ನಿಮ್ಮ ದೇಹದ ಈ 5 ಭಾಗದಲ್ಲಿ ನೋವು ಬರುತ್ತಿದೆಯಾ?, ಹಾಗಾದ್ರೆ ಕಿಡ್ನಿಗೆ ಹಾನಿಯಾಗಿದೆ ಎಂದರ್ಥ

Published : Nov 02, 2025, 04:21 PM IST

kidney damage: ಮೂತ್ರಪಿಂಡಗಳಿಗೆ ಸಮಸ್ಯೆ ಅಥವಾ ಗಂಭೀರ ಹಾನಿಯಾಗಿದ್ದರೆ ನಮಗೆ ಕೆಲವು ಸಿಗ್ನಲ್ಸ್  ಸಿಗುತ್ತದೆ. ವಿಶೇಷವಾಗಿ ದೇಹದ ಕೆಲವು ಭಾಗಗಳಲ್ಲಿ ತೀವ್ರ ನೋವು ಅಥವಾ ಅಸ್ವಸ್ಥತೆಯನ್ನು ಅನುಭವಿಸಬಹುದು. ಆದ್ದರಿಂದ ನಾವೀಗ ಮೂತ್ರಪಿಂಡದ ಹಾನಿಯನ್ನು ಸೂಚಿಸುವ ಕೆಲವು ಪ್ರಮುಖ ಲಕ್ಷಣಗಳನ್ನು ನೋಡೋಣ. 

PREV
16
ಪ್ರಮುಖ ಲಕ್ಷಣಗಳು

ಮೂತ್ರಪಿಂಡ ಅಂದರೆ ಕಿಡ್ನಿ ನಮ್ಮ ದೇಹದಲ್ಲಿ ಬಹಳ ಮುಖ್ಯವಾದ ಅಂಗವಾಗಿದೆ. ಇದು ರಕ್ತದಿಂದ ತ್ಯಾಜ್ಯ, ಹೆಚ್ಚುವರಿ ದ್ರವ ಮತ್ತು ಟಾಕ್ಸಿನ್ ತೆಗೆದುಹಾಕಿ ದೇಹವನ್ನು ಶುದ್ಧೀಕರಿಸುವ ಪ್ರಮುಖ ಕಾರ್ಯವನ್ನು ನಿರ್ವಹಿಸುತ್ತದೆ. ಯಾವುದೇ ವ್ಯಕ್ತಿಗೆ ಮಧುಮೇಹ, ಅಧಿಕ ರಕ್ತದೊತ್ತಡ, ಸೋಂಕುಗಳು, ಅನುವಂಶಿಕ ಕಾಯಿಲೆಗಳು ಮತ್ತು ಸ್ಟೋನ್ಸ್ ಇದ್ದರೆ ಕಿಡ್ನಿಗೆ ಗಂಭೀರ ಹಾನಿಯಾಗುವ ಸಾಧ್ಯತೆ ಹೆಚ್ಚು. ಇದಕ್ಕೆ ಚಿಕಿತ್ಸೆ ನೀಡದೆ ಬಿಟ್ಟರೆ ಅದು ನಂತರ Chronic kidney diseaseಗೆ ಕಾರಣವಾಗಬಹುದು. ಅದಕ್ಕೂ ಚಿಕಿತ್ಸೆ ನೀಡದಿದ್ದರೆ ಕಿಡ್ನಿ ಫೇಲ್ಯೂರ್‌ಗೆ ಕಾರಣವಾಗಬಹುದು. ಅಂದಹಾಗೆ ಮೂತ್ರಪಿಂಡಗಳಿಗೆ ಸಮಸ್ಯೆ ಅಥವಾ ಗಂಭೀರ ಹಾನಿಯಾಗಿದ್ದರೆ ಅದು ನಮಗೆ ಕೆಲವು ಸಿಗ್ನಲ್ಸ್ ಕೊಡುತ್ತದೆ. ವಿಶೇಷವಾಗಿ ದೇಹದ ಕೆಲವು ಭಾಗಗಳಲ್ಲಿ ನೀವು ತೀವ್ರ ನೋವು ಅಥವಾ ಅಸ್ವಸ್ಥತೆಯನ್ನು ಅನುಭವಿಸಬಹುದು. ಆದ್ದರಿಂದ ನಾವೀಗ ಮೂತ್ರಪಿಂಡದ ಹಾನಿಯನ್ನು ಸೂಚಿಸುವ ಕೆಲವು ಪ್ರಮುಖ ಲಕ್ಷಣಗಳನ್ನು ನೋಡೋಣ.

26
1. ಕೆಳ ಬೆನ್ನು ನೋವು

ಕಿಡ್ನಿ ಹಾನಿಯ ಸಾಮಾನ್ಯ ಲಕ್ಷಣವೆಂದರೆ ಕೆಳ ಬೆನ್ನು ನೋವು. ಆದರೆ ಅನೇಕ ಜನರು ಈ ಬೆನ್ನು ನೋವನ್ನು ಹಗುರವಾಗಿ ಪರಿಗಣಿಸುತ್ತಾರೆ. ಆದರೆ ಯಾರಿಗಾದರೂ ಒಂದು ಬದಿಯಲ್ಲಿ ಮಾತ್ರ ಕೆಳ ಬೆನ್ನು ನೋವು ಇದ್ದರೆ, ಮೂತ್ರಪಿಂಡಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ ಎಂದರ್ಥ. ಇದಲ್ಲದೆ ಈ ನೋವು ಸ್ನಾಯು ನೋವಿನಂತೆ ಇರಲ್ಲ. ನೋವು ತುಂಬಾ ತೀಕ್ಷ್ಣವಾಗಿರುತ್ತದೆ. ವಾಕರಿಕೆ, ಜ್ವರ ಇತ್ಯಾದಿಗಳೊಂದಿಗೆ ಇರುತ್ತದೆ.

