವೇ ಅವರು ತಮ್ಮ ದಟ್ಟವಾದ ಮತ್ತು ಉದ್ದನೆಯ ಕೂದಲನ್ನು ತಾವೇ ಕತ್ತರಿಸಿಕೊಂಡಿದ್ದರು. "ನನ್ನ ಬಲವಾದ ಕೂದಲು ಉದುರುವುದು ನೋವುಂಟುಮಾಡಿತು ನಿಜ, ಆದರೆ ಅದು ಮತ್ತೆ ಬೆಳೆಯುತ್ತದೆ ಎಂಬ ಬಲವಾದ ನಂಬಿಕೆ ನನ್ನಲ್ಲಿದೆ" ಎಂದು ಹೇಳುವ ಮೂಲಕ ಅವರು ಕ್ಯಾನ್ಸರ್ ಪೀಡಿತರಲ್ಲಿ ಧೈರ್ಯ ತುಂಬಿದ್ದಾರೆ.

55
ಮಹಿಳೆಯರಿಗೆ ಪಂಕಜ್ ನೀಡಿದ ಪ್ರಮುಖ ಸಲಹೆ

ಮಹಿಳೆಯರಿಗೆ ಪಂಕಜ್ ನೀಡಿದ ಪ್ರಮುಖ ಸಲಹೆ
ತಮ್ಮ ಈ ಕಠಿಣ ಪಯಣದ ಮೂಲಕ ಪಂಕಜ್ ಭದೌರಿಯಾ ಅವರು ಎಲ್ಲಾ ಮಹಿಳೆಯರಿಗೆ ಒಂದು ಮಹತ್ವದ ಸಂದೇಶ ನೀಡಿದ್ದಾರೆ: "ಯಾವುದೇ ಕಾರಣಕ್ಕೂ ನಿಮ್ಮ ಆರೋಗ್ಯ ತಪಾಸಣೆಯನ್ನು ಮುಂದೂಡಬೇಡಿ. ಸ್ತನ ಕ್ಯಾನ್ಸರ್‌ನಂತಹ ರೋಗಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿದರೆ ಜೀವ ಉಳಿಸುವುದು ಅತೀ ಸುಲಭ. ನಿಯಮಿತ ತಪಾಸಣೆ ಮಾಡಿಸಿಕೊಳ್ಳುವುದು ನಮ್ಮ ಜವಾಬ್ದಾರಿ."

ಪಂಕಜ್ ಅವರ ಈ ದಿಟ್ಟ ಹೋರಾಟವು ಕಾಯಿಲೆಗಿಂತಲೂ ಮನೋಬಲ ದೊಡ್ಡದು ಎಂಬ ಸತ್ಯವನ್ನು ಸಾರುತ್ತಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories