Are these fruits the cause of uric acid problems? ಅಧಿಕ ಯೂರಿಕ್ ಆಸಿಡ್ ಇರುವವರು ಕೆಲವು ಹಣ್ಣುಗಳನ್ನು ಸೇವಿಸಬಾರದು ಎಂದು ತಜ್ಞರು ಸಲಹೆ ನೀಡುತ್ತಾರೆ. ಆರೋಗ್ಯದ ದೃಷ್ಟಿಯಿಂದ ಈ ಹಣ್ಣುಗಳಿಂದ ಅಂತರ ಕಾಯ್ದುಕೊಳ್ಳುವುದು ಉತ್ತಮ.
ಹೆಚ್ಚಿನ ಯೂರಿಕ್ ಆಸಿಡ್ ಹೊಂದಿರುವ ಜನರು ಕೆಲವೊಂದು ಹಣ್ಣುಗಳನ್ನು ತಿನ್ನಬಾರದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಈ ಹಣ್ಣುಗಳ ಸೇವನೆಯಿಂದ ಆರೋಗ್ಯದಲ್ಲಿ ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ಈ ಹಣ್ಣುಗಳಿಂದ ಅಂತರ ಕಾಯ್ದುಕೊಳ್ಳುವುದು ಉತ್ತಮ.
28
ಸೇಬು
ಪ್ರತಿದಿನ ಒಂದು ಸೇಬು ತಿನ್ನೋದರಿಂದ ವೈದ್ಯರನ್ನು ದೂರವಿಡಬಹುದು ಎಂಬ ಮಾತಿದೆ. ಆದ್ರೆ ಸೇಬು ಹಣ್ಣು ಫ್ರಕ್ಟೋಸ್ ಅಂಶ ಹೊಂದಿರುತ್ತದೆ. ಅಧಿಕ ಯೂರಿಕ್ ಆಸಿಡ್ ಇರುವವರು ಸೇಬು ತಿನ್ನದಿರುವುದು ಉತ್ತಮ ಎಂದು ಹೇಳಲಾಗುತ್ತದೆ.
38
ಮಾವು
ಹಣ್ಣುಗಳ ರಾಜ ಅಂದ್ರೆ ಮಾವು. ಸೀಸನಲ್ ಫ್ರೂಟ್ ಆಗಿರೋದರಿಂದ ಈ ಹಣ್ಣು ಸೇವನೆಗೆ ಎಲ್ಲರೂ ಆದ್ಯತೆ ನೀಡುತ್ತಾರೆ. ಮಾವು ಹೆಚ್ಚು ಸಿಹಿ ಅಂಶ ಇರುವುದರಿಂದ ಯೂರಿಕ್ ಆಸಿಡ್ ಇರುವವರು ಮಾವಿನಹಣ್ಣನ್ನು ಹೆಚ್ಚು ಸೇವಿಸದಿರುವುದು ಉತ್ತಮ.
ಸಪೋಟಾ ಅಥವಾ ಚಿಕ್ಕು ಹಣ್ಣನ್ನು ಅತಿಯಾಗಿ ಸೇವಿಸದಿರುವುದು ಯೂರಿಕ್ ಆಸಿಡ್ ಕಡಿಮೆ ಮಾಡಲು ಒಳ್ಳೆಯದು. ಸಪೋಟಾ ಹಣ್ಣು ಸಹ ಹೆಚ್ಚು ಸಿಹಿ ಅಂಶವನ್ನು ಹೊಂದಿರುತ್ತದೆ. ಹಾಗಾಗಿ ಹೆಚ್ಚಿನ ಯೂರಿಕ್ ಆಸಿಡ್ ಹೊಂದಿರುವ ಜನರು ಈ ಹಣ್ಣನ್ನು ಕಡಿಮೆ ಸೇವನೆ ಮಾಡಬೇಕು.
58
ಹುಣಸೆಹಣ್ಣು
ಫ್ರಕ್ಟೋಸ್ ಅಧಿಕವಾಗಿರುವ ಹುಣಸೆಹಣ್ಣು ಕೂಡ ಯೂರಿಕ್ ಆಸಿಡ್ ಹೆಚ್ಚಾಗಲು ಕಾರಣವಾಗಬಹುದು. ಹೆಚ್ಚಿನ ಯೂರಿಕ್ ಆಸಿಡ್ ಹೊಂದಿರುವ ಜನರು ಅಡುಗೆಯಲ್ಲಿ ಕಡಿಮೆ ಹುಣಸೆ ಹಣ್ಣು ಬಳಕೆ ಮಾಡೋದು ಉತ್ತಮ ಎಂದು ಹೇಳಲಾಗುತ್ತದೆ.
ಹೆಚ್ಚಿನ ಯೂರಿಕ್ ಆಸಿಡ್ ಇರುವವರು ಪೇರಳೆ ಹಣ್ಣನ್ನು ತಮ್ಮ ಆಹಾರದಿಂದ ದೂರವಿಡುವುದು ಉತ್ತಮ. ಈ ಹಣ್ಣನನ್ನು ಪಿಯರ್ ಅಂತಾನೂ ಕರೆಯಲಾಗುತ್ತದೆ. ಇದು ಫ್ರಕ್ಟೋಸ್ ಅಂಶವನ್ನು ಹೊಂದಿರುವ ಹಣ್ಣಾಗಿದೆ.
ಫ್ರಕ್ಟೋಸ್ ಅಧಿಕವಾಗಿರುವ ಖರ್ಜೂರವನ್ನು ಸೇವಿಸದಿರುವುದು ಅಧಿಕ ಯೂರಿಕ್ ಆಸಿಡ್ ಇರುವವರಿಗೆ ಉತ್ತಮ.
Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.