36
2. ಎದೆ ನೋವು ಮತ್ತು ಉಸಿರಾಟದ ತೊಂದರೆ

ಎದೆ ನೋವು ಅಥವಾ ಅಸ್ವಸ್ಥತೆ ಹೃದಯ ಕಾಯಿಲೆಯಿದ್ದರೆ ಮಾತ್ರ ಬರಲ್ಲ. ಮೂತ್ರಪಿಂಡದ ಹಾನಿಯು ಎದೆ ನೋವು ಮತ್ತು ಉಸಿರಾಟದ ತೊಂದರೆಗೂ ಕಾರಣವಾಗಬಹುದು. ಈ ಲಕ್ಷಣವು ವಿಶೇಷವಾಗಿ ಮೂತ್ರಪಿಂಡ ಕಾಯಿಲೆ ಮುಂದುವರಿದ ಹಂತಕ್ಕೆ ತಲುಪಿದ್ದರೆ ಕಂಡುಬರುತ್ತದೆ.

46
3. ಹೊಟ್ಟೆ ನೋವು ಮತ್ತು ವಾಕರಿಕೆ

ಅನೇಕ ಜನರು ಹೊಟ್ಟೆ ನೋವು ಮತ್ತು ವಾಕರಿಕೆಯನ್ನು ಜೀರ್ಣಕಾರಿ ಸಮಸ್ಯೆಯಾಗಿರಬಹುದು ಎಂದು ತಳ್ಳಿಹಾಕುತ್ತಾರೆ. ಆದರೆ ಈ ಜೀರ್ಣಕಾರಿ ಸಮಸ್ಯೆಗಳಿಗೂ ಮೂತ್ರಪಿಂಡದ ಕಾಯಿಲೆಗೂ ಸಂಬಂಧವಿದೆ. ಆದ್ದರಿಂದ ಯಾವುದೇ ಕಾರಣವಿಲ್ಲದೆ ನಿಮ್ಮ ಹೊಟ್ಟೆಯ ಕೆಳಭಾಗದಲ್ಲಿ ನೋವು ಅನುಭವಿಸಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಮತ್ತು ಪರೀಕ್ಷಿಸಿಕೊಳ್ಳಿ.

56
4. ತಲೆನೋವು ಮತ್ತು ತಲೆತಿರುಗುವಿಕೆ

ತಲೆನೋವು ಮತ್ತು ತಲೆತಿರುಗುವಿಕೆ ಮೂತ್ರಪಿಂಡದ ಕಾರ್ಯಕ್ಕೆ ಸಂಬಂಧಿಸಿಲ್ಲ ಎಂದು ತೋರುತ್ತದೆ. ಆದರೆ ಇವು ಮೂತ್ರಪಿಂಡದ ಹಾನಿಯ ಎಚ್ಚರಿಕೆ ಚಿಹ್ನೆಗಳು. ಮೂತ್ರಪಿಂಡಗಳು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಆದರೆ ಮೂತ್ರಪಿಂಡಗಳು ಸರಿಯಾಗಿ ಕೆಲಸ ಮಾಡದಿದ್ದಾಗ ರಕ್ತದೊತ್ತಡ ಹೆಚ್ಚಾಗುತ್ತದೆ. ಇದು ಹೆಚ್ಚಾಗಿ ತಲೆನೋವಿಗೆ ಕಾರಣವಾಗಬಹುದು. ಆದ್ದರಿಂದ ಈ ರೋಗಲಕ್ಷಣಗಳನ್ನು ಹಗುರವಾಗಿ ಪರಿಗಣಿಸಬೇಡಿ.

66
5. ಕಾಲು ಮತ್ತು ಪಾದಗಳಲ್ಲಿ ಊತ ಮತ್ತು ನೋವು

ನಿಮ್ಮ ಕಾಲು ಮತ್ತು ಪಾದಗಳಲ್ಲಿ ವಿವರಿಸಲಾಗದ ನೋವು ಅಥವಾ ಊತವನ್ನು ನೀವು ಅನುಭವಿಸುತ್ತಿದ್ದೀರಾ?. ಹಾಗಿದ್ದಲ್ಲಿ, ಅದು ಯಾವುದೋ ರೀತಿಯ ಮೂತ್ರಪಿಂಡದ ಹಾನಿಯ ಸಂಕೇತವಾಗಿರಬಹುದು. ಏಕೆಂದರೆ ವ್ಯಕ್ತಿಯ ಮೂತ್ರಪಿಂಡಗಳು ದೇಹದಿಂದ ಟಾಕ್ಸಿನ್ ಫಿಲ್ಟರ್ ಮಾಡಲು ಮತ್ತು ತೆಗೆದುಹಾಕಲು ಸಾಧ್ಯವಾಗದಿದ್ದಾಗ ಆ ಟಾಕ್ಸಿನ್ ದೇಹದಲ್ಲಿ ಸಂಗ್ರಹವಾಗುತ್ತವೆ ಮತ್ತು ಊತವನ್ನು ಉಂಟುಮಾಡುತ್ತವೆ. ಆದ್ದರಿಂದ ನಿಮ್ಮ ಕಾಲುಗಳಲ್ಲಿ ಊತವನ್ನು ಅನುಭವಿಸಿದರೆ ಅದನ್ನು ಹಗುರವಾಗಿ ಪರಿಗಣಿಸಬೇಡಿ.

Read more Photos on
click me!

Recommended Stories